ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಟ್ಟಿದ್ದೀರಾ: ಈ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದಿತು, ಇರಲಿ ಎಚ್ಚರ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಟ್ಟಿದ್ದೀರಾ: ಈ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದಿತು, ಇರಲಿ ಎಚ್ಚರ

ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಟ್ಟಿದ್ದೀರಾ: ಈ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದಿತು, ಇರಲಿ ಎಚ್ಚರ

ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಟ್ಟಿದ್ದೀರಾ?ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದರಿಂದನಿಧಾನ ಚಯಾಪಚಯದಿಂದ ನೆನಪಿನ ಶಕ್ತಿ ಕುಂಠಿತವಾಗುವವರೆಗೆ ಈ ಐದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಉತ್ತಮ ಆರೋಗ್ಯಕ್ಕೆ ಬೆಳಗ್ಗೆ ತಿಂಡಿಯನ್ನು ಸೇವಿಸುವುದು ಬಹಳ ಮುಖ್ಯ. ಇನ್ನಷ್ಟು ಮಾಹಿತಿ ಇಲ್ಲಿದೆ.

ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದರಿಂದ ಈ ಐದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.
ಬೆಳಗ್ಗಿನ ಉಪಾಹಾರವನ್ನು ತ್ಯಜಿಸುವುದರಿಂದ ಈ ಐದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. (Shutterstock)

ಬೆಳಗ್ಗಿನ ಉಪಹಾರವನ್ನು ಸಾಮಾನ್ಯವಾಗಿ ದಿನದ ಪ್ರಮುಖ ಊಟ ಎಂದು ಹೇಳಲಾಗುತ್ತದೆ. ಯಾಕೆಂದರೆ ದಿನವಿಡೀ ಶಕ್ತಿ ಹೊಂದಿರಲು ಮತ್ತು ಉತ್ತಮ ಚಯಾಪಚಯ ಕ್ರಿಯೆಗೆ ಇದು ಬಹಳ ಮುಖ್ಯ. ಆದರೆ, ಕೆಲವರು ಬೆಳಗ್ಗಿನ ಉಪಹಾರಗಳನ್ನು ಮಾಡುವುದಿಲ್ಲ. ಕೆಲವರು ಬಹಳ ತಡವಾಗಿ ಮಾಡಿದರೆ, ಇನ್ನೂ ಕೆಲವರು ಬೆಳಗ್ಗಿನ ಉಪಹಾರಗಳನ್ನು ಬಿಟ್ಟು ಬಿಡುತ್ತಾರೆ. ಕೆಲಸದ ಒತ್ತಡ, ಅಥವಾ ಕಚೇರಿಗೆ ಹೋಗಲು ತಡವಾಗುತ್ತಿದೆ ಎಂಬ ಕಾರಣದಿಂದ ಬೆಳಗ್ಗಿ ತಿಂಡಿ ಮಾಡದೆ ಮಧ್ಯಾಹ್ನದ ಊಟ ಮಾಡಿ ಬಿಡುವವರಿದ್ದಾರೆ. ಉದ್ಯೋಗಿಗಳು ಮಾತ್ರವಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ತಮಗೆ ತಡವಾಗುತ್ತಿದೆ ಎಂಬ ಕಾರಣಕ್ಕೆ ಬೆಳಗ್ಗಿನ ತಿಂಡಿ ಮಾಡುವುದಿಲ್ಲ. ರಾತ್ರಿ ಗಂಟೆ 12 ಆದರೂ ಮಲಗದೆ, ಬೆಳಗ್ಗೆ ಬೇಗ ಎದ್ದೇಳಲು ಆಗದೆ, ಅವಸರವಸರವಾಗಿ ಕಾಲೇಜಿಗೆ ಅಥವಾ ಕಚೇರಿಗೆ ರೆಡಿಯಾಗಿ ಹೊರಡುತ್ತಾರೆ. ಹೀಗಾಗಿ ತಿಂಡಿ ತಿನ್ನುವಷ್ಟು ವ್ಯವಧಾನವಾಗಲಿ, ಸಮಯವಾಗಲಿ ಇರುವುದಿಲ್ಲ. ಇನ್ನೂ ಕೆಲವರು ತಮ್ಮ ತೂಕ ಇಳಿಕೆಗಾಗಿ ಬೆಳಗ್ಗಿನ ಉಪಹಾರವನ್ನು ಬಿಟ್ಟು ಬಿಡುತ್ತಾರೆ. ಆದರೆ, ಉಪಹಾರವನ್ನು ನಿರಂತರವಾಗಿ ಬಿಟ್ಟುಬಿಡುವುದರಿಂದ ಇದು ನಿಮ್ಮ ಆರೋಗ್ಯದ ಮೇಲೆ ಕೆಲವು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಬೆಳಗ್ಗೆ ತಿಂಡಿ ಮಾಡುವುದನ್ನು ನಿರಂತರವಾಗಿ ಬಿಟ್ಟು ಬಿಟ್ಟರೆ ಏನೆಲ್ಲಾ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎಂಬುದು ಇಲ್ಲಿದೆ:

