ಮಣ್ಣಿನ ಪಾತ್ರೆಗಳನ್ನು ಬಳಸುವ ಮೊದಲು ನೀವು ಅವುಗಳನ್ನು ಈ ರೀತಿ ಸ್ವಚ್ಛ ಮಾಡಿ, ನಂತರ ಅಡುಗೆ ಮಾಡಿ-this is how you clean earthenware before using it then cook your food smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಣ್ಣಿನ ಪಾತ್ರೆಗಳನ್ನು ಬಳಸುವ ಮೊದಲು ನೀವು ಅವುಗಳನ್ನು ಈ ರೀತಿ ಸ್ವಚ್ಛ ಮಾಡಿ, ನಂತರ ಅಡುಗೆ ಮಾಡಿ

ಮಣ್ಣಿನ ಪಾತ್ರೆಗಳನ್ನು ಬಳಸುವ ಮೊದಲು ನೀವು ಅವುಗಳನ್ನು ಈ ರೀತಿ ಸ್ವಚ್ಛ ಮಾಡಿ, ನಂತರ ಅಡುಗೆ ಮಾಡಿ

ಮಣ್ಣಿನ ಪಾತ್ರೆಗಳನ್ನು ಬಳಸುವ ಮೊದಲು ನೀವು ಅವುಗಳನ್ನು ಸ್ವಚ್ಛ ಮಾಡಿ, ನಂತರ ಅಡುಗೆ ಮಾಡಿ. ಇಲ್ಲವಾದರೆ ನೀವು ತಿನ್ನುವ ಪದಾರ್ಥಗಳಲ್ಲಿ ಮಣ್ಣು ಅಥವಾ ಮರಳಿನಂತಹ ಕಣಗಳು ಸಿಗಬಹುದು. ಇದು ನಿಮಗೆ ತೊಂದರೆ ಉಂಟು ಮಾಡುತ್ತದೆ.

ಮಣ್ಣಿನ ಮಡಿಕೆಗಳು
ಮಣ್ಣಿನ ಮಡಿಕೆಗಳು

ಆಧುನಿಕ ಕಾಲದಲ್ಲಿ ಅಡುಗೆಗೆ ಹೆಚ್ಚಾಗಿ ಅಲ್ಯೂಮಿನಿಯಂ ಅಥವಾ ಸ್ಟೀಲ್ ಪಾತ್ರೆಗಳನ್ನು ಬಳಸಲಾಗುತ್ತದೆ. ಆದರೆ ಮೊದಲು ಮಣ್ಣಿನ ಮಡಕೆಗಳಿದ್ದವು. ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಆಹಾರದ ರುಚಿಯೇ ಬೇರೆ. ಅದರಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ವಿವಿಧ ಪೋಷಕಾಂಶಗಳು ದೊರೆಯುತ್ತವೆ. ಆದರೆ, ಮಣ್ಣಿನ ಪಾತ್ರೆಗಳ ಬಳಕೆ ವಿರಳವಾಗಿರುವುದರಿಂದ ಬಳಕೆ ಕಷ್ಟ ಹಾಗೂ ಒಡೆಯುವ ಸಾಧ್ಯತೆ ಇದೆ. ಈಗ ಮತ್ತೆ ಮಣ್ಣಿನ ಮಡಕೆ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ.

ಮೊದಲ ಬಾರಿಗೆ ಮಣ್ಣಿನ ಪಾತ್ರೆಗಳನ್ನು ಬಳಸುವ ಮೊದಲು ಅವುಗಳನ್ನು ಹೇಗೆ ಸ್ವಚ್ಛಗೊಳಿಸಬೇಕೆಂದು ತಿಳಿಯಿರಿ.

ಮಣ್ಣಿನ ಮಡಕೆಯನ್ನು ಮೊದಲ ಬಾರಿಗೆ ಹೀಗೆ ಬಳಸಿ

ಹೊಸ ಮಣ್ಣಿನ ಮಡಕೆಯನ್ನು ಖರೀದಿಸಿದ ನಂತರ, ಅದನ್ನು ಬಳಸುವ ಮೊದಲು ಮೃದುವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ. ಅದನ್ನು ಯಾವುದಾದರೂ ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಚೆನ್ನಾಗಿ ಒರೆಸಿ. ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರದಲ್ಲಿ ಅದರೊಳಗಡೆ ನೀರು ಹಾಕಿ. ನಂತರ ಅದನ್ನು ಚೆನ್ನಾಗಿ ತೊಳೆಯಿರಿ.

