ಹೃದಯ ರಕ್ತನಾಳಗಳು ಬ್ಲಾಕ್ ಆಗುವುದನ್ನು ತಡೆಯುವ 5 ಮನೆಮದ್ದುಗಳಿವು; ಪಾರ್ಶ್ವವಾಯು, ಹೃದಯಾಘಾತದಿಂದ ಪಾರಾಗಲು ಇವೇ ಬೆಸ್ಟ್ ಮೆಡಿಸಿನ್‌-health news heart health heart blockage home remedies 5 ayurvedic morning drinks to clean arteries and prevent stroke rs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೃದಯ ರಕ್ತನಾಳಗಳು ಬ್ಲಾಕ್ ಆಗುವುದನ್ನು ತಡೆಯುವ 5 ಮನೆಮದ್ದುಗಳಿವು; ಪಾರ್ಶ್ವವಾಯು, ಹೃದಯಾಘಾತದಿಂದ ಪಾರಾಗಲು ಇವೇ ಬೆಸ್ಟ್ ಮೆಡಿಸಿನ್‌

ಹೃದಯ ರಕ್ತನಾಳಗಳು ಬ್ಲಾಕ್ ಆಗುವುದನ್ನು ತಡೆಯುವ 5 ಮನೆಮದ್ದುಗಳಿವು; ಪಾರ್ಶ್ವವಾಯು, ಹೃದಯಾಘಾತದಿಂದ ಪಾರಾಗಲು ಇವೇ ಬೆಸ್ಟ್ ಮೆಡಿಸಿನ್‌

ಹೃದಯ ರಕ್ತನಾಳಗಳು, ಅಪಧಮನಿಗಳನ್ನು ಸ್ವಚ್ಛ ಮಾಡಿ ರಕ್ತನಾಳಗಳು ಬ್ಲಾಕ್ ಆಗುವುದನ್ನು ತಡೆದು ಪಾರ್ಶ್ವವಾಯು, ಹೃದಯಾಘಾತದಂತಹ ಗಂಭೀರ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸಲು 5 ಪಾನೀಯಗಳು ಸಹಾಯ ಮಾಡುತ್ತವೆ. ಇವನ್ನು ಪ್ರತಿದಿನ ಕುಡಿದ್ರೆ ಹೃದ್ರೋಗ ಸಂಬಂಧಿ ಸಮಸ್ಯೆಗಳು ಎಂದಿಗೂ ಬಾಧಿಸುವುದಿಲ್ಲ ಎನ್ನುತ್ತಾರೆ ಆಯುರ್ವೇದ ತಜ್ಞರು, ಈ ಮನೆಮದ್ದನ್ನು ನೀವೂ ಟ್ರೈ ಮಾಡಿ.

ಹೃದಯ ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವುದನ್ನು ತಡೆಯುವ ಮನೆಮದ್ದುಗಳಿವು
ಹೃದಯ ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವುದನ್ನು ತಡೆಯುವ ಮನೆಮದ್ದುಗಳಿವು (PC: Canva)

ಜಗತ್ತಿನಾದ್ಯಂತ ಹಲವರ ಸಾವಿಗೆ ಕಾರಣವಾಗುತ್ತಿದೆ ಹೃದ್ರೋಗ. ಎಳೆ ವಯಸ್ಸಿನವರು ಕೂಡ ಹೃದ್ರೋಗ ಸಮಸ್ಯೆಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಹೃದಯರಕ್ತನಾಳಗಳಲ್ಲಿ ಸಮಸ್ಯೆ ಉಂಟಾದರೆ ಹೃದಯಾಘಾತ, ಹೃದಯಸಂಭ್ತನ, ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳು ಎದುರಾಗಬಹುದು. ಆ ಕಾರಣಕ್ಕೆ ರಕ್ತನಾಳಗಳಲ್ಲಿ ಸರಾಗ ರಕ್ತ ಹರಿವು ಉಂಟಾಗುವಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ರಕ್ತನಾಳಗಳಲ್ಲಿ ಬ್ಲಾಕ್ ಆಗದೇ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ವೈದ್ಯರ ಬಳಿಗೆ ಹೋಗಬೇಕು ಎಂದೇನಿಲ್ಲ.

