ಸೊಪ್ಪಿನಿಂದ ಹಣ್ಣುಗಳವರೆಗೆ: ಕರುಳಿನ ಆರೋಗ್ಯ, ಉರಿಯೂತವನ್ನು ಕಡಿಮೆ ಮಾಡುವ ಎಂಟು ಪಾನೀಯಗಳಿವು-health homemade drinks to keep your gut healthy best juices for digestion how to improve gut health prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸೊಪ್ಪಿನಿಂದ ಹಣ್ಣುಗಳವರೆಗೆ: ಕರುಳಿನ ಆರೋಗ್ಯ, ಉರಿಯೂತವನ್ನು ಕಡಿಮೆ ಮಾಡುವ ಎಂಟು ಪಾನೀಯಗಳಿವು

ಸೊಪ್ಪಿನಿಂದ ಹಣ್ಣುಗಳವರೆಗೆ: ಕರುಳಿನ ಆರೋಗ್ಯ, ಉರಿಯೂತವನ್ನು ಕಡಿಮೆ ಮಾಡುವ ಎಂಟು ಪಾನೀಯಗಳಿವು

ಅನಾರೋಗ್ಯವನ್ನು ತಡೆಗಟ್ಟಲು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯ. ಆರೋಗ್ಯಕರ ಆಹಾರ ಸೇವಿಸುವ ಮೂಲಕ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಮತ್ತು ಉರಿಯೂತವನ್ನು ನಿವಾರಿಸಲು ಈ ಪಾನೀಯಗಳನ್ನು ಪ್ರಯತ್ನಿಸಬಹುದು.

ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಮತ್ತು ಉರಿಯೂತವನ್ನು ನಿವಾರಿಸಲು ಈ ಪಾನೀಯಗಳನ್ನು ಪ್ರಯತ್ನಿಸಬಹುದು.
ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಮತ್ತು ಉರಿಯೂತವನ್ನು ನಿವಾರಿಸಲು ಈ ಪಾನೀಯಗಳನ್ನು ಪ್ರಯತ್ನಿಸಬಹುದು. (Pinterest )

ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಆಹಾರಕ್ಕಿಂತ ಕೆಲವೊಂದು ಪಾನೀಯಗಳು ಉತ್ತಮ ಪರಿಹಾರ. ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಿರುವ ಪಾನೀಯಗಳು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಸಹಕಾರಿಯಾಗಿದೆ. ಕರುಳಿನ ಸೂಕ್ಷ್ಮಜೀವಿಯು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಣದಲ್ಲಿಡುತ್ತದೆ. ಅನಾರೋಗ್ಯವನ್ನು ತಡೆಗಟ್ಟಲು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸೊಪ್ಪಿನಿಂದ ಹಣ್ಣುಗಳವರೆಗೆ, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಉರಿಯೂತವನ್ನು ಎದುರಿಸಲು ಸಹಾಯ ಮಾಡುವ ಎಂಟು ಪಾನೀಯಗಳು ಇಲ್ಲಿವೆ.

ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುವ ಎಂಟು ಬಗೆಯ ಪಾನೀಯಗಳು ಇಲ್ಲಿವೆ

ಸೊಪ್ಪಿನ ಪಾನೀಯ: ಪಾಲಕ್, ಎಲೆಕೋಸು, ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ ಹಾಗೂ ನಿಂಬೆರಸವನ್ನು ಮಿಶ್ರಣ ಮಾಡಿ ಈ ಪಾನೀಯವನ್ನು ಸೇವಿಸಬಹುದು. ಇವು ಫೈಬರ್ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ವಿರುದ್ಧ ಹೋರಾಡಲು ಸಹಕಾರಿ.

ಬೆರ್ರಿ, ಸ್ಟ್ರಾಬೆರಿಗಳ ಮಿಶ್ರಣವಿರುವ ಪಾನೀಯ: ಬೆರ್ರಿ ಹಣ್ಣುಗಳು, ಸ್ಟ್ರಾಬೆರಿಗಳು, ರಸ್‍ಬೆರ್ರಿ ಹಣ್ಣುಗಳ ಮಿಶ್ರಣವಿರುವ ಪಾನೀಯ ಸೇವಿಸಬಹುದು. ಇವು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುತ್ತವೆ.

ಅನಾನಸ್ ಪಪ್ಪಾಯಿ ಮಿಶ್ರಣವಿರುವ ಪಾನೀಯ: ಅನಾನಸ್, ಪಪ್ಪಾಯಿ, ಪುದೀನ ಎಲೆಗಳು, ತೆಂಗಿನಕಾಯಿ ನೀರಿನ ಮಿಶ್ರಣವಿರುವ ಪಾನೀಯ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಅನಾನಸ್ ಮತ್ತು ಪಪ್ಪಾಯಿಯಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳಿದ್ದರೆ, ಎಳನೀರು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ. ಹೊಟ್ಟೆ ನೋವು ಇತ್ಯಾದಿ ಸಮಸ್ಯೆಯನ್ನು ಶಮನಗೊಳಿಸಲು ಪುದೀನಾ ಎಲೆಗಳು ಸಹಕಾರಿ.

ಕ್ಯಾರೆಟ್-ಆಪಲ್-ಶುಂಠಿ: ಕ್ಯಾರೆಟ್, ಸೇಬು, ಅರಶಿನ, ಶುಂಠಿಯ ಜ್ಯೂಸ್ ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನ ಸಿಗುತ್ತವೆ. ಕ್ಯಾರೆಟ್‍ನಲ್ಲಿ ನಾರಿನಾಂಶ ಸಮೃದ್ಧವಾಗಿದ್ದು, ಸೇಬುಗಳು ಕರುಳಿನ ಆರೋಗ್ಯವನ್ನು ಬೆಂಬಲಿಸುವ ಪೆಕ್ಟಿನ್ ಅನ್ನು ಹೊಂದಿರುತ್ತವೆ. ಇನ್ನು ಶುಂಠಿ ಮತ್ತು ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.

