Paneer Afghani: ಪನೀರ್ ಇಷ್ಟಪಡೋರು ನೀವಾದ್ರೆ ಪನೀರ್ ಅಘ್ಗಾನಿ ಒಮ್ಮೆ ತಿಂದು ನೋಡಿ, ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವ ರೆಸಿಪಿಯಿದು
ಕನ್ನಡ ಸುದ್ದಿ  /  ಜೀವನಶೈಲಿ  /  Paneer Afghani: ಪನೀರ್ ಇಷ್ಟಪಡೋರು ನೀವಾದ್ರೆ ಪನೀರ್ ಅಘ್ಗಾನಿ ಒಮ್ಮೆ ತಿಂದು ನೋಡಿ, ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವ ರೆಸಿಪಿಯಿದು

Paneer Afghani: ಪನೀರ್ ಇಷ್ಟಪಡೋರು ನೀವಾದ್ರೆ ಪನೀರ್ ಅಘ್ಗಾನಿ ಒಮ್ಮೆ ತಿಂದು ನೋಡಿ, ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವ ರೆಸಿಪಿಯಿದು

ಮಾಂಸಾಹಾರಿಗಳಿಗೆ ಚಿಕನ್ ಹೇಗೆ ಇಷ್ಟವಾಗುವುದೋ ಹಾಗೆ ಸಸ್ಯಹಾರಿಗಳಿಗೆ ಪನೀರ್ ಸಖತ್‌ ಇಷ್ಟವಾಗುತ್ತೆ. ಸಾಮಾನ್ಯವಾಗಿ ಪನೀರ್ ಕರಿ ಅಥವಾ ಗ್ರೇವಿ ಎಂದರೆ ಪನೀರ್ ಬಟರ್ ಮಸಾಲಾ, ಪನೀರ್ ಗೋಡಂಬಿ ಮಸಾಲಾ, ಪಾಲಕ್ ಪನೀರ್ ನೆನಪಾಗುತ್ತದೆ. ಆದರೆ ಇದನ್ನೇ ಪದೇ ಪದೇ ತಿಂತಾ ಇದ್ರೆ ಬೇಸರ ಮೂಡೋದು ಖಂಡಿತ, ಅದಕ್ಕಾಗಿ ಈ ಸ್ಪೆಷಲ್ ರೆಸಿಪಿ ಪನೀರ್ ಅಫ್ಗಾನಿ ಟ್ರೈ ಮಾಡಿ.

ಪನೀರ್ ಅಘ್ಗಾನಿ
ಪನೀರ್ ಅಘ್ಗಾನಿ

ದಿನಕ್ಕೊಂದು ಬಗೆಯ ಅಡುಗೆ ಮಾಡಬೇಕು, ಹೊಸ ಹೊಸ ರೆಸಿಪಿ ಕಲಿಬೇಕು ಅನ್ನುವ ಆಸೆ ನಿಮಗಿದ್ದರೆ ನೀವು ಈ ರೆಸಿಪಿ ಟ್ರೈ ಮಾಡಬಹುದು. ಸಸ್ಯಾಹಾರಿಗಳಿಗೆ ಮಾತ್ರವಲ್ಲ ಮಾಂಸಾಹಾರಿಗಳಿಗೂ ಇದು ಸಖತ್ ಇಷ್ಟ ಆಗುತ್ತೆ. ಅದುವೇ ಪನೀರ್ ಅಫ್ಘಾನಿ. ಈ ವಿಶೇಷ ರೆಸಿಪಿ ಚಪಾತಿ, ಅನ್ನ, ರೋಟಿಗೆ ಸಖತ್ ಕಾಂಬಿನೇಷನ್ ಅನ್ಸುತ್ತೆ.

ಪನೀರ್ ಇಷ್ಟಪಡೋರು ನೀವಾದ್ರೆ ಈ ಹೊಸ ರೆಸಿಪಿ ಖಂಡಿತ ನಿಮಗೆ ಇಷ್ಟವಾಗುತ್ತೆ. ಹೆಸರು ಕೂಡ ಡಿಫ್ರೆಂಟ್ ಆಗಿರೋ ಪನೀರ್ ಅಫ್ಘಾನಿ ಮಾಡಲು ಕೊಂಚ ಸಾಮಗ್ರಿಗಳು ಜಾಸ್ತಿ ಬೇಕು, ಹಾಗೆ ಸಮಯವೂ ಕೂಡ. ಆದರೆ ಒಮ್ಮೆ ಇದರ ರುಚಿ ನೋಡಿದ್ರೆ ನಿಮಗೆ ಮತ್ತೆ ಮತ್ತೆ ತಿನ್ನಬೇಕು ಅಂತ ಅನ್ನಿಸದೇ ಇರೋದಿಲ್ಲ.

