15 ಸಾವಿರ ರೂ ರೇಂಜ್‌ನಲ್ಲಿ ಮನೆಗೆ ತರಬಹುದಾದ ಸ್ಮಾರ್ಟ್ ಟಿವಿಗಳಿವು; ಸ್ಯಾಮ್‌ಸಂಗ್-ಎಲ್‌ಜಿ ಬ್ರಾಂಡೆಂಡ್ ಟಿವಿಯೇ ಬರುತ್ತೆ-technology tips top 5 smart tv with price range of 15000 with 32 inch display excellent picture and audio quality lg jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  15 ಸಾವಿರ ರೂ ರೇಂಜ್‌ನಲ್ಲಿ ಮನೆಗೆ ತರಬಹುದಾದ ಸ್ಮಾರ್ಟ್ ಟಿವಿಗಳಿವು; ಸ್ಯಾಮ್‌ಸಂಗ್-ಎಲ್‌ಜಿ ಬ್ರಾಂಡೆಂಡ್ ಟಿವಿಯೇ ಬರುತ್ತೆ

15 ಸಾವಿರ ರೂ ರೇಂಜ್‌ನಲ್ಲಿ ಮನೆಗೆ ತರಬಹುದಾದ ಸ್ಮಾರ್ಟ್ ಟಿವಿಗಳಿವು; ಸ್ಯಾಮ್‌ಸಂಗ್-ಎಲ್‌ಜಿ ಬ್ರಾಂಡೆಂಡ್ ಟಿವಿಯೇ ಬರುತ್ತೆ

Top 5 smart TV: ನಿಮ್ಮಲ್ಲಿರುವ ಕಡಿಮೆ ಬಜೆಟ್‌ನಲ್ಲಿ ಉತ್ತಮ ವೈಶಿಷ್ಟ್ಯಗಳಿರುವ ಬ್ರಾಂಡೆಡ್ ಟಿವಿ ಖರೀದಿ ಮಾಡಬಹುದು. ನಿಮಗಾಗಿ 5 ಆಯ್ಕೆಗಳನ್ನು ನಾವು ಕೊಡುದ್ದೇವೆ. ಬೇರೆ ಬೇರೆ ಬ್ರಾಂಡ್‌ಗಳಲ್ಲಿ ನಿಮಗಿಷ್ಟವಾದ ಟಿವಿ ಖರೀದಿಸಬಹುದು. ಇಲ್ಲಿರುವ ಟಿವಿಗಳ ಗರಿಷ್ಠ ಬೆಲೆ 16 ಸಾವಿರ ರೂಪಾಯಿ.

ಸ್ಯಾಮ್‌ಸಂಗ್-ಎಲ್‌ಜಿ; 15 ಸಾವಿರ ರೂಪಾಯಿ ರೇಂಜ್‌ನಲ್ಲಿ ಖರೀದಿಸಬಹುದಾದ ಸ್ಮಾರ್ಟ್ ಟಿವಿಗಳಿವು
ಸ್ಯಾಮ್‌ಸಂಗ್-ಎಲ್‌ಜಿ; 15 ಸಾವಿರ ರೂಪಾಯಿ ರೇಂಜ್‌ನಲ್ಲಿ ಖರೀದಿಸಬಹುದಾದ ಸ್ಮಾರ್ಟ್ ಟಿವಿಗಳಿವು

ನಿಮ್ಮ ಮನೆಗೆ ಸರಿಹೊಂದುವಂತೆ ಕಡಿಮೆ ಬೆಲೆಯಲ್ಲಿ ಹಲವು ವೈಶಿಷ್ಟ್ಯಗಳಿರುವ ಗುಣಮಟ್ಟದ ಟಿವಿ ಖರೀದಿಸುವ ಯೋಚನೆ ನಿಮ್ಮದಾಗಿರಬಹುದು. ಈ ಬೆಲೆಗೆ ಬ್ರಾಂಡೆಡ್ ಸ್ಮಾರ್ಟ್ ಟಿವಿಯನ್ನು ನೀವು ಮನೆಗೆ ತರಬಹುದು. ಅದು ಕೂಡಾ 32 ಇಂಚಿನ ಸ್ಮಾರ್ಟ್‌ ಟಿವಿಯನ್ನು ಮನೆಯ ಗೋಡೆಗೆ ಅಳವಡಿಸಬಹುದು. ಯಾವ ಬ್ರಾಂಡ್‌ ಟಿವಿ ಎಂಬುದನ್ನು ನೀವಿನ್ನೂ ಆಯ್ಕೆ ಮಾಡದಿದ್ದರೆ, ನಿಮಗಾಗಿ 5 ಉತ್ತಮ ಆಯ್ಕೆಗಳನ್ನು ನಾವು ಕೊಡುತ್ತೇವೆ. ಐದು ಭಿನ್ನ ಕಂಪನಿಗಳ ಈ ಸ್ಮಾರ್ಟ್‌ ಟಿವಿಗಳು ನಿಮ್ಮ ಬೇಡಿಕೆಗಳನ್ನು ಈಡೇರಿಸಬಹುದು. ಈ ಎಲ್ಲಾ ಟಿವಿಗಳು 15ರಿಂದ 16 ಸಾವಿರ ರೂಪಾಯಿಗಳ ಒಳಗೆ ನಿಮ್ಮ ಮನೆ ಸೇರುತ್ತವೆ. ಇದರಲ್ಲಿ ಪ್ರಬಲ ಬ್ರಾಂಡ್‌ಗಳಾಗಿರುವ ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಕಂಪನಿಯ ಟಿವಿಗಳು ಕೂಡಾ ಸೇರಿವೆ.

