Ghee Purity: ನೀವು ಉಪಯೋಗಿಸುವ ತುಪ್ಪ ಅಸಲಿಯೋ, ನಕಲಿಯೋ: ಶುದ್ಧತೆಯನ್ನು ಪರಿಶೀಲಿಸುವುದು ತುಂಬಾನೇ ಸಿಂಪಲ್, ಇಲ್ಲಿದೆ ಸರಳ ಪರೀಕ್ಷೆ-kitchen tips ghee purity how to check ghee purity at home ghee adulteration tests prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Ghee Purity: ನೀವು ಉಪಯೋಗಿಸುವ ತುಪ್ಪ ಅಸಲಿಯೋ, ನಕಲಿಯೋ: ಶುದ್ಧತೆಯನ್ನು ಪರಿಶೀಲಿಸುವುದು ತುಂಬಾನೇ ಸಿಂಪಲ್, ಇಲ್ಲಿದೆ ಸರಳ ಪರೀಕ್ಷೆ

Ghee Purity: ನೀವು ಉಪಯೋಗಿಸುವ ತುಪ್ಪ ಅಸಲಿಯೋ, ನಕಲಿಯೋ: ಶುದ್ಧತೆಯನ್ನು ಪರಿಶೀಲಿಸುವುದು ತುಂಬಾನೇ ಸಿಂಪಲ್, ಇಲ್ಲಿದೆ ಸರಳ ಪರೀಕ್ಷೆ

ಮಾರುಕಟ್ಟೆಯಲ್ಲಿ ತರಹೇವಾರಿ ತುಪ್ಪ ಲಭ್ಯವಿದೆ. ಆದರೆ, ಇವುಗಳು ಅಸಲಿಯೋ ಅಥವಾ ನಕಲಿಯೋ ಎಂಬುದು ಗೊತ್ತಾಗುತ್ತಿಲ್ಲ. ಆರೋಗ್ಯಕ್ಕಾಗಿ ತುಪ್ಪದ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಈ ಸರಳ ಪರೀಕ್ಷೆಗಳನ್ನು ಮಾಡಿ ಮನೆಯಲ್ಲೇ ತುಪ್ಪದ ಗುಣಮಟ್ಟವನ್ನು ತಿಳಿದುಕೊಳ್ಳಬಹುದು.

ಮನೆಯಲ್ಲಿಯೇ ತುಪ್ಪದ ಶುದ್ಧತೆಯನ್ನು ಹೀಗೆ ಪರಿಶೀಲಿಸಿ.
ಮನೆಯಲ್ಲಿಯೇ ತುಪ್ಪದ ಶುದ್ಧತೆಯನ್ನು ಹೀಗೆ ಪರಿಶೀಲಿಸಿ.

ಸಿಹಿ ಖಾದ್ಯ ತಯಾರಿಸುವುದಕ್ಕೆ ತುಪ್ಪ ಬೇಕೇ ಬೇಕು. ಎಲ್ಲಾ ಸಿಹಿ ಖಾದ್ಯಗಳಿಗೆ ಅಗತ್ಯವಿಲ್ಲದಿದ್ದರೂ ಕೇಸರಿಬಾತ್, ಪಾಯಸ, ಹಲ್ವಾ ಇತ್ಯಾದಿ ಸಿಹಿ ಖಾದ್ಯಗಳ ತಯಾರಿಕೆ ವೇಳೆ ತುಪ್ಪ ಇಲ್ಲದಿದ್ದರೆ ಅದು ಅಪೂರ್ಣ. ದೇವರ ನೈವೇದ್ಯಕ್ಕೆ, ಹೋಮ, ಸತ್ಯನಾರಾಯಣ ಪೂಜೆಯ ಪ್ರಸಾದ ಸೇರಿದಂತೆ ದೇವರ ಕಾರ್ಯಕ್ಕೂ ತುಪ್ಪ ಬೇಕೇ ಬೇಕು. ಮನೆಯಲ್ಲಿ ಮಾಡುವ ತುಪ್ಪ ಶುದ್ಧ ತುಪ್ಪವಾಗಿದ್ದು, ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡುವಾಗ ಮನೆ ಪೂರ್ತಿ ತುಪ್ಪದ ಘಮ ಹಬ್ಬುತ್ತದೆ. ಶುದ್ಧ ತುಪ್ಪವನ್ನು ಹಸುವಿನ ಹಾಲಿನಿಂದ ತಯಾರಿಸಲಾಗುತ್ತದೆ. ಇದು ಕಲ್ಮಶಗಳಿಂದ ಮುಕ್ತವಾಗಿರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ತೆಗೆದುಕೊಳ್ಳುವ ತುಪ್ಪ ಅಸಲಿಯೋ ನಕಲಿಯೋ ಎಂಬುದು ತಿಳಿಯದಂತಾಗಿದೆ. ಯಾಕೆಂದರೆ ಮಾರುಕಟ್ಟೆಯಲ್ಲಿ ಕಲಬೆರಕೆ ಉತ್ಪನ್ನಗಳ ಹಾವಳಿ ಹೆಚ್ಚಿದೆ. ಹೀಗಾಗಿ ತುಪ್ಪದ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹೀಗಾಗಿ ತುಪ್ಪದ ಶುದ್ಧತೆಯನ್ನು ಪರಿಶೀಲಿಸಲು ಪ್ರಯತ್ನಿಸಬಹುದಾದ ಐದು ಸರಳ ಪರೀಕ್ಷೆಗಳು ಇಲ್ಲಿವೆ:

