Thalapathy Vijay: "ಕಷ್ಟದ ಸಮಯಗಳು ಉಳಿಯುವುದಿಲ್ಲ, ಕಷ್ಟಪಡುವ ಜನರು ಉಳಿಯುತ್ತಾರೆ" - ದಳಪತಿ ವಿಜಯ್ ಅವರ 17 ಸ್ಫೂರ್ತಿದಾಯಕ ನುಡಿಗಳು
Motivational Quotes Said By Thalapathy Vijay: ಬಡ ಹಿನ್ನೆಲೆಯಿಂದ ಬಂದ ದಳಪತಿ ವಿಜಯ್ ತಮಿಳು ಚಲನಚಿತ್ರೋದ್ಯಮದಲ್ಲಿ ಯಶಸ್ಸನ್ನು ಸಾಧಿಸಿದವರು ಮತ್ತು ಸಾಮಾಜಿಕ ಕಳಕಳಿ ಹೊಂದಿದವರು. ಕಾಲಿವುಡ್ ನಟನ ಸ್ಫೂರ್ತಿದಾಯಕ ನುಡಿಗಳು ಇಲ್ಲಿವೆ..
ಕಾಲಿವುಡ್ ನಟ ದಳಪತಿ ವಿಜಯ್ಗೆ ತಮಿಳುನಾಡಿನಲ್ಲಿ ಮಾತ್ರವಲ್ಲ ದಕ್ಷಿಣ ಭಾರತದೆಲ್ಲೆಡೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅಷ್ಟೇ ಅಲ್ಲ, ಉತ್ತರ ಭಾರತದಲ್ಲೂ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ವಿಜಯ್ ತಮ್ಮ ಅದ್ಭುತ ನಟನೆಗೆ ಮಾತ್ರವಲ್ಲ ಜೊತೆ ಸ್ಪೂರ್ತಿದಾಯಕ ಜೀವನಕ್ಕೂ ಉದಾಹರಣೆ. ಬಡ ಹಿನ್ನೆಲೆಯಿಂದ ಬಂದ ಅವರು ತಮಿಳು ಚಲನಚಿತ್ರೋದ್ಯಮದಲ್ಲಿ ಯಶಸ್ಸನ್ನು ಸಾಧಿಸಿದವರು ಮತ್ತು ಸಾಮಾಜಿಕ ಕಳಕಳಿ ಹೊಂದಿದವರು.
ದಳಪತಿ ವಿಜಯ್ ಅವರ 17 ಸ್ಫೂರ್ತಿದಾಯಕ ನುಡಿಗಳು ಇಲ್ಲಿವೆ:
1) "ನಿಮ್ಮ ಗುರಿ, ಗಮ್ಯಸ್ಥಾನ ಏನೇ ಇರಲಿ, ಅದನ್ನು ಸಾಧಿಸಲು ನೀವು ಸರಿಯಾದ ಮಾರ್ಗವನ್ನು ಆರಿಸಿಕೊಳ್ಳಬೇಕು."
2) "ಗಡಿಯಾರವನ್ನು ನೋಡಬೇಡಿ, ಅದು ಏನು ಮಾಡುತ್ತದೆ ನೀವು ಅದನ್ನು ಮಾಡಿ, ಮಾಡುತ್ತಲಿರಿ."
3) "ಯಾವಾಗಲೂ ಸ್ಮಾರ್ಟ್ ಆಗಿರಿ. ನಿಮ್ಮ ಪ್ರಯತ್ನ-ಪರಿಶ್ರಮಗಳ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ, ಫಲಿತಾಂಶಗಳನ್ನ ಮಾತ್ರ ನೋಡುತ್ತಾರೆ."
4) "ನಿಮ್ಮ ಅವಕಾಶವನ್ನು ಬೇರೊಬ್ಬರು ಪಡೆದುಕೊಳ್ಳುವ ಮೊದಲು ಓಡಿ ಮತ್ತು ಬೆನ್ನಟ್ಟಿ ಅದನ್ನು ಪಡೆಯಿರಿ."
