UTS Mobile Ticket: ರೈಲು ಟಿಕೆಟ್‌ ಬುಕ್ಕಿಂಗ್‌ಗೆ ಯುಟಿಎಸ್‌ ಬೆಸ್ಟ್‌, ಟಿಕೆಟ್‌ ಚೆಕ್‌ ಮಾಡೋರಿಗೆ ಯುಟಿಎಸ್‌ ಟಿಕೆಟ್‌ ಹೀಗೆ ತೋರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Uts Mobile Ticket: ರೈಲು ಟಿಕೆಟ್‌ ಬುಕ್ಕಿಂಗ್‌ಗೆ ಯುಟಿಎಸ್‌ ಬೆಸ್ಟ್‌, ಟಿಕೆಟ್‌ ಚೆಕ್‌ ಮಾಡೋರಿಗೆ ಯುಟಿಎಸ್‌ ಟಿಕೆಟ್‌ ಹೀಗೆ ತೋರಿಸಿ

UTS Mobile Ticket: ರೈಲು ಟಿಕೆಟ್‌ ಬುಕ್ಕಿಂಗ್‌ಗೆ ಯುಟಿಎಸ್‌ ಬೆಸ್ಟ್‌, ಟಿಕೆಟ್‌ ಚೆಕ್‌ ಮಾಡೋರಿಗೆ ಯುಟಿಎಸ್‌ ಟಿಕೆಟ್‌ ಹೀಗೆ ತೋರಿಸಿ

UTS Mobile Ticket: ಯಟಿಎಸ್‌ ಮೂಲಕ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡುವುದು ಹೇಗೆ? ರೈಲಿನ ಟಿಕೆಟ್‌ ಕಲೆಕ್ಟರ್‌ (ಟಿಟಿ) ಬಂದಾಗ ಮೊಬೈಲ್‌ನಲ್ಲಿ ಹೇಗೆ ಟಿಕೆಟ್‌ ತೋರಿಸುವುದು ಇತ್ಯಾದಿ ವಿವರ ಪಡೆಯೋಣ ಬನ್ನಿ

UTS Mobile Ticket: ರೈಲು ಟಿಕೆಟ್‌ ಬುಕ್ಕಿಂಗ್‌ಗೆ ಯುಟಿಎಸ್‌ ಬೆಸ್ಟ್‌, ಇದರ ಪ್ರಯೋಜನಗಳೇನು?
UTS Mobile Ticket: ರೈಲು ಟಿಕೆಟ್‌ ಬುಕ್ಕಿಂಗ್‌ಗೆ ಯುಟಿಎಸ್‌ ಬೆಸ್ಟ್‌, ಇದರ ಪ್ರಯೋಜನಗಳೇನು?

UTS Mobile Ticket: ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡಲು ಹಲವು ಆಯ್ಕೆಗಳು ಇವೆ. ಸಾಕಷ್ಟು ರೈಲು ಪ್ರಯಾಣಿಕರು ಯುಟಿಎಸ್‌ ಮೊಬೈಲ್‌ ಆ್ಯಪ್‌ ಟಿಕೆಟ್‌ ಬುಕ್ಕಿಂಗ್‌ ಆಯ್ಕೆ ಮೂಲಕ ಟಿಕೆಟ್‌ ಬುಕ್‌ ಮಾಡುತ್ತಾರೆ. ಲೋಕಲ್‌ ಟ್ರೈನ್‌ನಲ್ಲಿ ಪ್ರಯಾಣಿಸುವವರಿಗೆ ಇದು ಅತ್ಯುತ್ತಮ ಆಯ್ಕೆ. ಯುಟಿಎಸ್‌ ಅಂದರೆ Unreserved Ticketing System. ಯಟಿಎಸ್‌ ಮೂಲಕ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡುವುದು ಹೇಗೆ? ರೈಲಿನ ಟಿಕೆಟ್‌ ಕಲೆಕ್ಟರ್‌ (ಟಿಟಿ) ಬಂದಾಗ ಮೊಬೈಲ್‌ನಲ್ಲಿ ಹೇಗೆ ಟಿಕೆಟ್‌ ತೋರಿಸುವುದು ಇತ್ಯಾದಿ ವಿವರ ಪಡೆಯೋಣ ಬನ್ನಿ.

ಯುಟಿಎಸ್‌ ಟಿಕೆಟ್‌ ಬಳಕೆಯಿಂದ ಏನೆಲ್ಲ ಪ್ರಯೋಜನಗಳಿವೆ?

