Mutton vs Chicken; ಚಿಕನ್ ಲಿವರ್, ಮಟನ್‌ ಲಿವರ್ ಅಂತ ಬಾಯಿ ರುಚಿಗಾಗಿ ತಿಂತಿದ್ದೀರಾ, ಹಾಗಾದರೆ ಈ ಅಧ್ಯಯನ ವರದಿ ವಿಚಾರ ನೀವು ತಿಳಿದಿರಬೇಕು-food liver showdown mutton vs chicken which one reigns supreme for health benefits explainer uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mutton Vs Chicken; ಚಿಕನ್ ಲಿವರ್, ಮಟನ್‌ ಲಿವರ್ ಅಂತ ಬಾಯಿ ರುಚಿಗಾಗಿ ತಿಂತಿದ್ದೀರಾ, ಹಾಗಾದರೆ ಈ ಅಧ್ಯಯನ ವರದಿ ವಿಚಾರ ನೀವು ತಿಳಿದಿರಬೇಕು

Mutton vs Chicken; ಚಿಕನ್ ಲಿವರ್, ಮಟನ್‌ ಲಿವರ್ ಅಂತ ಬಾಯಿ ರುಚಿಗಾಗಿ ತಿಂತಿದ್ದೀರಾ, ಹಾಗಾದರೆ ಈ ಅಧ್ಯಯನ ವರದಿ ವಿಚಾರ ನೀವು ತಿಳಿದಿರಬೇಕು

Mutton Liver vs Chicken Liver; ಚಿಕನ್‌ ಮಟನ್ ಅಂದ್ರೆ ಸಾಕು ಮಾಂಸಾಹಾರ ಪ್ರಿಯರ ಕಣ್ಣರಳುತ್ತವೆ. ಬಾಯಿ ರುಚಿಗಾಗಿ ಚಿಕನ್‌ ಲಿವರ್‌, ಮಟನ್‌ ಲಿವರ್‌ ತಿಂತಿದ್ದೀರಾ, ಹಾಗಾದರೆ, ಯಾವುದಕ್ಕೂ ಒಮ್ಮೆ ಈ ಅಧ್ಯಯನ ವರದಿ ಕಡೆಗೆ ಒಮ್ಮೆ ಗಮನಹರಿಸುವುದು ಒಳಿತು.

ಚಿಕನ್ ಲಿವರ್, ಮಟನ್‌ ಲಿವರ್ ಯಾವುದು ಬೆಸ್ಟ್‌  (ಸಾಂಕೇತಿಕ ಚಿತ್ರ)
ಚಿಕನ್ ಲಿವರ್, ಮಟನ್‌ ಲಿವರ್ ಯಾವುದು ಬೆಸ್ಟ್‌ (ಸಾಂಕೇತಿಕ ಚಿತ್ರ) (Canva)

ನಾಟಿ ಸ್ಟೈಲ್‌ನಂತೆ ತಲೆ ಮಾಂಸ, ಬೋಟಿ, ಲಿವರ್ ಎನ್ನುತ್ತ ಅಂಗಾಂಗ ಮಾಂಸವನ್ನು ತಿನ್ನುವುದು ಆಧುನಿಕ ಊಟದ ಸ್ಟೈಲ್‌ನಲ್ಲಿ ಜನಪ್ರಿಯವಲ್ಲದೇ ಇರಬಹುದು. ಮಾಂಸಾಹಾರ ಪ್ರಿಯರು ಮಟನ್ ಸ್ಟಾಲ್‌ಗೆ ಹೋದರೆ ಲಿವರ್ ಕೊಡಿ ಅಂತ ಕೇಳೋದನ್ನು ನೀವು ಗಮನಿಸಿರಬಹುದು. ಹೌದು, ಮಾಂಸಾಹಾರಿಗಳ ಪಾಲಿಗೆ ಲಿವರ್ ಅರ್ಥಾತ್‌ ಯಕೃತ್ತು ಎಂಬ ಅಂಗ ಅತ್ಯಂತ ಪೌಷ್ಟಿಕವಾದ ಆಹಾರ. ಅದೊಂದು ಸೂಪರ್‌ಫುಡ್‌. ದಟ್ಟವಾದ ಸೂಪರ್‌ಫುಡ್ ಆಗಿದೆ. ಲಿವರ್ ತಿನ್ನುವ ವಿಚಾರದಲ್ಲಿ ಕೆಲವು ಸಾಧಕ ಬಾಧಕಗಳಿದ್ದರೂ, ಆಹಾರಕ್ರಮಕ್ಕೆ ಆರೋಗ್ಯಕರವಾದುದು ಎಂದು ಬಲ್ಲವರು ಹೇಳುತ್ತಾರೆ.

