Mahogany Farming: ಮಹಾಗನಿಯಲ್ಲ, ಇದು ಮಹಾಗಣಿ, ಈ ಮರ ಬೆಳೆದು ನೀವೂ ಕೋಟ್ಯಾಧಿಪತಿಯಾಗಿ; ಸುಳ್ಳಲ್ಲ, ನಿಜ!-mahogany farming business idea farmers can earn crores in years by planting trees mahogany used for medicine boat prs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mahogany Farming: ಮಹಾಗನಿಯಲ್ಲ, ಇದು ಮಹಾಗಣಿ, ಈ ಮರ ಬೆಳೆದು ನೀವೂ ಕೋಟ್ಯಾಧಿಪತಿಯಾಗಿ; ಸುಳ್ಳಲ್ಲ, ನಿಜ!

Mahogany Farming: ಮಹಾಗನಿಯಲ್ಲ, ಇದು ಮಹಾಗಣಿ, ಈ ಮರ ಬೆಳೆದು ನೀವೂ ಕೋಟ್ಯಾಧಿಪತಿಯಾಗಿ; ಸುಳ್ಳಲ್ಲ, ನಿಜ!

Mahogany Farming: ನೀವೂ ಕೋಟಿಗಟ್ಟಲೆ ಸಂಪಾದನೆ ಮಾಡಬೇಕಾ? ಹಾಗಿದ್ದರೆ ಒಂದು ಎಕರೆಯಲ್ಲಿ ಮಹಾಗನಿ ಕೃಷಿ ಮಾಡಿ. ಏಕೆಂದರೆ ಈ ಮರವನ್ನು 12 ವರ್ಷಗಳ ಕಾಲ ಬೆಳೆದರೆ ಕೋಟಿ ಕೋಟಿ ನಿಮ್ಮ ಖಾತೆ ಸೇರಲಿದೆ? ಹೇಗಂತಿರಾ? ಇಲ್ಲಿದೆ ವಿವರ.

ಮಹಾಗನಿ ಕೃಷಿ.
ಮಹಾಗನಿ ಕೃಷಿ. (mahargh)

ಏನಾದರೂ ಮಾಡಿ ಹಣ ಸಂಪಾದಿಸಬೇಕು ಎಂಬುದು ಪ್ರತಿಯೊಬ್ಬರ ಕನಸು. ಹಣಕಾಸು ಎದುರಿಸುತ್ತಿದ್ದರೂ ಕೋಟಿಗಟ್ಟಲೇ ದುಡಿಯಬೇಕು ಎಂಬುದು ಹಲವರ ಬಯಕೆ. ಆದರೆ, ಹೇಗೆ? ಅಂತಹವರಿಗೊಂದು ಇಲ್ಲೊಂದು ಕೃಷಿ ಐಡಿಯಾ ಇದೆ. ಇಲ್ಲಿ ಲಕ್ಷ, ಕೋಟಿಗಟ್ಟಲೇ ಹೂಡಿಕೆ ಮಾಡುವ ಅಗತ್ಯ ಇಲ್ಲ. ಒಂದು ಎಕರೆ ಜಮೀನು ಇದ್ದರೆ ಸಾಕು! 12 ವರ್ಷಗಳ ಕಾಲ ತಾಳ್ಮೆಯ ಮಂತ್ರವೊಂದನ್ನು ಪಠಿಸಿದರೆ ನಿಜವಾಗಲೂ ನೀವು ಸಹ ಕೋಟಿ ಕುಳ ಆಗುವುದರಲ್ಲಿ ಅನುಮಾನವೇ ಇಲ್ಲ!

