ನಿಮ್ಮ ಕಣ್ಣಿಗೊಂದು ಸವಾಲ್; 30 ಸೆಕೆಂಡ್‌ಗಳಲ್ಲಿ ಈ ಚಿತ್ರದಲ್ಲಿರುವ 3 ವ್ಯತ್ಯಾಸಗಳನ್ನ ಕಂಡು ಹಿಡಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಕಣ್ಣಿಗೊಂದು ಸವಾಲ್; 30 ಸೆಕೆಂಡ್‌ಗಳಲ್ಲಿ ಈ ಚಿತ್ರದಲ್ಲಿರುವ 3 ವ್ಯತ್ಯಾಸಗಳನ್ನ ಕಂಡು ಹಿಡಿಯಿರಿ

ನಿಮ್ಮ ಕಣ್ಣಿಗೊಂದು ಸವಾಲ್; 30 ಸೆಕೆಂಡ್‌ಗಳಲ್ಲಿ ಈ ಚಿತ್ರದಲ್ಲಿರುವ 3 ವ್ಯತ್ಯಾಸಗಳನ್ನ ಕಂಡು ಹಿಡಿಯಿರಿ

ಈ ಕೆಳಗೆ ನೀಡಿರುವ ಚಿತ್ರದಲ್ಲಿ 3 ವ್ಯತ್ಯಾಸಗಳಿವೆ. 30 ಸೆಕೆಂಡ್‌ಗಳಲ್ಲಿ ಆ ವ್ಯತ್ಯಾಸಗಳು ಯಾವುವು ಅನ್ನೋದನ್ನ ಪತ್ತೆ ಹಚ್ಚುವ ಸವಾಲು ನಿಮ್ಮ ಮುಂದೆ ಇದೆ.

ಈ ಚಿತ್ರದಲ್ಲಿರುವ 3 ವ್ಯತ್ಯಾಸಗಳನ್ನು 30 ಸೆಕೆಂಡ್‌ಗಳಲ್ಲಿ ಪತ್ತೆ ಹಚ್ಚಿ
ಈ ಚಿತ್ರದಲ್ಲಿರುವ 3 ವ್ಯತ್ಯಾಸಗಳನ್ನು 30 ಸೆಕೆಂಡ್‌ಗಳಲ್ಲಿ ಪತ್ತೆ ಹಚ್ಚಿ

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ವಿಡಿಯೊ, ಚಿತ್ರಗಳನ್ನು ನೋಡುವಾಗ ನಿಮ್ಮ ಕಣ್ಣು ಮತ್ತು ಮನಸ್ಸಿಗೆ ಸವಾಲು ಹಾಕುವಂತೆ ಇರುತ್ತವೆ. ಜ್ಞಾನ, ಸಾಮರ್ಥ್ಯವನ್ನು ಪರೀಕ್ಷಿಸುವಂತಹ ಸ್ಪರ್ಧೆಗಳಲ್ಲಿ ಸಾಕಷ್ಟು ಮಂದಿ ಭಾಗವಹಿಸುತ್ತಾರೆ. ಕೆಲವರು ಒಂದು ಹಂತದವರೆಗೆ ಪ್ರಯತ್ನಿಸಿ ಸುಮ್ಮನಾಗುತ್ತಾರೆ, ಇನ್ನೂ ಕೆಲವರು 2ನೇ ಹಂತದವರಿಗೆ, 3ನೇ ಹಂತದವರೆಗೆ ಹೀಗೆ ಇನ್ನೇನು ಗೆದ್ದುಬಿಟ್ಟೆ ಎನ್ನುವ ಹಂತದವರೆಗೆ ಹೋಗಿ ಸುಮ್ಮನಾಗುವವರು ಇದ್ದಾರೆ. ಆದರೆ ಕೆಲವೇ ಕೆಲವು ಮಂದಿಯಷ್ಟೇ ಕೊನೆಯ ವರೆಗೆ ಹೋರಾಡಿ ಗೆಲುವು ಕಾಣುತ್ತಾರೆ.

ಇಲ್ಲಿ ಒಂದೇ ರೀತಿಯ ಎರಡು ಚಿತ್ರಗಳಿವೆ. ಅದರಲ್ಲಿರುವ 3 ವ್ಯತ್ಯಾಸಗಳನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ. ಬಣ್ಣ, ವಸ್ತುಗಳು, ಗಾತ್ರದ ವ್ಯತ್ಯಾಸಗಳನ್ನು ಕಾಣಬಹುದು. ನಿಮ್ಮ ಏಕಾಗ್ರತೆ, ಗಮನವನ್ನು ಹೆಚ್ಚಿಸಿಕೊಳ್ಳಲು ಈ ಚಿತ್ರದಲ್ಲಿರುವ ವ್ಯತ್ಯಾಸಗಳನ್ನು ಕಂಡು ಹಿಡಿಯಲು ಪ್ರಯತ್ನಿಸಿ.