ಭಾರತೀಯ ಆಯುರ್ವೇದ ಔಷಧ ಪದ್ಧತಿಯಲ್ಲಿ ಹೃದಯದ ಆರೋಗ್ಯ ಕಾಪಾಡುವ ಹಲವು ಮನೆಮದ್ದುಗಳಿವೆ. ಇವುಗಳ ನಿರಂತರ ಸೇವನೆಯಿಂದ ಹೃದ್ರೋಗದ ಸಮಸ್ಯೆಗಳು ಬಾಧಿಸುವುದು ಕಡಿಮೆಯಾಗುತ್ತದೆ. ಅಪಧಮನಿಗಳನ್ನು ಸ್ವಚ್ಛವಾಗಿಡಲು ಮತ್ತು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಪ್ರತಿದಿನ ಈ 5 ಗಿಡಮೂಲಿಕೆಗಳನ್ನು ಸೇವಿಸಬೇಕು. ಹೃದಯ ರಕ್ತನಾಳದಲ್ಲಿ ಬ್ಲಾಕ್ ಆಗುವುದನ್ನು ತಡೆಯಲು ಪಾರ್ಶ್ವವಾಯು ಅಪಾಯವನ್ನು ತಡೆಯಲು ಇವುಗಳನ್ನು ನಿರಂತರವಾಗಿ ಕುಡಿಯಿರಿ

ನಿಂಬೆ ಪಾನೀಯ  

ಪ್ರತಿದಿನ ನಿಂಬೆ ಪಾನೀಯ ಕುಡಿಯುವುದು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ಇದು ಹಾರ್ಟ್ ಬ್ಲಾಕ್ ಆಗುವುದನ್ನು ತಡೆಯುತ್ತದೆ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ ಅದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನಿಂಬೆಯಲ್ಲಿರುವ ವಿಟಮಿನ್ ಸಿ ಯ ಸಮೃದ್ಧತೆಯು ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೇಹದ ವಿಷವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ, ಸರಿಯಾದ ರಕ್ತ ಪರಿಚಲನೆ ಮತ್ತು ರಕ್ತ ಹೆಪ್ಪುಗಟ್ಟುವಿಕೆ ರಚನೆಗಳನ್ನು ತಡೆಯುತ್ತದೆ.

ಅರ್ಜುನ ಗಿಡದ ತೊಗಟೆ

ಅರ್ಜುನ ಗಿಡದ ತೊಗಟೆಯಿಂದ ತಯಾರಿಸಿದ ಚಹಾ ಕುಡಿಯವುದರಿಂದ ಹೃದಯದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹೃದಯ ಸಂಬಂಧಿ ಪ್ರಯೋಜನಗಳಿಗೆ ಹೆಸರುವಾಸಿಯಾದ ಅರ್ಜುನ ಮರದ ತೊಗಟೆಯಿಂದ ಒಂದು ಕಪ್ ಚಹಾವನ್ನು ತಯಾರಿಸಿ, ಇದನ್ನು ಬೆಳಗೆದ್ದು ಕುಡಿಯಿರಿ. ಒಂದು ಚಮಚ ಅರ್ಜುನ ತೊಗಟೆಯ ಪುಡಿಯನ್ನು ಒಂದು ಕಪ್ ನೀರಿನಲ್ಲಿ 5-10 ನಿಮಿಷಗಳ ಕಾಲ ಕುದಿಸಲು ಬಿಡಿ. ಈಗ ಅದನ್ನು ಸೋಸಿಕೊಂಡು ಬೆಚ್ಚಗೆ ಕುಡಿಯಿರಿ. ಚಹಾವು ನಿಮ್ಮ ಹೃದಯ ಸ್ನಾಯುಗಳನ್ನು ಬಲಪಡಿಸುತ್ತದೆ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಶುಂಠಿ ಮತ್ತು ಅರಿಸಿನದ ಚಹಾ