ಆದರೆ, ಕೋಟ್ಯಧಿಪತಿಗಳಾಗಲು ನೀವು ದೊಡ್ಡ ಸಾಹಸ ಮಾಡಬೇಕಿಲ್ಲ. ಕೇವಲ ಮರಗಳನ್ನು ಬೆಳೆಯುವುದು. ಅದೇನೆಂದರೆ, ಮಹಾಗನಿ ಕೃಷಿ. ಈ ಮರಗಳನ್ನು ಬೆಳೆಸಿದರೆ ನೀವೂ ಕೋಟ್ಯಾಧಿಪತಿ ಆಗುತ್ತೀರಿ. ಮಹಾಗನಿ ಕೃಷಿ ತುಂಬಾ ಆದಾಯ ಮತ್ತು ಲಾಭದಾಯಕ ಉದ್ಯಮವಾಗಿ ಬದಲಾಗುತ್ತಿದ್ದು, ಇದರಿಂದ ಕೋಟಿ ಕೋಟಿ ಆದಾಯ ಪಡೆಯಬಹುದು. ನೀವು ಒಂದು ಎಕರೆಯಲ್ಲಿ 400 ರಿಂದ 500 ಸಸಿಗಳನ್ನು ನೆಡಬಹುದು. ಕೇವಲ 12 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗೋದು ಖಚಿತ.

ಮಾರುಕಟ್ಟೆಯಲ್ಲಿ ಒಂದು ಮಹಾಗನಿ ಮರಕ್ಕೆ ಭಾರಿ ಡಿಮ್ಯಾಂಡ್ ಇದೆ. ಇದು ಇಂಡಿಯನ್ ಮಹಾಗನಿ ಮತ್ತು ಆಫ್ರಿಕನ್ ಮಹಾಗನಿ ಎಂದು 2 ಜಾತಿಗಳನ್ನು ಹೊಂದಿದೆ. ಆಫ್ರಿಕನ್ ಮಹಾಗನಿ ವೇಗದ ಬೆಳವಣಿಗೆ ಕಾಣಲಿದೆ. ಆದರೆ, ಭಾರತದ ಮಹಾಗನಿ ಬೆಳವಣಿಗೆಯ ವೇಗ ತುಂಬಾ ಕಡಿಮೆ. ಗಿಡ ಬೆಳೆದ 5 ವರ್ಷಗಳ ನಂತರ ಕೇಂದ್ರ ಸರ್ಕಾರದಿಂದ ಎಕರೆಗೆ 50 ಸಾವಿರ ಪ್ರೋತ್ಸಾಹ ಧನ ಸಿಗಲಿದೆ. ಪ್ರತಿ 10 ಅಡಿಗೂ ಒಂದು ಸಸಿಯನ್ನು ನೆಡಬಹುದು.

ಕೆಲವೊಬ್ಬರು 15 ಅಡಿಗೆ ಒಂದು ಸಸಿ ನೆಟ್ಟಿದ್ದೂ ಇದೆ. ಆಗ ಒಂದು ಎಕರೆಯಲ್ಲಿ ಗಿಡಗಳ ಸಂಖ್ಯೆ ಕಡಿಮೆಯಾಗಬಹುದು. ಪ್ರಸ್ತುತ ಒಂದು ಮಹಾಗನಿ ಮರದ ಬೆಲೆ 75 ರಿಂದ 80 ಸಾವಿರ ಇದೆ. ಆದರೆ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹಾಗಾಗಿ ಎಕರೆಗೆ ಕನಿಷ್ಠ 200 ಗಿಡ ನೆಟ್ಟರೂ ಮುಂದಿನ 12 ವರ್ಷಗಳಲ್ಲಿ ಒಟ್ಟಾರೆ ಬೆಲೆ ಒಂದೂವರೆ ಕೋಟಿಗೂ (ಪ್ರಸ್ತುತ ಬೆಲೆಗೆ ಹೋಲಿಸಿದರೆ) ಅಧಿಕ ಹಣ ನಿಮ್ಮ ಕೈ ಸೇರಲಿದೆ. ಮಹಾಗನಿ ಮರದ ಬೀಜಗಳಿಗೂ ತುಂಬಾ ಡಿಮ್ಯಾಂಡ್ ಇದ್ದು, ಕೆಜಿ ಸಾವಿರಗಟ್ಟಲೆ ಬೆಲೆ ಇದೆ ಎನ್ನಲಾಗಿದೆ.

