ಹೊಟ್ಟೆ ಕೆಟ್ಟಾಗ ಊಟ ಬಿಡೋದ್ರಿಂದ ಪರಿಹಾರ ಸಿಗುತ್ತಾ, ಹೊಟ್ಟೆ ಸರಿಯಾಗಬೇಕು ಅಂದ್ರೆ ಆಹಾರಕ್ರಮ ಹೇಗಿರಬೇಕು? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಟ್ಟೆ ಕೆಟ್ಟಾಗ ಊಟ ಬಿಡೋದ್ರಿಂದ ಪರಿಹಾರ ಸಿಗುತ್ತಾ, ಹೊಟ್ಟೆ ಸರಿಯಾಗಬೇಕು ಅಂದ್ರೆ ಆಹಾರಕ್ರಮ ಹೇಗಿರಬೇಕು? ಇಲ್ಲಿದೆ ಉತ್ತರ

ಹೊಟ್ಟೆ ಕೆಟ್ಟಾಗ ಊಟ ಬಿಡೋದ್ರಿಂದ ಪರಿಹಾರ ಸಿಗುತ್ತಾ, ಹೊಟ್ಟೆ ಸರಿಯಾಗಬೇಕು ಅಂದ್ರೆ ಆಹಾರಕ್ರಮ ಹೇಗಿರಬೇಕು? ಇಲ್ಲಿದೆ ಉತ್ತರ

ಹೊಟ್ಟೆ ಕೆಟ್ರೆ ವಾಂತಿ, ವಾಕರಿಕೆ, ಅತಿಸಾರ, ಗ್ಯಾಸ್ಟ್ರಿಕ್ ಹೀಗೆ ಏನೇನೋ ಕಾಣಿಸುತ್ತೆ. ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳೋದು ಅಂತಾನೇ ತಿಳಿಯೊಲ್ಲ. ಅಂತಹ ಸಂದರ್ಭದಲ್ಲಿ ಕೆಲವರು ಊಟ ಬಿಡುತ್ತಾರೆ. ಹಾಗಾದ್ರೆ ಹೊಟ್ಟೆ ಕೆಟ್ಟಾಗ ಊಟ ಬಿಡೋದು ಪರಿಹಾರ, ಇದು ನಿಜಕ್ಕೂ ಪರಿಣಾಮಕಾರಿಯೇ, ಹೊಟ್ಟೆ ಸರಿಯಾಗಬೇಕು ಅಂದ್ರೆ ಯಾವ ಆಹಾರ ಸೇವಿಸಬೇಕು ಇಲ್ಲಿದೆ ಉತ್ತರ.

ಹೊಟ್ಟೆ ಕೆಟ್ಟರೆ ಊಟ ಬಿಟ್ಟರೆ ಪರಿಹಾರ ಸಿಗುತ್ತಾ?
ಹೊಟ್ಟೆ ಕೆಟ್ಟರೆ ಊಟ ಬಿಟ್ಟರೆ ಪರಿಹಾರ ಸಿಗುತ್ತಾ? (PC: Canva)

ಬಹುತೇಕರಿಗೆ ಹೊರಗಿನ ಆಹಾರ ತಿಂದಾಗ ಅಥವಾ ವಿಶೇಷವಾಗಿರುವುದು ಏನಾದ್ರೂ ತಿಂದ್ರೆ ಹೊಟ್ಟೆ ಕೆಡುತ್ತೆ. ಆ ಕಾರಣಕ್ಕೆ ತಿನ್ನುವ ಆಸೆ ಇದ್ದರೂ ನಾಲಿಗೆ ಬಯಸಿದ್ರೂ ಹೊಟ್ಟೆ ಕೇಳೋಲ್ಲ ಅನ್ನೋ ಕಾರಣಕ್ಕೆ ತಿನ್ನುವ ಆಸೆಗೆ ಕಡಿವಾಣ ಹಾಕಿಕೊಳ್ಳುತ್ತಾರೆ.

ಹೊಟ್ಟೆ ಕೆಟ್ಟಾಗ ಭೇದಿ ಮಾತ್ರವಲ್ಲ ವಾಂತಿ, ವಾಕರಿಕೆ, ಹೊಟ್ಟೆ ನೋವು, ಸೆಳೆತ ಈ ಎಲ್ಲವೂ ಉಂಟಾಗುತ್ತದೆ. ಅಲ್ಲದೇ ಒಮ್ಮೆ ಹೊಟ್ಟೆ ಕೆಟ್ಟರೆ ಸರಿಯಾಗಲು ಒಂದೆರಡು ದಿನವಾದ್ರೂ ಬೇಕು, ಅಲ್ಲಿಯವರೆಗೆ ಉಪ್ಪಿದ್ದಲ್ಲ ರುಚಿಯಿಲ್ಲದ ಆಹಾರ ಸೇವಿಸಬೇಕಾಗುತ್ತದೆ. ಆ ಕಾರಣಕ್ಕೆ ಬಾಯಿಗೆ ಬೀಗ ಹಾಕಿಕೊಂಡು ಇರುತ್ತಾರೆ.