ಇನ್ನೂ ವಿವರಿಸಿ ಹೇಳಬೇಕು ಎಂದರೆ ಬೀಫ್‌, ಕೋಳಿ, ಕುರಿಮರಿ, ಬಾತುಕೋಳಿ ಮತ್ತು ಮೇಕೆ ಮುಂತಾದವುಗಳ ಲಿವರ್‌ ಮಾಂಸ ಉತ್ತಮ ಗುಣಮಟ್ಟದ ಪ್ರೊಟೀನ್ ಅನ್ನು ಹೊಂದಿರುತ್ತವೆ. ಅದೇ ರೀತಿ, ವಿಟಮಿನ್ ಎ ಮತ್ತು ಬಿ, ವಿಶೇಷವಾಗಿ ಬಿ 12 ಮತ್ತು ರಂಜಕ, ಕಬ್ಬಿಣ, ತಾಮ್ರ ಮತ್ತು ಸೆಲೆನಿಯಮ್ ಸೇರಿದಂತೆ ಖನಿಜಗಳ ಪ್ರಬಲ ಮೂಲವೂ ಹೌದು.

ಈಗ ನಾವು ಮೂಲ ವಿಷಯಕ್ಕೆ ಬರೋಣ. ಮಟನ್ ಲಿವರ್ ತಿನ್ನೋದು ಬೆಸ್ಟಾ, ಚಿಕನ್ ಲಿವರ್ ತಿನ್ನೋದು ಬೆಸ್ಟಾ, ಹೀಗೊಂದು ಪ್ರಶ್ನೆ ಎದುರಾದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರಿ. ಅಧ್ಯಯನ ವರದಿಯೊಂದರ ಪ್ರಕಾರ ಲಭ್ಯವಿರುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಚಿಕನ್ ಲಿವರಾ ಮಟನ್ ಲಿವರಾ - ಯಾವುದು ಬೆಸ್ಟ್

ಚಿಕನ್ ಲಿವರಾ ಮಟನ್‌ ಲಿವರಾ ಈ ಪೈಕಿ ಯಾವುದು ಬೆಸ್ಟ್‌ ಅಂತ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿ ಸಿಕ್ಕ ಅಧ್ಯಯನ ವರದಿಯಲ್ಲಿ ಇವರೆಡರ ತುಲನಾತ್ಮಕ ವಿವರ ಕಂಡುಬಂತು.

ಇದರಂತೆ, ಮಟನ್‌ ಅನ್ನು ಮೊದಲು ಪರಿಗಣಿಸುವುದಾದರೆ, 100 ಗ್ರಾಂ ಮಟನ್ ಲಿವರ್‌ನಲ್ಲಿ 160 ರಿಂದ 170 ಕ್ಯಾಲೋರಿ ಕಂಡುಬರುತ್ತದೆ. ಅಲ್ಲದೆ, 20 ರಿಂದ 25 ಗ್ರಾಂ ಪ್ರೊಟೀನ್, 5 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, 400 ರಿಂದ 500 ಮಿಲಿಗ್ರಾಂ ಕೊಲೆಸ್ಟ್ರಾಲ್ ಇದೆ. ಲಿವರ್ ಪೀಸ್‌ ತಿಂದರೆ 2 ಮೊಟ್ಟೆ ತಿಂದಾಗ ಸಿಗುವಷ್ಟು ಕೊಲೆಸ್ಟ್ರಾಲ್ ಸಿಕ್ಕಿಬಿಡುತ್ತದೆ.

