ಮಲಬದ್ಧತೆಯಿಂದ ತಕ್ಷಣ ಪರಿಹಾರ ಪಡೆಯೋದು ಹೇಗೆ; ಜೀವನಶೈಲಿಯಲ್ಲೂ ಬದಲಾವಣೆ ಮಾಡ್ಕೊಂಡ್ರೆ ಈ ಸಮಸ್ಯೆಯೇ ಬರಲ್ಲ
ಮಲಬದ್ಧತೆ ಕಾಣಿಸಿಕೊಂಡರೆ ಅದರಿಂದ ತ್ವರಿತ ಪರಿಹಾರ ಪಡೆಯೋದು ಕಷ್ಟ. ಇದಕ್ಕೆ ನಿಮ್ಮ ಜೀವನಶೈಲಿಯಲ್ಲೇ ಕೆಲವೊಂದು ಆರೋಗ್ಯಕರ ಬದಲಾವಣೆ ಮಾಡಿಕೊಂಡ್ರೆ ಒಳ್ಳೆಯದು. ಆದರೂ, ಮಲಬದ್ಧತೆಯಿಂದ ತ್ವರಿತವಾಗಿ ಮುಕ್ತಿ ಪಡೆಯಲು ಕೆಲವೊಂದು ಸಲಹೆಗಳು ಇಲ್ಲಿವೆ.
ಕೆಲವೊಮ್ಮೆ ಜೀವನಶೈಲಿಯಲ್ಲಿ ಏರುಪೇರು ಆದಾಗ ಮಲಬದ್ಧತೆ ಉಂಟಾಗುತ್ತದೆ. ಗಟ್ಟಿ ಮಲ ಹೊರಹಾಕುವುದು, ವಾರಕ್ಕೆ ಮೂರಕ್ಕಿಂತ ಕಡಿಮೆ ಬಾರಿ ಮಲವಿಸರ್ಜನೆ ಮಾಡುವುದು ಮಲಬದ್ಧತೆಯ ಪ್ರಮುಖ ಲಕ್ಷಣಗಳಾಗಿವೆ. ಕೆಲವೊಬ್ಬರು ಆಗಾಗ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾರೆ. ಇದು ದೈಹಿಕ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲದೆ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಮಲಬದ್ಧತೆ ಶುರುವಾದರೆ, ಒಮ್ಮೆ ಕಡಿಮೆಯಾದರೆ ಸಾಕು ಎಂದು ಇದ್ದ ಬದ್ಧ ಔಷಧ ಸೇವನೆಗೆ ಮುಂದಾಗುವ ಜನರು ಹೆಚ್ಚು.
ನಿರ್ಜಲೀಕರಣ, ಜೀವನಶೈಲಿ ಸೇರಿದಂತೆ ಇತರ ವೈದ್ಯಕೀಯ ಪರಿಸ್ಥಿತಿಗಳಿಂದ ಮಲಬದ್ಧತೆ ಉಂಟಾಗುತ್ತದೆ. ಹಾಗಿದ್ದರೆ ಈ ಮಲಬದ್ಧತೆಯಿಂದ ತ್ವರಿತ ಪರಿಹಾರ ಪಡೆಯುವುದು ಹೇಗೆ ಎಂದು ನೀವು ಕೇಳಬಹುದು. ಈ ಕುರಿತು ವೈದ್ಯಕೀಯ ಸಲಹೆಗಾರರಾದ ಡಾ ಅಭಿಜಿತ್ ಬಿಆರ್ ಅವರು ಎಚ್‌ಟಿ ಕನ್ನಡದ ಸಹಸಂಸ್ಥೆಯಾದ ಹೆಲ್ತ್ ಶಾಟ್ ಜೊತೆಗೆ ಮಾತನಾಡಿದ್ದಾರೆ.