ಸೌತೆಕಾಯಿ, ಕೊತ್ತಂಬರಿ ಸೊಪ್ಪು ಇತ್ಯಾದಿ ಪಾನೀಯ: ಸೌತೆಕಾಯಿ, ಕೊತ್ತಂಬರಿ ಸೊಪ್ಪು, ನಿಂಬೆ, ತೆಂಗಿನಕಾಯಿ ನೀರು, ಪುದೀನ ಎಲೆಗಳ ಪಾನೀಯ ಸೇವಿಸಬಹುದು. ಸೌತೆಕಾಯಿ ಮತ್ತು ಕೊತ್ತಂಬರಿ ಸೊಪ್ಪು ದೇಹವನ್ನು ಹೈಡ್ರೇಟ್ ಮಾಡಲು ಸಹಕಾರಿ ಹಾಗೂ ಇದು ಫೈಬರ್ ಅನ್ನು ಹೊಂದಿರುತ್ತದೆ. ನಿಂಬೆಯಲ್ಲಿ ವಿಟಮಿನ್ ಸಿ ಅಂಶವಿದ್ದರೆ, ಪುದೀನ ಜೀರ್ಣಕ್ರಿಯೆಯನ್ನು ಶಮನಗೊಳಿಸುತ್ತದೆ.

ಬೀಟ್ರೂಟ್ ಮಿಶ್ರ ಹಣ್ಣುಗಳ ಪಾನೀಯ: ಬೀಟ್ರೂಟ್, ಮಿಶ್ರ ಹಣ್ಣುಗಳು (ಬೆರ್ರಿಹಣ್ಣುಗಳು, ರಸ್ಬೆರಿ), ಸೇಬು, ಚಿಯಾ ಬೀಜಗಳು ಪಾಲಕ್‍ನ ಪಾನೀಯವನ್ನು ಮಾಡಿ ಸೇವಿಸಬಹುದು. ಬೀಟ್ರೂಟ್ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿರುತ್ತವೆ. ಬೆರ್ರಿಗಳು ಕರುಳಿನ ಬ್ಯಾಕ್ಟೀರಿಯಾಕ್ಕೆ ಪ್ರಿಬಯಾಟಿಕ್‍ಗಳನ್ನು ಒದಗಿಸುತ್ತವೆ. ಇನ್ನು ಚಿಯಾ ಬೀಜಗಳು ಹೆಚ್ಚುವರಿ ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿದೆ.

ಕಿತ್ತಳೆ ಸಿಪ್ಪೆಯೊಂದಿಗೆ ಅರಿಶಿನ: ಕಿತ್ತಳೆ, ಅರಿಶಿನ, ಕ್ಯಾರೆಟ್, ಶುಂಠಿ, ಕರಿಮೆಣಸಿನ ರಸವು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರಿಶಿನವು ಉರಿಯೂತ ನಿವಾರಿಸಲು ಸಹಕಾರಿಯಾದರೆ, ಕಿತ್ತಳೆ ವಿಟಮಿನ್ ಸಿ ಅನ್ನು ಹೊಂದಿದೆ. ಕ್ಯಾರೆಟ್ ಫೈಬರ್‍ನಲ್ಲಿ ಸಮೃದ್ಧವಾಗಿದೆ. ಶುಂಠಿಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕರಿಮೆಣಸು ಅರಿಶಿನದ ಸಕ್ರಿಯ ಸಂಯುಕ್ತವಾದ ಕರ್ಕ್ಯುಮಿನ್ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.

ಗ್ರೀನ್ ಟೀ ನಿಂಬೆ ಪಾನೀಯ: ಗ್ರೀನ್ ಟೀ (ತಣ್ಣಗಾದ), ಕಿತ್ತಳೆ ರಸ ಅಥವಾ ನಿಂಬೆ, ಜೇನುತುಪ್ಪ (ಬೇಕಿದ್ದರೆ) ಹಾಕಿ ಸೇವಿಸಬಹುದು. ಗ್ರೀನ್ ಟೀಯು ಕರುಳಿನ ಆರೋಗ್ಯವನ್ನು ಬೆಂಬಲಿಸುವ ಪಾಲಿಫಿನಾಲ್‌ಗಳನ್ನು ಹೊಂದಿದೆ. ಸಿಟ್ರಸ್ ಹಣ್ಣುಗಳು (ನಿಂಬೆ ಮತ್ತು ಕಿತ್ತಳೆ) ವಿಟಮಿನ್ ಸಿ ಅನ್ನು ಒದಗಿಸುತ್ತವೆ.

ನೀವು ತಿಳಿದುಕೊಳ್ಳಲೇಬೇಕಾದ ವಿಚಾರ ಏನೇಂದರೆ ಮೇಲೆ ತಿಳಿಸಿರುವ ಪಾನೀಯಗಳನ್ನು ಸೇವಿಸುವ ಮುನ್ನ ತಜ್ಞ ವೈದ್ಯರ ಮಾರ್ಗದರ್ಶನ ಪಡೆಯುವುದು ಸೂಕ್ತ. ಬೇರೆ ಏನಾದರೂ ಅಲರ್ಜಿಗಳಿದ್ದರೆ ಅಥವಾ ಸಮಸ್ಯೆಯಿದ್ದರೆ ಈ ಪಾನೀಯಗಳನ್ನು ಸೇವಿಸುವ ಮುನ್ನ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಅತ್ಯಗತ್ಯ.

mysore-dasara_Entry_Point