ದಿನಾ ಒಂದೇ ರೀತಿ ದೋಸೆ ತಿಂದು ಬೋರ್ ಆಗಿದ್ಯಾ: ಕೊತ್ತಂಬರಿ ದೋಸೆ ರೆಸಿಪಿ ಟ್ರೈ ಮಾಡಿ, ಮನೆಯವರೆಲ್ಲಾ ಇಷ್ಟಪಟ್ಟು ತಿಂತಾರೆ ನೋಡಿ
ಕೆಲವೊಬ್ಬರ ಮನೆಯಲ್ಲಿ ದಿನಾ ದೋಸೆ ಮಾಡುತ್ತಾರೆ. ಅದರಲ್ಲೂ ಕರಾವಳಿ ಕಡೆಗಳಲ್ಲಿ ಹೆಚ್ಚಾಗಿ ನೀರು ದೋಸೆ ಮಾಡುತ್ತಾರೆ.ಇದರಿಂದ ದಿನಾ ಒಂದೇ ರೀತಿ ದೋಸೆ ತಿಂದು ಬೋರ್ ಆಗುವುದು ಸಹಜ. ತೆಂಗಿನಕಾಯಿ ಚಟ್ನಿಯೊಂದಿಗೆ ಈ ದೋಸೆಯನ್ನು ಸವಿಯಬಹುದು.ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಕೆಲವೊಬ್ಬರ ಮನೆಯಲ್ಲಿ ದಿನಾ ದೋಸೆ ಮಾಡುತ್ತಾರೆ. ಅದರಲ್ಲೂ ಕರಾವಳಿ ಕಡೆಗಳಲ್ಲಿ ಹೆಚ್ಚಾಗಿ ನೀರು ದೋಸೆ ಮಾಡುತ್ತಾರೆ. ಇದು ಬಹಳ ಸುಲಭವಾಗಿ ಮಾಡಬಹುದಾಗಿರುವುದರಿಂದ ಬಹುತೇಕ ಮಂದಿ ನೀರು ದೋಸೆ ಮಾಡುವುದು ಸಾಮಾನ್ಯ. ಆದರೆ, ಪ್ರತಿದಿನ ಒಂದೇ ರೀತಿಯ ದೋಸೆ ತಿಂದು ಬೋರ್ ಬರುವುದು ಸಾಮಾನ್ಯ. ಹೀಗಾಗಿ ವಿಭಿನ್ನ ರೀತಿಯ ದೋಸೆಯನ್ನು ನೀವು ಪ್ರಯತ್ನಿಸಬಹುದು. ಕೊತ್ತಂಬರಿ ದೋಸೆಯ ಪಾಕವಿಧಾನವನ್ನು ಇಲ್ಲಿ ನೀಡಲಾಗಿದೆ. ತೆಂಗಿನಕಾಯಿ ಚಟ್ನಿಯೊಂದಿಗೆ ಈ ದೋಸೆಯನ್ನು ಸವಿಯಬಹುದು. ಇಲ್ಲಿದೆ ರೆಸಿಪಿ ಮಾಡುವ ವಿಧಾನ.
ಕೊತ್ತಂಬರಿ ದೋಸೆ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಅಕ್ಕಿ- ಒಂದು ಕಪ್, ಕೊತ್ತಂಬರಿ ಪುಡಿ - ಒಂದು ಕಪ್, ಉದ್ದಿನ ಬೇಳೆ- ಒಂದು ಕಪ್, ಮೆಂತ್ಯ- ಒಂದು ಚಮಚ, ಕರಿಬೇವು ಸೊಪ್ಪು- 10 ರಿಂದ 12 ಎಲೆ, ಪುದೀನಾ- ಅರ್ಧ ಹಿಡಿಯಷ್ಟು, ಕೊತ್ತಂಬರಿ ಸೊಪ್ಪು- ಅರ್ಧ ಹಿಡಿಯಷ್ಟು, ಹಸಿ ಮೆಣಸಿನಕಾಯಿ- ಎರಡು, ಮೆಣಸಿನ ಪುಡಿ - ಎರಡು ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಸ್ವಲ್ಪ, ಜೀರಿಗೆ - ಅರ್ಧ ಚಮಚ.
