ನಿರೂಪಕಿ ಅಪರ್ಣಾ ಅವರ ಸಾವಿಗೆ ಕಾರಣವಾದ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ? ಪರಿಹಾರಗಳನ್ನು ತಿಳಿಯಿರಿ
Lung Cancer: ಶ್ವಾಸಕೋಶದ ಕ್ಯಾನ್ಸರ್‌ನಿಂದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ಜುಲೈ 11ರ ಗುರುವಾರ ನಿಧನರಾಗಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ, ಇದಕ್ಕೆ ಏನೆಲ್ಲಾ ಪರಿಹಾರಗಳಿವೆ ಅನ್ನೋದನ್ನು ತಿಳಿಯಿರಿ.
ಕನ್ನಡದ ಪ್ರಖ್ಯಾತ ನಟಿ, ನಿರೂಪಕಿ ಅಪರ್ಣಾ ( Anchor Aparna Vastarey) ಅವರು ನಿಧನರಾಗಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಅವರು ನೆರೆವೇರಿಸಿಕೊಡುತ್ತಿದ್ದ ಅಚ್ಚಕನ್ನಡದ ನಿರೂಪಣೆ ಮತ್ತು ಅಭಿನಯ ಯಾವತ್ತಿಗೂ ಚಿರಸ್ಮರಣೀಯವಾಗಿದೆ. ಇವರ ನಿರೂಪಣಾ ಶೈಲಿ ವಿಶಿಷ್ಟವಾಗಿತ್ತು. ನೆಲದ ಸೊಗಡಿನ ಪ್ರತಿಭಾವಂತರಾಗಿದ್ದ ಅಪರ್ಣಾ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವುದು ಹೇಗೆ (Prevention of Lung Cancer), ಈ ರೋಗಕ್ಕೆ ಪರಿಹಾರ ಇದೆಯಾ? ಒಂದು ವೇಳೆ ಇದ್ದರೆ ಏನೆಲ್ಲಾ ಪರಿಹಾರಗಳಿವೆ. ರೋಗವನ್ನು ಮೊದಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ವಾಸಿಯಾಗುತ್ತಾ? ಶ್ವಾಸಕೋಶದ ಕ್ಯಾನ್ಸರ್ ಬಂದವರು ಗುಣಮುಖರಾಗುವ ಸಾಧ್ಯತೆ ಎಷ್ಟು ಇರುತ್ತದೆ. ಈ ಬಗ್ಗೆ ತಜ್ಞ ವೈದ್ಯರು ಏನು ಹೇಳುತ್ತಾರೆ ಅನ್ನೋದರ ವಿವರ ಇಲ್ಲಿದೆ.
ಶ್ವಾಸಕೋಶದ ಕ್ಯಾನ್ಸರ್ ಅನ್ನು ತಡೆಗಟ್ಟಲು ಯಾವುದೇ ನಿರ್ದಿಷ್ಟ ಮಾರ್ಗಗಳು ಇಲ್ಲ. ಆದರೆ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡುವ ಹಲವು ರೀತಿಯ ಕ್ರಮಗಳನ್ನುಕೈಗೊಳ್ಳಬಹುದು. ಕೆಲವು ಹಂತಗಳನ್ನು ಇಲ್ಲಿ ನೀಡಲಾಗಿದೆ.
ಧೂಮಪಾನ ನಿಲ್ಲಿಸುವುದು: ಧೂಮಪಾನಿಗಳಿಗೆ ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿರುತ್ತದೆ. ನೀವು ಧೂಮಪಾನ ಮಾಡದಿದ್ದರೆ ಉತ್ತಮ ಒಳ್ಳೆಯದು. ಒಂದು ವೇಳೆ ಧೂಮಪಾನಕ್ಕೆ ಅಂಟಿಕೊಂಡಿದ್ದರೆ ತಡಮಾಡದೆ ಇಂದೇ ಈ ಅಭ್ಯಾಸವನ್ನು ಬಿಟ್ಟು ಬಿಡಿ. ಜೀವನದ ಯಾವುದೇ ಹಂತದಲ್ಲಿ ಧೂಮಪಾನವನ್ನು ತ್ಯಜಿಸುವುದರಿಂದ ಕ್ಯಾನ್ಸರ್ ಅಭಿವೃದ್ಧಿಯಾಗುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ತಜ್ಞ ವೈದ್ಯರು ಹೇಳುತ್ತಾರೆ. ಧೂಮಪಾನವನ್ನು ತ್ಯಜಿಸಲು ಹಲವಾರು ಚಿಕಿತ್ಸಾಲಯಗಳು ಲಭ್ಯ ಇವೆ. ಇವುಗಳನ್ನು ಅನುಸರಿಬಹುದು. ಇಲ್ಲವೇ ನಿಕೋಟಿನ್ ಪ್ಯಾಚ್‌ಗಳು ಹಾಗೂ ಇತರೆ ಔಷಧಿಗಳನ್ನು ತೆಗೆದುಕೊಳ್ಳಬಹುದು, ಸಮಾನ ಮನಸ್ಕರೊಂದಿಗೆ ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಬಹುದು.
