ನಾಲಿಗೆಗೆ ಕಹಿ ಎನ್ನಿಸಿದ್ರೂ ಆರೋಗ್ಯಕ್ಕೆ ಸಿಹಿಯಾದ ನುಗ್ಗೆಸೊಪ್ಪು ಹಲವು ರೋಗಗಳಿಗೆ ರಾಮಬಾಣ; ಇದರ ಪ್ರಯೋಜನ ತಿಳಿಯಿರಿ
ನುಗ್ಗೆಸೊಪ್ಪಿನ ಬಗ್ಗೆ ಕೇಳಿರುತ್ತೀರಿ. ಆದರೆ ಈ ನುಗ್ಗೆಸೊಪ್ಪಿನಿಂದ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭವಿದೆ ಎಂಬುದು ನಿಮಗೆ ತಿಳಿದಿದೆಯೇ..? ಹೃದಯ ಸಂಬಂಧಿ ಕಾಯಿಲೆಗಳಿಗೆ ಪರಿಹಾರ ನೀಡುವುದರಿಂದ ಹಿಡಿದು ಕರುಳಿನ ಆರೋಗ್ಯ ಸುಧಾರಿಸುವವರೆಗೂ ನುಗ್ಗೆಸೊಪ್ಪು ಪ್ರಮುಖ ಪಾತ್ರವಹಿಸುತ್ತದೆ.
ನುಗ್ಗೆಕಾಯಿಯ ಬಗ್ಗೆ, ಅದರಲ್ಲಿ ಅಡಗಿರುವ ಆರೋಗ್ಯ ಲಾಭಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಇದೇ ನುಗ್ಗೆ ಮರದಲ್ಲಿರುವ ಸೊಪ್ಪಿನಲ್ಲಿ ಅಡಗಿರುವ ಔಷಧೀಯ ಮೌಲ್ಯಗಳ ಬಗ್ಗೆ ಬಹುತೇಕರಿಗೆ ಮಾಹಿತಿ ತಿಳಿದಿಲ್ಲ. ನುಗ್ಗೆ ಸೊಪ್ಪಿನಲ್ಲಿ ಪೋಷಕಾಂಶಗಳು ಅಗಾಧ ಪ್ರಮಾಣದಲ್ಲಿ ಅಡಗಿವೆ. ಹೀಗಾಗಿ ನುಗ್ಗೆ ಸೊಪ್ಪಿನಿಂದ ತಯಾರಿಸಿದ ಆಹಾರ ಸೇವನೆ ಮಾಡುವುದರಿಂದ ದೇಹಕ್ಕೆ ಯಾವೆಲ್ಲ ರೀತಿಯಲ್ಲಿ ಲಾಭವಿದೆ ಎಂಬುದನ್ನು ತಿಳಿದುಕೊಳ್ಳೋಣ :
ಪೋಷಕಾಂಶದಿಂದ ಸಮೃದ್ಧ : ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಎ, ಸಿ , ಕ್ಯಾಲ್ಶಿಯಂ ಹಾಗೂ ಪೊಟ್ಯಾಷಿಯಂ ಮತ್ತು ಕಬ್ಬಿಣಾಂಶ ಹೇರಳವಾಗಿರುತ್ತದೆ. ಅಲ್ಲದೇ ಖನಿಕಾಂಶಗಳು ಕೂಡ ನುಗ್ಗೆ ಸೊಪ್ಪಿನಲ್ಲಿ ಅಗಾಧ ಪ್ರಮಾಣದಲ್ಲಿದೆ. ಈ ಪೋಷಕಾಂಶಗಳು ದೇಹದ ಆರೋಗ್ಯವನ್ನು ಸುಧಾರಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ರೋಗ ನಿರೋಧಕ ಶಕ್ತಿ ಹೆಚ್ಚಳ : ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ ಅಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇವುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಯಾವುದೇ ರೀತಿಯ ಸೋಂಕುಗಳು ದೇಹಕ್ಕೆ ಬಾರದಂತೆ ತಡೆಯುವಲ್ಲಿ ನುಗ್ಗೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತವೆ .
