ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಪ್ರತಿದಿನ ಬೆಳಗೆದ್ದು ಬೀಟ್ರೂಟ್‌ ಜ್ಯೂಸ್‌ ಕುಡಿಯುವ ಅಭ್ಯಾಸ ಮಾಡಿ; ಇದರಿಂದಾಗುವ ಪ್ರಯೋಜನ ಕೇಳಿದ್ರೆ ಖಂಡಿತ ಅಚ್ಚರಿ ಪಡ್ತೀರಾ

ಚಳಿಗಾಲದಲ್ಲಿ ಪ್ರತಿದಿನ ಬೆಳಗೆದ್ದು ಬೀಟ್ರೂಟ್‌ ಜ್ಯೂಸ್‌ ಕುಡಿಯುವ ಅಭ್ಯಾಸ ಮಾಡಿ; ಇದರಿಂದಾಗುವ ಪ್ರಯೋಜನ ಕೇಳಿದ್ರೆ ಖಂಡಿತ ಅಚ್ಚರಿ ಪಡ್ತೀರಾ

ಚಳಿಗಾಲದಲ್ಲಿ ಬೆಳಗೆದ್ದು ಬಿಟ್ರೂಟ್‌ ಜ್ಯೂಸ್‌ ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಇದು ನಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ದೈಹಿಕ ಯೋಗಕ್ಷೇಮಕ್ಕೂ ಇದು ಅವಶ್ಯ. ಇದರಿಂದಾಗುವ ಇನ್ನಿತರ ಪ್ರಯೋಜನಗಳಿವು.

ಬಿಟ್ರೂಟ್‌ ಜ್ಯೂಸ್‌
ಬಿಟ್ರೂಟ್‌ ಜ್ಯೂಸ್‌

ಪ್ರತಿದಿನ ಬೆಳಗೆದ್ದು ಮೂಡ್‌ ಫ್ರೆಶ್‌ ಆಗಿಲಿ ಎನ್ನುವ ಕಾರಣಕ್ಕೆ ಚಹಾ, ಕಾಫಿ ಕುಡಿಯುವುದು ಸಾಮಾನ್ಯ. ಅದರಲ್ಲೂ ಚಳಿಗಾಲದಲ್ಲಂತೂ ದೇಹ ಬೆಚ್ಚಗಿರಲು ಚಹಾ, ಕಾಫಿ ಬೇಕೇ ಬೇಕು. ಆದರೆ ಇವುಗಳಲ್ಲಿರುವ ಕೆಫಿನ್‌ ಅಂಶದಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆ ಕಾರಣಕ್ಕೆ ಚಳಿಗಾಲದಲ್ಲಿ ಬಿಟ್ರೂಟ್‌ ಜ್ಯೂಸ್‌ ಕುಡಿಯುವುದು ಉತ್ತಮ ಆಯ್ಕೆ. ಬೀಟ್ರೂಟ್‌ ಚಳಿಗಾಲದ ಸೂಪರ್‌ಫುಡ್‌. ಇದರಲ್ಲಿ ಅವಶ್ಯಕ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲ ಕಳೆಯುವವರೆಗೂ ನಿಮಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ.

ಚಳಿಗಾಲದಲ್ಲಿ ಬಿಟ್ರೂಟ್‌ ಜ್ಯೂಸ್‌ ಕುಡಿಯುವುದರಿಂದಾಗುವ 5 ಅದ್ಭುತ ಪ್ರಯೋಜನಗಳಿವು

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ವಿಟಮಿನ್‌ ಸಿ ಸಮೃದ್ಧವಾಗಿದ್ದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬಿಟ್ರೂಟ್‌ನಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿರುತ್ತದೆ. ಸೋಂಕುಗಳಿಂದ ದೂರವಿರಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಬಿಳಿ ರಕ್ತ ಕಣಗಳು ಅತ್ಯಗತ್ಯ. ಅವುಗಳ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ವಿಟಮಿನ್‌ ಸಿ ಸಹಾಯ ಮಾಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ

