Breakfast: ಆರೋಗ್ಯಕ್ಕೆ ಬೆಸ್ಟ್ ಎನ್ನಿಸುವ ಉಪಾಹಾರ ಯಾವುದು? ಈ ಪ್ರಶ್ನೆಗೆ ಚಾಟ್‌ಜಿಪಿಟಿ ನೀಡಿದ ಉತ್ತರ ಹೀಗಿದೆ
Healthy Breakfast: ಆರೋಗ್ಯಕರ ಉಪಾಹಾರ ಸಲಹೆಗಳನ್ನು ಚಾಟ್‌ಜಿಪಿಟಿ ಸಹ ನೀಡಿದೆ. ಅದು ನೀವು ನಂಬಲಾಗದಂತಹ ಸಲಹೆಗಳನ್ನು ನೀಡಿದೆ. ಆರೋಗ್ಯಕರ ಉಪಹಾರದಿಂದಲೇ ನಿಮ್ಮ ದಿನವನ್ನು ಪ್ರಾರಂಭಿಸಬೇಕು. ದಿನದ ಕೆಲಸಗಳಿಗೆ ಶಕ್ತಿಯ ಅಗತ್ಯವಿರುವುದರಿಂದ ಪೋಷಕಾಂಶಗಳನ್ನು ಒದಗಿಸುವು ಪೌಷ್ಠಿಕ ಆಹಾರಗಳ ಸಂಯೋಜನೆ ಅದಾಗಿರಬೇಕು.
ಈಗಿನ ಕಾಲದಲ್ಲಿ ಅತಿ ಹೆಚ್ಚು ಜನರು ಸಲಹೆಗಳನ್ನು ಕೇಳಿ ಪಡೆಯುವುದು ಆಹಾರದ ವಿಷಯದ ಮೇಲೆಯೇ. ಅದಕ್ಕೆ ಕಾರಣವಿಷ್ಟೇ, ಆಹಾರವೇ, ಆರೋಗ್ಯ ಕಾಪಾಡಿಕೊಳ್ಳಲು ಇರುವ ಮಾರ್ಗ ಎಂಬುದು ಜನರ ಅರಿವಿಗೆ ಬಂದಿದೆ. ಹಾಗಾಗಿ ಹೊಸ ಹೊಸ ಆಲೋಚನೆ, ಸಲಹೆಗಳನ್ನು ಹುಡುಕುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಆಹಾರ ಮತ್ತು ಆರೋಗ್ಯದ ಬಗ್ಗೆ ಅದೆಷ್ಟೋ ವೆಬ್‌ಪುಟಗಳೇ ಇವೆ. ಪ್ರಸಿದ್ಧ ವ್ಯಕ್ತಿಗಳು ಹಂಚಿಕೊಂಡ ಹೊಸ ಮತ್ತು ಹಳೆಯ ಪಾಕವಿಧಾನಗಳು, ಬೆಳಗಿನ ಉಪಹಾರ, ಊಟ, ತಿಂಡಿಗಳು ಟ್ರೆಂಡ್ ಅನ್ನೇ ಸೃಷ್ಟಿಸಿದ್ದೂ ಇದೆ. ಅವುಗಳನ್ನು ಹುಡುಕಾಡಿ ಅಳವಡಿಸಿಕೊಳ್ಳುವ ಪ್ರಯತ್ನವೂ ನಡೆದೇ ಇದೆ. ಈಗ ಆ ಹುಡುಕಾಟ ಚಾಟ್‌ಜಿಪಿಟಿಯಲ್ಲೂ ಮುಂದುವರಿದಿದೆ.
ಆರೋಗ್ಯಕರ ಉಪಹಾರ ಸಲಹೆಗಳನ್ನು ಚಾಟ್‌ಜಿಪಿಟಿ ಸಹ ನೀಡಿದೆ. ಅದು ನೀವು ನಂಬಲಾಗದಂತಹ ಸಲಹೆಗಳನ್ನು ನೀಡಿದೆ. ಆರೋಗ್ಯಕರ ಉಪಹಾರದಿಂದಲೇ ನಿಮ್ಮ ದಿನವನ್ನು ಪ್ರಾರಂಭಿಸಬೇಕು. ದಿನದ ಕೆಲಸಗಳಿಗೆ ಶಕ್ತಿಯ ಅಗತ್ಯವಿರುವುದರಿಂದ ಪೋಷಕಾಂಶಗಳನ್ನು ಒದಗಿಸುವು ಪೌಷ್ಠಿಕ ಆಹಾರಗಳ ಸಂಯೋಜನೆ ಅದಾಗಿರಬೇಕು.