- ಮಲಬದ್ಧತೆಯ ಲಕ್ಷಣಗಳು
- ಮಲ ಹೊರಹಾಕುವಾಗ ಅಥವಾ ವಿಸರ್ಜಿಸುವಾಗ ಅತಿಯಾದ ಆಯಾಸ
- ಗಟ್ಟಿಯಾದ ಮಲ
- ಮಲವಿಸರ್ಜನೆಯ ನಂತರವೂ ಪೂರ್ತಿ ವಿಸರ್ಜನೆಯಾಗಿಲ್ಲ ಎಂಬ ಭಾವನೆ
- ವಾರಕ್ಕೆ ಮೂರು ಅಥವಾ ಕಡಿಮೆ ಬಾರಿ ಸ್ವಾಭಾವಿಕ ಮಲವಿಸರ್ಜನೆ ಪ್ರಕ್ರಿಯೆ ನಡೆಯುವುದು
ಮಲಬದ್ಧತೆಗೆ ಕಾರಣಗಳೇನು?
ಮಲಬದ್ಧತೆ ವಿವಿಧ ಅಂಶಗಳಿಂದ ಉಂಟಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ಇದು ಜೀವನಶೈಲಿ, ಆಹಾರ ಪದ್ಧತಿ ಮತ್ತು ವೈದ್ಯಕೀಯ ಸಮಸ್ಯೆಗಳ ಸಂಯೋಜನೆಯಿಂದ ಉಂಟಾಗುತ್ತದೆ.
ಆಹಾರದ ಅಂಶಗಳು
ಫೈಬರ್ ಕಡಿಮೆ ಇರುವ ಆಹಾರಗಳು ಮಲಬದ್ಧತೆಗೆ ಕಾರಣವಾಗಬಹುದು. ಏಕೆಂದರೆ ಫೈಬರ್ ಅಂಶವು ಜೀರ್ಣಾಂಗವ್ಯೂಹದ ಮೂಲಕ ಚಲಿಸಲು ಸಹಾಯ ಮಾಡುತ್ತದೆ. ಅಸಮರ್ಪಕ ದ್ರವಾಹಾರದ ಸೇವನೆ ಕೂಡಾ ಮತ್ತೊಂದು ಕಾರಣ. ಜಲಸಂಚಯನವು ಸರಿಯಾಗಿ ಆಗದಿದ್ದರೆ ಮಲವನ್ನು ಗಟ್ಟಿಯಾಗಿಸುತ್ತವೆ.
ಜೀವನಶೈಲಿಯ ಅಂಶಗಳು
ದೈಹಿಕ ಚಟುವಟಿಕೆಯ ಕೊರತೆ ಮತ್ತು ಜಡ ಜೀವನಶೈಲಿಯಿಂದಾಗಿ ಕರುಳಿನ ಚಲನೆಯನ್ನು ನಿಧಾನಗೊಳಿಸುತ್ತದೆ. ಇದು ಮಲಬದ್ಧತೆಗೆ ಕಾರಣವಾಗಬಹುದು.
ವೈದ್ಯಕೀಯ ಪರಿಸ್ಥಿತಿಗಳು
ಕೆರಳಿಸುವ ಕರುಳಿನ ಸಹಲಕ್ಷಣಗಳು (IBS) ಕೂಡಾ ಮಲಬದ್ಧತೆಗೆ ಮತ್ತೊಂದು ಕಾರಣ. ಮಲಬದ್ಧತೆಯು IBSನ ಲಕ್ಷಣವೂ ಆಗಿರಬಹುದು. ಇದು ಜಠರಗರುಳಿನ ಅಸ್ವಸ್ಥತೆಯಾಗಿದೆ. ಇದಲ್ಲದೆ ಹಾರ್ಮೋನ್ ಅಸಮತೋಲನ, ಹೈಪೋಥೈರಾಯ್ಡಿಸಮ್, ಮಧುಮೇಹದ ಅಸಮರ್ಪಕ ನಿರ್ವಹಣೆ ಇತ್ಯಾದಿ ಕಾರಣಗಳೂ ಇರಬಹುದು.
