ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ 2024: ಗೂಗಲ್‌ ಫಿಕ್ಸೆಲ್‌ 8, ಗ್ಯಾಲಾಕ್ಸಿ ಎಸ್‌23 ಸ್ಮಾರ್ಟ್‌ಫೋನ್‌ಗಳಿಗೆ ಇಷ್ಟೊಂದು ಡಿಸ್ಕೌಂಟ್‌?-technology news flipkart big billion days 2024 deals on google pixel 8 galaxy s23 and more pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ 2024: ಗೂಗಲ್‌ ಫಿಕ್ಸೆಲ್‌ 8, ಗ್ಯಾಲಾಕ್ಸಿ ಎಸ್‌23 ಸ್ಮಾರ್ಟ್‌ಫೋನ್‌ಗಳಿಗೆ ಇಷ್ಟೊಂದು ಡಿಸ್ಕೌಂಟ್‌?

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ 2024: ಗೂಗಲ್‌ ಫಿಕ್ಸೆಲ್‌ 8, ಗ್ಯಾಲಾಕ್ಸಿ ಎಸ್‌23 ಸ್ಮಾರ್ಟ್‌ಫೋನ್‌ಗಳಿಗೆ ಇಷ್ಟೊಂದು ಡಿಸ್ಕೌಂಟ್‌?

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ 2024: ಸೆಪ್ಟೆಂಬರ್‌ 27ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಬಿಲಿಯನ್‌ ಸೇಲ್‌ ಆರಂಭವಾಗಲಿದೆ. ಪ್ಲಸ್‌ ಸದಸ್ಯರಿಗೆ ಒಂದು ದಿನ ಮೊದಲೇ ಈ ಆಫರ್‌ಗಳು ದೊರಕಲಿವೆ. ಗೂಗಲ್‌ ಫಿಕ್ಸೆಲ್‌ 8, ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌23 ಮುಂತಾದ ಸ್ಮಾರ್ಟ್‌ಫೋನ್‌ಗಳಿಗೆ ಸಾಕಷ್ಟು ಡಿಸ್ಕೌಂಟ್‌ದೊರಕುವ ನಿರೀಕ್ಷೆಯಿದೆ.

ಸೆಪ್ಟೆಂಬರ್‌ 27ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಬಿಲಿಯನ್‌ ಸೇಲ್‌ ಶುರುವಾಗಲಿದ್ದು, ಜನರಿಗೆ ಸಾಕಷ್ಟು ಆಫರ್‌ಗಳು ದೊರಕಲಿವೆ.
ಸೆಪ್ಟೆಂಬರ್‌ 27ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಬಿಲಿಯನ್‌ ಸೇಲ್‌ ಶುರುವಾಗಲಿದ್ದು, ಜನರಿಗೆ ಸಾಕಷ್ಟು ಆಫರ್‌ಗಳು ದೊರಕಲಿವೆ.

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ 2024: ವಾಲ್‌ಮಾರ್ಟ್‌ ಮಾಲೀಕತ್ವದ ಫ್ಲಿಪ್‌ಕಾರ್ಟ್‌ ತನ್ನ ವಾರ್ಷಿಕ ಜಾತ್ರೆ "ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ 2024" ಸಡಗರದಲ್ಲಿದೆ. ಇದೇ ಹಬ್ಬದ ಋತುವಿನಲ್ಲಿ ಬಿಗ್‌ ಸೇಲ್‌ ಆರಂಭವಾಗಲಿದೆ. ಸೆಪ್ಟೆಂಬರ್‌ 27ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಬಿಲಿಯನ್‌ ಸೇಲ್‌ ಶುರುವಾಗಲಿದ್ದು, ಜನರಿಗೆ ಸಾಕಷ್ಟು ಆಫರ್‌ಗಳು ದೊರಕಲಿವೆ. ಸಾಮಾನ್ಯ ಗ್ರಾಹಕರಿಗೆ ಸೆಪ್ಟೆಂಬರ್‌ 27ರಿಂದ ಮತ್ತು ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯರಿಗೆ ಸೆಪ್ಟೆಂಬರ್‌ 26ರಿಂದ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಆಫರ್‌ಗಳು ದೊರಕಲಿವೆ.

ಡೆಬಿಟ್‌- ಕ್ರೆಡಿಟ್‌ ಕಾರ್ಡ್‌ ಗ್ರಾಹಕರಿಗೆ ಭರ್ಜರಿ ಆಫರ್‌

ಈ ಸಂದರ್ಭದಲ್ಲಿ ಗ್ರಾಹಕರು ವಿವಿಧ ಬ್ಯಾಂಕ್‌ ಆಫರ್‌ಗಳ ಮೂಲಕವೂ ಹೆಚ್ಚುವರಿ ಹಣ ಉಳಿತಾಯ ಮಾಡಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರು ತಮ್ಮ ಖರೀದಿಗಳ ಮೇಲೆ ಶೇಕಡ 10 ರಿಯಾಯಿತಿಯನ್ನು ಆನಂದಿಸಬಹುದು. ಫ್ಲಿಪ್‌ಕಾರ್ಟ್‌ ಯುಪಿಐ ಬಳಕೆದಾರರು ಪ್ರತಿ ವ್ಯವಹಾರಕ್ಕೆ 50 ರೂಪಾಯಿ ಉಳಿತಾಯ ಮಾಡಬಹುದು. ಫ್ಲಿಪ್‌ಕಾರ್ಟ್‌ ತನ್ನ ಪೇ ಲೇಟರ್‌ ಸೇವೆಯ ಮೂಲಕ 1 ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತದೆ. ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಈ ಪ್ರಯೋಜನ ಪಡೆಯಬಹುದು.