ಹಾಗಾದರೆ ಯಾವುದೆಲ್ಲಾ ಆಹಾರ ಹೊಟ್ಟೆಯ ಆರೋಗ್ಯಕ್ಕೆ ಉತ್ತಮ, ಯಾವುದು ಹೊಟ್ಟೆ ಕೆಡಿಸುವ ಆಹಾರ ಎಂಬ ಪ್ರಶ್ನೆ ಅನಾದಿ ಕಾಲದಿಂದಲೂ ಜನರನ್ನು ಕಾಡುತ್ತಿದೆ. ಕೆಲವರು ಹೊಟ್ಟೆ ಕೆಟ್ಟಿದೆ ಎಂದಾಗ ಊಟ ಬಿಡುತ್ತಾರೆ. ಹಾಗಾದರೆ ಊಟ ಬಿಡೋದು ನಿಜಕ್ಕೂ ಹೊಟ್ಟೆಯ ಸಮಸ್ಯೆಗೆ ಪರಿಹಾರವೇ, ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹೊಟ್ಟೆ ಕೆಟ್ಟಾಗ ಉಪವಾಸ ಮಾಡಿದ್ರೆ ಪರಿಹಾರ ಸಿಗುತ್ತಾ?

‘ಹೊಟ್ಟೆ ಕೆಟ್ಟಿದೆ ಎಂಬ ಕಾರಣಕ್ಕೆ ಊಟ ಬಿಡುವುದರಿಂದ ಹಸಿವು ಹೆಚ್ಚಾಗಿ ಹೊಟ್ಟೆಯು ಹೆಚ್ಚು ಆಮ್ಲವನ್ನು ಉತ್ಪಾದಿಸಲು ಕಾರಣವಾಗಬಹುದು. ಇದರಿಂದ ಹೊಟ್ಟೆಯುಬ್ಬರ, ಬೆಲ್ಚಿಂಗ್‌, ಆಸಿಡಿಟಿ ಮತ್ತು ಆಸಿಡ್ ರಿಫ್ಲಕ್ಸ್‌ನಂತಹ ಸಮಸ್ಯೆಗಳು ಎದುರಾಗಬಹುದು. ಇದರಿಂದ ಹೊಟ್ಟೆಯ ಸಮಸ್ಯೆಗಳು ಇನ್ನಷ್ಟು ಉಲ್ಬಣವಾಗಬಹುದು ಎಂದು ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಕ್ಲಿನಿಕಲ್ ಡಯೆಟಿಷಿಯನ್ ವೇದಿಕಾ ಪ್ರೇಮಣಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಹೊಟ್ಟೆ ಕೆಟ್ಟು ಸಂಪೂರ್ಣ ಅಸ್ವಸ್ಥರಾಗಿದ್ದರೆ ಮಾತ್ರ ಉಪವಾಸ ಮಾಡಬಹುದು ಅಥವಾ ಊಟ ಬಿಡಬಹುದು. ಆದರೆ ಸಮಸ್ಯೆ ಸಾಮಾನ್ಯವಾಗಿದ್ದೂ ಊಟ ಬಿಟ್ಟರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

‘ರೋಗಲಕ್ಷಣಗಳು ಸೌಮ್ಯವಾಗಿದ್ದರೆ, ಆಗಾಗ ಏನಾದರೂ ತಿನ್ನಬಹುದು. ಸುಲಭವಾಗಿ ಜೀರ್ಣವಾಗುವ, ಮಸಾಲೆರಹಿತ ಹಾಗೂ ಕೊಬ್ಬಿನಾಂಶ ಇರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಆದರೆ ರೋಗಲಕ್ಷಣಗಳು ತೀವ್ರವಾಗಿದ್ದರೆ ಹೊಟ್ಟೆಗೆ ವಿಶ್ರಾಂತಿ ನೀಡಲು ಕೆಲ ಹೊತ್ತು ಖಾಲಿ ಹೊಟ್ಟೆಯಲ್ಲಿ ಇರಬಹುದು. ಆದರೆ ಪದೇ ಪದೇ ನೀರು ಕುಡಿಯವುದರ ಮೇಲೆ ಗಮನ ನೀಡಬೇಕು. ಹೊಟ್ಟೆಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೆ ಅಲ್ಪಾವಧಿಯ ಉಪವಾಸ ಮಾಡುವುದು ಮುಖ್ಯವಾಗುತ್ತದೆ.