ನೀರಿನಲ್ಲಿ ನೆನೆಸಿಡಿ

ಅಡುಗೆ ಮಾಡುವ ಮೊದಲು ಮಣ್ಣಿನ ಪಾತ್ರೆಯನ್ನು ಕನಿಷ್ಠ 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ, ಈ ಪಾತ್ರೆಯಲ್ಲಿ ಮತ್ತೆ ನೀರನ್ನು ಹಾಕಿ ಮತ್ತು ಬಟ್ಟೆಯಿಂದ ಮತ್ತೆ ಒರೆಸಿ. ನಂತರ ಬಿಸಿಲಿನಲ್ಲಿ ಒಣಗಿಸಿ. ಬೇಕಾದರೆ, ಸ್ವಲ್ಪ ಸಮಯದವರೆಗೆ ಕೋಣೆಯಲ್ಲಿ ಸ್ವಚ್ಛವಾದ ಸ್ಥಳದಲ್ಲಿ ಇರಿಸಿ ಅದನ್ನು ಒಣಗಿಸಿ.

ಎಣ್ಣೆ ಹಚ್ಚಿ

ತೊಳೆದ ಮತ್ತು ಒಣಗಿದ ಮಣ್ಣಿನ ಮಡಕೆಯನ್ನು ಬಳಸುವ ಮೊದಲು ಎಣ್ಣೆ ಹಾಕಬೇಕು . ಇದಕ್ಕಾಗಿ ನೀವು ಸಾಸಿವೆ ಎಣ್ಣೆಯನ್ನು ಬಳಸಬಹುದು. ಅಥವಾ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ನಂತರ ಅದನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಅದರ ನಂತರ, ಮಡಕೆ ಅಡುಗೆಗೆ ಸಿದ್ಧವಾಗುತ್ತದೆ.

ಗ್ಯಾಸ್‌ನಲ್ಲಿ ಅಡುಗೆ ಮಾಡುವಾಗ ಮಣ್ಣಿನ ಪಾತ್ರೆಗಳು ಒಡೆಯುತ್ತವೆ ಎಂದು ಮಹಿಳೆಯರು ದೂರುತ್ತಾರೆ. ಅದಕ್ಕೆ ಕಾರಣ ಎಂದರೆ ಹೆಚ್ಚಿನ ಉರಿಯಲ್ಲಿ ಅದನ್ನು ಇಡುವುದು. ಓ ರೀತಿ ಮಾಡಿದರೆ ಅದು ಖಂಡಿತ ಒಡೆಯುತ್ತದೆ. ಈ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಯಾವಾಗಲೂ ಕಡಿಮೆ ಉರಿಯಲ್ಲಿ ಇದನ್ನು ಬೇಯಿಸಬೇಕು. ಹೆಚ್ಚಿನ ಉರಿಯಲ್ಲಿ ಬೇಯಿಸಿದರೆ ಮಣ್ಣಿನ ಪಾತ್ರೆಗಳು ಒಡೆಯುವ ಸಾಧ್ಯತೆ ಹೆಚ್ಚಿದೆ.

ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯಕರ ಜೀವನಕ್ಕೆ ದಾರಿಯಾಗುತ್ತದೆ. ಮಣ್ಣಿನ ಪಾತ್ರೆಯಲ್ಲಿನ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಮಡಿಕೆಗಳು ಸಣ್ಣ ರಂಧ್ರಗಳನ್ನು ಹೊಂದಿವೆ. ಇದು ಶಾಖವನ್ನು ಹರಡಲು ಕಾರಣವಾಗುತ್ತದೆ. ಆಹಾರವು ಎಲ್ಲಾ ಕಡೆ ಸಮವಾಗಿ ಬೇಯುತ್ತದೆ. ಪೋಷಕಾಂಶಗಳು ಸಹ ಸೋರಿಕೆಯಾಗುವುದಿಲ್ಲ. ಇದರ ರುಚಿಯೂ ಚೆನ್ನಾಗಿರುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ರಂಜಕ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ಉತ್ತಮ ಪರಿಮಳವನ್ನು ನೀಡುತ್ತದೆ. ಇದು ಆಹಾರ ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ.

ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ಮಾಡಿದ ಅನ್ನವನ್ನು ಊಟ ಮಾಡಿ.