ಕನ್ನಡ ಸುದ್ದಿ  /  ಜೀವನಶೈಲಿ  /  Mutton Chops: ಹೋಟೆಲ್‌ ಶೈಲಿಯ ಮಟನ್‌ ಚಾಪ್ಸ್‌ ತಿನ್ನಬೇಕು ಅನ್ನಿಸಿದ್ರೆ ಮನೆಯಲ್ಲೇ ಮಾಡಿ, ಇಲ್ಲಿದೆ ತಯಾರಿಸುವ ವಿಧಾನ

Mutton Chops: ಹೋಟೆಲ್‌ ಶೈಲಿಯ ಮಟನ್‌ ಚಾಪ್ಸ್‌ ತಿನ್ನಬೇಕು ಅನ್ನಿಸಿದ್ರೆ ಮನೆಯಲ್ಲೇ ಮಾಡಿ, ಇಲ್ಲಿದೆ ತಯಾರಿಸುವ ವಿಧಾನ

ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ಮಟನ್‌ ಖಾದ್ಯಗಳೆಂದರೆ ಬಿರಿಯಾನಿ, ಸಾಂಬಾರ್‌. ಆದ್ರೆ ಪ್ರತಿ ಬಾರಿ ಇದನ್ನೇ ತಿಂದ್ರೆ ನಾಲಿಗೆಗೆ ಬೇಸರ ಬರೋದು ಖಂಡಿತ. ಅದಕ್ಕಾಗಿ ನೀವು ಈ ಬಾರಿ ಸ್ಪೆಷಲ್‌ ಆಗಿ ಮಟನ್‌ ಚಾಪ್ಸ್‌ ಮಾಡಿ, ಹೋಟೆಲ್‌ ಶೈಲಿಯ ಮಟನ್‌ ಚಾಪ್ಸ್‌ ಮಾಡೋದು ನಾವು ನಿಮಗೆ ಹೇಳಿ ಕೊಡ್ತೀವಿ.

ಹೋಟೆಲ್‌ ಶೈಲಿಯ ಮಟನ್‌ ಚಾಪ್ಸ್‌ ತಿನ್ನಬೇಕು ಅನ್ನಿಸಿದ್ರೆ ಮನೆಯಲ್ಲಿ ತಯಾರಿಸಿ, ಇಲ್ಲಿದೆ ತಯಾರಿಸುವ ವಿಧಾನ
ಹೋಟೆಲ್‌ ಶೈಲಿಯ ಮಟನ್‌ ಚಾಪ್ಸ್‌ ತಿನ್ನಬೇಕು ಅನ್ನಿಸಿದ್ರೆ ಮನೆಯಲ್ಲಿ ತಯಾರಿಸಿ, ಇಲ್ಲಿದೆ ತಯಾರಿಸುವ ವಿಧಾನ

ಈ ಭಾನುವಾರ ಮನೆಯಲ್ಲಿ ಸ್ಪೆಷಲ್‌ ಮಟನ್‌ ರೆಸಿಪಿ ಮಾಡಬೇಕು ಅಂತ ನೀವು ಅಂದುಕೊಂಡಿದ್ರೆ ನಿಮಗಾಗಿ ನಾವು ಹೊಸ ರೆಸಿಪಿ ಹೇಳಿ ಕೊಡ್ತೀವಿ. ಹೋಟೆಲ್‌ಗೆ ಹೋದಾಗ ನೀವು ಮಟನ್‌ ಚಾಪ್ಸ್‌ ತಿಂದಿರಬಹುದು. ಅದರ ರುಚಿಗೆ ಮನೆಯವರೆಲ್ಲಾ ಮನ ಸೋತಿರಬಹುದು. ಆದ್ರೆ ಅದೇ ರುಚಿಯ ಚಾಪ್ಸ್‌ ಅನ್ನ ಮನೆಯಲ್ಲೂ ತಯಾರಿಸಬಹುದು ಅಂತ ನೀವು ಯೋಚನೆ ಕೂಡ ಮಾಡಿರೊಲ್ಲ. ಆದ್ರೆ ಮನೆಯಲ್ಲೂ ಹೋಟೆಲ್‌ ರುಚಿಯದ್ದೇ ಮಟನ್‌ ಚಾಪ್ಸ್‌ ಮಾಡೋದು ಹೇಳಿಕೊಟ್ಟಿದ್ದಾರೆ ಸೆಲೆಬ್ರೆಟಿ ಶೆಫ್‌ ಸಂಜೀವ್‌ ಕಪೂರ್‌.

ಟ್ರೆಂಡಿಂಗ್​ ಸುದ್ದಿ

ಇವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಟನ್‌ ಚಾಪ್ಸ್‌ ತಯಾರಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಸರಳವಾಗಿ ತಯಾರಿಸಬಹುದಾದ ರೆಸಿಪಿ ಆಗಿರುವ ಕಾರಣ ಇದನ್ನು ನೀವು ಇಷ್ಟಪಡಬಹುದು. ಅಲ್ಲದೇ ಇದರ ರುಚಿಯು ಅದ್ಭುತವಾಗಿರುವ ಕಾರಣ ಮನೆಯವರೆಲ್ಲರೂ ಇದನ್ನು ಇಷ್ಟಪಟ್ಟು ತಿನ್ನುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಈ ಮಳೆಗಾಲಕ್ಕೆ ಮಟನ್‌ ಚಾಪ್ಸ್‌ ಹೇಳಿ ಮಾಡಿಸಿದ್ದು.