ಆರೋಗ್ಯಕರ ಉಪಹಾರದಲ್ಲಿ ಏನೇನಿರಬೇಕು?
ಹಣ್ಣು ಮತ್ತು ತರಕಾರಿಗಳು
ವಿವಿಧ ಜೀವಸತ್ವ, ಖನಿಜಗಳಿಂದ ಸಮೃದ್ಧವಾಗಿರುವ ಹಣ್ಣು ಮತ್ತು ತರಕಾರಿಗಳನ್ನು ಬೆಳಗಿನ ಉಪಹಾರದಲ್ಲಿ ಅಗತ್ಯವಾಗಿ ಸೇರಿಸಿಕೊಳ್ಳಿ. ಬಾಳೆಹಣ್ಣು, ಅವಕಾಡೊ, ಬೆರ್ರಿ ಹಣ್ಣುಗಳು ಮತ್ತು ಪಾಲಕ್‌ಗಳಂತಹ ಹಸಿರು ತರಕಾರಿಗಳು ಇಡೀ ದಿನಕ್ಕೆ ಬೇಕಾಗುವ ಶಕ್ತಿ ಒದಗಿಸುತ್ತವೆ.
ಪ್ರೋಟೀನ್
ಮೊಟ್ಟೆ, ಗ್ರೀಕ್ ಯೊಗರ್ಟ್, ಕಾಟೇಜ್ ಚೀಸ್ ಅಥವಾ ಪ್ರೋಟೀನ್ ಅಂಶ ಹೆಚ್ಚಿರುವ ಹಣ್ಣಿನ ಬೀಜಗಳನ್ನು ಬೆಳಗಿನ ಉಪಹಾರದಲ್ಲಿ ಸೇರಿಸಿಕೊಳ್ಳಿ. ಇವು ಸ್ನಾಯುಗಳು ಆರೋಗ್ಯವಾಗಿರಲು ಅವಶ್ಯಕವಾಗಿದೆ.
ಆರೋಗ್ಯಕರ ಕೊಬ್ಬಿನಾಂಶ
ಡ್ರೈ ಫ್ರೂಟ್ಸ್, ಅವಕಾಡೊ ಮುಂತಾದ ಆರೋಗ್ಯಕರ ಕೊಬ್ಬಿನ ಮೂಲಗಳನ್ನು ಸೇರಿಸಿಕೊಳ್ಳಿ. ಇವು ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. ಜೊತೆಗೆ ಪೂರ್ತಿ ದೇಹಕ್ಕೆ ಅಗತ್ಯವಿರುವಿರುಷ್ಟೇ ಫ್ಯಾಟ್‌ಗಳನ್ನು ನೀಡುತ್ತದೆ.
ಡೈರಿ ಅಥವಾ ಪರ್ಯಾಯ ಆಹಾರಗಳು
ಕಡಿಮೆ ಕೊಬ್ಬು ಇರುವ ಹಾಲು, ಮೊಸರು ಅಥವಾ ಚೀಸ್ ಪರಿಗಣಿಸಿ. ನಿಮಗೆ ಲ್ಯಾಕ್ಟೋಸ್‌ನಿಂದ ಅಲರ್ಜಿ ಇದ್ದರೆ ಡೈರಿಯ ಪರ್ಯಾಯ ಉತ್ಪನ್ನಾಗಳಾದ ಬಾದಾಮಿ ಹಾಲು, ಸೋಯಾ ಹಾಲು ಅಥವಾ ತೆಂಗಿನ ಹಾಲು ಪ್ರಯತ್ನಿಸಿ.