ಮಲಬದ್ಧತೆಯಿಂದ ತ್ವರಿತ ಪರಿಹಾರ ಪಡೆಯುವ ಮಾರ್ಗಗಳು
ನೀರು ಕುಡಿಯಿರಿ, ದೇಹವನ್ನು ಹೈಡ್ರೇಟ್ ಮಾಡಿ
ಮಲವನ್ನು ಮೃದುಗೊಳಿಸಲು ಉಗುರು ಬೆಚ್ಚಗಿನ ನೀರು ಅಥವಾ ಗಿಡಮೂಲಿಕೆಯ ಚಹಾವನ್ನು ಕುಡಿಯಿರಿ. ಪಾನೀಯಗಳ ಶಾಖವು ಘನವಸ್ತುಗಳನ್ನು ಒಡೆಯಲು ಸಹಾಯ ಮಾಡುತ್ತದೆ. ನಿಧಾನವಾಗಿ ಮಲವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಫೈಬರ್ ಇರುವ ಆಹಾರ ಸೇವಿಸಿ
ಫೈಬರ್ ಹೆಚ್ಚಿರುವ ಆಹಾರಗಳನ್ನು ಸೇವಿಸಿ. ಒಣದ್ರಾಕ್ಷಿ, ಅಂಜೂರದ ಹಣ್ಣುಗಳು ಒಳ್ಳೆಯದು. ಓಟ್ಸ್, ಧಾನ್ಯದ ಬ್ರೆಡ್, ಗೋಧಿ ಪಾಸ್ತಾ, ಸೇಬುಹಣ್ಣು, ಬಾಳೆಹಣ್ಣು, ಬ್ರೌನ್ ರೈಸ್, ಬಟಾಣಿ ಕೂಡಾ ಒಳ್ಳೆಯದು.
ದೇಹಕ್ಕೆ ವ್ಯಾಯಾಮ ಕೊಡಿ
ದೈಹಿಕ ಚಟುವಟಿಕೆಯ ಮೂಲಕ ಕರುಳಿನ ಚಲನೆಯನ್ನು ಉತ್ತೇಜಿಸಬೇಕು. ಇದಕ್ಕಾಗಿ ವ್ಯಾಯಾಮಗಳು ಅಥವಾ ಯೋಗ ಅಭ್ಯಾಸ ಮಾಡಬಹುದು. ಇದು ಹೊಟ್ಟೆಯಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಆ ಮೂಲಕ ದೇಹವನ್ನು ಸಕ್ರಿಯಗೊಳಿಸಿ ಮಲವನ್ನು ಹೊರಹಾಕಲು ಸುಲಭವಾಗುತ್ತದೆ.
ಸ್ಟೂಲ್ ಸಾಫ್ಟ್‌ನರ್
ಮಾರುಕಟ್ಟೆಯಲ್ಲಿ ಸ್ಟೂಲ್ ಸಾಫ್ಟನರ್‌ಗಳು ಸಿಗುತ್ತವೆ. ಇವುಗಳು ಮೂಲಭೂತವಾಗಿ ಮಲಕ್ಕೆ ತೇವಾಂಶವನ್ನು ಸೇರಿಸುತ್ತವೆ. ಹೀಗಾಗಿ ಮಲ ಸುಲಭವಾಗಿ ಹಾದುಹೋಗುತ್ತದೆ. ಮಲಬದ್ಧತೆಗೆ ಕೆಲವು ನೈಸರ್ಗಿಕ ಸ್ಟೂಲ್ ಸಾಫ್ಟನರ್ ಬಳಸಿ ನೋಡಿ.
ಎನಿಮಾ
ಎನಿಮಾ ಕೂಡಾ ಬಳಸಬಹುದು. ಗುದನಾಳದಿಂದ ಮಲವನ್ನು ತಳ್ಳಲು ದ್ರವವನ್ನು ಇಂಜೆಕ್ಷನ್ ಮೂಲಕ ಬಳಸಲಾಗುತ್ತದೆ. ಇದು ಮಲವನ್ನು ಮೃದುವಾಗಿಸುವ ಮೂಲಕ ಸುಲಭವಾಗಿ ಹಾದುಹೋಗುವಂತೆ ಮಾಡುತ್ತದೆ. ಇದನ್ನು ವೈದ್ಯರ ಮೂಲಕ ಬಳಸಬೇಕು.