ಇನ್ನು ಪೌಷ್ಟಿಕಾಂಶಗಳ ವಿಚಾರಕ್ಕೆ ಬಂದರೆ, 100 ಗ್ರಾಂ ಮಟನ್ ಲಿವರ್ ತೆಗೆದುಕೊಂಡರೆ, 6,000 ಯೂನಿಟ್ ವಿಟಮಿನ್ ಎ ಸಿಗುತ್ತದೆ. ವಿಟಮಿನ್ ಬಿ 12 85 ಮೈಕ್ರೋಗ್ರಾಂ ಲಭ್ಯವಿದೆ. ಇದು ನಮ್ಮ ಶರೀರಕ್ಕೆ ನಿತ್ಯ ಬೇಕಾದ ವಿಟಮಿನ್ ಬಿ 12 ರ ಪ್ರಮಾಣಕ್ಕಿಂತ 30 ಪಟ್ಟು ಹೆಚ್ಚು. ದೇಹದಲ್ಲಿ ವಿಟಮಿನ್ ಬಿ 12 ಕಡಿಮೆಯಿದ್ದರೆ, ನರರೋಗ ಮತ್ತು ತೀವ್ರ ರಕ್ತಹೀನತೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಇದು ಬೆಸ್ಟ್‌ ಆಹಾರ.

ಶಾಖಾಹಾರಿಗಳ ವಿಚಾರಕ್ಕೆ ಬಂದರೆ, ಬಹುತೇಕ ಸಸ್ಯಾಹಾರಿಗಳಿಗೆ ವಿಟಮಿನ್ ಬಿ 12 ಕೊರತೆ ಸಹಜವಾಗಿರುತ್ತದೆ. ಅವರು ಸಸ್ಯಾಹಾರದ ಮೊರೆ ಹೋಗುತ್ತಾರೆ. ಇಲ್ಲವೇ ಔಷಧ ಸೇವಿಸಿ ಸರಿದೂಗಿಸಿಕೊಳ್ಳುತ್ತಾರೆ.

ಇನ್ನು ಚಿಕನ್ ಲಿವರ್ ವಿಚಾರಕ್ಕೆ ಬರೋಣ. 100 ಗ್ರಾಂ ಕೋಳಿ ಲಿವರ್‌ ಮೇಕೆ ಅಥವಾ ಮಟನ್‌ ಲಿವರ್‌ನಂತೆಯೇ 160 ರಿಂದ 170 ಕ್ಯಾಲೊರಿ ಹೊಂದಿದೆ. 20 ರಿಂದ 25 ಗ್ರಾಂ ಪ್ರೋಟೀನ್, 5 ಗ್ರಾಂ ಸ್ಯಾಚುರೇಟೆಡ್ ಕೊಬ್ಬು ಮತ್ತು 400 ರಿಂದ 500 ಮಿಲಿಗ್ರಾಂ ಕೊಲೆಸ್ಟ್ರಾಲ್ ಕೂಡ ಇರುತ್ತದೆ. ಲಿವರ್‌ ಪೀಸ್‌ನಲ್ಲಿ 2 ಮೊಟ್ಟೆಯಲ್ಲಿರುವಷ್ಟು ಕೊಲೆಸ್ಟ್ರಾಲ್ ಇದೆ. ಪೌಷ್ಟಿಕಾಂಶಗಳನ್ನು ಗಮನಿಸುವುದಾದರೆ, 100 ಗ್ರಾಂ ಕೋಳಿ ಲಿವರ್‌ನಲ್ಲಿ 16,000 ಯೂನಿಟ್ ವಿಟಮಿನ್ ಎ ಇದೆ. ಶರೀರದ ನಿತ್ಯ ಅಗತ್ಯದ ವಿಟಮಿನ್ ಎ ಯ ಪ್ರಮಾಣಕ್ಕಿಂತ ಇದು 3 ಪಟ್ಟು ಹೆಚ್ಚು.