ಉತ್ತಮ ಗುಣಮಟ್ಟದ ಆಡಿಯೊ ಜೊತೆಗೆ ಗುಣಮಟ್ಟದ ವಿಡಿಯೋವನ್ನು ನೀವು ಆನಂದಿಸಬಹುದು. ಈಗ ಒಂದೊಂದೇ ಟಿವಿಗಳ ಬಗ್ಗೆ ವಿವರವಾದ ಮಾಹಿತಿ ತಿಳಿಯಿರಿ.

1. Samsung 80 cm Wondertainment Series HD Ready LED Smart TV (32 Inches)

ಸ್ಯಾಮ್‌ಸಂಗ್ ಕಂಪನಿಯ 32 ಇಂಚುಗಳ ಈ ಟಿವಿ ಅಮೆಜಾನ್‌ನಲ್ಲಿ 15,240 ರೂಪಾಯಿಗೆ ಲಭ್ಯವಿದೆ. ಇದರಲ್ಲಿ 60Hz ರಿಫ್ರೆಶ್ ರೇಟ್‌ನೊಂದಿಗೆ ಎಚ್‌ಡಿ ರೆಡಿ ಡಿಸ್‌ಪ್ಲೇ ಬರುತ್ತದೆ. ಈ ಟಿವಿಯಲ್ಲಿ ನೀವು ಪರ್ಸನಲ್ ಕಂಪ್ಯೂಟರ್, ಸ್ಕ್ರೀನ್ ಶೇರ್, ಮ್ಯೂಸಿಕ್ ಸಿಸ್ಟಮ್, ಕನೆಕ್ಟ್ ಶೇರ್ ಮೂವಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆಯುವಿರಿ. 1 ವರ್ಷದ ವಾರಂಟಿ ಕೂಡಾ ಇದೆ.

2. Acer 80 cm V Series HD Ready Smart QLED Google TV (32 inches)

ಏಸರ್ ಕಂಪನಿಯ 32 ಇಂಚುಗಳ ಟಿವಿ ಬೆಲೆಯು ಅಮೆಜಾನ್‌ನಲ್ಲಿ ಕೇವಲ 14,999 ರೂಪಾಯಿ. ಕಂಪನಿಯು ಈ ಟಿವಿಗೆ 2 ವರ್ಷಗಳ ವಾರಂಟಿ ಕೂಡಾ ನೀಡುತ್ತಿದೆ. ಪ್ರೀಮಿಯಂ ಲುಕ್‌ನಲ್ಲಿರುವ ಟಿವಿಯಲ್ಲಿ 60 ಹೆರ್ಟ್ಜ್ ರಿಫ್ರೆಶ್ ರೇಟ್‌ನೊಂದಿಗೆ ಎಚ್‌ಡಿ ರೆಡಿ ಡಿಸ್ಪ್ಲೇ ಇದೆ. ಗುಣಮಟ್ಟದ ಸ್ಪೀಕರ್‌ ಅಳವಡಿಸಲಾಗಿದೆ. ಟಿವಿಯ ಧ್ವನಿ ಔಟ್ ಪುಟ್ 30 ವ್ಯಾಟ್ ಆಗಿದೆ. ಈ ಟಿವಿ 1.5 ಜಿಬಿ ರ್ಯಾಮ್ ಮತ್ತು 16 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ.

