Beetroot Juice: ತ್ವಚೆಯಲ್ಲಿನ ಮೊಡವೆಗಳಿಗೆ, ತಲೆಗೂದಲು ಉದುರುವಿಕೆಗೆ ರಾಮಬಾಣ ಬೀಟ್ರೂಟ್ ರಸ-beauty tips hair care beetroot juice how to use beetroot for skin benefits for hair and skin prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Beetroot Juice: ತ್ವಚೆಯಲ್ಲಿನ ಮೊಡವೆಗಳಿಗೆ, ತಲೆಗೂದಲು ಉದುರುವಿಕೆಗೆ ರಾಮಬಾಣ ಬೀಟ್ರೂಟ್ ರಸ

Beetroot Juice: ತ್ವಚೆಯಲ್ಲಿನ ಮೊಡವೆಗಳಿಗೆ, ತಲೆಗೂದಲು ಉದುರುವಿಕೆಗೆ ರಾಮಬಾಣ ಬೀಟ್ರೂಟ್ ರಸ

ತ್ವಚೆ ಮತ್ತು ಕೂದಲಿನ ಆರೈಕೆಗೆ ಬೀಟ್ರೂಟ್ ರಸ ಬಹಳ ಪ್ರಯೋಜನಕಾರಿಯಾಗಿದೆ. ಮೊಡವೆಗಳಿಲ್ಲದ ಚರ್ಮ ಮತ್ತು ತಲೆಗೂದಲು ಉದುರುವಿಕೆಯನ್ನು ತಡೆಗಟ್ಟಲು ಬೀಟ್ರೂಟ್ ಜ್ಯೂಸ್ ಸೇವನೆಯಿಂದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಬೀಟ್ರೂಟ್ ಅನ್ನು ತ್ವಚೆ ಹಾಗೂ ತಲೆಗೂದಲಿಗೆ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು, ಇಲ್ಲಿ ತಿಳಿದುಕೊಳ್ಳಿ.
ಬೀಟ್ರೂಟ್ ಅನ್ನು ತ್ವಚೆ ಹಾಗೂ ತಲೆಗೂದಲಿಗೆ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು, ಇಲ್ಲಿ ತಿಳಿದುಕೊಳ್ಳಿ. (freepik)

ತ್ವಚೆ ಹಾಗೂ ತಲೆಗೂದಲಿನ ಕಾಳಜಿ ಯಾರಿಗೇ ತಾನೇ ಇರುವುದಿಲ್ಲ ಹೇಳಿ? ಬಹುತೇಕ ಮಂದಿ ತಮ್ಮ ತ್ವಚೆ ಹಾಗೂ ಕೂದಲಿನ ಬಗ್ಗೆ ಚಿಂತಿಸುತ್ತಾರೆ, ಆರೈಕೆ ಮಾಡುತ್ತಾರೆ, ಉತ್ತಮ ಆಹಾರ ಸೇವನೆ ತ್ವಚೆ ಹಾಗೂ ಕೂದಲಿನ ಕಾಳಜಿಗೆ ಸಹಕಾರಿಯಾಗಿದೆ. ಮೊಡವೆಗಳಿಲ್ಲದ ಚರ್ಮ ಮತ್ತು ಬಲವಾದ ಕೂದಲನ್ನು ಪಡೆಯಲು, ನಿಮ್ಮ ಆಹಾರದಲ್ಲಿ ಬೀಟ್ರೂಟ್ ಅನ್ನು ಸೇರಿಸಿಕೊಳ್ಳಬಹುದು. ಬೀಟ್ರೂಟ್ ಪ್ರೋಟೀನ್, ಫೈಬರ್, ವಿಟಮಿನ್ ಸಿ, ಫೋಲೇಟ್, ವಿಟಮಿನ್ ಬಿ 6, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ರಂಜಕದ ಗುಣಗಳನ್ನು ಹೊಂದಿದ್ದು, ಅನೇಕ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗೆಯೇ ತಲೆಗೂದಲು ದಟ್ಟವಾಗಿ ಬೆಳೆಯಲೂ ಸಹಕಾರಿಯಾಗಿದೆ. ಹಾಗಿದ್ದರೆ ಬೀಟ್ರೂಟ್ ಅನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು, ಇಲ್ಲಿ ತಿಳಿದುಕೊಳ್ಳಿ.