ಮಣ್ಣಿನೊಳಗೆ ಬೆಳೆಯುವ ಗೆಡ್ಡೆ ರೂಪದ ಈ ತರಕಾರಿಯಲ್ಲಿನ ನೈಟ್ರೇಟ್‌ ಅಂಶವು ದೇಹವು ನೈಟ್ರಿಕ್‌ ಆಕ್ಸೈಡ್‌ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಮೆದುಳಿಗೆ ರಕ್ತ ಹಾಗೂ ಆಮ್ಲಜನಕವನ್ನು ಹರಿವನ್ನು ಹೆಚ್ಚಿಸುತ್ತದೆ. ಮೆದುಳಿನಲ್ಲಿ ರಕ್ತದ ಹರಿವಿನ ಮಟ್ಟ ಹೆಚ್ಚುವುದರಿಂದ ಯೋಚನೆ ಸಾಮರ್ಥ್ಯ ವೃದ್ಧಿಯಾಗಬಹುದು. ಇದು ದಿನವಿಡೀ ಗಮನಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುತ್ತದೆ

ಬೀಟ್ರೂಟ್‌ ರಸವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ನಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅವಶ್ಯವಾಗಿದೆ. ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಫ್ರಿ ರಾಡಿಕಲ್‌ಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಫ್ರಿ ರಾಡಿಕಲ್‌ಗಳು ಜೀವಕೋಶದ ಹಾನಿಗೆ ಕಾರಣವಾಗುತ್ತವೆ. ಇದು ದೀರ್ಘಕಾಲದ ಕಾಯಿಲೆಗಳ ನಿವಾರಣೆಗೂ ಸಹಕಾರ.

ಹೃದಯದ ಆರೋಗ್ಯಕ್ಕೂ ಉತ್ತಮ

ಬೆಳಗೆದ್ದು ಬಿಟ್ರೂಟ್‌ ಜ್ಯೂಸ್‌ ಕುಡಿಯುವುದರಿಂದ ಹೃದಯ ಆರೋಗ್ಯಕ್ಕೂ ಹಲವು ರೀತಿ ಪ್ರಯೋಜನಗಳಿವೆ. ಬಿಟ್ರೂಟ್‌ನಲ್ಲಿನ ನೈಟ್ರೇಟ್‌ ಅಂಶವು ಹೃದಯ ರಕ್ತನಾಳಗಳ ಹಿಗ್ಗುವಿಕೆ ಕಾರಣವಾಗುತ್ತದೆ. ಆ ಮೂಲಕ ರಕ್ತದ ಹರಿವನ್ನು ಸುಧಾರಿಸುತ್ತದೆ. ರಕ್ತದೊತ್ತಡ ನಿವಾರಣೆಗೂ ಇದು ಸಹಕಾರಿ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಬಿಟ್ರೂಟ್‌ನಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದು ಮಲವಿಸರ್ಜನೆಗೆ ಉತ್ತಮ. ಅಲ್ಲದೆ ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ. ಬೆಳಗೆದ್ದು ಒಂದು ಗ್ಲಾಸ್‌ ಬಿಟ್ರೂಟ್‌ ಜ್ಯೂಸ್‌ ಕುಡಿಯುವುದರಿಂದ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ.

ಪ್ರತಿದಿನ ಬಿಟ್ರೂಟ್‌ ಜ್ಯೂಸ್‌ ಕುಡಿಯಲು ಇಲ್ಲಿದೆ ಒಂದಿಷ್ಟು ಟಿಪ್ಸ್‌

* ಆರೆಂಜ್‌ ಜ್ಯೂಸ್‌ ಕುಡಿಯುವ ಬದಲು ಬಿಟ್ರೂಟ್‌ ಜ್ಯೂಸ್‌ ಆರಿಸಿಕೊಳ್ಳಿ.

* ಇತರ ಹಣ್ಣು, ತರಕಾರಿಗಳೊಂದಿಗೆ ಮಿಶ್ರಣ ಮಾಡಿ ಸ್ಮೂಥಿ ತಯಾರಿಸಿ ಕುಡಿಯಿರಿ.

* ಇದನ್ನು ಪ್ರಿ ವರ್ಕೌಟ್‌ ಡ್ರಿಂಕ್‌ ಆಗಿಯೂ ಸೇವಿಸಬಹುದು.

* ಇತರ ಹಣ್ಣು ತರಕಾರಿಗಳೊಂದಿಗೆ ಸೇರಿಸಿ ರುಬ್ಬಿ ಸ್ಮೂಥಿ ತಯಾರಿಸಿ ಕುಡಿಯುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶ ಲಭ್ಯವಾಗುತ್ತದೆ.