ಶುಂಠಿ ಮತ್ತು ಅರಿಶಿನವನ್ನು ಆಯುರ್ವೇದದಲ್ಲಿ ತಮ್ಮ ಉರಿಯೂತದ ಗುಣಲಕ್ಷಣಗಳಿಗಾಗಿ ಹೆಸರುವಾಸಿಯಾಗಿವೆ. ಈ ಎರಡನ್ನೂ ಸೇರಿಸಿ ಕುದಿಸಿ ತಯಾರಿಸಿದ ಚಹಾ ಆರೋಗ್ಯಕ್ಕೆ ಬಹಳ ಉತ್ತಮ. 5-10 ನಿಮಿಷಗಳ ಕಾಲ ನೀರಿನೊಂದಿಗೆ ತುರಿದ ಶುಂಠಿ ಮತ್ತು ಅರಿಶಿನ ಪುಡಿಯನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ ಕುದಿಸಬೇಕು, ಬೇಕಿದ್ದರೆ ಜೇನುತುಪ್ಪ ಸೇರಿಸಿ ಕುಡಿಯಬಹುದು. ಈ ಚಹಾವು ಅಪಧಮನಿಗಳಲ್ಲಿ ಉರಿಯೂತವನ್ನು ತಗ್ಗಿಸಲು ಮತ್ತು ಪ್ಲೇಕ್ ರಚನೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿ ರಸ

ನೆಲ್ಲಿಕಾಯಿಯಲ್ಲಿ ಆಂಟಿಆಕ್ಸಿಡೆಂಟ್ ಹಾಗೂ ವಿಟಮಿನ್ ಸಿ ಸಮೃದ್ಧವಾಗಿದೆ. ಪ್ರತಿದಿನ ಬೆಳಗೆದ್ದು ಒಂದು ಗ್ಲಾಸ್ ನೆಲ್ಲಿಕಾಯಿ ರಸ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ಹೃದಯ ಸ್ನಾಯುಗಳನ್ನು ಬಲಪಡಿಸುತ್ತದೆ, ನಿಮ್ಮ ರಕ್ತಪರಿಚಲನಾ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ತಾಜ ನೆಲ್ಲಿಕಾಯಿಯಿಂದ ಅಥವಾ ನೆಲ್ಲಿಕಾಯಿ ಪುಡಿಯಿಂದ ರಸ ತಯಾರಿಸಬಹುದು.

ಬೀಟ್‌ರೂಟ್ ಜ್ಯೂಸ್

ಹೃದಯ ಸಂಬಂಧಿ ಸಮಸ್ಯೆಗಳಿಗೆ ಬೀಟ್‌ರೂಟ್ ಜ್ಯೂಸ್ ಪ್ರಯೋಜನಕಾರಿ. ಇದರಲ್ಲಿರುವ ನೈಸರ್ಗಿಕ ನೈಟ್ರೇಟ್ಗಳು ರಕ್ತನಾಳಗಳನ್ನು ವಿಶ್ರಾಂತಿ ಮತ್ತು ವಿಸ್ತರಿಸಲು ಸಹಾಯ ಮಾಡುತ್ತದೆ, ಬೀಟ್ರೂಟ್ ಜ್ಯೂಸ್ನ ದೈನಂದಿನ ಸೇವನೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಈ ಆಯುರ್ವೇದ ಔಷಧಿಗಳು ರಕ್ತ ಹೆಪ್ಪುಗಟ್ಟುವುದನ್ನು ತಡೆದು ಹೃದ್ರೋಗದ ಸಮಸ್ಯೆ ನಿವಾರಿಸುವುದು ಮಾತ್ರವಲ್ಲ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಆದರೆ ಪ್ರತಿದಿನ ಖಾಲಿಹೊಟ್ಟೆಯಲ್ಲಿ ಇವುಗಳನ್ನು ತಿನ್ನುವುದು ಹೆಚ್ಚು ಪರಿಣಾಮಕಾರಿ.

mysore-dasara_Entry_Point