3. TCL 80.04 cm Metallic Bezel-Less S Series Full HD Smart LED Google TV 32S5500 (32 inches)

ಟಿಸಿಎಲ್‌ನ 32 ಇಂಚುಗಳ ಟಿವಿ ಅಮೆಜಾನ್ ಇಂಡಿಯಾದಲ್ಲಿ 13,990 ರೂ.ಗಳಿಗೆ ಲಭ್ಯವಿದೆ. ಈ ಟಿವಿಯಲ್ಲಿ 60Hz ರಿಫ್ರೆಶ್ ರೇಟ್‌ನೊಂದಿಗೆ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಇದೆ. ಗುಣಮಟ್ಟದ ವಿಡಿಯೋ ಜೊತೆಗೆ ಉತ್ತಮ ಆಡಿಯೋ ಕೂಡಾ ಆನಂದಿಸಬಹುದು. ಈ ಟಿವಿ 1.5 ಜಿಬಿ ರ್ಯಾಮ್ ಮತ್ತು 16 ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ. ಹಲವು ಒಟಿಟಿ ಅಪ್ಲಿಕೇಶನ್‌ಗಳನ್ನು ಕೂಡಾ ನೋಡಬಹುದು. ಟಿವಿಗೆ ಒಂದು ವರ್ಷದ ವಾರಂಟಿ ಬರುತ್ತದೆ.

4. LG 80 cm HD Ready Smart LED TV 32LQ576BPSA (32 inches)

ಎಲ್‌ಜಿ ಕಂಪನಿಯ ಈ ಟಿವಿ ಬೆಲೆ 15,990 ರೂಪಾಯಿ. 60 ಹೆರ್ಟ್ಜ್ ರಿಫ್ರೆಶ್ ರೇಟ್ ಹೊಂದಿರುವ ಡಿಸ್ಪ್ಲೇ ಇದರಲ್ಲಿದ್ದು, 178 ಡಿಗ್ರಿ ವೀಕ್ಷಣಾ ಕೋನವನ್ನು ಹೊಂದಿದೆ. ಟಿವಿಯಲ್ಲಿ ಡಾಲ್ಬಿ ಡಿಜಿಟಲ್ ಪ್ಲಸ್ ಸೌಂಡ್ ಕಾನ್ಫಿಗರೇಶನ್ ಕೂಡಾ ಪಡೆಯುತ್ತೀರಿ. ಇದಲ್ಲದೆ, ಕಂಪನಿಯು ಈ ಟಿವಿಯಲ್ಲಿ ಎಐ ಸೌಂಡ್ ಮತ್ತು ವರ್ಚುವಲ್ ಸರೌಂಡ್ ಸೌಂಡ್ 5.1 ಅನ್ನು ಫೀಚರ್‌ ನೀಡುತ್ತಿದೆ. 2-ವೇ ಬ್ಲೂಟೂತ್ ಜೊತೆಗೆ ಎರಡು ಎಚ್‌ಡಿಎಂಐ ಪೋರ್ಟ್‌ಗಳು ಮತ್ತು ಯುಎಸ್‌ಬಿ ಪೋರ್ಟ್ ಅನ್ನು ಹೊಂದಿದೆ. ಒಂದು ವರ್ಷದ ವಾರಂಟಿಯನ್ನು ನೀಡಲಾಗುತ್ತಿದೆ.

5. TOSHIBA 80 cm V Series HD Ready Smart Android LED TV 32V35MP (32 inches)

ತೋಶಿಬಾ ಕಂಪನಿಯ 32 ಇಂಚುಗಳ ಈ ಟಿವಿ 12,999 ರೂಪಾಯಿಗೆ ಖರೀದಿಸಬಹುದು. ಈ ಟಿವಿ 60 ಹೆರ್ಟ್ಜ್ ರಿಫ್ರೆಶ್ ರೇಟ್‌ನೊಂದಿಗೆ ಎಚ್‌ಡಿ ರೆಡಿ ಡಿಸ್‌ಪ್ಲೇ ಹೊಂದಿದೆ. ಉತ್ತಮ ಚಿತ್ರ ಗುಣಮಟ್ಟ ಕೂಡಾ ಬರುತ್ತದೆ. ಬೆಜೆಲ್-ಲೆಸ್ ವಿನ್ಯಾಸವು ಈ ಟಿವಿಗೆ ಪ್ರೀಮಿಯಂ ನೋಟ ನೀಡುತ್ತದೆ. ಟಿವಿಯಲ್ಲಿ 20 ವ್ಯಾಟ್ ಶಕ್ತಿಯುತ ಸ್ಪೀಕರ್‌ ಅಳವಡಿಸಲಾಗಿದೆ.

mysore-dasara_Entry_Point