Vegan Ghee: ಸಸ್ಯಾಹಾರಿಗಳು ಸವಿಯಬಹುದಾದ ತುಪ್ಪ: ಇದ್ರಿಂದ ತಯಾರಿಸಿದ ಅಡುಗೆಯಲ್ಲಿದೆ ಥೇಟ್ ದೇಸಿ ತುಪ್ಪದ ರುಚಿ
Vegan Ghee: ಹಾಲು ಇಲ್ದೆ ದೇಸಿ ತುಪ್ಪ ಮಾಡಬಹುದು ಎಂದು ಹೇಳಿದ್ರೆ ಸ್ವಲ್ಪ ವಿಚಿತ್ರ ಎನಿಸಬಹುದು. ಆದರೆ ಇದು ರುಚಿಯಲ್ಲಿ ಹಾಲಿನ ತುಪ್ಪವನ್ನೇ ಹೋಲುತ್ತದೆ. ಪ್ಯೂರ್ ಸಸ್ಯಹಾರಿಗಳೂ ಸವಿಯಬಹುದಾದ ತುಪ್ಪ ಇದು. ಹಾಗಾದ್ರೆ ಈ ತುಪ್ಪ ತಯಾರಿಸುವುದು ಹೇಗೆ? ನೀವೇ ನೋಡಿ. (ಬರಹ: ಅರ್ಚನಾ ವಿ. ಭಟ್)
ಭಾರತೀಯರಿಗೆ ಅತ್ಯಂತ ಪ್ರಿಯವಾದವುಗಳಲ್ಲಿ ದೇಸಿ ತುಪ್ಪನೂ ಒಂದು. ಬೆಳಗ್ಗಿನ ಉಪಹಾರ, ಊಟ ಎಲ್ಲದಕ್ಕೂ ತುಪ್ಪ ಹಾಕಿಕೊಂಡು ಸವಿಯುವುದು ಇಲ್ಲಿನ ರೂಢಿ. ಕರಿದ ಪದಾರ್ಥ, ಸಿಹಿ ತಿಂಡಿಗಳಂತಹ ವಿಶೇಷ ಪಾಕಗಳನ್ನು ತಯಾರಿಸಲು ತುಪ್ಪ ಬಳಸುತ್ತಾರೆ. ಅಷ್ಟೇ ಅಲ್ಲದೇ ಪರಾಠ, ಚಪಾತಿ, ರೊಟ್ಟಿಯ ಸ್ವಾದ ಇದು ಹೆಚ್ಚಿಸುತ್ತದೆ. ಯಾವುದೇ ಅಡುಗೆಗಿರಲಿ ಸ್ವಲ್ಪ ತುಪ್ಪ ಬಳಸಿದರೆ ಸಾಕು, ಅದರ ಪರಿಮಳ ಮತ್ತು ರುಚಿ ದುಪ್ಪಟ್ಟಾಗುತ್ತದೆ. ಇಂದಿನ ದಿನಗಳಲ್ಲಿ ಸಸ್ಯಾಹಾರಿ ಆಹಾರ ಸೇವನೆಯ ಪ್ರವೃತ್ತಿ ವೇಗವಾಗಿ ಬೆಳೆಯುತ್ತಿದೆ. ಸಸ್ಯಾಹಾರಿಗಳು ಜೀವವಿರುವ ಜೀವಿಗಳಿಂದ ಉತ್ಪನ್ನವಾಗಿ ಬರುವ ಆಹಾರವನ್ನು ಸೇವಿಸುವುದಿಲ್ಲ. ಅಂದರೆ ಹಸುವಿನ ಹಾಲು, ಮತ್ತು ಅದರ ಉಪ ಉತ್ಪನ್ನಗಳಾದ ಮೊಸರು, ಬೆಣ್ಣ, ತುಪ್ಪ ಮತ್ತು ಚೀಸ್ ಉತ್ಪನ್ನಗಳನ್ನು ತಿನ್ನುವುದಿಲ್ಲ. ಇಂತಹ ಸಂದರ್ಭದಲ್ಲಿ ಸಸ್ಯಾಹಾರಿಗಳು ದೇಸಿ ತುಪ್ಪವನ್ನು ಸವಿಯಲಾರರು. ಆದರೆ ಹಾಲು ಇಲ್ಲದೆ ದೇಸಿ ತುಪ್ಪ ಮಾಡಬಹುದು ಎಂಬುದು ನಿಮಗೆ ಗೊತ್ತಾ?
