Happy Varalakshmi Vratam 2022: ವರಮಹಾಲಕ್ಷ್ಮಿ ಹಬ್ಬಕ್ಕೆ ನೀವೂ ಪೋಸ್ಟ್ ಹಾಕ್ಬೇಕಾ? ಇಲ್ಲಿವೆ ಫೋಟೋಸ್
- ನಾಡಿನೆಲ್ಲೆಡೆ ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮಿ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ಎಂದಿನಂತೆ ಈ ಬಾರಿಯೂ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತಿದೆ. ಯಾರೊಬ್ಬರ ಸಾಮಾಜಿಕ ಜಾಲತಾಣಗಳ ಖಾತೆ ನೋಡಿದ್ರೂ ವರಮಹಾಲಕ್ಷ್ಮಿ ಹಬ್ಬದ್ದೇ ಪೋಸ್ಟ್ ಕಾಣಿಸುತ್ತಿದೆ. ನೀವೂ ನಿಮ್ಮ ಫೇಸ್ಬುಕ್, ವಾಟ್ಸ್ ಆ್ಯಪ್ ಹಾಗೂ ಇನ್ಸ್ಟಾಗ್ರಾಂಗಳಲ್ಲಿ ಸ್ಟೇಟಸ್ ಅಥವಾ ಪೋಸ್ಟ್ ಹಾಕಬೇಕಾ? ಹಾಗಿದ್ರೆ ಇಲ್ಲಿವೆ ನೋಡಿ ನಿಮಗೆ ಬೇಕಾದ ಫೋಟೋಗಳು...
- ನಾಡಿನೆಲ್ಲೆಡೆ ಸಂಪತ್ತಿನ ಅಧಿದೇವತೆ ವರಮಹಾಲಕ್ಷ್ಮಿ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ಎಂದಿನಂತೆ ಈ ಬಾರಿಯೂ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತಿದೆ. ಯಾರೊಬ್ಬರ ಸಾಮಾಜಿಕ ಜಾಲತಾಣಗಳ ಖಾತೆ ನೋಡಿದ್ರೂ ವರಮಹಾಲಕ್ಷ್ಮಿ ಹಬ್ಬದ್ದೇ ಪೋಸ್ಟ್ ಕಾಣಿಸುತ್ತಿದೆ. ನೀವೂ ನಿಮ್ಮ ಫೇಸ್ಬುಕ್, ವಾಟ್ಸ್ ಆ್ಯಪ್ ಹಾಗೂ ಇನ್ಸ್ಟಾಗ್ರಾಂಗಳಲ್ಲಿ ಸ್ಟೇಟಸ್ ಅಥವಾ ಪೋಸ್ಟ್ ಹಾಕಬೇಕಾ? ಹಾಗಿದ್ರೆ ಇಲ್ಲಿವೆ ನೋಡಿ ನಿಮಗೆ ಬೇಕಾದ ಫೋಟೋಗಳು...
(1 / 10)
ಮೊದಲನೆಯದಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ (ಹೆಚ್ಟಿ ಕನ್ನಡ)ದ ವತಿಯಿಂದ ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
(2 / 10)
ಹಿಂದೂ ಪುರಾಣಗಳಲ್ಲಿ ಲಕ್ಷ್ಮಿಯನ್ನು ಸಂಪತ್ತು, ಸಮೃದ್ಧಿ, ಶಕ್ತಿ ಮತ್ತು ಅದೃಷ್ಟದ ದೇವತೆ ಎನ್ನಲಾಗುತ್ತದೆ. ಹಣ ಮಾತ್ರವಲ್ಲದೆ, ಮುತ್ತೈದೆಯರು ಈ ದಿನ ತಮ್ಮ ಪತಿ ಹಾಗೂ ಕುಟುಂಬದವರ ನೆಮ್ಮದಿ, ಸಂಪತ್ತು, ಕೀರ್ತಿ, ದೀರ್ಘಾಯುಷ್ಯ, ಆರೋಗ್ಯ ಮತ್ತು ಸಂತತಿ, ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತಾರೆ.
