Foreign Tour: ಭಾರತೀಯರೇ ಈ ದೇಶಗಳಿಗೆ ಪ್ರವಾಸಕ್ಕೆ ತೆರಳಿದರೆ ನೀವೇ ಶ್ರೀಮಂತರು; ಯಾಕೆ ಅಂತೀರಾ? ಕಾರಣ ಇಲ್ಲಿದೆ
Indian currency: ಕಡಿಮೆ ಬೆಲೆಯಲ್ಲಿ ವಿದೇಶಿ ಪ್ರವಾಸಕ್ಕೆ ತೆರಳುವುದು ಕನಸಿನ ಮಾತು ಎಂದು ನೀವು ಎಂದುಕೊಂಡಿರಬಹುದು. ಆದರೆ ನೀವು ಇಲ್ಲಿ ಹೇಳಲಾದ ದೇಶಗಳಿಗೆ ಪ್ರವಾಸಕ್ಕೆ ತೆರಳಿದರೆ ಅತೀ ಕಡಿಮೆ ಹಣದಲ್ಲಿ ಮಜಾ ಮಾಡಬಹುದಾಗಿದೆ. ಭಾರತೀಯ ಕರೆನ್ಸಿಯು ಈ ದೇಶಗಳಲ್ಲಿ ಹೆಚ್ಚಿನ ಮೌಲ್ಯ ಹೊಂದಿದ್ದು ನಿಮ್ಮ ವಿದೇಶಿ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಇದಾಗಿದೆ.
ಪ್ರವಾಸಗಳಿಗೆಂದು ವಿದೇಶಕ್ಕೆ ತೆರಳಬೇಕು ಎಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಆದರೆ ಇದು ದುಬಾರಿ ಪ್ರವಾಸವಾಗಿರೋದ್ರಿಂದ ಅನೇಕರು ವಿದೇಶಕ್ಕೆ ಭೇಟಿ ನೀಡಬೇಕೆಂದು ಆಸೆಯಿದ್ದರೂ ಸಹ ದುಡ್ಡಿನ ಮುಖ ನೋಡಿ ಸುಮ್ಮನಾಗುತ್ತಾರೆ. ಭಾರತೀಯ ರೂಪಾಯಿ ಮೌಲ್ಯದ ಎದುರು ಡಾಲರ್ ಹಾಗೂ ಯುರೋ ಮೌಲ್ಯ ಏರುತ್ತಲೇ ಇರುವುದಿಂದ ದಿನ ಕಳೆದಂತೆ ವಿದೇಶಿ ಪ್ರವಾಸ ಎನ್ನುವುದು ಮಧ್ಯಮ ವರ್ಗದವರಿಗೆ ಗಗನಕುಸುಮವಾಗುತ್ತಲೇ ಇದೆ.
ಆದರೆ ಭಾರತೀಯ ರೂಪಾಯಿ ಮೌಲ್ಯ ಅಷ್ಟು ಕಡಿಮೆಯಿದೆ ಅಂತಾ ನೀವು ಬೇಸರ ಮಾಡಿಕೊಳ್ಳುವುದು ಬೇಕಿಲ್ಲ. ಅಮೆರಿಕದ ಡಾಲರ್ ಅಥವಾ ಪೌಂಡ್ಗಳ ಎದುರು ರೂಪಾಯಿ ಬೆಲೆ ಕಡಿಮೆಯಿದ್ದಿರಬಹುದು. ಆದರೆ ಇನ್ನೂ ಅನೇಕ ವಿದೇಶಿ ಕರೆನ್ಸಿಗಳಿಗಿಂತ ಭಾರತೀಯ ರೂಪಾಯಿ ಮೌಲ್ಯ ಹೆಚ್ಚಿದೆ ಎಂಬ ವಿಚಾರ ನಿಮಗೆ ತಿಳಿದಿದಿಯೇ..? ಹೀಗಾಗಿ ನೀವು ಕಡಿಮೆ ಖರ್ಚಿನಲ್ಲಿ ವಿದೇಶಿ ಪ್ರವಾಸ ಮಾಡಿ ಮುಗಿಸಬೇಕು ಎಂದುಕೊಂಡಿದ್ದಲ್ಲಿ ಈ ಕೆಳಗೆ ಹೇಳಲಾದ ದೇಶಕ್ಕೆ ಪ್ರವಾಸ ಕೈಗೊಳ್ಳಬಹುದಾಗಿದೆ.
ಇಂಡೋನೇಷ್ಯಾ ( ಭಾರತದ ಒಂದು ರೂಪಾಯಿ ಇಂಡೋನೇಷ್ಯಾದ 186.44 ರೂಪೈಗೆ ಸಮ) (ರೂಪೈ-rupiah)
ಅತ್ಯಂತ ಶುದ್ಧವಾದ ಹಾಗೂ ತಿಳಿಯಾದ ನೀರು, ಸುಂದರ ದ್ವೀಪಗಳಿಗೆ ವಿಸಿಟ್ ಮಾಡಬೇಕು ಎಂದುಕೊಂಡಿದ್ದರೆ ನೀವು ಇಂಡೋನೇಷ್ಯಾಗೆ ತೆರಳಬಹುದಾಗಿದೆ. ಇಲ್ಲಿ ಭಾರತೀಯ ಕರೆನ್ಸಿಯು ಇಂಡೋನೇಷ್ಯಾ ಕರೆನ್ಸಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಹೀಗಾಗಿ ಕಡಿಮೆ ಬಜೆಟ್ನಲ್ಲಿ ವಿದೇಶಿ ಪ್ರವಾಸ ಕೈಗೊಳ್ಳಲು ಸಾಧ್ಯವಿದೆ.