ಇದು ಪೇಪರ್‌ಲೆಸ್‌ ಟಿಕೆಟ್‌. ಈ ಆ್ಯಪ್‌ನಲ್ಲಿ ದೊರಕುತ್ತದೆ. ಇದರಿಂದ ಪೇಪರ್‌ ಬಳಕೆ ಕಡಿಮೆಯಾಗುತ್ತದೆ.

ನಗದುರಹಿತ ವಹಿವಾಟು: ಯುಟಿಎಸ್‌ ಆ್ಯಪ್‌ ಮೂಲಕ ನಗದುರಹಿತ ವಹಿವಾಟು ನಡೆಸಲಾಗುತ್ತದೆ. ರೈಲ್‌ ವ್ಯಾಲೆಟ್‌ ಸೇರಿದಂತೆ ಹಲವು ವಿಧಾನಗಳ ಮೂಲಕ ಹಣ ಪಾವತಿಸಿ ಟಿಕೆಟ್‌ ಪಡೆಯಬಹುದು.

ಕ್ಯೂನಲ್ಲಿ ಕಾಯಬೇಕಿಲ್ಲ: ರೈಲು ಸ್ಟೇಷನ್‌ಗೆ ಹೋಗಿ ಉದ್ದವಾದ ಕ್ಯೂನಲ್ಲಿ ಕಾಯುವ ಅಗತ್ಯವಿಲ್ಲ. ಕೈಯಲ್ಲಿರುವ ಮೊಬೈಲ್‌ ಮೂಲಕ ಯುಟಿಎಸ್‌ ಆ್ಯಪ್‌ನಲ್ಲಿ ರೈಲು ಟಿಕೆಟ್‌ ಬುಕ್‌ಮಾಡಬಹುದು.

ಇದರ ಇನ್ನೊಂದು ಲಾಭ ಫ್ಲೆಕ್ಸಿಬಲ್‌ ಬುಕ್ಕಿಂಗ್‌. ಸಬ್‌ ಅರ್ಬನ್‌ ಹೊರತುಪಡಿಸಿದ ರೈಲು ಟಿಕೆಟ್‌ಗಳನ್ನೂ ಇದರಲ್ಲಿ ಸುಲಭವಾಗಿ ಬುಕ್‌ ಮಾಡಬಹುದು.

ರೈಲ್‌ ವ್ಯಾಲೆಟ್‌ ಬಳಕೆದಾರರಿಗೆ ಶೇಕಡ 3ರಷ್ಟು ಬೋನಸ್‌ ಕೊಡುಗೆ ನೀಡುತ್ತದೆ. ಈ ಮೂಲಕ ವ್ಯಾಲೆಟ್‌ನಲ್ಲಿ ತುಸು ಮೊತ್ತ ಗಳಿಸಬಹುದು.

ಯುಟಿಎಸ್‌ ಆ್ಯಪ್‌ ವೈವಿಧ್ಯಮಯ ಬಳಕೆ

ಪ್ಲಾಟ್‌ಫಾರ್ಮ್‌ ಟಿಕೆಟ್‌ ಬುಕ್ಕಿಂಗ್‌ ಹೇಗೆ?

ಯುಟಿಎಸ್‌ ಆ್ಯಪ್‌ಗೆ ಲಾಗಿನ್‌ ಆಗಿ.

ಹೋಂ ಪೇಜ್‌ನಲ್ಲಿ ಪ್ಲಾಟ್‌ಫಾರ್ಮ್‌ ಟಿಕೆಟ್‌ ಆಯ್ಕೆ ಮಾಡಿ ಖರೀದಿಸಿ.

ಪೇಪರ್‌ಲೆಸ್‌ ಟಿಕೆಟ್‌ ಬುಕ್ಕಿಂಗ್‌ ಹೇಗೆ?

ಬುಕ್‌ ಆಂಡ್‌ ಟ್ರಾವೆಲ್‌ ವಿಭಾಗ ಕ್ಲಿಕ್‌ ಮಾಡಿ

ಸ್ಟೇಷನ್‌ ಹೆಸರನ್ನು ಆಯ್ಕೆ ಮಾಡಿ.

ಎಷ್ಟು ಟಿಕೆಟ್‌ ಎಂದು ಆಯ್ಕೆ ಮಾಡಿ.

