ಒಂದೇ ತರಹದ ರಾಗಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ಹಾಗಿದ್ರೆ ರಾಗಿ–ಕ್ಯಾಪ್ಸಿಕಂ ರೊಟ್ಟಿ ಟ್ರೈ ಮಾಡಿ, ಹೊಸ ರುಚಿ ಎಲ್ಲರಿಗೂ ಇಷ್ಟವಾಗುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದೇ ತರಹದ ರಾಗಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ಹಾಗಿದ್ರೆ ರಾಗಿ–ಕ್ಯಾಪ್ಸಿಕಂ ರೊಟ್ಟಿ ಟ್ರೈ ಮಾಡಿ, ಹೊಸ ರುಚಿ ಎಲ್ಲರಿಗೂ ಇಷ್ಟವಾಗುತ್ತೆ

ಒಂದೇ ತರಹದ ರಾಗಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ಹಾಗಿದ್ರೆ ರಾಗಿ–ಕ್ಯಾಪ್ಸಿಕಂ ರೊಟ್ಟಿ ಟ್ರೈ ಮಾಡಿ, ಹೊಸ ರುಚಿ ಎಲ್ಲರಿಗೂ ಇಷ್ಟವಾಗುತ್ತೆ

ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂಬ ಚಿಂತೆ ಪ್ರತಿದಿನ ಎಲ್ಲರ ಮನೆಯಲ್ಲೂ ಇರುವ ಸಾಮಾನ್ಯ ವಿಚಾರ. ಆರೋಗ್ಯಕ್ಕೆ ಉತ್ತಮ ಎಂದು ತಿಳಿದಿದ್ದರೂ ಒಂದೇ ತರಹದ ತಿಂಡಿ ಎಲ್ಲರಿಗೂ ಬೇಸರ ಮೂಡಿಸುತ್ತದೆ. ಅದರಲ್ಲೇ ಸ್ವಲ್ಪ ಡಿಫರೆಂಟ್‌ ಆಗಿ ತಯಾರಿಸಿದರೆ ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕಾಗಿ ಈ ಹೊಸ ರುಚಿ ರಾಗಿ–ಕ್ಯಾಪ್ಸಿಕಂ ರೊಟ್ಟಿ ಟ್ರೈ ಮಾಡಿ.

ಒಂದೇ ತರಹದ ರಾಗಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ರಾಗಿ–ಕ್ಯಾಪ್ಸಿಕಂ ರೊಟ್ಟಿ ಟ್ರೈ ಮಾಡಿ, ಹೊಸ ರುಚಿ ಎಲ್ಲರಿಗೂ ಇಷ್ವವಾಗುತ್ತೆ
ಒಂದೇ ತರಹದ ರಾಗಿ ರೊಟ್ಟಿ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ರಾಗಿ–ಕ್ಯಾಪ್ಸಿಕಂ ರೊಟ್ಟಿ ಟ್ರೈ ಮಾಡಿ, ಹೊಸ ರುಚಿ ಎಲ್ಲರಿಗೂ ಇಷ್ವವಾಗುತ್ತೆ (PC: Freepik)

ರಾಗಿ ತಿಂದವನು ನಿರೋಗಿ ಎನ್ನುವುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ಗಾದೆ ಮಾತು. ರಾಗಿ (Finger Millet) ನೀಡುವ ಆರೋಗ್ಯ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಈ ಮಾತು ಬಂದಿದೆ. ಸಿರಿಧಾನ್ಯಗಳಲ್ಲಿ ಒಂದಾದ ರಾಗಿ ಪೋಷಕಾಂಶ, ಖನಿಜ, ಪ್ರೋಟೀನ್‌ ಮತ್ತು ನಾರಿನಾಂಶದಿಂದ ಕೂಡಿರುವ ಪರಿಪೂರ್ಣವಾದ ಧಾನ್ಯವಾಗಿದೆ. ಫಿಂಗರ್‌ ಮಿಲೆಟ್‌ ಎಂದು ಕರೆಯಲ್ಪಡುವ ರಾಗಿಯಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅಂಶವಿದೆ. ಹಾಗಾಗಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇದು ಆರೋಗ್ಯಕರ ಆಹಾರ. ರಾಗಿಯಿಂದ ಅನೇಕ ವಿಧದ ಅಡುಗೆಯನ್ನು ಮಾಡುತ್ತಾರೆ. ರಾಗಿ ಮುದ್ದೆ, ಮಕ್ಕಳಿಗಾಗಿ ಹುರಿ ಹಿಟ್ಟು, ರಾಗಿ ಅಂಬಲಿ, ರಾಗಿ ದೋಸೆ, ರಾಗಿ ಇಡ್ಲಿ, ರಾಗಿ ರೊಟ್ಟಿ ಹೀಗೆ ಹಲವು ರೀತಿಯಲ್ಲಿ ಅಡುಗೆ ಮಾಡಿ ಸವಿಯಲಾಗುತ್ತದೆ. ಸಾಮಾನ್ಯವಾಗಿ ತಯಾರಿಸುವ ರಾಗಿ ರೊಟ್ಟಿ ತಿಂದು ಬೇಜಾರಾಗಿದ್ರೆ ಹೊಸ ಬಗೆಯಲ್ಲಿ ರಾಗಿ–ಕ್ಯಾಪ್ಸಿಕಂ ರೊಟ್ಟಿ ತಯಾರಿಸಬಹುದು. ತರಕಾರಿ, ಮಸಾಲೆ ಬೆರೆತಿರುವ ಈ ರೊಟ್ಟಿ ನಾಲಿಗೆ ರುಚಿ ನೀಡುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮ. ಇದು ಬೆಳಗ್ಗಿನ ಉಪಹಾರ ಮತ್ತು ಮಕ್ಕಳ ಲಂಚ್‌ ಬಾಕ್ಸ್‌ಗೂ ಬೆಸ್ಟ್‌ ಆಗಿದೆ.