ಮಿತ ಪ್ರಮಾಣದಲ್ಲಿರಲಿ ಸಕ್ಕರೆ
ಬೆಳಗಿನ ಉಪಹಾರದಲ್ಲಿ ಸಕ್ಕರೆ ಅಂಶವಿರುವ ಧಾನ್ಯಗಳು, ಪೇಸ್ಟ್ರಿ ಅಥವಾ ಸುವಾಸನೆಯ ಮೊಸರು (ಯೊಗರ್ಟ್)ಗಳಿಂದ ಆದಷ್ಟು ದೂರವಿರಿ. ಹಣ್ಣು ಅಥವಾ ಸಿಹಿಯ ನೈಸರ್ಗಿಕ ಮೂಲಗಳನ್ನು ಆರಿಸಿಕೊಳ್ಳಿ.
ಸಾಕಷ್ಟು ದ್ರವಾಹಾರವಿರಲಿ
ಯಾವಾಗಲೂ ಹೈಡ್ರೇಟ್ ಆಗಿರುವುದು ಮುಖ್ಯ. ಹಾಗಾಗಿ ಸಾಕಷ್ಟು ನೀರು ಅಥವಾ ಹರ್ಬಲ್ ಟೀಗಳಂತಹ ದ್ರವಾಹಾರ ಸೇವಿಸುವುದು ಮರೆಯಬೇಡಿ.
ಚಾಟ್ ಜಿಪಿಟಿ ನೀಡಿದ ಕೆಲವು ಆರೋಗ್ಯಕರ ಉಪಹಾರ ಸಲಹೆಗಳು
* ಸಂಪೂರ್ಣ ಧಾನ್ಯದಿಂದ ತಯಾರಿಸಿದ ಓಟ್ ಮೀಲ್‌ಗಳಿಗೆ ಗ್ರೀಕ್ ಯೊಗರ್ಟ್ ಮತ್ತು ಡ್ರೈ ಫ್ರೂಟ್ಸ್ ಸೇರಿಸಿ ಸೇವಿಸಬಹುದು.
* ಅವಕಾಡೊ, ಮೊಟ್ಟೆ ಮತ್ತು ಕತ್ತರಿಸಿದ ಟೊಮೆಟೊ ಸೇರಿಸಿ ತಯಾರಿಸಿದ ತಿಂಡಿಗಳು.
* ವಿವಿಧ ಜಾತಿಯ ಹಣ್ಣುಗಳೊಂದಿಗೆ ಮೊಸರು, ಜೇನುತುಪ್ಪ ಮತ್ತು ಡ್ರೈ ಫ್ರೂಟ್ಸ್ ಸೇರಿಸಿ ತಿನ್ನಿ.
* ಪಾಲಕ್, ಬೆಲ್ ಪೆಪ್ಪರ್ (ದೊಣ್ಣಮೆಣಸಿನಕಾಯಿ), ಈರುಳ್ಳಿ ಸೇರಿಸಿ ತಯಾರಿಸಿದ ಆಮ್ಲೇಟ್ ಸೇರಿಸಿಕೊಳ್ಳಿ.
* ಪಾಲಕ್, ಬಾಳೆಹಣ್ಣು, ಬಾದಾಮಿ ಹಾಲು, ಗ್ರೀಕ್ ಯೊಗಾರ್ಟ್ ಮತ್ತು ಒಂದು ಚಮಚ ನಟ್ ಬಟರ್ (ಉದಾ: ಪೀನಟ್ ಬಟರ್) ಸೇರಿಸಿ ಸ್ಮೂಥಿ ಮಾಡಿ ಸೇವಿಸಬಹುದು.
ನೆನಪಿಡಿ, ಆರೋಗ್ಯಕರ ಬೆಳಗ್ಗಿನ ಉಪಹಾರಗಳು ಪ್ರತಿಯೊಬ್ಬರ ಆಹಾರದ ಆದ್ಯತೆ, ನಿರ್ಬಂಧ ಮತ್ತು ಆರೋಗ್ಯದ ಮೇಲೆ ಅವರು ಹಾಕಿಕೊಂಡಿರುವ ಗುರಿಗಳನ್ನು ಅವಲಂಬಿಸಿ ಬದಲಾಗಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ತಜ್ಞರ ಜೊತೆ ಸಮಾಲೋಚಿಸುವುದು ಉತ್ತಮ. ಹೀಗೆ ಚಾಟ್ ಜಿಪಿಟಿ ಸಲಹೆ ನೀಡಿದೆ.