ಊಟವು ಕೆಲವೊಮ್ಮೆ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ನೀಡುವ ಮೂಲಕ ಪರಿಹಾರವನ್ನು ನೀಡುತ್ತದೆ. ಆದಾಗ್ಯೂ, ನಮ್ಮ ಯಕೃತ್ತು ಮತ್ತು ಮೂತ್ರಪಿಂಡಗಳು ನೈಸರ್ಗಿಕವಾಗಿ ಉಪವಾಸದ ಅಗತ್ಯವಿಲ್ಲದೆ ದೇಹವನ್ನು ನಿರ್ವಿಷಗೊಳಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆದರೆ ಕೆಲವೊಮ್ಮೆ ಆಹಾರ ಸೇವನೆಯನ್ನು ಕಡಿಮೆ ಮಾಡುವುದು ಹೊಟ್ಟೆಯ ಅಸ್ವಸ್ಥತೆಯ ಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಒಳಪದರವು ಕಿರಿಕಿರಿಯುಂಟುಮಾಡಿದರೆ ಅಥವಾ ಉರಿಯುತ್ತಿದ್ದರೆ ಅದನ್ನು ಸರಿಪಡಿಸಲು ಅನುವು ಮಾಡಿಕೊಡುತ್ತದೆ ಎಂಬುದು ತಜ್ಞರ ಸಲಹೆ.

ಹೊಟ್ಟೆ ಕೆಟ್ಟಾಗ ಸೇವಿಸಬೇಕಾದ ಆಹಾರಗಳು 

‘ನೀವು ಉಪವಾಸ ಮಾಡಿದರೂ ಸಹ, ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯವಾಗುತ್ತದೆ. ನೀರು, ಗಿಡಮೂಲಿಕೆ ಚಹಾಗಳು ಅಥವಾ ಸೂಪ್‌ಗಳು ಇಂತಹ ದ್ರವಗಳನ್ನು ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದರಲ್ಲೂ ನೀವು ವಾಂತಿ ಅಥವಾ ಅತಿಸಾರದ ಸಮಸ್ಯೆ ಎದುರಿಸುತ್ತಿದ್ದರೆ ಹೆಚ್ಚು ಹೆಚ್ಚು ನೀರು ಕುಡಿಯಬೇಕು.

ಹೊಟ್ಟೆ ಕೆಟ್ಟಾಗ ಏನು ಮಾಡಬಹುದು?

ಅಲ್ಪಾವಧಿಯ ಉಪವಾಸ ಹಾಗೂ ಜಲಸಂಚಯನವು ಹೊಟ್ಟೆ ಸಮಸ್ಯೆಯನ್ನು ಎದುರಿಸಲು ಪ್ರಮುಖ ಕಾರಣವಾಗಿದೆ. ಒಮ್ಮೆ ಆರಂಭಿಕ ರೋಗಲಕ್ಷಣಗಳು ಕಡಿಮೆಯಾದಾಗ, ಬಾಳೆಹಣ್ಣು, ಅಕ್ಕಿ, ಸೇಬು ಮತ್ತು ಟೋಸ್ಟ್ ಅನ್ನು ಪ್ರತಿನಿಧಿಸುವ BRAT ಡಯೆಟ್ ಅನ್ನು ಫಾಲೋ ಮಾಡಬಹುದು. ನಂತರ ನಿಧಾನ ನೀವು ಸೇವಿಸುವ ಆಹಾರಕ್ರಮವನ್ನು ಅನುಸರಿಸಬಹುದು. ಕೊನೆಯದಾಗಿ ನಿಮ್ಮ ದೇಹವು ವಿವಿಧ ಆಹಾರಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಬಗ್ಗೆ ಗಮನ ಕೊಡಿ. ಆಹಾರವು ಅಸ್ವಸ್ಥತೆಯನ್ನು ಉಂಟುಮಾಡಿದರೆ, ನಿಮ್ಮ ಹೊಟ್ಟೆ ಸರಿ ಹೋಗುವವರೆಗೂ ಅದನ್ನು ತಿನ್ನಬೇಡಿ ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ.

‘ಹೊಟ್ಟೆ ಒಂದು ಹಂತಕ್ಕೆ ಬಂದಾಗ ಪೊಟ್ಯಾಸಿಯಮ್ ಮಟ್ಟಗಳಿಗೆ ಸಹಾಯ ಮಾಡುವ ಬಾಳೆಹಣ್ಣಿನಂತಹ ಆಹಾರಗಳನ್ನು ಸೇವಿಸಬಹುದು. ಎಳನೀರು ಕುಡಿಯುವುದರಿಂದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸೋಡಿಯಂ ಅಂಶಗಳು ದೇಹ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ‘ ಎಂದು ಅವರು ಸಲಹೆ ನೀಡುತ್ತಾರೆ.

Whats_app_banner