ನೀವು ಖರೀದಿಸುವ ಪನೀರ್ ಅಸಲಿಯೋ, ನಕಲಿಯೋ? ತಿಳಿಯುವುದು ಹೇಗೆ: ಇಲ್ಲಿದೆ ಸುಲಭ ಮಾರ್ಗ
ಪನೀರ್‌ಕೇವಲ ಬಾಯಿ ರುಚಿಗೆ ಮಾತ್ರವಲ್ಲ ಪೌಷ್ಠಿಕಾಂಶದ ದೃಷ್ಟಿಯಿಂದಲೂ ಬಹಳ ಪ್ರಯೋಜನಕಾರಿ. ಖಾರ ಭಕ್ಷ್ಯಗಳಿಂದ ಸಿಹಿ ಭಕ್ಷ್ಯಗಳವರೆಗೆ ಇದರ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಮಕ್ಕಳಿಗೂ ಪನೀರ್ ಅಂದ್ರೆ ಅಚ್ಚುಮೆಚ್ಚು. ಆದ್ರೆ, ಮಾರುಕಟ್ಟೆಯಲ್ಲಿ ಸಿಂಥೆಟಿಕ್ ಪನೀರ್ ಹಾವಳಿಯಿಟ್ಟಿದೆ. ಹೀಗಾಗಿ ನೀವು ಖರೀದಿಸುವ ಪನೀರ್ ಅಸಲಿಯೋ, ನಕಲಿಯೋ ಎಂದು ತಿಳಿಯುವುದು ಅತ್ಯಗತ್ಯ.
ಹಾಲಿನಿಂದ ತಯಾರಿಸಲಾಗುವ ಪನೀರ್ ಅನ್ನು ಸಾಮಾನ್ಯವಾಗಿ ಭಾರತೀಯ ಪಾಕಪದ್ಧತಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಚಪಾತಿ, ರೊಟ್ಟಿ ಅಥವಾ ಇನ್ನಿತರೆ ಖಾದ್ಯಗಳೊಂದಿಗೆ ಪನೀರ್ ಗ್ರೇವಿ ಸವಿಯಲು ಬಹಳ ರುಚಿಕರವಾಗಿರುತ್ತದೆ. ಪನೀರ್ ಅನ್ನು ತಯಾರಿಸುವುದು ತುಂಬಾನೇ ಸಿಂಪಲ್. ಹಾಲಿಗೆ ನಿಂಬೆರಸ ಅಥವಾ ವಿನೆಗರ್ ಅನ್ನು ಸೇರಿಸಿ ಹಾಲನ್ನು ಒಡೆಯುವ ಮೂಲಕ ತಯಾರಿಸಲಾಗುತ್ತದೆ. ಪನೀರ್ ಅನ್ನು ಬಹುತೇಕ ಮಂದಿ ಮಾರುಕಟ್ಟೆಗಳಿಂದ ಖರೀದಿಸಿ ತರುವುದೇ ಹೆಚ್ಚು. ಖಾರ ಭಕ್ಷ್ಯಗಳಿಂದ ಸಿಹಿ ಭಕ್ಷ್ಯಗಳವರೆಗೂ ಪನೀರ್ ಅನ್ನು ಬಳಸಲಾಗುತ್ತದೆ. ಅದರಲ್ಲೂ ಪಾಲಕ್ ಪನೀರ್, ಪನೀರ್ ಬಟರ್ ಮಸಾಲೆ, ಪನೀರ್ ಟಿಕ್ಕಾಗೆ ಅತಿ ಹೆಚ್ಚು ಬೇಡಿಕೆಯಿದೆ. ಹೀಗಾಗಿ ಬಹುತೇಕರು ಇಂದು ಪನೀರ್ ಖಾದ್ಯಗಳನ್ನು ಹೆಚ್ಚಾಗಿ ಮನೆಯಲ್ಲೇ ತಯಾರಿಸುತ್ತಾರೆ. ಪನೀರ್‌ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಮಾರುಕಟ್ಟೆಯಲ್ಲಿ ಸಿಂಥೆಟಿಕ್ ಪನೀರ್ ಅನ್ನು ಮಾರಾಟ ಮಾಡಲಾಗುತ್ತಿದೆ. ಇಂದು ಬಹುತೇಕ ಆಹಾರ ಪದಾರ್ಥಗಳು ಸೇರಿ ಇನ್ನಿತರೆ ನಕಲಿ ಪದಾರ್ಥಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೀಗಾಗಿ ಅಸಲಿ ಯಾವುದು, ನಕಲಿ ಯಾವುದು ಎಂಬುದನ್ನು ಕಂಡು ಹಿಡಿಯಲು ಕಷ್ಟಕರವಾಗಿದೆ. ಪನೀರ್ ಅಲ್ಲೂ ಕೂಡ ನಕಲಿ ಪನೀರ್ (ಸಿಂಥೆಟಿಕ್ ಪನೀರ್) ಹಾವಳಿಯಿಟ್ಟಿದ್ದು, ಇದನ್ನು ಗುರುತಿಸುವುದು ಹೇಗೆ ಎಂದು ತಿಳಿಯುವುದು ಅತ್ಯಗತ್ಯ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
ಪನೀರ್ ಅಸಲಿಯೋ, ನಕಲಿಯೋ ಹೀಗೆ ಗುರುತಿಸಿ
ವಿನ್ಯಾಸವನ್ನು ಪರಿಶೀಲಿಸಿ: ಅಸಲಿ ಪನೀರ್ ಅನ್ನು ಗುರುತಿಸುವುದು ತುಂಬಾನೇ ಸಿಂಪಲ್. ಅಸಲಿ ಪನೀರ್ ಮೃದು ಮತ್ತು ಪುಡಿಪುಡಿಯಾಗಿರುತ್ತದೆ. ಕೃತಕ ಪನೀರ್ ಗಟ್ಟಿಯಾಗಿದ್ದು, ಸಿಂಥೆಟಿಕ್ ಪನೀರ್ ರಬ್ಬರಿನಂತಿರುತ್ತದೆ. ನಿಮ್ಮ ಬೆರಳಿನಿಂದ ನಿಧನವಾಗಿ ಪನೀರ್ ಅನ್ನು ಒತ್ತಿದಾಗ ಅದು ಕುಸಿಯುವಂತಾದರೆ ನಿಜವಾದ ಪನೀರ್ ಎಂದರ್ಥ. ಆದರೆ, ಅದು ಗಟ್ಟಿಯಾಗಿದ್ದು, ಸುಲಭವಾಗಿ ಕುಸಿಯದಿದ್ದರೆ, ಅದು ನಕಲಿಯಾಗಿರುವ ಸಾಧ್ಯತೆ ಇರುತ್ತದೆ.
ಬಣ್ಣವನ್ನು ಪರಿಶೀಲಿಸಿ: ಅಸಲಿ ಪನೀರ್ ತೆಳು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಆದರೆ ಸಿಂಥೆಟಿಕ್ ಪನೀರ್ ಹೆಚ್ಚು ಬಿಳಿಯಾಗಿರುತ್ತದೆ. ಸಿಂಥೆಟಿಕ್ ಪನೀರ್ ರಾಸಾಯನಿಕಗಳನ್ನು ಹೊಂದಿದ್ದು, ಅದು ಪ್ರಕಾಶಮಾನವಾಗಿ ಬಿಳಿಯಾಗಿ ಕಾಣುವಂತೆ ಮಾಡುತ್ತದೆ. ಬಿಳಿ ಕಾಗದದಲ್ಲಿ ಪನೀರ್‌ನ ಸಣ್ಣ ಭಾಗವನ್ನು ಇರಿಸುವ ಮೂಲಕ ಪರೀಕ್ಷಿಸಿ. ಅದು ಬಿಳಿ ಬಣ್ಣವನ್ನು ಬಿಟ್ಟರೆ, ಅದು ನಕಲಿಯಾಗಿರಬಹುದು.