ಜೀವನಶೈಲಿಯ ಮೂಲಕ ಮಲಬದ್ಧತೆ ತಡೆಯುವುದು ಹೇಗೆ?
ಇದನ್ನೂ ಓದಿ | ಪ್ರತಿದಿನ ಬೆಳಗೆದ್ದು ಈ ಪಾನೀಯ ಕುಡಿಯುವ ಅಭ್ಯಾಸ ಮಾಡಿ, ಡಾಕ್ಟರ್ ಬಳಿ ಹೋಗುವ ಪ್ರಮೇಯವೇ ಬರುವುದಿಲ್ಲ, ಪ್ರಯತ್ನಿಸಿ ನೋಡಿ
ವರ್ತನೆಯ ಬದಲಾವಣೆ
ಜೀವನಶೈಲಿಯಲ್ಲಿ ಶಿಸ್ತು ಅನುಸರಿಸುವ ಮೂಲಕ ಇದನ್ನು ತಡೆಗಟ್ಟಬಹುದು. ಊಟದ ನಂತರ ಕರುಳು ಹೆಚ್ಚು ಸಕ್ರಿಯವಾಗಿರುತ್ತವೆ. ಇದು ಕರುಳಿನ ಚಲನೆಗೆ ಸೂಕ್ತ ಸಮಯವಾಗಿದೆ. ಹೀಗಾಗಿ ದೇಹ ಈ ಸಮಯದಲ್ಲಿ ಸಕ್ರಿಯವಾಗಿರಬೇಕು. ಬೆಳಗ್ಗೆ ಕೆಫೀನ್ ಹೊಂದಿರುವ ಪಾನೀಯ ಕುಡಿಯುವುದು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ.
ಫೈಬರ್ ಸೇವನೆ ಹೆಚ್ಚಿಸುವುದು
ದಿನಕ್ಕೆ ಫೈಬರ್ ಸೇವನೆಯು 20ರಿಂದ 35 ಗ್ರಾಂ ಬೇಕು ಎಂದು ಶಿಫಾರಸು ಮಾಡಲಾಗುತ್ತದೆ. ಹಲವು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಫೈಬರ್ ಸಮೃದ್ಧವಾಗಿವೆ. ಮಲಬದ್ಧತೆ ತಡೆಗಟ್ಟುವಲ್ಲಿ ಮತ್ತು ಚಿಕಿತ್ಸೆಯಲ್ಲಿ ಅವುಗಳು ಪರಿಣಾಮಕಾರಿಯಾಗಿದೆ.
ವೈದ್ಯಕೀಯ ನೆರವು ಪಡೆಯಿರಿ
ಮನೆಯಲ್ಲಿ ಸೂಕ್ತ ಚಿಕಿತ್ಸೆಗಳ ನಂತರವೂ ಮಲಬದ್ಧತೆ ಕಡಿಮೆಯಾಗದಿದ್ದರೆ, ವೈದ್ಯಕೀಯ ನೆರವು ಪಡೆಯುವುದು ಮುಖ್ಯ. ವೈದ್ಯರ ಸಲಹೆಯಂತೆ ಚಿಕಿತ್ಸೆ ಮುಂದುವರೆಸಿ.
ಇನ್ನಷ್ಟು ಆರೋಗ್ಯ ಸಲಹೆಗಳಿಗೆ ಕ್ಲಿಕ್ ಮಾಡಿ
ಇದನ್ನೂ ಓದಿ | ಹೃದಯ ರಕ್ತನಾಳಗಳು ಬ್ಲಾಕ್ ಆಗುವುದನ್ನು ತಡೆಯುವ 5 ಮನೆಮದ್ದುಗಳಿವು; ಪಾರ್ಶ್ವವಾಯು, ಹೃದಯಾಘಾತದಿಂದ ಪಾರಾಗಲು ಇವೇ ಬೆಸ್ಟ್ ಮೆಡಿಸಿನ್
ವಿಭಾಗ