ಸ್ಮಾರ್ಟ್‌ಫೋನ್‌ಗಳ ದರ ಕಡಿತ

ಪ್ರತಿವರ್ಷದಂತೆ ಈ ವರ್ಷವೂ ಸ್ಮಾರ್ಟ್‌ಫೋನ್‌ಗಳು, ಇಯರ್‌ಬಡ್‌ಗಳು, ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ವಾಚ್‌ಗಳು, ಸ್ಮಾರ್ಟ್ ಟಿವಿ ಸೇರಿದಂತೆ ಸಾಕಷ್ಟು ವಿಭಾಗಗಳಲ್ಲಿ ಭರ್ಜರಿ ಡಿಸ್ಕೌಂಟ್‌ ನಿರೀಕ್ಷಿಸಲಾಗಿದೆ. ದೆ. ಗೂಗಲ್ ಪಿಕ್ಸೆಲ್ 8 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ನಂತಹ ಜನಪ್ರಿಯ ಮಾದರಿಗಳ ಖರೀದಿಗೆ ಬೊಂಬಾಟ್‌ ಆಫರ್‌ಗಳು ಇರಲಿವೆ.

ಫ್ಲಿಪ್‌ಕಾರ್ಟ್ ಈಗಾಗಲೇ ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಕಡಿಮೆ ಬೆಲೆಗಳಲ್ಲಿ ನೀಡುವುದಾಗಿ ಜಾಹೀರಾತುಗಳಲ್ಲಿ ತಿಳಿಸುತ್ತಿದೆ. ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ 2024 ಶಾಪ್‌ನಲ್ಲಿ ಏನಿದೆ ಎಂದು ತೋರಿಸಲು ಆರಂಭಿಸಿದೆ. ಆದರೆ, ಇದು ನಿಜವೋ ಸುಳ್ಳೋ ಎಂದು ಬಿಗ್‌ ಸೇಲ್‌ ಆರಂಭವಾದ ಬಳಿಕ ತಿಳಿಯಲಿದೆ. ಗೂಗಲ್‌ ಫಿಕ್ಸೆಲ್‌ 8 8 ಜಿಬಿ ರಾಮ್‌ 128 ಜಿಬಿ ಸಂಗ್ರಹ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗೆ ಸಾಮಾನ್ಯವಾಗಿ 75,999 ರೂಪಾಯಿ ಇರುತ್ತದೆ. ಅದನ್ನು ತನ್ನ ಜಾಹೀರಾತಿನಲ್ಲಿ 40,000 ರೂ ಎಂದು ತೋರಿಸಿದೆ. ಇದೇ ರೀತಿ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌ 23 ದರ 89,999 ರೂ. ಇರುತ್ತದೆ. ಇದರ ದರವನ್ನೂ ಶಾಪರ್‌ ಕಾರ್ಡ್‌ನಲ್ಲಿ 40 ಸಾವಿರ ರೂ ಎಂದು ತೋರಿಸಿದೆ. ಇದು ತನ್ನ ಬಿಗ್‌ ಬಿಲಿಯನ್‌ ಡೇ ಪ್ರಚಾರಕ್ಕೆ ಬಳಸಿರುವ ಟ್ರಿಕ್ಕೋ ಕಾದು ನೋಡಬೇಕಿದೆ. ನಿಖರವಾದ ಬೆಲೆ ಇನ್ನೂ ಈ ಶಾಪರ್‌ ಕಾರ್ಡ್‌ಗಳಲ್ಲಿ ಕಾಣಿಸುತ್ತಿಲ್ಲ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌23 ಎಫ್‌ಇ ದರ ಸಾಮಾನ್ಯವಾಗಿ 79,999 ರೂಪಾಯಿ ಇರುತ್ತದೆ. ಇದನ್ನು ಕಡಿಮೆ ಬೆಲೆಯಂತೆ ತೋರಿಸಲಾಗಿದೆ. ಅಂದ್ರೆ 30 ಸಾವಿರ ಎಂದು ತೋರಿಸಲಾಗಿದೆ. ಪೊಕೊ ಎಕ್ಸ್‌ 6 ಪ್ರೊ 5ಜಿಯನ್ನು 20 ಸಾವಿರ ಎಂದು ತೋರಿಸಿದೆ. ನಿಖರ ಬೆಲೆ ಇನ್ನಷ್ಟೇ ಗೊತ್ತಾಗಬೇಕಿದೆ.

mysore-dasara_Entry_Point