(4 / 10)
ಕೆಲವೊಂದು ಮನೆಗಳಲ್ಲಿ ವರಮಹಾಲಕ್ಷ್ಮಿ ವ್ರತದಂದು ಮನೆಗೆ ಅರಿಶಿನ ಕುಂಕುಮಕ್ಕಾಗಿ ಬರುವವರಿಗೆ ವರಮಹಾಲಕ್ಷ್ಮಿ ವ್ರತದ ಕಥೆ ಪುಸ್ತಕಗಳನ್ನು ನೀಡುವ ವಾಡಿಕೆ ಇದೆ. ಈ ಪುಸ್ತಕದಲ್ಲಿ ಇರುವಂತೆ ಪೂಜೆ, ಪುನಸ್ಕಾರ ಮಾಡಿದರೆ ಖಂಡಿತ ವರಮಹಾಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆ ಇದೆ.
(5 / 10)
ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮಿಪೂಜೆ ಮಾಡಲು ಗೊತ್ತಿರುವವರಿಗೆ ವರಮಹಾಲಕ್ಷ್ಮಿ ಪೂಜೆ ಮಾಡುವುದು ಸುಲಭವಾಗಬಹುದು. ಏಕೆಂದರೆ, ವರಮಹಾಲಕ್ಷ್ಮಿ ಪೂಜೆಯ ವಿವಿಧ ಹಂತಗಳು ದೀಪಾವಳಿಯ ಲಕ್ಷ್ಮಿ ಪೂಜೆಯನ್ನು ಹೋಲುತ್ತದೆ. ದೇವರು ಮತ್ತು ದೇವಿಯರ ಪೂಜೆಗಳನ್ನು ಸರಿಯಾದ ಕ್ರಮದಲ್ಲಿ, ವಿಧಾನದಲ್ಲಿ ಮಾಡಿದರೆ ಖಂಡಿತಾ ಫಲ ದೊರಕುತ್ತದೆ.(ShareChat)
(6 / 10)
ಬೆಳಗ್ಗೆ ಎದ್ದ ಕೂಡಲೇ ಮನೆ ಸ್ವಚ್ಛಗೊಳಿಸಿ ಮಡಿಯುಟ್ಟು, ರಂಗೋಲಿ ಇಟ್ಟು, ಲಕ್ಷ್ಮಿ ಪೂಜೆಗೆ ಬೇಕಾದ ಸಕಲ ತಯಾರಿ ಮಾಡಿಕೊಳ್ಳಿ. ಅದ್ಧೂರಿಯಾಗಿ ಸಾಧ್ಯವಾಗದಿದ್ದರೆ ಸರಳವಾಗಿ ನಿಮಗೆ ಶಕ್ತಿಯಿದ್ದಷ್ಟು ದೇವಿಯನ್ನು ಪೂಜಿಸಿ. ಆಕೆಗೆ ಇಷ್ಟವಾದ ಹೂವು, ಹಣ್ಣು, ತಿಂಡಿಗಳನ್ನು ವೈವೇದ್ಯಕ್ಕೆ ಇರಿಸಿ. ಕಥೆಯನ್ನು ಓದಿ, ಮುತ್ತೈದೆಯರನ್ನು ಕರೆದು ಅರಿಶಿನ, ಕುಂಕುಮ ನೀಡಿ.(ShareChat)
(7 / 10)
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ವರಮಹಾಲಕ್ಷ್ಮಿ ಪೂಜೆ, ವರಮಹಾಲಕ್ಷ್ಮಿ ವ್ರತಕ್ಕೆ ಹೆಚ್ಚಿನ ಮಹತ್ವವಿದೆ.(ShareChat)
(8 / 10)