ಏನಿದು ವೇಗನ್ ಘೀ
ಇತ್ತೀಚಿನ ದಿನಗಳಲ್ಲಿ ಸಸ್ಯಾಹಾರ ಸೇವನೆಯ ಪ್ರವೃತ್ತಿಯು ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಸ್ಯಾಹಾರಿ ಪದ್ಧತಿ ಎಂದೂ ಕರೆಯುತ್ತಾರೆ. ಇದು ಜೀವವಿರುವ ಜೀವಿಗಳಿಂದ ದೊರಕುವ ಯಾವುದೇ ಪದಾರ್ಥಗಳನ್ನು ಒಳಗೊಂಡಿರುವುದಿಲ್ಲ. ಅಂದರೆ ಅವರು ಹಸುವಿನ ಹಾಲು ಮತ್ತು ಅದರಿಂದ ಬರುವ ಉಪ ಉತ್ಪನ್ನಗಳಾದ ತುಪ್ಪ, ಚೀಸ್ ಮುಂತಾದವುಗಳನ್ನು ತಿನ್ನುವುದಿಲ್ಲ. ಆ ಸಂದರ್ಭದಲ್ಲಿ ಸಸ್ಯಾಹಾರಿಗಳು ದೇಸಿ ತುಪ್ಪವನ್ನು ಸವಿಯಲಾರರು. ಆದರೆ ಹಾಲು ಇಲ್ಲದೆ ತುಪ್ಪ ಮಾಡಬಹುದು ಎಂದರೆ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು? ಇದನ್ನು ವೇಗನ್ ಘೀ ಅಥವಾ ಸಸ್ಯಜನ್ಯ ತುಪ್ಪ ಎಂದು ಕರೆಯಲಾಗುತ್ತದೆ. ತುಪ್ಪದಿಂದ ಅಲರ್ಜಿ ಇರುವವರು ಅಥವಾ ಸಂಪೂರ್ಣ ಸಸ್ಯಾಹಾರಿಗಳು ಇದನ್ನು ಬಳಸಬಹುದಾಗಿದೆ. ವೇಗನ್ ಘೀ ಯನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಇದು ರುಚಿಯಲ್ಲಿ ತುಪ್ಪನ್ನು ಹೋಲುತ್ತದೆ ಹಾಗೂ ಇದನ್ನು ಸಾಮಾನ್ಯ ತುಪ್ಪದಂತೆಯೇ ಬಳಸಬಹುದು. ಹಾಗಾದರೆ ಈ ತುಪ್ಪ ತಯಾರಿಸುವುದು ಹೇಗೆ ಎಂದು ತಿಳಿಯೋಣ.
ಹಾಲು ಇಲ್ಲದೆ ಹೀಗೆ ತುಪ್ಪ ತಯಾರಿಸಿ
ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಉತ್ಪನ್ನಗಳನ್ನು ಬಳಸಿಕೊಂಡು ಸಸ್ಯಾಹಾರಿ ದೇಸಿ ತುಪ್ಪವನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಇದನ್ನು ತಯಾರಿಸಲು, ನಿಮಗೆ ಅರ್ಧ ಕಪ್ ತೆಂಗಿನ ಎಣ್ಣೆ, ಎರಡು ಚಮಚ ಸೂರ್ಯಕಾಂತಿ ಎಣ್ಣೆ, ಎರಡು ಚಮಚ ಎಳ್ಳೆಣ್ಣೆ, ಐದು ತಾಜಾ ಪೇರಲೆ ಎಲೆಗಳು (ಕರಿಬೇವಿನ ಎಲೆಗಳನ್ನು ಬಳಸಬಹುದು), ಮತ್ತು ಒಂದು ಚಮಚ ಅರಿಶಿಣ ಅಗತ್ಯವಿದೆ. ಇವುಗಳಿಂದ ತುಪ್ಪವನ್ನು ಬಹಳ ಸುಲಭವಾಗಿ ತಯಾರಿಸಬಹುದು. ಇದಕ್ಕಾಗಿ ಮೊದಲು ಮೂರು ಎಣ್ಣೆ ಅಂದರೆ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮೂರು ಎಣ್ಣೆ ಹಾಕಿರುವ ಬೌಲ್ ಅನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಈಗ ಪೇರಲ ಎಲೆ ಅಥವಾ ಕರಿಬೇವಿನ ಸೊಪ್ಪನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ನೀರು ಸೇರಿಸಿ ರುಬ್ಬಿಕೊಳ್ಳಬೇಡಿ. ಈಗ ಈ ಪೇಸ್ಟ್ ಅನ್ನು ಎಣ್ಣೆಯಲ್ಲಿ ಹಾಕಿ ಬಿಸಿ ಮಾಡಿ. ಜೊತೆಗೆ ಅರಿಶಿಣವನ್ನೂ ಸೇರಿಸಿ. ಈ ಸಂಪೂರ್ಣ ಮಿಶ್ರಣವು ಚೆನ್ನಾಗಿ ಕಾಯುವವರೆಗೆ ಬಿಸಿ ಮಾಡಿ. ನಂತರ ಸ್ಟವ್ ಆಫ್ ಮಾಡಿ. ಸ್ವಲ್ಪ ತಣ್ಣಗಾದ ನಂತರ ಚೆನ್ನಾಗಿ ಸೋಸಿ ಬಾಟಲಿಗೆ ಹಾಕಿ. ಹೀಗೆ ತುಪ್ಪ ತಯಾರಿಸಿ. ಇದನ್ನು ಫ್ರಿಜ್ ನಲ್ಲಿಟ್ಟರೆ ಗಟ್ಟಿಯಾಗುತ್ತದೆ. ಈ ಸಸ್ಯಾಹಾರಿ ತುಪ್ಪವನ್ನು ದೇಸಿ ತುಪ್ಪದಂತೆ ಬಳಸಬಹುದು.
ಪ್ರಪಂಚದಲ್ಲಿ ಸಸ್ಯಾಹಾರವನ್ನು ಅಭ್ಯಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹವರು ಸಸ್ಯ ಮೂಲದ ಆಹಾರವನ್ನು ಮಾತ್ರ ತಿನ್ನುತ್ತಾರೆ. ಅವರು ಚರ್ಮದಿಂದ ಮಾಡಿದ ಉತ್ಪನ್ನಗಳನ್ನು ಸಹ ಬಳಸುವುದಿಲ್ಲ. ಹಾಲು ಮತ್ತು ಜೇನುತುಪ್ಪವನ್ನು ಸಹ ಸೇವಿಸುವುದಿಲ್ಲ. ಅಂತಹವರು ಈ ತುಪ್ಪವನ್ನು ಮನೆಯಲ್ಲಿಯೇ ತಯಾರಿಸಿ ಬಳಸಬಹುದು.
ವಿಭಾಗ