Quality Sleep: ನಿದ್ದೆಗೂ ಹಾಸಿಗೆಗೂ ಉಂಟು ನಂಟು; ಕಾಡುವ ನಿದ್ದೆ ಸಮಸ್ಯೆಗೆ ಹಾಸಿಗೆಯೂ ಕಾರಣವಾಗಬಹುದು; ಆಯ್ಕೆಗೂ ಮುನ್ನ ಈ ಅಂಶ ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Quality Sleep: ನಿದ್ದೆಗೂ ಹಾಸಿಗೆಗೂ ಉಂಟು ನಂಟು; ಕಾಡುವ ನಿದ್ದೆ ಸಮಸ್ಯೆಗೆ ಹಾಸಿಗೆಯೂ ಕಾರಣವಾಗಬಹುದು; ಆಯ್ಕೆಗೂ ಮುನ್ನ ಈ ಅಂಶ ಗಮನಿಸಿ

Quality Sleep: ನಿದ್ದೆಗೂ ಹಾಸಿಗೆಗೂ ಉಂಟು ನಂಟು; ಕಾಡುವ ನಿದ್ದೆ ಸಮಸ್ಯೆಗೆ ಹಾಸಿಗೆಯೂ ಕಾರಣವಾಗಬಹುದು; ಆಯ್ಕೆಗೂ ಮುನ್ನ ಈ ಅಂಶ ಗಮನಿಸಿ

ನಿದ್ದೆ ಸಮಸ್ಯೆ ಅಥವಾ ನಿದ್ರಾಹೀನತೆ ಇಂದು ಜಗತ್ತನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ನಿದ್ದೆಯ ಕೊರತೆಯು ಹಲವು ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದರೆ ನಿದ್ದೆಯ ಕೊರತೆಯ ಹಾಸಿಗೆಯೂ ಕಾರಣವಾಗುತ್ತದೆ. ನಾವು ಆಯ್ಕೆ ಮಾಡುವ ಹಾಸಿಗೆಯು ನಮ್ಮ ಗುಣಮಟ್ಟದ ನಿದ್ದೆಗೆ ಅಡ್ಡಿ ಪಡಿಸಬಹುದು.

ಗುಣಮಟ್ಟದ ನಿದ್ದೆಗೆ ಹಾಸಿಗೂ ಮುಖ್ಯ
ಗುಣಮಟ್ಟದ ನಿದ್ದೆಗೆ ಹಾಸಿಗೂ ಮುಖ್ಯ

ಇಂದು ಜಗತ್ತನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳಲ್ಲಿ ನಿದ್ದೆಯ ಸಮಸ್ಯೆಯು ಪ್ರಮುಖವಾದದ್ದು. ವಿಶ್ವದ ಪ್ರಮುಖ ದೇಶಗಳ ಜನರು ಕೂಡ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವು. ಮುಂದುವರಿದ ತಂತ್ರಜ್ಞಾನ, ಒತ್ತಡ, ಆಹಾರಕ್ರಮ, ಜೀವನಶೈಲಿ ಇದರೊಂದಿಗೆ ನಾವು ಮಲಗುವ ಹಾಸಿಗೆ ಕೂಡ ನಿದ್ದೆಯ ತೊಂದರೆಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

ಉತ್ತಮ ಹಾಗೂ ಸಮರ್ಪಕ ನಿದ್ದೆಗೆ ಹಾಸಿಗೆಯ ಗುಣಮಟ್ಟ ಹಾಗೂ ಹಾಸಿಗೆ ಸ್ವಚ್ಛವಾಗಿರುವುದು ಮುಖ್ಯವಾಗುತ್ತದೆ. ಸಂಶೋಧನೆಗಳ ಪ್ರಕಾರ ಫರ್ಮ್‌ ಮ್ಯಾಟ್ರೆಸ್‌ ಅಥವಾ ಸಂಕೀರ್ಣ ಹಾಸಿಗೆಯ ಮೇಲೆ ಮಲಗುವುದರಿಂದ ಆರಾಮದಾಯಕ ಮತ್ತು ಗುಣಮಟ್ಟದ ನಿದ್ದೆಗೆ ಸಹಕಾರಿ, ಬೆನ್ನು ಮೂಳೆಗೂ ಇದು ಉತ್ತಮ.

ಹಾಸಿಗೆಯು ನಿದ್ದೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ

ನಾವು ಮಲಗುವ ಹಾಸಿಗೆಯನ್ನು ಎಷ್ಟು ವರ್ಷಗಳ ಹಿಂದೆ ಖರೀದಿ ಮಾಡಿದ್ದು, ಅದರ ಗುಣಮಟ್ಟ ಇದರತ್ತ ಹೆಚ್ಚಿನವರು ಗಮನ ಹರಿಸುವುದಿಲ್ಲ. ಆದರೆ ಇದು ಬಹಳ ಮುಖ್ಯ. ರಾತ್ರಿ ಮಲಗುವ ವೇಳೆ ಕಳಪೆ ಗುಣಮಟ್ಟದ ಹಾಸಿಗೆಯ ಮೇಲೆ ಮಲಗುವುದರಿಂದ ಗುಣಮಟ್ಟದ ನಿದ್ದೆಗೆ ಅಡ್ಡಿಯಾಗುತ್ತದೆ. ಅಲ್ಲದೆ ಇದು ನಿದ್ದೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದು ನಿದ್ದೆಯ ಅವಧಿಯ ವಿಸ್ತಾರಕ್ಕೂ ಕಾರಣವಾಗುತ್ತದೆ.