ಇಂದು ಬೆಳಗ್ಗೆ 6:00 ರಿಂದ ಬೆಳಗ್ಗೆ 8.20 ರವರೆಗೆ, ಬೆಳಗ್ಗೆ 9.20 ರಿಂದ ಬೆಳಗ್ಗೆ 11.05 ರವರೆಗೆ, ಬೆಳಗ್ಗೆ 11.54 ರಿಂದ ಮಧ್ಯಾಹ್ನ 12.35 ರವರೆಗೆ ಮತ್ತು ಸಂಜೆ 6.40 ರಿಂದ ಸಂಜೆ 7.40 ರವರೆಗೆ ಪೂಜೆ ಮಾಡಬಹುದು. ಈ ಅವಧಿಗಳಲ್ಲಿ ಬೆಳಗ್ಗೆ11:50 ರಿಂದ ಮಧ್ಯಾಹ್ನ 12:42 ರವರೆಗೆ ಅಭಿಜಿತ್ ಮಹೂರ್ತವಾಗಿದ್ದು, ಪೂಜೆಗೆ ಹೆಚ್ಚು ಶುಭ ಸಮಯವಾಗಿದೆ. ಹಾಗೆಯೇ, ಬೆಳಗ್ಗೆ 09:53 ರಿಂದ ಬೆಳಗ್ಗೆ 11:29 ರವರೆಗೆ ಅಮೃತಕಾಲವಿದ್ದು, ಪೂಜೆಗೆ ಶುಭ ಮಹೂರ್ತವಾಗಿದೆ.(ShareChat)
(9 / 10)
ವರಮಹಾಲಕ್ಷ್ಮಿ ವ್ರತದಲ್ಲಿ ವಿಶೇಷವಾಗಿ ಅಷ್ಟಲಕ್ಷ್ಮಿಯರನ್ನು ಪೂಜಿಸಲಾಗುತ್ತದೆ. ಅಂದರೆ, ಆದಿ ಲಕ್ಷ್ಮಿ (ರಕ್ಷಕ), ಧನ ಲಕ್ಷ್ಮಿ (ಸಂಪತ್ತಿನ ದೇವತೆ), ಧೈರ್ಯ ಲಕ್ಷ್ಮಿ (ಧೈರ್ಯ ದೇವತೆ), ಸೌಭಾಗ್ಯ ಲಕ್ಷ್ಮಿ (ಸಮೃದ್ಧಿಯ ದೇವತೆ), ವಿಜಯ ಲಕ್ಷ್ಮಿ (ವಿಜಯದ ದೇವತೆ), ಧಾನ್ಯ ಲಕ್ಷ್ಮಿ (ಪೋಷಣೆಯ ದೇವತೆ), ಸಂತಾನ ಲಕ್ಷ್ಮಿ (ಸಂತಾನದ ದೇವತೆ) ಮತ್ತು ವಿದ್ಯಾ ಲಕ್ಷ್ಮಿ (ಬುದ್ಧಿವಂತಿಕೆಯ ದೇವತೆ)ಯನ್ನು ಪೂಜಿಸಲಾಗುತ್ತದೆ.(ShareChat)
(10 / 10)
ವರಮಹಾಲಕ್ಷ್ಮಿ ಪೂಜೆಗೆ ದೇವಿಯ ಮುಖವಾಡ, ಕಲಶ, ಸೀರೆ, ಆಭರಣಗಳು, ರೆಡಿಮೆಡ್ ಕೂದಲು ಮತ್ತು ಇತರೆ ಸಾಮಗ್ರಿಗಳು, ಕನ್ನಡಿ, ಸಿಪ್ಪೆ ಸಹಿತ ಮೂರು ತೆಂಗಿನಕಾಯಿ ಮತ್ತು ಹೂವುಗಳು ಇರಲಿ. ಇದರೊಂದಿಗೆ ಮಣಿಕಟ್ಟಿಗೆ ಕಟ್ಟಲು ಪವಿತ್ರ ಹಳದಿ ದಾರ, ಮರದ ಮಣೆ ಅಥವಾ ಪೀಠ, ತಾಜಾ ಹೂವುಗಳ ದಾರ, ವೀಳ್ಯದೆಲೆ, ಅಡಿಕೆ, ಹಣ್ಣುಗಳು, ಬಾಳೆಹಣ್ಣು, ಅರಿಶಿನ, ಚಂದನ, ಕುಂಕುಮ, ಅಕ್ಷತೆ, ರಂಗೋಲಿ ಪುಡಿ, ಅಕ್ಷತೆ ಮತ್ತು ಅಕ್ಕಿ ಇರಲಿ. ದೀಪ, ಎಣ್ಣೆ ಅಥವಾ ತುಪ್ಪ, ಧೂಪದ್ರವ್ಯದ ತುಂಡುಗಳು ಮತ್ತು ಕರ್ಪೂರ ಬೇಕು.(ShareChat)
ಇತರ ಗ್ಯಾಲರಿಗಳು