ಪಾವತಿ ವಿಧಾನ ಆಯ್ಕೆ ಮಾಡಿ.

ಟಿಕೆಟ್‌ ಬುಕ್‌ ಆಯ್ಕೆಯನ್ನು ಕ್ಲಿಕ್‌ಮಾಡಿ. ಪಾವತಿ ಪೂರ್ಣಗೊಳಿಸಿ.

ಕ್ಯೂಆರ್‌ ಕೋಡ್‌ ಬಳಕೆ (ಜರ್ನಿ ಟಿಕೆಟ್‌)

ಯುಟಿಎಸ್‌ ಆ್ಯಪ್‌ಗೆ ಲಾಗಿನ್‌ ಆಗಿ. ಅಲ್ಲಿ ಕ್ಯೂಆರ್‌ಬುಕ್ಕಿಂಗ್‌ ಆಯ್ಕೆ ಮಾಡಿ. ಇದು ಬುಕ್‌ ಟಿಕೆಟ್‌ ಆಯ್ಕೆಯ ಕೆಳಗೆ ಇದೆ.

ಕ್ಯೂಆರ್‌ ಆಧಾರದಲ್ಲಿ ಜರ್ನಿ ಆಯ್ಕೆ ಮಾಡಿ.

ತಲುಪಬೇಕಾದ ಸ್ಥಳ ಅಪ್ಡೇಟ್‌ ಮಾಡಿ.

ಪೇಪರ್‌ಲೆಸ್‌ ಟಿಕೆಟ್‌ ಆಯ್ಕೆ ಮಾಡಿ.

ಯುಟಿಎಸ್‌ ಮಾಸಿಕ ರೈಲು ಪಾಸ್‌ ಪಡೆಯುವುದು ಹೇಗೆ?

ಯುಟಿಎಸ್‌ ಅಪ್ಲಿಕೇಷನ್‌ ಲಾಗಿನ್‌ ಆಗಿ ಗಮನಿಸಿದರೆ ಟ್ಯಾಬ್‌ನಲ್ಲಿ ಸೀಸನ್‌ ಟಿಕೆಟ್‌ ಆಯ್ಕೆ ದೊರಕುತ್ತದೆ. ಅದನ್ನು ಕ್ಲಿಕ್‌ ಮಾಡಿ ಮಾಸಿಕ ಪಾಸ್‌ ಪಡೆಯಬಹುದು. ಯಾವ ಸ್ಟೇಷನ್‌ನಿಂದ ಯಾವ ಸ್ಟೇಷನ್‌ಗೆ ಎಂಬ ಮಾಹಿತಿ ಇಲ್ಲಿ ನಮೂದಿಸಬೇಕು.

ಯುಟಿಎಸ್‌ ಆ್ಯಪ್‌ಗೆ ನೋಂದಣಿ ಹೇಗೆ?

ನಿಮ್ಮ ಹೆಸರು, ಮೊಬೈಲ್‌ ಸಂಖ್ಯೆ, ಪಾಸ್‌ವರ್ಡ್‌, ಲಿಂಗ, ಜನ್ಮ ದಿನಾಂಕ ನಮೂದಿಸಿ ಲಾಗಿನ್‌ ಆಗಿ. ನಿಮಗೆ ಎಸ್‌ಎಂಎಸ್‌ ಮೂಲಕ ಲಾಗಿನ್‌ ಐಡಿ ಮತ್ತು ಪಾಸ್ವರ್ಡ್‌ ದೊರಕುತ್ತದೆ.

ಟಿಕೆಟ್‌ ಕಲೆಕ್ಟರ್‌ಗೆ ಯುಟಿಎಸ್‌ ಟಿಕೆಟ್‌ ತೋರಿಸುವುದು ಹೇಗೆ?

ಈ ಅಪ್ಲಿಕೇಷನ್‌ನಲ್ಲಿ ಶೋ ಟಿಕೆಟ್‌ ಎಂಬ ಆಯ್ಕೆ ಇದೆ. ಅದರಲ್ಲಿ ಬುಕ್ಕಿಂಗ್‌ ಮಾಹಿತಿ ಇರುತ್ತದೆ. ಟಿಟಿಇ ಅಥವಾ ಟಿಸಿ ಟಿಕೆಟ್‌ ಅನ್ನು ಸ್ಕ್ಯಾನ್‌ ಮಾಡಿ ಪರಿಶೀಲಿಸುತ್ತಾರೆ.

Whats_app_banner