ಹಾಸಿಗೆಯು ದೇಹದ ಭಂಗಿಯ ಮೇಲೆ ಪರಿಣಾಮ ಬೀರುತ್ತದೆ

ನಾವು ಮಲಗುವ ಹಾಸಿಗೆಯು ನಮ್ಮ ದೇಹದ ಭಂಗಿಯ ಮೇಲೆ ಪರಿಣಾಮ ಬೀರುತ್ತದೆ. ಹಾಸಿಗೆಯಲ್ಲಿ ಸಾಧ್ಯವಾದಷ್ಟು ಕಾಲು ಚಾಚಿ ಉದ್ದಕ್ಕೆ ಮಲಗಬೇಕು. ಮಲಗುವಾಗ ದೇಹದ ಒಟ್ಟು ಹತ್ತು ಭಾಗಗಳು ಹಾಸಿಗೆಯನ್ನು ಸ್ಪರ್ಶಿಸುವಂತಿರಬೇಕು. ಕೆಟ್ಟ ಭಂಗಿಯಲ್ಲಿ ಮಗಲುವುದರಿಂದ ದೀರ್ಘಕಾಲದ ಬೆನ್ನುನೋವು, ಕೀಲು ನೋವು ಹಾಗೂ ಕತ್ತು ನೋವಿಗೆ ಕಾರಣವಾಗಬಹುದು. ಹಾಸಿಗೆ ಆಯ್ಕೆ ಮಾಡುವಾಗ ನಿಮ್ಮ ದೇಹದ ನೋವುಗಳನ್ನು ಪರಿಗಣಿಸಿ. ಮೂಳೆಯ ಸಮಸ್ಯೆ ಇರುವವರು ಗಟ್ಟಿ ಹಾಸಿಗೆಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ. ಹಾಸಿಗೆಯು ದೈಹಿಕ ನೋವುಗಳನ್ನು ನಿವಾರಿಸುವ ಜೊತೆಗೆ

ಹಳೆಯ ಹಾಸಿಗೆಯು ಅಲರ್ಜಿ ಉಂಟು ಮಾಡಬಹುದು

ಹಾಸಿಗೆಯು ಹಳೆಯದಾದಷ್ಟು ಅಲರ್ಜಿ ಉಂಟಾಗುವುದು ಹೆಚ್ಚು. ಕನಿಷ್ಠ 10 ವರ್ಷಗಳಿಗೊಮ್ಮೆ ಹಾಸಿಗೆಯನ್ನು ಬದಲಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಅಲರ್ಜಿಯಿಂದ ಚರ್ಮ ಹಾಗೂ ಕಣ್ಣಿನ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ ತುರಿಕೆಯಾಗುವ ಸಾಧ್ಯತೆ ಇದ್ದು, ರಾತ್ರಿ ಇಡೀ ತುರಿಕೆ ಉಂಟಾಗಬಹುದು. ಇದು ಗುಣಮಟ್ಟದ ನಿದ್ದೆಗೆ ಅಡ್ಡಿಯಾಗಬಹುದು.

ಹಾಸಿಗೆಯು ಉಷ್ಣಾಂಶವನ್ನು ಹೆಚ್ಚಿಸಬಹುದು

ಉಷ್ಣಾಂಶವು ಗುಣಮಟ್ಟದ ನಿದ್ದೆಗೆ ಅಡ್ಡಿಪಡಿಸುವ ಒಂದು ಪ್ರಮುಖ ಅಂಶ. ಅತಿಯಾದ ಉಷ್ಣಾಂಶ ಅಥವಾ ಕಡಿಮೆ ಉಷ್ಣಾಂಶ ಈ ಎರಡೂ ಅಂಶಗಳು ಗುಣಮಟ್ಟದ ನಿದ್ದೆಗೆ ಅಡ್ಡಿಪಡಿಸುತ್ತವೆ. ಕೆಲವೊಂದು ಹಾಸಿಗೆಗಳು ಅತಿಯಾದ ಉಷ್ಣಾಂಶವನ್ನು ಉಂಟು ಮಾಡಬಹುದು. ಇದು ದೇಹದ ಶಾಖವನ್ನು ಹಿಡಿಟ್ಟುಕೊಂಡು, ಅತಿಯಾಗಿ ಬೆವರುವಂತೆ ಮಾಡಬಹುದು. ಶಾಖದ ಉತ್ಪಾದಕತೆಯು ನಿದ್ದೆಗೆ ಅಡ್ಡಿಪಡಿಸಬಹುದು. ಹಾಗಾಗಿ ಹಾಸಿಗೆಯ ಆಯ್ಕೆ ಮಾಡುವ ಮುನ್ನ ನಿಮ್ಮ ಸುತ್ತಲಿನ ವಾತಾವರಣ, ಋತುಮಾನದ ಪರಿಸ್ಥಿತಿಗಳನ್ನು ಅವಲೋಕಿಸುವುದು ಮುಖ್ಯವಾಗುತ್ತದೆ.

