Best mobile under 50000: ದೀಪಾವಳಿ ಆಫರ್‌ನಲ್ಲಿ 50 ಸಾವಿರ ರೂಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Best Mobile Under 50000: ದೀಪಾವಳಿ ಆಫರ್‌ನಲ್ಲಿ 50 ಸಾವಿರ ರೂಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

Best mobile under 50000: ದೀಪಾವಳಿ ಆಫರ್‌ನಲ್ಲಿ 50 ಸಾವಿರ ರೂಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

Best mobile under 50000: ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಸ್ಯಾಮ್‌ಸಂಗ್‌, ಆಪಲ್‌, ಗೂಗಲ್‌ ಸೇರಿದಂತೆ ವಿವಿಧ ಕಂಪನಿಗಳ ಸ್ಮಾರ್ಟ್‌ಫೋನ್‌ ಖರೀದಿಗೆ ಹಬ್ಬದ ಆಫರ್‌ ನಡೆಯುತ್ತಿದೆ. ಈ ದೀಪಾವಳಿಗೆ 50 ಸಾವಿರಕ್ಕಿಂತ ಕಡಿಮೆ ದರದ ಫೋನ್‌ ಖರೀದಿಸುವವರು ಪರಿಶೀಲಿಸಿ.

ದೀಪಾವಳಿ ಆಫರ್‌ನಲ್ಲಿ 50 ಸಾವಿರ ರೂಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ  ಸ್ಮಾರ್ಟ್‌ಫೋನ್‌ಗಳಿವು
ದೀಪಾವಳಿ ಆಫರ್‌ನಲ್ಲಿ 50 ಸಾವಿರ ರೂಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

Best mobile under 50000: ಭಾರತ ದೀಪಾವಳಿ ಹಬ್ಬದ ಮೂಡ್‌ನಲ್ಲಿದೆ. ಈ ತಿಂಗಳಾಂತ್ಯದಲ್ಲಿ ಎಲ್ಲೆಲ್ಲೂ ಹಬ್ಬದ ಸಂಭ್ರಮ ಮೂಡಿಬರಲಿದೆ. ಇದೇ ಸಮಯದಲ್ಲಿ ಫ್ಲಿಪ್‌ಕಾರ್ಟ್‌, ಅಮೆಜಾನ್‌ನಂತಹ ಇಕಾಮರ್ಸ್‌ ತಾಣಗಳಲ್ಲೂ ಹಬ್ಬದ ಆಫರ್‌ ಶುರುವಾಗಿದೆ. ಎಲ್ಲದರೂ ನೀವು 50 ಸಾವಿರ ರೂಪಾಯಿಗಿಂತ ಕಡಿಮೆ ದರದ ಸ್ಮಾರ್ಟ್‌ಫೋನ್‌, ಐಫೋನ್‌ ಖರೀದಿಸಲು ಬಯಸಿದರೆ ಒಳ್ಳೊಳ್ಳೆಯ ಆಯ್ಕೆಗಳು ಇವೆ. ಒಳ್ಳೆಯ ಕ್ಯಾಮೆರಾ, ಅತ್ಯುತ್ತಮ ಪರ್ಫಾಮೆನ್ಸ್‌, ಉತ್ತಮ ಬ್ಯಾಟರಿ ಬ್ಯಾಕಪ್‌ ಇರುವಂತಹ ಸ್ಮಾರ್ಟ್‌ಫೋನ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಗೂಗಲ್ ಪಿಕ್ಸೆಲ್ 8

ಫ್ಲಿಪ್‌ಕಾರ್ಟ್‌ನ ಹಬ್ಬದ ಮಾರಾಟದ ಸಮಯದಲ್ಲಿ ಖರೀದಿಸಿಸಲು ಗೂಗಲ್‌ ಫಿಕ್ಸೆಲ್‌ 8 ಸೂಕ್ತವಾಗಿದೆ. ಇದು ಅತ್ಯಂತ ಜನಪ್ರಿಯ ಫೋನ್‌ಗಳಲ್ಲಿ ಒಂದಾಗಿದೆ. ಈ ಹಬ್ಬದ ಸೇಲ್‌ನಲ್ಲಿ ಸುಮಾರು 35,000 ರೂಗಳಿಗೆ ಖರೀದಿಸಬಹುದು. 50 ಸಾವಿರದೊಳಗಿನ ಬಜೆಟ್‌ನಲ್ಲಿ ಖರೀದಿಸಲು ಸೂಕ್ತ. ಗೂಗಲ್ ಜೆಮಿನಿ-ಚಾಲಿತ ಎಐ ಫೀಚರ್‌ಗಳನ್ನು ಹೊಂದಿದೆ. ಪಿಕ್ಸೆಲ್‌ 8 ಫೋನ್‌ಗೆ 7-ವರ್ಷ ಆಪರೇಟಿಂಗ್‌ ಸಿಸ್ಟಮ್‌ ಅಪ್‌ಡೇಟ್‌ ದೊರಕುತ್ತದೆ. ಹೀಗಾಗಿ, ಏಳು ವರ್ಷಗಳ ಕಾಲ ನಿಶ್ಚಿಂತೆಯಿಂದ ಬಳಸಬಹುದು.