ಮಟನ್ ಚಾಪ್ಸ್ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಮಟನ್ ಚಾಪ್ಸ್ - ಎಂಟು, ಮೊಸರು - 3/4 ಕಪ್, ಮೆಣಸಿನಕಾಯಿ - ಎರಡು ಚಮಚಗಳು, ಕೊತ್ತಂಬರಿ ಪುಡಿ - ಎರಡು ಚಮಚ, ಅರಿಶಿನ - ಅರ್ಧ ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಸಾಸಿವೆ ಎಣ್ಣೆ - ಮೂರು ಚಮಚಗಳು, ಈರುಳ್ಳಿ - ಎರಡು, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಒಂದೂವರೆ ಚಮಚ, ಮೆಣಸಿನಕಾಯಿ - ನಾಲ್ಕು, ಕೊತ್ತಂಬರಿ ಪುಡಿ - ಮೂರು ಚಮಚ

ಮಟನ್ ಚಾಪ್ಸ್ ತಯಾರಿಸುವ ವಿಧಾನ: ಮಟನ್ ಚಾಪ್ಸ್ ತಯಾರಿಸುವ ಮೊದಲು ನೀವು ಮಟನ್ ತುಂಡುಗಳನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಮಟನ್ ಚಾಪ್ಸ್ ಹಾಕಿ ಅದಕ್ಕೆ ಮೊಸರು, ಕರಿಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿನ ಮತ್ತು ಉಪ್ಪು ಸೇರಿಸಿ ಮತ್ತು ಎಲ್ಲವನ್ನೂ ಮಿಶ್ರಣ ಮಾಡಿ. ಅರ್ಧ ಗಂಟೆಯವರೆಗೆ ಪಕ್ಕಕ್ಕೆ ಬಿಡಿ. ಒಲೆಯ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ ಕುದಿಯಲು ಬಿಡಿ. ಎಣ್ಣೆ ಬಿಸಿಯಾದಾಗ, ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಅದು ಕೆಂಬಣ್ಣ ಬರುವವರೆಗೂ ಫ್ರೈ ಮಾಡಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಚೂರುಗಳನ್ನು ಹಾಕಿ ಮೃದುವಾಗುವವರೆಗೆ ಬೇಯಿಸಿ. ನಂತರ ಮಟನ್ ಮಿಶ್ರಣವನ್ನು ಸೇರಿಸಿ ಮತ್ತು ಮೂರ್ನಾಲ್ಕು ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಫ್ರೈ ಮಾಡಿ. ನಂತರ ಉರಿಯನ್ನು ಕಡಿಮೆ ಮಾಡಿ ಮತ್ತು ಒಂದೂವರೆ ಕಪ್ ನೀರು ಸೇರಿಸಿ, 40-45 ನಿಮಿಷ ಬೇಯಿಸಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಹಸಿಮೆಣಸಿನಕಾಯಿ ಹಾಕಿ ಮಟನ್ ಮಿಶ್ರಣದಲ್ಲಿ ಹುರಿಯಿರಿ. ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಸ್ಟವ್ ಆಫ್ ಮಾಡಿ. ಅಷ್ಟೆ, ಮಟನ್ ಚಾಪ್ಸ್ ಸಿದ್ಧವಾಗಿದೆ.

ಮಟನ್ ಚಾಪ್ಸ್ ಅನ್ನು ಸರ್ವಿಂಗ್ ಬೌಲ್‌ಗೆ ಹಾಕಿ. ಮೇಲೆ ನಿಂಬೆ ಹೋಳುಗಳಿಂದ ಅಲಂಕರಿಸಿ. ಈಗ ನಿಮ್ಮ ಮುಂದೆ ಮಟನ್ ಚಾಪ್ಸ್ ತಿನ್ನಲು ಸಿದ್ಧ.

ಕುರಿ ಮಾಂಸವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದರಲ್ಲಿ ಜೀವಸತ್ವಗಳು ಮತ್ತು ಖನಿಜಾಂಶ ಸಮೃದ್ಧವಾಗಿದೆ. ಇದು ವಿಟಮಿನ್ ಬಿ 12, ವಿಟಮಿನ್ ಬಿ 6, ನಿಯಾಸಿನ್, ರಂಜಕ, ಸತು ಮತ್ತು ಸೆಲೆನಿಯಂನಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಇವೆಲ್ಲವೂ ನಮ್ಮ ದೇಹಕ್ಕೆ ಅತ್ಯಗತ್ಯ. ಚಯಾಪಚಯವನ್ನು ಹೆಚ್ಚಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮೂಳೆಗಳ ಆರೋಗ್ಯವನ್ನು ಹೆಚ್ಚಿಸಲು ಮಟನ್ ಅತ್ಯಗತ್ಯ. ಕುರಿ ಮಾಂಸ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೃದ್ರೋಗ ಮತ್ತು ಮೂತ್ರಪಿಂಡದ ಕಾಯಿಲೆಗಳನ್ನು ತಡೆಯುತ್ತದೆ. ಹಾಗಾಗಿ ವಾರಕ್ಕೊಮ್ಮೆ ಮಟನ್ ಖಾದ್ಯಗಳನ್ನು ತಿನ್ನುವುದು ತುಂಬಾ ಒಳ್ಳೆಯದು.

ವಿಭಾಗ