ಹಾಸಿಗೆ ಕೊಳ್ಳುವಾಗ ಈ ಅಂಶ ಗಮನಿಸಿ

ಹಾಸಿಗೆ ಎನ್ನುವುದು ಮನುಷ್ಯನ ತೀರಾ ಖಾಸಗಿ ವಿಚಾರವೇನೋ ಸರಿ. ಆದರೆ ಬಟ್ಟೆಕೊಳ್ಳುವಾಗ ಯಾವ ಟ್ರಯಲ್‌ ಮಾಡಿ ಕೊಳ್ಳುತ್ತೇವೆಯೋ ಹಾಗೆಯೇ ಹಾಸಿಗೆಯನ್ನು ಕೊಳ್ಳುವ ಮೊದಲು ನಮ್ಮ ದೇಹತೂಕ, ಉದ್ದ, ನಿದ್ರಿಸುವ ಬಗೆ ಈ ಎಲ್ಲಾ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ಹೆಚ್ಚು ಹಣ ನೀಡುವುದಕ್ಕಿಂತ ಗುಣಮಟ್ಟವನ್ನು ಪರಿಶೀಲಿಸುವುದು ಮುಖ್ಯವಾಗುತ್ತದೆ.

ದಿಂಬಿನ ಆಯ್ಕೆಯೂ ಮುಖ್ಯವಾಗುತ್ತದೆ

ಗುಣಮಟ್ಟದ ನಿದ್ದೆಗೆ ಹಾಸಿಗೆಯೊಂದಿಗೆ ನಾವು ಬಳಸುವ ದಿಂಬು ಕೂಡ ಮುಖ್ಯವಾಗುತ್ತದೆ. ಆಗಾಗ ದಿಂಬಿನ ಕವರ್‌ಗಳನ್ನು ವಾಶ್‌ ಮಾಡಬೇಕು ಹಾಗೂ ಬದಲಿಸುತ್ತಿರಬೇಕು. ನಮ್ಮ ಕುತ್ತಿಗೆ ಹಾಗೂ ತಲೆಯ ಭಾಗಕ್ಕೆ ಹೊಂದುವ ದಿಂಬನ್ನು ಇರಿಸಿಕೊಳ್ಳಬೇಕು. ಹಾಸಿಗೆ ಹಾಗೂ ದಿಂಬುಕೊಳ್ಳುವಾಗ ಟ್ರಯಲ್‌ ಮಾಡಿ, ನಮ್ಮ ದೇಹಕ್ಕೆ ಹೊಂದುತ್ತದೋ ಇಲ್ಲವೋ ಎಂದು ನೋಡುವುದು ಬಹಳ ಮುಖ್ಯವಾಗುತ್ತದೆ.

ಈ ಅಂಶಗಳನ್ನೂ ಗಮನಿಸಿ

* ಐದು ವರ್ಷಗಳಿಗೊಮ್ಮೆ ಬೆಡ್‌ ಬದಲಿಸಿ

* ಬೆಡ್‌ ಒದ್ದೆಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಮಗುವಿದ್ದರೆ ಹೆಚ್ಚು ಎಚ್ಚರ ವಹಿಸಿ.

* ನೇರವಾಗಿ ನೆಲದ ಮೇಲೆ ಬೆಡ್‌ ಹಾಕಬೇಡಿ, ಇದರಿಂದ ಬೆಡ್‌ ಬೇಗನೇ ಹಾಳಾಗುತ್ತದೆ. ಚಾಪೆ ಅಥವಾ ಬೆಡ್‌ ಕವರ್‌ ಬಳಸಿ.

* ಸಾಧ್ಯವಾದಷ್ಟೂ ಉತ್ತಮ ಗುಣಮಟ್ಟದ ಬೆಡ್‌ ಬಳಸಿ.

* ಕನಿಷ್ಠ 15 ದಿನಗಳಿಗೊಮ್ಮೆ ದಿಂಬು ಹಾಗೂ ಹಾಸಿಗೆಯ ಹಾಸುಗಳನ್ನ ಬದಲಿಸಿ, ಆಗಾಗ ವಾಶ್‌ ಮಾಡುತ್ತಿರಿ.

* ಧೂಳು, ನೀರಿನಿಂದ ಹಾಸಿಗೆಯನ್ನು ಕಾಪಾಡುವುದು ಮುಖ್ಯವಾಗುತ್ತದೆ.

* ಆಗಾಗ ಹಾಸಿಗೆಯನ್ನು ಬಿಸಿಲಿಗೆ ಹಾಕಿ.

Whats_app_banner