ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಹಣ್ಣುಗಳನ್ನು ತಿನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಹಣ್ಣುಗಳನ್ನು ತಿನ್ನಿ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಹಣ್ಣುಗಳನ್ನು ತಿನ್ನಿ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೀವು ಕತ್ತಳೆ ಮತ್ತು ಕಿವಿ ಹಣ್ಣುಗಳನ್ನು ತಿನ್ನಿ ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮಗಿದು ಶಕ್ತಿ ನೀಡುತ್ತದೆ. ನಿಮ್ಮ ಅನಾರೋಗ್ಯದ ದಿನಗಳಲ್ಲಿ ಇದೇ ನಿಮ್ಮ ಕೈ ಹಿಡಿಯುತ್ತದೆ.

ರುಚಿಕರ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳು
ರುಚಿಕರ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳು

ಪ್ರತಿಯೊಬ್ಬ ಜೀವಿಗೂ ರೋಗ ನಿರೋಧಕ ಶಕ್ತಿ ಮುಖ್ಯ. ಆದರೆ ಕೆಲವು ಬಾರಿ ಈ ಶಕ್ತಿ ಕಡಿಮೆ ಆಗುತ್ತದೆ. ಪದೇ ಪದೇ ಖಾಯಿಲೆ ಬೀಳುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ಅರಿತುಕೊಳ್ಳ ಬೇಕಾಗಿರುವುದು ಅನೇಕ ವಿಷಯವಿದೆ. ಆದರೆ ಸುಲಭವಾಗಿ ನಿಮ್ಮ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ನೀವು ಕೆಲವು ಹಣ್ಣುಗಳನ್ನು ತಿನ್ನಬಹುದು. ಆ ಹಣ್ಣುಗಳು ಯಾವವು ಎಂಬ ಮಾಹಿತಿ ಇಲ್ಲಿದೆ ಗಮನಿಸಿ. ಈ ಶಕ್ತಿಯುತ ಹಣ್ಣುಗಳೊಂದಿಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಬಲ ನೀಡುತ್ತದೆ.

ನಾವು ನಮ್ಮ ಬಿಡುವಿಲ್ಲದ ಜೀವನವನ್ನು ನಿಭಾಯಿಸುತ್ತಾ ಆರೋಗ್ಯದ ಬಗ್ಗೆ ಗಮನ ಕೊಡುವುದನ್ನೇ ಮರೆತು ಬಿಡುತ್ತೇವೆ. ಮ್ಮ ರೋಗನಿರೋಧಕ ವ್ಯವಸ್ಥೆಯನ್ನು ನಿರ್ಲಕ್ಷಿಸುವುದು ಸುಲಭ. ಆದರೆ ಮತ್ತೆ ಅದನ್ನು ಸುಧಾರಿಸಿಕೊಳ್ಳುವುದು ತುಂಬಾ ಕಷ್ಟ. ಈ ಕಷ್ಟದ ಪರಿಸ್ಥಿತಿ ಬರದ ಹಾಗೆ ನೀವು ನಿಮ್ಮನ್ನು ನೋಡಿಕೊಳ್ಳಬೇಕು.

ಕಿತ್ತಳೆ: ಉತ್ತಮ ಆರೋಗ್ಯಕ್ಕಾಗಿ ಕಿತ್ತಳೆ ಹಣ್ಣನ್ನು ತಿನ್ನಿ. ಕೇವಲ ಹಣ್ಣು ಮಾತ್ರವಲ್ಲ ಇದರ ಸಿಪ್ಪೆ ಕೂಡ ಪ್ರಯೋಜನ ನೀಡುತ್ತದೆ. ಇದರಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ಕಿತ್ತಳೆ ಸಿಪ್ಪೆಯಲ್ಲಿರುವ ಸಿಟ್ರಸ್ ಇರುತ್ತದೆ. ಇದರಲ್ಲಿ ವಿಟಮಿನ್ ಪ್ರಮಾಣ ತುಂಬಾ ಇರುತ್ತದೆ. ಇನ್ನು ದ್ರಾಕ್ಷಿ ಹಣ್ಣಿನಲ್ಲೂ ವಿಟಮಿನ್ ಸಿ ತುಂಬಾ ಇರುತ್ತದೆ. ಈ ಎರಡೂ ಹಣ್ಣುಗಳನ್ನು ನೀವು ತಿನ್ನಬಹುದು.

ಕಿವಿ: ಉತ್ತಮ ಆರೋಗ್ಯಕ್ಕಾಗಿ ಕಿವಿ ಹಣ್ಣು ತಿನ್ನಿ. ಕಿವಿ ಹಣ್ಣಿನಿಂದ ತುಂಬಾ ಪ್ರಯೋಜನ ಇದೆ. ಹೆಚ್ಚಾಗಿ ಜ್ವರ ಬಂದರೆ, ಡೆಂಘಿ ಇಂದ ಬಳಲುತ್ತಿದ್ದರೆ ಸಾಮಾನ್ಯವಾಗಿ ಈ ಹಣ್ಣನ್ನು ಕೊಡಲಾಗುತ್ತದೆ. ಕಾರಣ ಇದರಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಇದೆ.

ದ್ರಾಕ್ಷಿಹಣ್ಣುಗಳು: ದ್ರಾಕ್ಷಿಹಣ್ಣುಗಳು ವಿಟಮಿನ್ ಸಿ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತವೆ. ಇದು ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಪಪ್ಪಾಯ: ಪಪ್ಪಾಯಿಯು ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಪಪೈನ್ ಎಂಬ ಕಿಣ್ವ ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಪ್ರತಿರಕ್ಷಣಾ ಕಾರ್ಯವನ್ನು ನಿಮ್ಮ ದೇಹದೊಳಗಡೆ ಮಾಡುತ್ತದೆ. ಆದ್ದರಿಂದ ಪಪ್ಪಾಯ ಒಳ್ಳೆಯದು ಇದು ಬಿಳಿ ರಕ್ತ ಕಣವನ್ನು ಹೆಚ್ಚಿಗೆ ಮಾಡುತ್ತದೆ.

ಸ್ಟ್ರಾಬೆರಿ: ಸಿಹಿ ಮತ್ತು ಪೌಷ್ಟಿಕ ಅಂಶವನ್ನು ಹೊಂದಿದೆ. ಸ್ಟ್ರಾಬೆರಿಗಳು ವಿಟಮಿನ್ ಸಿ,ಮತ್ತು ಫೈಬರ್‌ ಅಂಶವನ್ನು ಹೊಂದಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಕ್ಕೆ ಇದನ್ನು ನೀವು ಸೇರ್ಪಡೆ ಮಾಡಿಕೊಳ್ಳಬಹುದು.

ಅನಾನಸ್: ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.

Whats_app_banner