ಹೆಚ್ಚುತ್ತೆ ಭೂಮಿಯ ಫಲವತ್ತತೆ, ಔಷದೀಯ ಸಸ್ಯ ಇದು

ಮಹಾಗನಿ ಕೃಷಿಯಿಂದಾಗಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಮಣ್ಣಿನ ಸವೆತ ರಕ್ಷಿಸುತ್ತದೆ. ಇದು ಔಷಧೀಯ ಸಸ್ಯವಾಗಿದ್ದು, ಈ ಮರದ ಎಲೆಗಳಿಂದ ಕ್ಯಾನ್ಸರ್​, ರಕ್ತದೊತ್ತಡ, ಅಸ್ತಮಾ, ಶೀತ ಮತ್ತು ಮಧುಮೇಹ ಸೇರಿದಂತೆ ಅನೇಕ ರೋಗಗಳನ್ನು ಗುಣಪಡಿಸಬಹುದು. ಬಿರುಗಾಳಿ ಕಾಣದಂತಹ ಪ್ರದೇಶಗಳಲ್ಲಿ ಮಹಾಗನಿ ಬೆಳೆಯಬಹುದು. ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯಲು ಸಾಧ್ಯವಿಲ್ಲ. ಈ ಮರವು ತುಂಬಾ ಗಟ್ಟಿ, ದೀರ್ಘಕಾಲದವರೆಗೂ ಇರುತ್ತದೆ.

ಈ ಮರ ಕೆಂಪು ಮತ್ತು ತಿಳಿ ಕಂದು ಬಣ್ಣವನ್ನು ಹೊಂದಿರುತ್ತದೆ. ಇದನ್ನು ವಿವಿಧ ರೀತಿಯ ಪೀಠೋಪಕರಣಗಳನ್ನು ತಯಾರಿಸಲು ಬಳಸಲಾಗುತ್ತದೆ. ಅಲಂಕಾರಿಕ, ಶಿಲ್ಪಗಳು, ಬಂದೂಕು ತಯಾರಿಕೆಗೂ ಇದನ್ನು ಬಳಸುತ್ತಾರೆ. ನೀರು ಜಾಸ್ತಿಯಾದರೂ ಅಥವಾ ನೀರು ನಿಂತರೂ ಮರವು ಬೇಗ ಹಾಳಾಗುವುದಿಲ್ಲ. ಹಾಗಾಗಿ ದೋಣಿಗಳ ನಿರ್ಮಾಣಕ್ಕೆ ಸಹ ಹೆಚ್ಚಾಗಿ ಬಳಸಲಾಗುತ್ತದೆ. ಇದಿಷ್ಟು ಮಾತ್ರವಲ್ಲ, ನೈಸರ್ಗಿಕ ತೈಲ ಮತ್ತು ಸಾಬೂನು ತಯಾರಿಕೆಗೂ ಇದನ್ನೇ ಬಳಸುತ್ತಾರೆ.

ಬಹುಪಯೋಗಿಯಾಗಿರುವ ಮಹಾಗನಿ ಕೃಷಿಗೆ ನೀರಿನ ಅಗತ್ಯ ಹೆಚ್ಚು ಇರುವುದಿಲ್ಲ. ಶೀತ ಪ್ರದೇಶಕ್ಕಿಂತ ಬೆಚ್ಚಗಿನ ಪ್ರದೇಶಗಳಲ್ಲಿ ಈ ಬೆಳೆ ಬೆಳೆಯಬಹುದು. 12 ವರ್ಷಗಳ ನಂತರ ಮೂರುವರೆಯಿಂದ 6 ಅಡಿ ಸತ್ತಳತೆ, 40 ಅಡಿ ಬೆಳೆಯಲಿದೆ. ಇದು 25 ಸ್ವ್ಕೇರ್​ಫೀಟ್ ಇರಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಸ್ಕ್ವೇರ್​ಫೀಟ್​ಗೆ 2000+ ರೂಪಾಯಿ ಬೆಲೆ ಇದೆ. ಎಲೆಗಳು, ಬೀಜಗಳು, ಮರವನ್ನು ಮಾರಾಟ ಮಾಡುವ ಮೂಲಕ ದುಡ್ಡನ್ನು ದುಡಿಯಬಹುದು. ಅಷ್ಟೆ ಅಲ್ಲ, ಗಿಡ ನೆಟ್ಟ ಐದು ವರ್ಷಗಳವರೆಗೂ ಈ ಕೃಷಿ ಮಧ್ಯೆ ಬೇರೆ ಬೆಳೆಯನ್ನೂ ತೆಗೆಯಬಹುದು. ಇದು ಮಹಾಗನಿ ಅಲ್ಲ, ಮಹಾಗಣಿ.