ಜೀವಸತ್ತ್ವಕ್ಕೆ ಇದುವೇ ಮೂಲ

ವಿಟಮಿನ್ ಬಿ 12 ಪೋಷಕಾಂಶದ ಬಗ್ಗೆ ಹೇಳುವುದಾದರೆ, 100 ಗ್ರಾಂ ಕೋಳಿ ಯಕೃತ್ತು 16 ಮೈಕ್ರೋಗ್ರಾಂಗಳನ್ನು ಹೊಂದಿರುತ್ತದೆ. ಈ ವಿಟಮಿನ್ ಎ ಕೊಬ್ಬು ಕರಗುತ್ತದೆ. ವಿಟಮಿನ್ ಬಿ 12 ನೀರಿನಲ್ಲಿ ಕರಗುತ್ತದೆ. ಹೀಗಾಗಿ, ನೀವು ಇದನ್ನು ಎಷ್ಟು ಸೇವಿಸಿದರೂ ಅದು ಹೆಚ್ಚುವರಿ ಮೂತ್ರದ ಮೂಲಕ ಹೊರಹಾಕಲ್ಪಡುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಈ ಪೋಷಕಾಂಶವು ಶರೀರ ಪ್ರವೇಶಿಸಿದರೆ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ ಎಂದು ವರದಿ ಹೇಳಿದೆ.

ಆದರೆ ವಿಟಮಿನ್ ಎ ಹಾಗಲ್ಲ. ಅದು ಶರೀರದಲ್ಲಿ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನೊಂದಿಗೆ ಬಂಧಿಯಾಗಿರುತ್ತದೆ. ನಮ್ಮ ಮೆದುಳನ್ನು ಕೊಬ್ಬಿನ ಅಂಗಾಂಶ ಎಂದು ಕರೆಯಲಾಗುತ್ತದೆ. ಈ ವಿಟಮಿನ್ ಎ ಪೋಷಕಾಂಶಗಳು ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಗೊಂಡರೆ, ಹೈಪರ್‌ವಿಟಮಿನೋಸಿಸ್‌ ಎ ಮಾದರಿಯ ಮೆದುಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಾಣಬಹುದು ಅಥವಾ ಈ ಪೋಷಕಾಂಶ ನಮ್ಮ ಲಿವರ್ (ಯಕೃತ್‌) ನಲ್ಲಿ ಹೆಚ್ಚು ಸಂಗ್ರಹವಾಗಿ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ಪಿತ್ತಜನಕಾಂಗವನ್ನು ತಿನ್ನುವುದು ನಿಮ್ಮ ಮೂಳೆಯ ಸಾಂದ್ರತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಅದು ಒಳಗೊಂಡಿರುವ ಅನೇಕ ಪೋಷಕಾಂಶಗಳು ಶರೀರದ ಎಲುಬು ಮೂಳೆಗಳನ್ನು ಬಲಪಡಿಸಲು ನೆರವಾಗುತ್ತವೆ. ಲಿವರ್‌ನಲ್ಲಿರುವ ಮೆಗ್ನೀಸಿಯಮ್, ಕ್ಯಾಲ್ಸಿಯಂ, ಫಾಸ್ಫರಸ್, ಪೊಟ್ಯಾಸಿಯಮ್, ಕಬ್ಬಿಣ, ಸತು ಮತ್ತು ತಾಮ್ರಗಳು ಮೂಳೆ ರಚನೆ ಮತ್ತು ಬೆಳವಣಿಗೆಗೆ ರಚನಾತ್ಮಕವಾಗಿ ನೆರವಾಗುತ್ತವೆ ಎಂದು ಅಮೆರಿಕನ್ ಬೋನ್ ಹೆಲ್ತ್ ವರದಿ ಹೇಳಿದೆ.

ಮಾಹಿತಿ

www.livestrong.com/article/465450-how-healthy-is-eating-liver/