ಬೆಳಗೆದ್ದು ಟೀ–ಕಾಫಿ ಕುಡಿಯುವ ಅಭ್ಯಾಸವಿದ್ರೆ ಬಿಟ್ಟು ಬಿಡಿ; ಬಿಸಿ ನೀರಿಗೆ ಉಪ್ಪು ಸೇರಿಸಿ ಕುಡಿಯಿರಿ, ಇದರಿಂದ ಸಿಗುತ್ತೆ ಹಲವು ಪ್ರಯೋಜನ
ಬೆಳಗ್ಗೆ ಎದ್ದ ಕೂಡಲೇ ತುಸು ಬೆಚ್ಚಗಿನ ನೀರು ಸೇವಿಸುವುದು ಆರೋಗ್ಯಕ್ಕೆ ಬಹಳ ಉತ್ತಮ.ದಿನಪೂರ್ತಿ ಚೈತನ್ಯದಿಂದ ಇರಲು ಬೆಳಗ್ಗೆ ತುಸು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಕುಡಿಯಬಹುದು. ತುಸು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದು ಇಲ್ಲಿದೆ.
ಬೆಳಗೆದ್ದ ತಕ್ಷಣ ಬಹುತೇಕ ಮಂದಿಗೆ ಚಹಾ ಅಥವಾ ಕಾಫಿ ಕುಡಿಯುವುದಿದ್ದಲ್ಲಿ ಬೆಳಗಾಗುವುದೇ ಇಲ್ಲ. ಆದರೆ, ಆರೋಗ್ಯಕ್ಕೆ ಇದು ಒಳ್ಳೆಯದಲ್ಲ. ಬೆಳಗ್ಗೆ ಎದ್ದ ಕೂಡಲೇ ತುಸು ಬೆಚ್ಚಗಿನ ನೀರು ಸೇವಿಸುವುದು ಆರೋಗ್ಯಕ್ಕೆ ಬಹಳ ಉತ್ತಮ. ಅದರಲ್ಲೂ ಬಿಸಿ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗಲಿವೆ. ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದರಿಂದ ಹಿಡಿದು ದೇಹದ ಟಾಕ್ಸಿನ್‍ಗಳನ್ನು ಹೊರ ಹಾಕುವವರೆಗೆ ಇದು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ದಿನಪೂರ್ತಿ ಚೈತನ್ಯದಿಂದ ಇರಲು ಬೆಳಗ್ಗೆ ತುಸು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಕುಡಿಯಬಹುದು. ತುಸು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದು ಇಲ್ಲಿದೆ:
ಜೀರ್ಣಕ್ರಿಯೆಗೆ ಸಹಕಾರಿ: ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ಮತ್ತು ಪಿತ್ತರಸದ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉತ್ತಮ ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯಿದ್ದರೆ ಉಪಶಮನಕ್ಕೂ ಸಹಕಾರಿ. ಒಟ್ಟಾರೆಯಾಗಿ ಇದು ದೇಹದಲ್ಲಿನ ಟಾಕ್ಸಿನ್ ಮತ್ತು ತ್ಯಾಜ್ಯವನ್ನು ಹೊರಹಾಕುವ ಮೂಲಕ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
ಎಲೆಕ್ಟ್ರೋಲೈಟ್ ಸಮತೋಲನಗೊಳಿಸಲು ಸಹಕಾರಿ: ಎಲೆಕ್ಟ್ರೋಲೈಟ್‌ಗಳು ದೇಹವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಉಪ್ಪಿನಲ್ಲಿ ದೇಹಕ್ಕೆ ಅಗತ್ಯವಾಗಿ ಬೇಕಾದ ಸೋಡಿಯಂ, ಪೊಟ್ಯಾಶಿಯಮ್ ಮತ್ತು ಮೆಗ್ನೀಸಿಯಮ್‍ನಂತಹ ಖನಿಜಗಳಿವೆ. ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ರಾತ್ರಿ ಮಲಗಿದ ಬಳಿಕ ಬಹುತೇಕ ಮಂದಿ ಮತ್ತೆ ನೀರು ಕುಡಿಯುವುದು ಬೆಳಗ್ಗೆ ಎದ್ದ ನಂತರವೇ. ಹೀಗಾಗಿ ಈ ಸಮಯದಲ್ಲಿ ದೇಹವು ನಿರ್ಜಲೀಕರಣಗೊಂಡಿರುವ ಸಾಧ್ಯತೆಯಿರುವುದರಿಂದ ಬೆಳಗೆದ್ದು ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಕುಡಿಯುವುದು ಉತ್ತಮ.
ದೇಹದಲ್ಲಿನ ಕಲ್ಮಶಗಳನ್ನು ತೆಗೆದುಹಾಕುವಲ್ಲಿ ಸಹಕಾರಿ: ಉಪ್ಪಿನಲ್ಲಿರುವ ಖನಿಜಗಳು ದೇಹದಲ್ಲಿನ ಕಲ್ಮಶಗಳು ಮತ್ತು ಟಾಕ್ಸಿನ್‍ಗಳನ್ನು ಹೊರತೆಗೆಯುವ ಮೂಲಕ ಜೀವಕೋಶಗಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಆರೋಗ್ಯಕ್ಕೆ ಇದು ಬಹಳ ಪ್ರಯೋಜನಕಾರಿಯಾಗಿದೆ.
ದೇಹವನ್ನು ಹೈಡ್ರೇಟೆಡ್ ಆಗಿರಿಸುವಲ್ಲಿ ಸಹಕಾರಿ: ದೇಹವನ್ನು ಹೈಡ್ರೇಟೆಡ್ ಆಗಿರಿಸಲು ಹೆಚ್ಚು ಹೆಚ್ಚು ನೀರು ಕುಡಿಯಬೇಕು. ತುಸು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಕುಡಿಯುವುದರಿಂದ ದೇಹವನ್ನು ಹೈಡ್ರೇಟೆಡ್ ಆಗಿರಿಸುವಲ್ಲಿ ಸಹಕಾರಿಯಾಗಿದೆ. ಉಪ್ಪಿನಲ್ಲಿ ಖನಿಜಗಳಿರುವುದರಿಂದ ದೇಹವು ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಆರೋಗ್ಯಕರ ಚರ್ಮಕ್ಕೂ ಸಹಕಾರಿ: ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಸೇವಿಸುವುದರಿಂದ ಇದು ಚರ್ಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಟಾಕ್ಸಿನ್ ಅನ್ನು ಹೊರಹಾಕುವ ಮೂಲಕ, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಮೊಡವೆಗಳನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ. ಉಪ್ಪಿನಲ್ಲಿ ಖನಿಜಗಳಿರುವುದರಿಂದ ಇದು ಚರ್ಮದ ನೈಸರ್ಗಿಕ ತೇವಾಂಶ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆ ಕಾಂತಿಯುತವಾಗಿ ಹೊಳೆಯಲು ಕಾರಣವಾಗುತ್ತದೆ.
ಬೆಚ್ಚಗಿನ ಉಪ್ಪು ನೀರನ್ನು ಹೇಗೆ ತಯಾರಿಸುವುದು
ಇದನ್ನು ತಯಾರಿಸಲು, ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಕಲ್ಲುಪ್ಪು ಸೇರಿಸಿ ಮಿಶ್ರಣ ಮಾಡಿ. ಉಪ್ಪು ಸಂಪೂರ್ಣವಾಗಿ ಕರಗಿದ ನಂತರ ಮತ್ತೆ ಚೆನ್ನಾಗಿ ಬೆರೆಸಿ, ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ವಿಭಾಗ