ಉರಿಯೂತ : ನುಗ್ಗೆ ಸೊಪ್ಪುಗಳಲ್ಲಿ ಕೆಂಪ್ಫೆರೋಲ್ ಹಾಗೂ ಕ್ವೆಸರ್ಟಿನ್ನಂತಹ ಜೈವಿಕ ಸಂಯುಕ್ತಗಳು ಅಡಗಿವೆ. ಇವುಗಳು ದೇಹದಲ್ಲಿನ ಉರಿಯೂತದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆ. ನುಗ್ಗೆ ಎಲೆಗಳನ್ನು ಸೇವಿಸುವುದರಿಂದ ಉರಿಯೂತ ಸಂಬಂಧಿ ಲಕ್ಷಣಗಳಿಂದ ಮುಕ್ತಿಪಡೆಯಬಹುದಾಗಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ : ಕರುಳು ಗ್ಲುಕೋಸ್ ಹೀರಿಕೊಳ್ಳುವುದನ್ನು ಕಡಿಮೆ ಮಾಡುವ ಮೂಲಕ ನುಗ್ಗೆ ಸೊಪ್ಪು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಸಾಕಷ್ಟು ಅಧ್ಯಯನಗಳು ತಿಳಿಸಿವೆ. ಹೀಗಾಗಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ತಪ್ಪದೇ ನುಗ್ಗೆಸೊಪ್ಪನ್ನು ಸೇವಿಸಬೇಕು. ಇದು ರಕ್ತದಕ್ಕೆ ಸಕ್ಕರೆ ಅಂಶ ಏರಿಕೆಯಾಗಲು ಬಿಡುವುದಿಲ್ಲ.
ಕೊಲೆಸ್ಟ್ರಾಲ್ ನಿರ್ವಹಣೆ : ನುಗ್ಗೆ ಸೊಪ್ಪಿನಲ್ಲಿ ಉತ್ತಮ ಕೊಬ್ಬಿನಂಶವನ್ನು ಏರಿಕೆ ಮಾಡುವ ಹಾಗೂ ಕೆಟ್ಟ ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುವ ಶಕ್ತಿಯಿದೆ ಎನ್ನಲಾಗಿದೆ. ಅಲ್ಲದೇ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿಯೂ ನುಗ್ಗೆಸೊಪ್ಪು ಪ್ರಮುಖ ಪಾತ್ರವಹಿಸುತ್ತದೆ. ಹೃದಯರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕೇಜ್ ಅಪಾಯಗಳಿಂದಲೂ ರಕ್ಷಣೆ ನೀಡುತ್ತದೆ.
ರಕ್ತದೊತ್ತಡ ನಿಯಂತ್ರಣ : ನುಗ್ಗೆಸೊಪ್ಪುಗಳು ದೇಹದಲ್ಲಿ ರಕ್ತದೊತ್ತಡ ಮಟ್ಟವನ್ನು ಕಡಿಮೆ ಮಾಡುತ್ತವೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ನುಗ್ಗೆಸೊಪ್ಪನ್ನು ತಮ್ಮ ಆಹಾರ ಕ್ರಮದಲ್ಲಿ ತಪ್ಪದೇ ಸೇರಿಸಿಕೊಳ್ಳಬೇಕು.
ಜೀರ್ಣಕ್ರಿಯೆಗೆ ಸಹಕಾರಿ : ನುಗ್ಗೆಸೊಪ್ಪಿನಲ್ಲಿ ಫೈಬರ್ ಅಂಶವು ಸಮೃದ್ಧವಾಗಿರುತ್ತದೆ.ಇದರಿಂದ ಕರುಳಿನ ಕಾರ್ಯವು ಸರಾಗವಾಗಿ ನಡೆಯುವಂತೆ ಸುಗ್ಗೆಸೊಪ್ಪು ಉತ್ತೇಜನ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಗಳನ್ನು ಹೋಗಲಾಡಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೀರ್ಣಾಂಗದಲ್ಲಿ ಇರುವ ಯಾವುದೇ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನುಗ್ಗೆಸೊಪ್ಪು ಹೊಡೆದೋಡಿಸುತ್ತದೆ.
ಸಂಧಿವಾತ ಸಮಸ್ಯೆಗೆ ಪರಿಹಾರ : ನುಗ್ಗೆಸೊಪ್ಪಿನಲ್ಲಿ ಆಂಟಿಆಕ್ಸಿಡಂಟ್ ಪ್ರಮಾಣ ಅತ್ಯಂತ ಅಗಾಧ ಪ್ರಮಾಣದಲ್ಲಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ . ಸಂಧಿವಾತದ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.
ದೇಹಕ್ಕೆ ಶಕ್ತಿ : ನುಗ್ಗೆಸೊಪ್ಪುಗಳಲ್ಲಿ ಪೋಷಕಾಂಶ ಸಮೃದ್ಧವಾಗಿರುವ ಹಿನ್ನೆಲೆಯಲ್ಲಿ ನೈಸರ್ಗಿಕವಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ದೇಹಕ್ಕೆ ಚೈತನ್ಯ ಸಿಗುತ್ತದೆ. ಆಯಾಸವಾಗದಂತೆ ದೇಹವನ್ನು ರಕ್ಷಿಸುವ ಮೂಲಕ ದೇಹದ ಒಟ್ಟಾರೆ ಶಕ್ತಿಮಟ್ಟವನ್ನು ಹೆಚ್ಚಿಸುತ್ತದೆ.
ವಿಭಾಗ