ಕರಗುವ ಪ್ರಕ್ರಿಯೆ ಗಮನಿಸುವುದು: ತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು ಸುಲಭವಾದ ಮಾರ್ಗವೆಂದರೆ ಅದರ ಕರಗುವ ಪ್ರಕ್ರಿಯೆಯನ್ನು ಗಮನಿಸುವುದು. ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ಚಮಚ ತುಪ್ಪವನ್ನು ಹಾಕಿ ಒಲೆಯ ಮೇಲೆ ಅಥವಾ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ. ಶುದ್ಧ ತುಪ್ಪವು ಸಂಪೂರ್ಣವಾಗಿ ಕರಗುತ್ತದೆ. ಯಾವುದೇ ಕಲ್ಮಷಗಳನ್ನು ಬಿಟ್ಟುಕೊಡುವುದಿಲ್ಲ. ಆದರೆ, ತುಪ್ಪ ಕಲಬೆರಕೆಯಾಗಿದ್ದರೆ, ತುಪ್ಪದ ಜೊತೆ ಬೇರಾವುದೋ ವಸ್ತು ಬೇರ್ಪಡೆಯಾಗುವುದನ್ನು ಗಮನಿಸಬಹುದು.

ಅಯೋಡಿನ್ ಪರೀಕ್ಷೆ: ಈ ಪರೀಕ್ಷೆಯು ತುಪ್ಪದಲ್ಲಿ ಪಿಷ್ಟದ ಇರುವಿಕೆಯನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಸ್ವಲ್ಪ ಪ್ರಮಾಣದ ತುಪ್ಪವನ್ನು ಅಯೋಡಿನ್ ದ್ರಾವಣದೊಂದಿಗೆ ಮಿಶ್ರಣ ಮಾಡಬೇಕು. ಮಿಶ್ರಣವು ನೀಲಿ ಬಣ್ಣಕ್ಕೆ ತಿರುಗಿದರೆ, ಇದು ಪಿಷ್ಟದ ಇರುವಿಕೆಯನ್ನು ಸೂಚಿಸುತ್ತದೆ. ಅಂದರೆ ತುಪ್ಪವು ಶುದ್ಧವಾಗಿರುವುದಿಲ್ಲ.

ನೀರಿನ ಪರೀಕ್ಷೆ: ಒಂದು ಚಮಚ ತುಪ್ಪವನ್ನು ತೆಗೆದುಕೊಂಡು ಗಾಜಿನ ಜಾರ್ ನಲ್ಲಿ ಕರಗಿಸಬೇಕು. ಕರಗಿದ ತುಪ್ಪಕ್ಕೆ ಸಮಪ್ರಮಾಣದ ನೀರು ಸೇರಿಸಿ, ಮಿಶ್ರಣ ಮಾಡಬೇಕು. ಕೆಲವು ನಿಮಿಷಗಳ ನಂತರ ಗಮನಿಸಬೇಕು. ಈ ವೇಳೆ ಶುದ್ಧ ತುಪ್ಪ ಆಗಿದ್ದರೆ ಅದು ನೀರಿನಲ್ಲಿ ಬೆರೆಯುವುದ್ದಿಲ್ಲ, ಪ್ರತ್ಯೇಕವಾಗಿ ನೆಲೆಗೊಂಡಿರುತ್ತದೆ.

ರೆಫ್ರಿಜರೇಟರ್ ಪರೀಕ್ಷೆ: 30 ನಿಮಿಷಗಳ ಕಾಲ ರೆಫ್ರಿಜರೇಟರ್ನಲ್ಲಿ ಸ್ವಲ್ಪ ಪ್ರಮಾಣದ ತುಪ್ಪವನ್ನು ಇರಿಸಬೇಕು. ಶುದ್ಧ ತುಪ್ಪವಾಗಿದ್ದರೆ, ಸಮವಾಗಿ ಗಟ್ಟಿಯಾಗುತ್ತದೆ ಮತ್ತು ಏಕರೂಪದ ವಿನ್ಯಾಸವನ್ನು ಹೊಂದುತ್ತದೆ. ತುಪ್ಪವು ಕಲಬೆರಕೆಯಾಗಿದ್ದರೆ, ಅದು ಪದರಗಳನ್ನು ರಚಿಸಬಹುದು. ಅವುಗಳಲ್ಲಿ ಯಾವುದೇ ತೈಲ ಅಥವಾ ಕೊಬ್ಬು ಮಿಶ್ರಣವಾಗಿರುವ ಸಾಧ್ಯತೆಯಿರುತ್ತದೆ.

ಪರಿಮಳ ಪರೀಕ್ಷೆ: ತುಪ್ಪವು ಅದರ ವಿಶಿಷ್ಟವಾದ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಪರಿಮಳ ಪರೀಕ್ಷೆಯನ್ನು ಮಾಡಲು, ಬಾಣಲೆಯಲ್ಲಿ ಸ್ವಲ್ಪ ಪ್ರಮಾಣದ ತುಪ್ಪವನ್ನು ಬಿಸಿ ಮಾಡಿ. ಶುದ್ಧ ತುಪ್ಪವು ಆಹ್ಲಾದಕರ, ವಿಶಿಷ್ಟ ಪರಿಮಳವನ್ನು ಬಿಡುಗಡೆ ಮಾಡುತ್ತದೆ. ತುಪ್ಪವು ಕಲಬೆರಕೆಯಾಗಿದ್ದರೆ, ಸುವಾಸನೆಯು ಮಸುಕಾದ ಅಥವಾ ವಿಭಿನ್ನವಾಗಿರಬಹುದು. ಇದು ಸಾಮಾನ್ಯವಾಗಿ ಇತರ ತೈಲಗಳು ಅಥವಾ ಕೃತಕ ಸುವಾಸನೆಗಳು ಇದರಲ್ಲಿ ಅಡಕವಾಗಿರಬಹುದು.