ಬೆಳಗ್ಗೆ ತಿಂಡಿ ತಿನ್ನುವುದು ಬಿಟ್ಟರೆ ಎದುರಾಗಬಹುದು ಈ ಆರೋಗ್ಯ ಸಮಸ್ಯೆ

ಚಯಾಪಚಯ ಕ್ರಿಯೆ ನಿಧಾನಗೊಳ್ಳಬಹುದು: ನೀವು ಬೆಳಗಿನ ಉಪಹಾರವನ್ನು ತ್ಯಜಿಸಿದರೆ ಇದು ನಿಮ್ಮ ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಹೀಗಾಗಿದಿನವಿಡೀ ಪರಿಣಾಮಕಾರಿಯಾಗಿ ಕ್ಯಾಲೊರಿ ಬರ್ನ್ ಮಾಡಲು ಕಷ್ಟವಾಗುತ್ತದೆ. ಕಾಲಾನಂತರದಲ್ಲಿ, ನೀವು ದಿನದಲ್ಲಿ ಕಡಿಮೆ ತಿನ್ನುತ್ತಿದ್ದರೂ ಸಹ ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.

ಹೃದಯ ಕಾಯಿಲೆಯ ಅಪಾಯ: ನಿಯಮಿತವಾಗಿ ಬೆಳಗಿನ ಉಪಾಹಾರವನ್ನು ತ್ಯಜಿಸುವುದರಿಂದ ಹೃದ್ರೋಗದಂತಹ ಸಮಸ್ಯೆಗಳು ಹೆಚ್ಚಬಹುದು. ಈ ಬಗ್ಗೆ ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಬೆಳಗ್ಗೆ ತಿಂಡಿಯನ್ನು ಸೇವಿಸದವರು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುತ್ತಾರೆ. ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗಬಹುದು. ಇವೆಲ್ಲವೂ ಹೃದಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೃದಯಾಘಾತವಾಗುವಂತಹ ಅಪಾಯಗಳು ಹೆಚ್ಚಿವೆ.

ನೆನಪಿನ ಶಕ್ತಿ ಕ್ಷೀಣಿಸಬಹುದು: ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಆಹಾರದಿಂದ ಗ್ಲೂಕೋಸ್ (ಸಕ್ಕರೆ) ಮೇಲೆ ಅವಲಂಬಿತವಾಗಿದೆ. ಬೆಳಗಿನ ಉಪಹಾರವನ್ನು ತ್ಯಜಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಬಹುದು.ಇದರಿಂದ ಏಕಾಗ್ರತೆ ಸಮಸ್ಯೆ, ನೆನಪಿನ ಶಕ್ತಿ ಸಮಸ್ಯೆ ಸೇರಿದಂತೆ ಇನ್ನಿತರೆ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ, ಇದು ದಿನವಿಡೀ ಮಾನಸಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು.

ಟೈಪ್-2 ಡಯಾಬಿಟಿಸ್‌ ಅಪಾಯ: ಉಪಹಾರವನ್ನು ಬಿಟ್ಟುಬಿಟ್ಟರೆ ಟೈಪ್-2 ಮಧುಮೇಹ ಉಂಟಾಗುವ ಅಪಾಯ ಹೆಚ್ಚಿದೆ. ಬೆಳಿಗ್ಗೆ ತಿಂಡಿ ತಿನ್ನದಿದ್ದರೆ ದೇಹವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹೆಣಗಾಡಬಹುದು.ಇದು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ, ಈ ಅಸಮತೋಲನವು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಆತಂಕ ಹೆಚ್ಚಾಗಬಹುದು: ಬೆಳಗ್ಗೆ ಉಪಾಹಾರವನ್ನು ಸೇವಿಸದಿರುವುದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹಠಾತ್ ಕುಸಿತಕ್ಕೆ ಕಾರಣವಾಗಬಹುದು, ಇದು ಕಿರಿಕಿರಿ, ಮನಸ್ಥಿತಿ ಬದಲಾವಣೆಗಳು ಮತ್ತು ಆತಂಕವನ್ನು ಉಂಟುಮಾಡಬಹುದು. ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಲು ನಿಮ್ಮ ದೇಹ ಮತ್ತು ಮೆದುಳಿಗೆ ಪೋಷಕಾಂಶಗಳ ಸ್ಥಿರ ಪೂರೈಕೆಯ ಅಗತ್ಯವಿರುತ್ತದೆ ಮತ್ತು ಈ ಸ್ಥಿರತೆಯನ್ನು ಒದಗಿಸುವಲ್ಲಿ ಉಪಹಾರವು ಪ್ರಮುಖ ಪಾತ್ರ ವಹಿಸುತ್ತದೆ.

ತೂಕ ಇಳಿಕೆ ಅಥವಾ ಸಮಯವಿಲ್ಲ ಇತ್ಯಾದಿ ಕಾರಣಗಳಿಂದ ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಟ್ಟು ಬಿಟ್ಟರೆ ದೀರ್ಘಕಾಲೀನ ಆರೋಗ್ಯದ ಅಪಾಯಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಬೆಳಗ್ಗೆ ಸಮಯಕ್ಕೆ ಸರಿಯಾಗಿ ತಿಂಡಿ ಸೇವಿಸುವುದರಿಂದ ಚಯಾಪಚಯ ಕ್ರಿಯೆ, ಹೃದಯದ ಆರೋಗ್ಯ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸಬಹುದು.

Whats_app_banner