Ragi Poori: ಮಧುಮೇಹ ನಿಯಂತ್ರಣಕ್ಕೆ ಬೆಸ್ಟ್‌ ರಾಗಿ ಪೂರಿ; ಈ ಹೆಲ್ತಿ, ಟೇಸ್ಟಿ ರೆಸಿಪಿಯನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ-food recipe ragi poori for diabetic patient its controls cholesterol how to make healthy and tasty ragi poori rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Ragi Poori: ಮಧುಮೇಹ ನಿಯಂತ್ರಣಕ್ಕೆ ಬೆಸ್ಟ್‌ ರಾಗಿ ಪೂರಿ; ಈ ಹೆಲ್ತಿ, ಟೇಸ್ಟಿ ರೆಸಿಪಿಯನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ

Ragi Poori: ಮಧುಮೇಹ ನಿಯಂತ್ರಣಕ್ಕೆ ಬೆಸ್ಟ್‌ ರಾಗಿ ಪೂರಿ; ಈ ಹೆಲ್ತಿ, ಟೇಸ್ಟಿ ರೆಸಿಪಿಯನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ

ಮಧುಮೇಹಿಗಳಿಗೆ ಪೂರಿ ತಿನ್ನೋದು ಇಷ್ಟ ಅಂದ್ರು ತಿನ್ನೂ ಹಾಗಿಲ್ಲ. ಕಾರಣ ಅದಕ್ಕೆ ಬಳಸುವ ಮೈದಾಹಿಟ್ಟು. ಮಧುಮೇಹಿಗಳಾಗಿ ಇಲ್ಲಿದೆ ಒಂದು ಸ್ಪೆಷಲ್‌ ರೆಸಿಪಿ. ಇದು ರಾಗಿ ಪೂರಿ. ಇದು ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೂ ಉತ್ತಮ. ಸಖತ್‌ ಟೇಸ್ಟಿ, ಹೆಲ್ತಿ ಆಗಿರೋ ರಾಗಿಪೂರಿಯನ್ನು ನೀವೂ ಟ್ರೈ ಮಾಡಿ.

ರಾಗಿ ಪೂರಿ
ರಾಗಿ ಪೂರಿ

ರಾಗಿಹಿಟ್ಟಿನಿಂದ ತಯಾರಿಸಿರುವ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಬಹಳ ಉತ್ತಮ. ಅದರಲ್ಲೂ ಮಧುಮೇಹ ರೋಗಿಗಳಿಗೆ ಇದು ಹೇಳಿ ಮಾಡಿಸಿದ್ದು. ರಾಗಿಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹಿಗಳು ಪ್ರತಿನಿತ್ಯ ರಾಗಿಗಂಜಿ ಕುಡಿಯುವುದು ಉತ್ತಮ ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ.

ಮಧುಮೇಹದ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಮೈದಾಹಿಟ್ಟಿನಿಂದ ತಯಾರಿಸಿದ ಪೂರಿ ತಿನ್ನಬಾರದು. ಇದರಿಂದ ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟದ ಏರಿಕೆಯಾಗಬಹುದು. ಹಾಗಾದ್ರೆ ರಾಗಿ ಪೂರಿ ಮಾಡೋದು ಹೇಗೆ, ಇದನ್ನು ಯಾವ ಕರಿ ಜೊತೆ ತಿಂದರೆ ಟೇಸ್ಟಿ ಆಗಿರುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ರಾಗಿ ಪೂರಿ

ಬೇಕಾಗುವ ಸಾಮಗ್ರಿಗಳು: ರಾಗಿಹಿಟ್ಟು - 1ಕಪ್‌, ಗೋಧಿಹಿಟ್ಟು - 3 ಚಮಚ, ಎಳ್ಳು - 1 ಚಮಚ, ಆಲೂಗೆಡ್ಡೆ - 1, ಮೆಣಸಿನ ಪುಡಿ - ಅರ್ಧ ಚಮಚ, ಎಣ್ಣೆ - ಕರಿಯಲು, ಇಂಗು - ಚಿಟಿಕೆ, ಉಪ್ಪು - ರುಚಿಗೆ, ನೀರು - ಸ್ವಲ್ಪ