ಬೇರೊಬ್ಬರ ಧೂಮಪಾನದ ಹೊಗೆಯನ್ನು ತಪ್ಪಿಸಿ
ನೀವು ಧೂಮಪಾನಿಯಾಗದಿದ್ದರೂ ಬೇರೊಬ್ಬರ ಧೂಮಪಾನದಿಂದ ಬರುವ ಹೊಗೆಯು ನಿಮಗೆ ಮಾರಕವಾಗಬಹುದು. ಆಗಾಗ ಧೂಮಪಾನ ಮಾಡುವ ಕುಟುಂಬ ಸದಸ್ಯರೊಂದಿಗೆ ನೀವು ವಾಸಿಸುತ್ತಿದ್ದರೆ, ಅವರಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಹೊರಗಡೆ ಹೋಗಿ ಧೂಮಪಾನ ಮಾಡುವಂತೆ ತಿಳಿಸಿ. ಇಲ್ಲವೇ ಅವರು ಶಾಶ್ವತವಾಗಿ ಧೂಮಪಾನ್ ಮಾಡುವುದನ್ನ ತ್ಯಜಿಸುವಂತೆ ಮಾಡಿ. ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಳ್ಳುವುದು ಕೂಡ ಶ್ವಾಸಕೋಶದ ಕ್ಯಾನ್ಸರ್ ಅಭಿವೃದ್ಧಿಪಡಿಸುವ ವ್ಯಕ್ತಿಯ ಅಪಾಯವನ್ನು ಹೆಚ್ಚಿಸುತ್ತದೆ. ಬಾರ್, ಪಬ್‌ಗಳು ಹಾಗೂ ಧೂಮಪಾನ ಮಾಡುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ. ಯಾಕೆಂದರೆ ಸೆಕೆಂಡ್ ಹ್ಯಾಂಡ್ ಹೊಗೆಯು ಕೂಡ ಧೂಮಪಾನ ಮಾಡಿದಷ್ಟೇ ಅಪಾಯಕಾರಿ ಅಂತ ತಜ್ಞರು ಹೇಳುತ್ತಾರೆ.
ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಪರಿಹಾರವೇನು
ನಾವು ತಿನ್ನುವ ಆಹಾರ, ಕುಡಿಯುವ ನೀರು ಹಾಗೂ ಜೀವನ ಶೈಲಿಯೇ ರೋಗಗಳಿಗೆ ಕಾರಣವಾಗಿದೆ. ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಹಣ್ಣು ಮತ್ತು ತರಕಾರಿಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಜೀವಸತ್ವಗಳನ್ನು ಪೂರಕ ಪೂರದಲ್ಲಿ ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರನ್ನು ಒಮ್ಮೆ ಸಂಪರ್ಕಿಸಿ. ಯಾಕೆಂದರೆ ಕೆಲವು ಪೂರಕಗಳು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಗಳು ಇರುತ್ತವೆ.
ಕೆಲಸದ ಸ್ಥಳದಲ್ಲಿ ಕೆಲವು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ದೀರ್ಘಾವಧಿಯಲ್ಲಿ ನಿಮಗೆ ಪ್ರಯೋಜನವಾಗುತ್ತದೆ.
ಪ್ರತಿದಿನ ನಿಯಮಿತವಾಗಿ ಅಥವಾ ವಾರದಲ್ಲಿ ನಿಕಷ್ಠ ಮೂರು ದಿನ ವ್ಯಾಯಾಮ ಮಾಡುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಬಹುದು. ದಿನಕ್ಕೆ ಕನಿಷ್ಠ 30 ನಿಮಿಷ ಕಾಲ ನಡೆಯುವುದು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವಾಗುತ್ತೆ. ಉತ್ತಮ ಮನಸ್ಥಿತಿ, ತೂಕ ನಷ್ಟಕ್ಕೂ ಇದು ಸಹಕಾರಿಯಾಗಿರುತ್ತದೆ. ಅಲ್ಲದೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)