ಐಫೋನ್ 13

ಇದು ಐಫೋನ್‌ನ ಹಳೆಯ ಮಾದರಿ. ಇದು 60 ಎಚ್‌ಝಡ್‌ ಒಲೆಡ್‌ ಪ್ಯಾನೆಲ್ ಹೊಂದಿದೆ. ಇದು ಎಐ ಫೀಚರ್‌ಗಳನ್ನು ಒಳಗೊಂಡಂತೆ ಉತ್ತಮ ಹಾರ್ಡ್‌ವೇರ್‌ ಹೊಂದಿದೆ. ಕ್ಯಾಮರಾ ಮತ್ತು ವೀಡಿಯೊ ಉತ್ತಮವಾಗಿದೆ. ಸಿನಿಮ್ಯಾಟಿಕ್ ವೀಡಿಯೊ ಮೋಡ್‌ ಆಯ್ಕೆ ಇದೆ. 60 ಎಫ್‌ಪಿಎಸ್‌ನಲ್ಲಿ 4ಕೆ ವೀಡಿಯೊಗಳನ್ನು ಶೂಟ್ ಮಾಡುವ ಸಾಮರ್ಥ್ಯ ಹೊಂದಿದೆ. ಮುಂಭಾಗದಲ್ಲಿರುವ 12 ಮೆಗಾಫಿಕ್ಸೆಲ್‌ ಕ್ಯಾಮೆರಾವು 4ಕೆ ವಿಡಿಯೋಗೂ ಬೆಂಬಲ ನೀಡುತ್ತದೆ. ಇದು ವ್ಲಾಗ್ ಮಾಡಲು ಉತ್ತಮ ಆಯ್ಕೆಯಾಗಿದೆ. ನೀವು ಕಂಟೆಂಟ್ ರಚನೆಗೆ ಸೂಕ್ತವಾದ 40,000 ರೂಪಾಯಿ ಒಳಗಿನ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ ಐಫೋನ್‌ 13 ಸೂಕ್ತ ಆಯ್ಕೆಯಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌23

ಅತ್ಯುತ್ತಮ ಕಾರ್ಯಕ್ಷಮತೆ, ಉತ್ತಮ ಕ್ಯಾಮೆರಾ ವ್ಯವಸ್ಥೆ, ವಿಶ್ವಾಸಾರ್ಹ ಸಾಫ್ಟ್‌ವೇರ್‌ ಇರುವ ಸಣ್ಣ ಆಂಡ್ರಾಯ್ಡ್‌ ಫೋನ್‌ ಹುಡುಕುತ್ತಿದ್ದರೆ ನಿಮ್ಮ ಬಿಲ್‌ಗೆ ಗ್ಯಾಲಾಕ್ಸಿ ಎಸ್‌23 ಸೂಕ್ತವಾಗಬಹುದು. ಇದು ಶಕ್ತಿಶಾಲಿ ಸ್ನಾಪ್‌ಡ್ರಾಗನ್ 8 ಜೆನ್‌ 2 ಚಿಪ್‌ಸೆಟ್‌, 8ಜಿಬಿ ರಾಮ್‌, ಟ್ರಿಪಲ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರ ಪರದೆಯು ಎಫ್‌ಎಚ್‌ಡಿ ಪ್ಲಸ್‌ ಆಗಿದ್ದರೂ ಸೂರ್ಯನ ಬೆಳಕಲ್ಲೂ ಪ್ರತಿಫಲನವಿಲ್ಲದೆ ನೋಡಬಹುದು. 6.1 ಇಂಚಿನ ಈ ಸ್ಮಾರ್ಟ್‌ಫೋನ್‌ ಕೂಡ ಖರೀದಿಗೆ ಸೂಕ್ತವಾಗಿದೆ.

ಐಕ್ಯುಒಒ 12 5ಜಿ

ನೀವು ಸ್ಪೀಡ್‌ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದರೆ, ಗೇಮಿಂಗ್‌ಗೆ ಸೂಕ್ತವಾಗಿರುವುದು ಹುಡುಕುತ್ತಿದ್ದರೆ ಐಕ್ಯುಒಒ 12 5ಜಿ ಸೂಕ್ತವಾಗಬ್ಲದು. ಇದರ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 3 ಚಿಪ್‌ಸೆಟ್‌ ಸ್ಪೀಡ್‌ಗೆ ಹೆಸರುವಾಸಿ. ವಿವಿಧ ಕಾರ್ಡ್‌ ಕೊಡುಗೆ ಮತ್ತು ಇತರೆ ಆಫರ್‌ಗಳನ್ನು ಬಳಸಿಕೊಂಡರೆ 50 ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ ಖರೀದಿಸಬಹುದು. ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 3 ಚಿಪ್‌ಸೆಟ್‌ ಇರುವ ಅಗ್ಗದ ಫೋನ್‌ ಇದಾಗಿದೆ. ಇದು 3 ಎಕ್ಸ್‌ ಟೆಲಿಫೋಟೋ ಲೆನ್ಸ್, ವೈಡ್ ಲೆನ್ಸ್ ಮತ್ತು ಅಲ್ಟ್ರಾ-ವೈಡ್ ಶೂಟರ್ ಒಳಗೊಂಡಿರುವ ಟ್ರಿಪಲ್-ಕ್ಯಾಮೆರಾ ಸೆಟಪ್ ಕೂಡ ಇದೆ.

Whats_app_banner