ಮಾಡುವ ವಿಧಾನ: ಕೊತ್ತಂಬರಿ ಹಸಿರು ದೋಸೆ ರೆಸಿಪಿ ಮಾಡುವ ವಿಧಾನ ಇಲ್ಲಿದೆ. ಮೊದಲಿಗೆ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯವನ್ನು ಸ್ವಚ್ಛವಾಗಿ ತೊಳೆದು ಮುಂಚಿತವಾಗಿ ನೆನೆಸಿಡಬೇಕು. ಇವುಗಳನ್ನು ಕನಿಷ್ಠ ಐದರಿಂದ ಆರು ಗಂಟೆಗಳ ಕಾಲ ನೆನೆಸಿಡಬೇಕು. ಅವುಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ರುಬ್ಬಬಹುದು. ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಪುದೀನಾ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಪದಾರ್ಥವನ್ನು ಹೊರತೆಗೆದು ಒಂದು ಪಾತ್ರೆಯಲ್ಲಿ ಹಾಕಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಜತೆಗೆ ಜೀರಿಗೆ ಬೇಕಿದ್ದರೆ ಸೇರಿಸಬಹುದು.
ಸ್ಟೌವ್ ಮೇಲೆ ಪ್ಯಾನ್ ಇಟ್ಟು ಸ್ವಲ್ಪ ಎಣ್ಣೆ ಹಾಕಿ ದೋಸೆ ಹಿಟ್ಟನ್ನು ಸುರಿಯಿರಿ. ಒಂದೆರಡು ನಿಮಿಷ ಇದನ್ನು ಬೇಯಲು ಬಿಡಿ. ಇಷ್ಟು ಮಾಡಿದರೆ ಸವಿಯಲು ರುಚಿಕರವಾದ, ಸಖತ್ ಟೇಸ್ಟಿ ಗ್ರೀನ್ ದೋಸೆ ಸವಿಯಲು ಸಿದ್ಧವಾಗಿರುತ್ತದೆ. ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿಯೊಂದಿಗೆ ತಿಂದರೆ ಇದರ ರುಚಿಯೇ ಬೇರೆ. ನೀವೂ ಒಮ್ಮೆ ಪ್ರಯತ್ನಿಸಿ ನೋಡಿ, ಖಂಡಿತ ನಿಮಗೆ ಇಷ್ಟವಾಗುತ್ತದೆ. ಅಲ್ಲದೆ, ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.
ಕೊತ್ತಂಬರಿ ಸೊಪ್ಪಿನ ಉಪಯೋಗಗಳು
ಕೊತ್ತಂಬರಿ ಸೊಪ್ಪು, ಪುದೀನಾ, ಕರಿಬೇವಿನ ಸೊಪ್ಪು, ಮೆಂತ್ಯ, ಹಸಿರು ಮೆಣಸಿನಕಾಯಿ ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇದು ಶಕ್ತಿಯನ್ನು ಸಹ ನೀಡುತ್ತದೆ. ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್‌ಗಳು ನಮಗೆ ನಿರಂತರ ಶಕ್ತಿಯನ್ನು ನೀಡುತ್ತವೆ. ಕೊತ್ತಂಬರಿ ಸೊಪ್ಪಿನ ಪೋಷಕಾಂಶಗಳ ಜೊತೆಗೆ ಪುದೀನಾ ಸುವಾಸನೆಯೂ ರುಚಿಯನ್ನು ಹೆಚ್ಚಿಸುತ್ತದೆ. ಕೊತ್ತಂಬರಿ ಸೊಪ್ಪನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳನ್ನು ದೂರವಿಡುತ್ತದೆ. ಅದರಲ್ಲೂ ಜೀರ್ಣಕ್ರಿಯೆ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಬಾಯಿಯ ದುರ್ವಾಸನೆ ಮತ್ತು ಅಲ್ಸರ್ ಅನ್ನು ಸಹ ಕಡಿಮೆ ಮಾಡುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿ ವಸಡು ನೋವು ಮತ್ತು ಹಲ್ಲು ನೋವನ್ನು ನಿವಾರಿಸುವ ಶಕ್ತಿಯೂ ಇದೆ. ಕೊತ್ತಂಬರಿ ಸೊಪ್ಪು ಕಿಡ್ನಿಗೂ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಹಾಗಾಗಿ ಕೊತ್ತಂಬರಿ ಸೊಪ್ಪು ಇರುವ ಆಹಾರ ಸೇವಿಸುವುದರಿಂದ ಕಿಡ್ನಿ ಸ್ವಚ್ಛವಾಗುತ್ತದೆ. ಇದರಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ನಮ್ಮ ದೇಹವನ್ನು ರಕ್ಷಿಸುತ್ತವೆ. ಕೊತ್ತಂಬರಿ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ನಿಮ್ಮ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸಾಧ್ಯವಾದಾಗಲೆಲ್ಲಾ ನಿಮ್ಮ ಆಹಾರದಲ್ಲಿ ಕೊತ್ತಂಬರಿಯನ್ನು ಸೇರಿಸಲು ಪ್ರಯತ್ನಿಸಿ.