ಪನೀರ್ ಅಫ್ಘಾನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು:

ಪನೀರ್‌ – ಉದ್ದಕ್ಕೆ ಕತ್ತರಿಸಿದ್ದು, ಅರ್ಧ ಕೆಜಿಯಷ್ಟು

ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ

ಅಡುಗೆ ಎಣ್ಣೆ – 1 ಚಮಚ

ಉಪ್ಪು – ರುಚಿಗೆ

ಜೀರಿಗೆ – ಒಂದು ಚಿಟಿಕೆ

ಖಾರದ ಪುಡಿ – ಅರ್ಧ ಚಮಚ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಗ್ರೇವಿ ತಯಾರಿಸಲು:

ಎಣ್ಣೆ – ಒಂದೂವರೆ ಚಮಚ

ಹಸಿಮೆಣಸು – 2

ಶುಂಠಿ – 1 ತುಂಡು

ಬೆಳ್ಳುಳ್ಳಿ – 4 ರಿಂದ 5

ತೆಳುವಾಗಿ ಕತ್ತರಿಸಿದ ಈರುಳ್ಳಿ – 1

ಕೊತ್ತಂಬರಿ ಸೊಪ್ಪು – ಸ್ವಲ್ಪ

ನೆನೆಸಿದ ಗೋಡಂಬಿ – ಕಾಲು ಕಪ್

ತಾಜಾ ಕೆನೆ – ¼ ಕಪ್

ಸಿಹಿ ಮೊಸರು – 1 ಕಪ್

ಕೊತ್ತಂಬರಿ ಪುಡಿ – ಅರ್ಧ ಟೀಚಮಚ

ಜೀರಿಗೆ ಪುಡಿ – ½ ಟೀ ಚಮಚ

ಅರಿಶಿನ – ಅರ್ಧ ಚಮಚ

ಗರಂ ಮಸಾಲಾ – ಅರ್ಧ ಚಮಚ

ಕಸೂರಿ ಮೇಥಿ – 1 ಚಮಚ

ಪನೀರ್ ಮ್ಯಾರಿನೇಟ್ ಮಾಡಲು:

ಎಣ್ಣೆ – 1 ಚಮಚ

ಹಸಿ ಮೆಣಸಿನಕಾಯಿ ಪೇಸ್ಟ್ – 2 ಚಮಚ

ಬೆಣ್ಣೆ – 1 ಚಮಚ

ಬಿರಿಯಾನಿ ಎಲೆಗಳು – 2

ಚಕ್ಕೆ – 2 ಚಿಕ್ಕ ತುಂಡು

ಏಲಕ್ಕಿ – 2

ಲವಂಗ – ನಾಲ್ಕು ಅಥವಾ ಐದು

ಶುಂಠಿ – 1 ಚಮಚ

ಗರಂ ಮಸಾಲಾ – ಕಾಲು ಚಮಚ

ಪನೀರ್ ಅಫ್ಘಾನಿ ಮಾಡುವ ವಿಧಾನ

ಮೊದಲು, ಪನೀರ್ ಅನ್ನು ಮ್ಯಾರಿನೇಟ್ ಮಾಡಲು, ಪನೀರ್ ತುಂಡುಗಳನ್ನು ಉದ್ದಕ್ಕೆ ತೆಳುವಾಗಿ ಕತ್ತರಿಸಿ. ಆ ತುಂಡುಗಳಿಗೆ ಉಪ್ಪು, ಒಂದು ಚಮಚ ಎಣ್ಣೆ, ಕಾಳುಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಮತ್ತು ಇಂಗು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕನಿಷ್ಠ ಕಾಲು ಘಂಟೆಯವರೆಗೆ ಪಕ್ಕಕ್ಕೆ ಇರಿಸಿ.