ತಯಾರಿಸುವ ವಿಧಾನ: ಮೊದಲು ಆಲೂಗೆಡ್ಡೆಯನ್ನು ಬೇಯಿಸಿ, ಸ್ಮ್ಯಾಶ್‌ ಮಾಡಿ. ಅದನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ರಾಗಿಹಿಟ್ಟು ಹಾಗೂ ಗೋಧಿಹಿಟ್ಟು ಸೇರಿಸಿ. ಅದಕ್ಕೆ ಖಾರದಪುಡಿ, ಉಪ್ಪು, ಚಿಟಿಕೆ ಇಂಗು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಉಗುರು ಬೆಚ್ಚನೆಯ ನೀರು ಹಾಕಿ, ಪೂರಿ ಹಿಟ್ಟಿನಂತೆ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಹಿಟ್ಟಿನಿಂದ ಉಂಡೆ ತಯಾರಿಸಿ, ಪೂರಿ ಆಕಾರದಲ್ಲಿ ಲಟ್ಟಿಸಿ. ಈ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಲಟ್ಟಿಸಿಕೊಂಡ ಪೂರಿ ಸೇರಿಸಿ, ಕರಿಯಿರಿ. ಎರಡೂ ಕಡೆ ಚೆನ್ನಾಗಿ ಬೇಯಿಸುವುದು ಮುಖ್ಯವಾಗುತ್ತದೆ. ಎಣ್ಣೆ ಅಂಶ ಹೀರಿಕೊಳ್ಳಲು ಪೂರಿಗಳನ್ನು ಟಿಶ್ಯೂ ಮೇಲಿರಿಸಿ.

ಈ ಪೂರಿಯನ್ನು ಆಲೂಗೆಡ್ಡೆ, ತರಕಾರಿ ಸಾಗು ಜೊತೆ ತಿನ್ನಲು ಚೆನ್ನಾಗಿರುತ್ತದೆ. ಚಿಕನ್‌ ಕರಿ ಹಾಗೂ ಎಗ್‌ ಬುರ್ಜಿ ಕೂಡ ಇದಕ್ಕೆ ಹೊಂದಿಕೆಯಾಗುತ್ತದೆ.

ರಾಗಿಯ ಆರೋಗ್ಯ ಪ್ರಯೋಜನಗಳು

ಪ್ರತಿದಿನ ರಾಗಿಹಿಟ್ಟು ಸೇವಿಸುವುದರಿಂದ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ನಾರಿನಾಂಶ, ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶ ಸಮೃದ್ಧವಾಗಿದೆ. ಇದು ಗುಟ್ಲೆನ್‌ ಅಂಶವನ್ನು ಹೊಂದಿರುವುದಿಲ್ಲ. ಇದರಲ್ಲಿ ಗ್ಲೈಸೆಮಿಕ್‌ ಅಂಶ ಬಹಳ ಕಡಿಮೆ ಇರುತ್ತದೆ. ಈ ಎಲ್ಲಾ ಕಾರಣಗಳಿಂದ ಮಧುಮೇಹ ಸಮಸ್ಯೆ ಹೊಂದಿರುವವರು ರಾಗಿಯಿಂದ ತಯಾರಿಸಿದ ಆಹಾರ ಸೇವಿಸುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಜೀರ್ಣಾಂಗವ್ಯೂಹದ ಆರೋಗ್ಯಕ್ಕೂ ಇದು ತುಂಬಾ ಪ್ರಯೋಜನಕಾರಿ. ಈಗಾಗಲೇ ಮಧುಮೇಹದಿಂದ ಬಳಲುತ್ತಿರುವವರು ಅದನ್ನು ಹತೋಟಿಯಲ್ಲಿಡಲು ಪ್ರತಿದಿನ ರಾಗಿಹಿಟ್ಟಿನಿಂದ ತಯಾರಿಸಿದ ಆಹಾರಗಳನ್ನು ಸೇವಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ರಾಗಿಹಿಟ್ಟಿನಿಂದ ಮಾಡಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬೆಳಗಿನ ಸಮಯದಲ್ಲಿ ತಿನ್ನುವುದು ಉತ್ತಮ. ರಾತ್ರಿಯಲ್ಲಿ ತಿನ್ನುವುದರಿಂದ ಗ್ಯಾಸ್‌ ಉತ್ಪಾದನೆಗೆ ಕಾರಣವಾಗಬಹುದು.

ಇನ್ನೇಕೆ ತಡ, ನಾಳೆಯೇ ಮನೆಯಲ್ಲಿ ರಾಗಿಪೂರಿ ಟ್ರೈ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ.

(This copy first appeared in Hindustan Times Kannada website. To read more like this please logon to kannada.hindustantimes.com )