ನಲ್ಲಿಯ ಬಳಿ ಬಾಲಕನೊರ್ವ ಬಕೆಟ್ ಇಟ್ಟು ನೀರು ತುಂಬಿಸುತ್ತಿರುವ ಈ ಚಿತ್ರಗಳನ್ನು ನೋಡುತ್ತಿದ್ದೀರಿ. ಎರಡು ಕೂಡ ಒಂದೇ ರೀತಿಯಲ್ಲಿವೆ. ಆದರೂ ಸೂಕ್ಷ್ಮವಾಗಿ ಗಮನಿಸಿದರೆ 3 ವ್ಯತ್ಯಾಸಗಳಿವೆ. ಈ ಮೂರೂ ವ್ಯತ್ಯಾಸಗಳನ್ನು ಕೇವಲ 30 ಸೆಕೆಂಡ್‌ಗಳಲ್ಲಿ ಪತ್ತೆ ಹಚ್ಚಬೇಕು. ಚಿತ್ರವನ್ನು ನೋಡಿದ ನಂತರ ನೀವು ಮೂರು ವ್ಯತ್ಯಾಸಗಳನ್ನು ಗಮನಿಸಿದ್ದರೆ ನಿಮಗೆ ಧನ್ಯವಾದಗಳು. ನಿಮ್ಮ ಕಣ್ಣಿನ ದೃಷ್ಟಿಯ ಸಾಮರ್ಥ್ಯ ತುಂಬಾ ಚೆನ್ನಾಗಿದೆ ಅಂತಲೇ ಅರ್ಥ. ಒಂದು ವೇಳೆ ನಿಮಗೆ ವ್ಯತ್ಯಾಸಗಳನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ನಾವು ನಿಮಗೆ ಉತ್ತರಗಳನ್ನು ತಿಳಿಸಿಕೊಡುತ್ತೇವೆ.

ಚಿತ್ರದಲ್ಲಿರುವ ಮೂರು ವ್ಯತ್ಯಾಸಗಳು ಇಲ್ಲಿವೆ
ಚಿತ್ರದಲ್ಲಿರುವ ಮೂರು ವ್ಯತ್ಯಾಸಗಳು ಇಲ್ಲಿವೆ

ಎರಡೂ ಚಿತ್ರಗಳಲ್ಲಿ ಒಂದೇ ರೀತಿಯಲ್ಲಿ ಇದ್ದರೂ ಈ ಮೂವರು ವ್ಯತ್ಯಾಸಗಳನ್ನು ಈಗ ನಿಮಗೆ ಗೊತ್ತಾಗಿರಬೇಕು. ಮೊದಲ ಚಿತ್ರದಲ್ಲಿರುವ ನಲ್ಲಿಯ ವಾಲ್‌ನ ಕೆಲಭಾಗ ನೇರವಾಗಿದೆ. ಆದರೆ ಎರಡನೇ ಚಿತ್ರದಲ್ಲಿ ವಾಲ್‌ನ ಕೆಳಭಾಗ ಉಬ್ಬಿಕೊಂಡಂತೆ ಕಾಣುತ್ತದೆ. ಮೊದಲ ಚಿತ್ರದಲ್ಲಿ ಬಾಲಕನ ಕತ್ತು ಚಿಕ್ಕಾದಿಗಿದೆ. ಎರಡನೇ ಚಿತ್ರದಲ್ಲಿ ದೊಡ್ಡದಾಗಿ ಕಾಣಿಸುತ್ತದೆ.

ಇನ್ನ ಮೊದಲ ಚಿತ್ರದಲ್ಲಿರುವ ಬಾಲಕನ ಕಾಲಿನ ಚೀಲ ದೊಡ್ಡದಾಗಿ ಕಾಣಿಸುತ್ತದೆ. ಎರಡನೇ ಚಿತ್ರದಲ್ಲಿ ಚಿಕ್ಕದಾಗಿದೆ ಕಾಣಿಸುತ್ತದೆ. ಎರಡನೇ ಚಿತ್ರದಲ್ಲಿ ಕೆಂಪು ಬಣ್ಣದಲ್ಲಿ ರೌಂಡ್ ಮಾಡಿರುವುದೇ ಮೂರು ವ್ಯತ್ಯಾಸಗಳು. ಒಂದು ವೇಳೆ 30 ಸೆಕೆಂಡ್‌ಗಳಲ್ಲಿ ನೀವು ಈ 3 ವ್ಯತ್ಯಾಸಗಳನ್ನು ಕಂಡು ಹಿಡಿದಿದ್ದರೆ ನೀಮ್ಮ ಕಣ್ಣಿನ ದೃಷ್ಟಿಯ ಸಾಮರ್ಥ್ಯ ಮತ್ತು ಜ್ಞಾನದ ಶಕ್ತಿ ಚೆನ್ನಾಗಿದೆ. ನಿಮ್ಮ ಕೌಶಲ್ಯವನ್ನು ಹೆಚ್ಚಿಸುವ ಈ ರೀತಿಯ ಮತ್ತಷ್ಟು ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಾಗಿ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ನ್ಯೂಸ್ ಡಿಜಿಟಲ್ ಜಾಲತಾಣಕ್ಕೆ ಸದಾ ಭೇಟಿ ನೀಡಿ.

(This copy first appeared in Hindustan Times Kannada website. To read more like this please logon to kannada.hindustantime.com )

Whats_app_banner