ಈಗ ಕಡಾಯಿಯಲ್ಲಿ ಮಸಾಲೆಗೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಒಂದು ನಿಮಿಷ ಫ್ರೈ ಮಾಡಿ. ಇದಕ್ಕೆ ಈರುಳ್ಳಿ ತುಂಡುಗಳನ್ನು ಹಾಕಿ ಹುರಿಯಿರಿ. ಕೊತ್ತಂಬರಿ ಸೊಪ್ಪು ಹಾಕಿ ಒಲೆ ಮುಚ್ಚಿ. ಈ ಮಿಶ್ರಣ ತಣ್ಣಗಾದ ನಂತರ ನೆನೆಸಿದ ಗೋಡಂಬಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿ. ಅರ್ಧ ಕಪ್ ನೀರು, ಸ್ವಲ್ಪ ತಾಜಾ ಕೆನೆ ಅಥವಾ ಮೊಸರು, ಧನಿಯಾ ಪುಡಿ, ಅರಿಶಿನ, ಜೀರಿಗೆ ಪುಡಿ, ಕಸೂರಿ ಮೇತಿ ಮತ್ತು ಉಪ್ಪು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಪಕ್ಕಕ್ಕೆ ಇರಿಸಿ. ಈಗ ಪನೀರ್ ತುಂಡುಗಳಿಗೆ ಮಿಶ್ರಿತ ಹಸಿರು ಮೆಣಸಿನಕಾಯಿ ಪೇಸ್ಟ್ ಅನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪಕ್ಕಕ್ಕೆ ಇರಿಸಿ.

ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಂದು ಚಮಚ ಎಣ್ಣೆಯನ್ನು ಹಾಕಿ. ಮಸಾಲೆಯುಕ್ತ ಪನೀರ್ ತುಂಡುಗಳನ್ನು ಸೇರಿಸಿ. ಎರಡೂ ಬದಿಗಳಲ್ಲಿ ಗೋಲ್ಡನ್ ರವರೆಗೆ ಫ್ರೈ ಮಾಡಿ. ಈ ತುಂಡುಗಳನ್ನು ತಟ್ಟೆಯಲ್ಲಿ ತೆಗೆದು ಇಟ್ಟಿರಿ.

ಈಗ ಅದೇ ಪ್ಯಾನ್‌ಗೆ ಇನ್ನೊಂದು ಚಮಚ ಎಣ್ಣೆ ಮತ್ತು ಸ್ವಲ್ಪ ಬೆಣ್ಣೆಯನ್ನು ಹಾಕಿ. ಬಿರಿಯಾನಿ ಎಲೆಗಳು, ದಾಲ್ಚಿನ್ನಿ, ಏಲಕ್ಕಿ ಮತ್ತು ಲವಂಗ ಸೇರಿಸಿ. ಪರಿಮಳ ಬರುವವರೆಗೆ ಫ್ರೈ ಮಾಡಿ.

ಶುಂಠಿ ತುಂಡುಗಳನ್ನು ಸೇರಿಸಿ ಮತ್ತು ಅರ್ಧ ನಿಮಿಷ ಫ್ರೈ ಮಾಡಿ. ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಹಿಂದೆ ಕಲಸಿದ ಗೋಡಂಬಿ ಗ್ರೇವಿ ಸೇರಿಸಿ.

ಹಸಿ ವಾಸನೆ ಹೋಗುವವರೆಗೆ ಗ್ರೇವಿಯನ್ನು ಚೆನ್ನಾಗಿ ಬೇಯಿಸಿ. ಸ್ವಲ್ಪ ಸಮಯದ ನಂತರ ಅದು ದಪ್ಪವಾಗುತ್ತದೆ. ಈಗ ಹುರಿದ ಪನೀರ್ ತುಂಡುಗಳನ್ನು ಸೇರಿಸಿ. ಮುಚ್ಚಳವನ್ನು ಒಮ್ಮೆ ಒಟ್ಟಿಗೆ ಹಾಕಿ ಮತ್ತು ಕುದಿಯಲು ಬಿಡಿ. ಕೊನೆಗೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಪನೀರ್ ಅಫ್ಘಾನಿ ರೆಡಿ.

Whats_app_banner