ಪನೀರ್ ವಾಸನೆ: ಚೀಸ್‌ನಿಂದ ತಯಾರಿಸಿದ ಪನೀರ್ ನೈಸರ್ಗಿಕ ಮೊಸರಿನಂತೆಯೇ ಹಾಲು, ಸ್ವಲ್ಪ ಹುಳಿ ವಾಸನೆಯನ್ನು ಹೊಂದಿರುತ್ತದೆ. ರಾಸಾಯನಿಕಗಳನ್ನು ಸೇರಿಸುವುದರಿಂದ ಸಿಂಥೆಟಿಕ್ ಪನೀರ್ ಕೃತಕ ವಾಸನೆಯನ್ನು ಹೊಂದಿರುತ್ತದೆ. ಪನೀರ್‌ನ ಸಣ್ಣ ತುಂಡನ್ನು ತೆಗೆದುಕೊಂಡು ಅದರ ವಾಸನೆಯನ್ನು ಗ್ರಹಿಸಿ. ಕೆಟ್ಟ ವಾಸನೆಯನ್ನು ಹೊಂದಿದ್ದರೆ ಅದು ನಕಲಿ ಪನೀರ್ ಆಗಿರಬಹುದು.
ನೀರಿನ ಪರೀಕ್ಷೆ: ಪನೀರ್ ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸಲು ಇದು ಸರಳವಾದ ಆದರೆ ಪರಿಣಾಮಕಾರಿ ಮಾರ್ಗವಾಗಿದೆ. ಒಂದು ಸಣ್ಣ ತುಂಡು ಪನೀರ್ ತೆಗೆದುಕೊಂಡು ಅದನ್ನು ಒಂದು ಬಟ್ಟಲಿನಲ್ಲಿ ಬೆಚ್ಚಗಿನ ನೀರಿನಲ್ಲಿ ಇಡಿ. ಪನೀರ್ ನೀರಿನಲ್ಲಿ ಕರಗಿದರೆ ಅಥವಾ ವಿಭಜನೆಯಾದರೆ, ಅದು ಬಹುಶಃ ಸಿಂಥೆಟಿಕ್ ಪನೀರ್ ಆಗಿದೆ. ಅಸಲಿ ಪನೀರ್ ನೀರಿನಲ್ಲಿ ಎಂದಿಗೂ ಕರಗುವುದಿಲ್ಲ ಮತ್ತು ಅದರ ಆಕಾರವನ್ನು ಅದು ಉಳಿಸಿಕೊಳ್ಳುತ್ತದೆ.
ಪ್ಯಾಕೇಜಿಂಗ್ ಗುರುತಿಸಿ: ಸಿಂಥೆಟಿಕ್ ಪನೀರ್ ಅನ್ನು ನೀವು ಸುಲಭವಾಗಿ ಗುರುತಿಸುವ ಇನ್ನೊಂದು ವಿಧಾನವೆಂದರೆ ಅದರ ಪ್ಯಾಕೇಜಿಂಗ್ ಅನ್ನು ಗಮನಿಸುವುದು. ಅಸಲಿ ಪನೀರ್ ಅನ್ನು ಬ್ಲಾಕ್‌ಗಳು ಅಥವಾ ಘನ ರೂಪಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ, ನಕಲಿ ಸಿಂಥೆಟಿಕ್ ಪನೀರ್, ಚೂರುಚೂರು ಅಥವಾ ಪುಡಿಯಾಗಿ ಇರಬಹುದು. ಏಕೆಂದರೆ ಇದು ಹಾಲಿನ ಪುಡಿ ಮತ್ತು ರಾಸಾಯನಿಕಗಳಿಂದ ಸುಲಭವಾಗಿ ಮಿಶ್ರಣವಾಗಿದ್ದು, ಸಡಿಲವಾಗಿ ಪ್ಯಾಕ್ ಮಾಡಲಾಗುತ್ತದೆ.
ವಿಭಾಗ