ರಾಗಿ ಕ್ಯಾಪ್ಸಿಕಂ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು

ರಾಗಿ ಹಿಟ್ಟು 1 ಕಪ್‌

ಅಕ್ಕಿ ಹಿಟ್ಟು 1 ಕಪ್‌

ತುರಿದ ಕ್ಯಾಪ್ಸಿಕಂ 1 ಕಪ್‌

ತುರಿದ ಸೌತೆಕಾಯಿ 1 ಕಪ್‌

ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 1 ಕಪ್‌

ಚಿಕ್ಕದಾಗಿ ಕತ್ತರಿಸಿದ ಕೊತ್ತೊಂಬರಿ ಸೊಪ್ಪು 1 ಕಪ್‌

ಚಿಕ್ಕದಾಗಿ ಹೆಚ್ಚಿದ ಶುಂಠಿ 1 ಚಮಚ

ಚಿಕ್ಕದಾಗಿ ಹೆಚ್ಚಿದ ಹಸಿರುಮೆಣಸಿನಕಾಯಿ 1

ಮೊಸರು 1 ಕಪ್‌

ರುಚಿಗೆ ತಕ್ಕಷ್ಟು ಉಪ್ಪು

ಸ್ವಲ್ಪ ಎಣ್ಣೆ

ತಯಾರಿಸುವ ವಿಧಾನ

ಮೊದಲಿಗೆ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಳ್ಳಿ. ಅದರಲ್ಲಿ ತುರಿದ ಕ್ಯಾಪ್ಸಿಕಂ, ತುರಿದ ಸೌತೆಕಾಯಿ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಮತ್ತು ಕೊತ್ತೊಂಬರಿ ಸೊಪ್ಪು, ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪು ಹಾಕಿ, ಚೆನ್ನಾಗಿ ಕಲಸಿಕೊಳ್ಳಿ. ಈಗ ಅದಕ್ಕೆ ರಾಗಿ ಹಿಟ್ಟು ಮತ್ತು ಅಕ್ಕಿ ಹಿಟ್ಟು ಸೇರಿಸಿ ಎಲ್ಲವನ್ನು ಒಮ್ಮೆ ಮಿಕ್ಸ್‌ ಮಾಡಿಕೊಳ್ಳಿ. ಈಗ ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ನಾದಿ. ಬಟರ್‌ ಪೇಪರ್‌ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಸವರಿ. ಅದರ ಮೇಲೆ ನಾದಿಟ್ಟುಕೊಂಡ ಹಿಟ್ಟಿನಿಂದ ಸ್ವಲ್ಪ ಮಿಶ್ರಣ ತೆಗೆದುಕೊಂಡು ಗೋಲಾಕಾರದಲ್ಲಿ ರೊಟ್ಟಿ ತಟ್ಟಿ. ಈಗ ಪ್ಯಾನ್‌ ಬಿಸಿ ಮಾಡಿ, ಮಾಡಿಟ್ಟುಕೊಂಡ ರೊಟ್ಟಿಯನ್ನು ಅದರ ಮೇಲೆ ಹಾಕಿ. ಎರಡೂ ಕಡೆ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ. ಗರಿಗರಿಯಾದ ರಾಗಿ ಕ್ಯಾಪ್ಸಿಕಂ ರೊಟ್ಟಿ ಸವಿಯಲು ಸಿದ್ಧ. ಇದನ್ನು ಬೆಣ್ಣೆ ಮತ್ತು ಯಾವುದೇ ಚಟ್ನಿಯ ಜೊತೆ ಬಡಿಸಿ. ಸ್ವಲ್ಪ ಖಾರ ಇರುವುದರಿಂದ ಬೆಣ್ಣೆ ಇದಕ್ಕೆ ಉತ್ತಮ ಕಾಂಬಿನೇಷನ್‌ ಆಗಿದೆ.

Whats_app_banner