ಬೀಟ್ರೂಟ್ ರಸ ಸೇವಿಸಿ

ಬೀಟ್ರೂಟ್ ಅನ್ನು ಆಹಾರದಲ್ಲಿ ಹಲವಾರು ರೀತಿಯಲ್ಲಿ ಸೇರಿಸಿಕೊಳ್ಳಬಹುದು. ಬೀಟ್ರೂಟ್ ಸಾಂಬಾರು, ಪಲ್ಯ, ಬೀಟ್ರೂಟ್ ದೋಸೆ ಇತ್ಯಾದಿ ಮಾಡಿ ಸವಿಯಬಹುದು. ಆದರೆ, ಹೆಚ್ಚಿನ ಪ್ರಯೋಜನಗಳಿಗಾಗಿ ಬೀಟ್ರೂಟ್ ರಸವನ್ನು ಕುಡಿಯಿರಿ. ಬೆಳಿಗ್ಗೆ ಬೀಟ್ರೂಟ್ ರಸವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ಬೀಟ್ರೂಟ್ ರಸ ಸೇವಿಸುವುದರ ಪ್ರಯೋಜನಗಳು

ಮೊಡವೆಗಳ ವಿರುದ್ಧ ಹೋರಾಡುತ್ತದೆ: ಬೀಟ್ರೂಟ್ ರಸವು ಎಣ್ಣೆಯುಕ್ತ ಚರ್ಮವನ್ನು ನಿವಾರಿಸುತ್ತದೆ. ಮೊಡವೆಗಳನ್ನು ಕಡಿಮೆ ಮಾಡುವಲ್ಲೂ ಸಹಕಾರಿಯಾಗಿದೆ. ಬೀಟ್ರೂಟ್ ಜ್ಯೂಸ್ ಜತೆ ಕ್ಯಾರೆಟ್ ಅಥವಾ ಸೌತೆಕಾಯಿಯನ್ನು ಸೇರಿಸಿ ಕುಡಿಯುವುದರಿಂದ ಹೇರಳವಾದ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ.

ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ: ಬೀಟ್ರೂಟ್ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಒಳಗಿನಿಂದ ತೇವಾಂಶವನ್ನು ನೀಡಿ, ತ್ವಚೆಯನ್ನು ಪೋಷಿಸುತ್ತದೆ. ಇದರ ರಸವನ್ನು ಕುಡಿಯುವುದರಿಂದ ದೇಹವು ಟಾಕ್ಸಿನ್ ಅನ್ನು ಹೊರಹಾಕಿ, ಚರ್ಮಕ್ಕೆ ತ್ವರಿತ ಹೊಳಪನ್ನು ನೀಡುತ್ತದೆ.

ತುಟಿಗಳ ಕಪ್ಪುತನವನ್ನು ಹೋಗಲಾಡಿಸಲು ಸಹಕಾರಿ: ನಿಮ್ಮ ತುಟಿಗಳು ಕಪ್ಪಾಗಿದ್ದರೆ ಅಥವಾ ಗಾಢ ಬಣ್ಣದಲ್ಲಿದ್ದರೆ ಬೀಟ್ರೂಟ್ ರಸವನ್ನು ಸೇವಿಸಿ. ಹಾಗೆಯೇ ಪ್ರತಿ ರಾತ್ರಿ ಮಲಗುವ ಮುನ್ನ ನಿಮ್ಮ ತುಟಿಗಳಿಗೆ ಸ್ವಲ್ಪ ಬೀಟ್ರೂಟ್ ರಸವನ್ನು ಹಚ್ಚಿ. 10 ದಿನಗಳಲ್ಲಿ ನೀವು ಮೃದುವಾದ ಗುಲಾಬಿ ತುಟಿಗಳನ್ನು ಪಡೆಯುವಿರಿ.

ಕೂದಲಿನ ಕಾಳಜಿಗೂ ಉತ್ತಮ: ಪದೇ ಪದೇ ಕೂದಲು ಉದುರುವ ಸಮಸ್ಯೆಯಿಂದ ಬೇಸರಗೊಂಡಿದ್ದರೆ, ದೈನಂದಿನ ಆಹಾರದಲ್ಲಿ ಬೀಟ್‌ರೂಟ್ ಅನ್ನು ಸೇರಿಸಿ. ಬೀಟ್‌ರೂಟ್ ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಆರೋಗ್ಯಕರ ಕೂದಲಿಗೆ ಅಗತ್ಯವಿರುವ ಎಲ್ಲಾ ಖನಿಜಗಳು ಮತ್ತು ವಿಟಮಿನ್‌ಗಳನ್ನು ಒದಗಿಸುತ್ತದೆ. ಕಾಫಿ ಬೀಜಗಳನ್ನು ಬೀಟ್ರೂಟ್ ರಸದೊಂದಿಗೆ ಬೆರೆಸಿ ಅದನ್ನು ಹಚ್ಚುವುದರಿಂದಲೂ, ಉತ್ತಮ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಕೂದಲು ದಪ್ಪವಾಗಿ ಬೆಳೆಯುವುದಲ್ಲದೆ, ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.

mysore-dasara_Entry_Point