ಕಾಂಬೋಡಿಯಾ ( 1 ರೂಪಾಯಿ = 49.90 ಕಾಂಬೋಡಿಯನ್ ರೀಯಲ್)
ಹಸಿರು ಭೂದೃಶ್ಯಗಳಿಗೆ ಹೆಸರುವಾಸಿಯಾಗಿರುವ ಕಾಂಬೋಡಿಯೋ ಕೂಡ ಭಾರತೀಯರಿಗೆ ಬಜೆಟ್ ಸ್ನೇಹಿ ಪ್ರವಾಸಿ ತಾಣವಾಗಿದೆ. ನಿಮಗೆ ಭಾರತೀಯ ರೂಪಾಯಿಯು ಇಲ್ಲಿ ಹೆಚ್ಚಿನ ಮೌಲ್ಯ ಹೊಂದಿರುವುದರಿಂದ ಹಲವಾರು ಸ್ಥಳಗಳನ್ನು ಅನ್ವೇಷಿಸಲು ಸಾಧ್ಯವಾಗುತ್ತದೆ .
ವಿಯೆಟ್ನಾಂ( 1 ರೂಪಾಯಿ = 292.87 ವಿಯೆಟ್ನಾಮ್ ಡಾಂಗ್)
ವಿಯೆಟ್ನಾಂನಲ್ಲಿ ಭಾರತೀಯರು ಯಾರೇ ತೆರಳಿದರೂ ಅವರಿಗೆ ತಾವು ಶ್ರೀಮಂತರು ಎಂಬ ಭಾವನೆ ಮೂಡುವುದು ಸಹಜ. ಇಲ್ಲಿ ಭಾರತೀಯ ರೂಪಾಯಿಗೆ ಅತೀ ಹೆಚ್ಚಿನ ಮೌಲ್ಯ ಇರುವುದರಿಂದ ನೀವು ಇಲ್ಲಿ ಹಾಯಾಗಿ ಪ್ರಯಾಣಿಸಬಹುದಾಗಿದೆ. ವಿಯೆಟ್ನಾಂನಲ್ಲಿ, ಭಾರತೀಯ ರೂಪಾಯಿಯು ಶ್ರೀಮಂತಿಕೆಯ ಭಾವವನ್ನು ನೀಡುತ್ತದೆ, ಈ ಗಮ್ಯಸ್ಥಾನದ ರತ್ನದಲ್ಲಿ ನಿಮ್ಮ ಪ್ರಯಾಣವು ರಾಜಪ್ರಭುತ್ವದ ಭಾವನೆಯನ್ನು ನೀಡುತ್ತದೆ, ಇದು ಪ್ರವಾಸಿಗರನ್ನು ವಿಶೇಷವಾಗಿ ಭಾರತದಿಂದ ಆಕರ್ಷಿಸುವುದನ್ನು ಮುಂದುವರಿಸುತ್ತದೆ.
ನೇಪಾಳ ( 1 ರೂಪಾಯಿ =1.60 ನೇಪಾಳದ ಕರೆನ್ಸಿ)
ಅರಣ್ಯ ಪ್ರದೇಶಗಳಲ್ಲಿ ಸಾಹಸಗಳನ್ನು ಇಷ್ಟಪಡುವವರಿಗೆ ನೇಪಾಳ ಸೂಕ್ತ ಅಯ್ಕೆಯಾಗಿದೆ. ಭಾರತೀಯ ರೂಪಾಯಿಗೆ ಇಲ್ಲಿ ಸ್ವಲ್ಪ ಹೆಚ್ಚಿನ ಮೌಲ್ಯ ಇರುವುದರಿಂದ ನೇಪಾಳದ ಪ್ರವಾಸ ಕೂಡ ಹಿತ ಎನಿಸಲಿದೆ.
ಶ್ರೀಲಂಕಾ (1 ರೂಪಾಯಿ= 3.93 ಶ್ರೀಲಂಕಾ ಕರೆನ್ಸಿ)
2024ರಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸಬೇಕು ಎಂದುಕೊಂಡಿದ್ದರೆ ಶ್ರೀಲಂಕಾವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಇರುವುದರಿಂದ ಹಾಗೂ ಭಾರತೀಯ ಕರೆನ್ಸಿಗೆ ಇಲ್ಲಿನ ಹೆಚ್ಚಿನ ಮೌಲ್ಯ ಬೇರೆ ಇರುವುದರಿಂದ ಶ್ರೀಲಂಕಾ ಸಖತ್ ಫ್ರೆಂಡ್ಲಿ ಎನಿಸಲಿದೆ.
ಹಂಗೇರಿ (1 ರೂಪಾಯಿ = 4.22 ಫೋರಿಂಟ್)
ರುಚಿ ರುಚಿಯಾದ ತಿನಿಸುಗಳನ್ನು ಇಷ್ಟಪಡುವವರು ನೀವಾಗಿದ್ದರೆ ಹಂಗೇರಿ ನಿಮ್ಮ ಉತ್ತಮ ಆಯ್ಕೆಯಾಗಿರಲಿದೆ. ಇಲ್ಲಿರುವ ಭವ್ಯವಾದ ವಸತಿಗೃಹಗಳು ನಿಮಗೆ ಐಷಾರಾಮಿ ಅನುಭವವನ್ನು ನೀಡಲಿದೆ. ಹೀಗಾಗಿ ಬಜೆಟ್ ಸ್ನೇಹಿ ವಿದೇಶಿ ಪ್ರವಾಸ ಅರಸುತ್ತಿರುವ ಭಾರತೀಯರಿಗೆ ಹಂಗೇರಿ ಕೂಡ ಬೆಸ್ಟ್ ಆಯ್ಕೆ ಎನಿಸಲಿದೆ.