5) "ಚಂಡಮಾರುತದ ನಡುವೆ ನಡೆಯುತ್ತಾ ಇರಿ, ನಿಮ್ಮ ಕಾಮನಬಿಲ್ಲು ಹೊರಗೆ ಕಾಯುತ್ತಿರುತ್ತದೆ." (ಕಷ್ಟಪಟ್ಟರೆ ಸುಖ ಎಂದರ್ಥ)
6) "ನಾನು ಹೇಗೆ ಗೆಲ್ಲುತ್ತೇನೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಕಳೆದುಕೊಳ್ಳುವುದಿಲ್ಲ ಎಂಬುದು ನನಗೆ ತಿಳಿದಿದೆ."
7) "ನಕಾರಾತ್ಮಕ ಪರಿಸ್ಥಿತಿಯಲ್ಲೂ ಸಕಾರಾತ್ಮಕ ಮನೋಭಾವವನ್ನು ಹೊಂದಿರಿ."
8) "ಅವರನ್ನು (ಆಡಿಕೊಳ್ಳುವವರನ್ನು) ಯಶಸ್ಸಿನಿಂದ ಕೊಂದು ನಗುವಿನಿಂದ ಹೂತುಹಾಕಿ."
9) "ಕಷ್ಟದ ಸಮಯಗಳು ಉಳಿಯುವುದಿಲ್ಲ. ಕಷ್ಟಪಡುವ ಜನರು ಉಳಿಯುತ್ತಾರೆ."
10) "ನಿಮ್ಮ ಚಲನೆ ಮೌನವಾಗಿರಲಿ. ಯಶಸ್ಸು ಸದ್ದು ಮಾಡುತ್ತದೆ."
11) "ನೀವು ವಿಫಲರಾಗುತ್ತಿದ್ದರೆ, ಅವಮಾನಿಸಲ್ಪಡುತ್ತಿದ್ದರೆ ಅಥವಾ ತಿರಸ್ಕಾರಕ್ಕೆ ಒಳಗಾಗಿದ್ದರೆ ನಕ್ಕುಬಿಡಿ. ಯಶಸ್ಸು ನಿಮ್ಮನ್ನು ನೋಡಿ ಮುಗುಳ್ನಗುತ್ತದೆ."
12) "ಅವರ ಕಣ್ಣಲ್ಲಿ ನಿಮ್ಮ ಬೆಳಕುಹೊಳೆಯುತ್ತಿದೆ ಎಂದ ಮಾತ್ರಕ್ಕೆ ನಿಮ್ಮ ಬೆಳಕನ್ನು ಮಂದಗೊಳಿಸಲು ಅವರಿಗೆ ಬಿಡಬೇಡಿ." (ನಿಮ್ಮ ಸಾಮರ್ಥ್ಯ ಇನ್ನೊಬ್ಬರಿಗೆ ತಿಳಿದಿದೆ ಅಂದ ಮಾತ್ರಕ್ಕೆ ಅವರ ಮುಂದೆ ನೀವು ಬಗ್ಗಬೇಕಿಲ್ಲ, ಅಥವಾ, ನಿಮ್ಮ ಸಾಮರ್ಥ್ಯವನ್ನು ಕುಗ್ಗಿಸೋಕೆ ಬಿಡಬೇಡಿ ಎಂದರ್ಥ. ನಿಮಗೆ ನಿಮ್ಮ ಜೀವನದಲ್ಲಿ ಏನೋ ಗುರಿ ಇದೆ. ಆದರೆ, ಕೆಲವರು ನಿಮ್ಮ ಕನಸಿಗೆ ಮುಳ್ಳು ಚುಚ್ಚೋಕೆ ನೋಡ್ತಾರೆ. ನಿಮ್ಮ ಕನಸಿನ ಲೈಟ್ ಆಫ್ ಮಾಡಲು ಬರ್ತಾರೆ. ಅದಕ್ಕೆ ಅವಕಾಶ ನೀಡಬೇಡಿ. ಇತರರು ನಿಮ್ಮ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಅದಕ್ಕೆ ಅವಕಾಶ ನೀಡಬೇಡಿ ಎಂದರ್ಥ. )
13) "ಸವಾಲುಗಳಿಲ್ಲದ ಜೀವನ ನೀರಸವಾಗಿರುತ್ತದೆ. "
14) "ಯಾರಾದರೂ ನಿಮ್ಮನ್ನು ಇಷ್ಟಪಡದಿದ್ದಾಗ, ಅವರನ್ನು ನೋಡಿ ಮತ್ತು ಮುಗುಳ್ನಕ್ಕು ಬಿಡಿ."
15) "ನೀರಿನಂತೆ ಇರಿ, ಏಕೆಂದರೆ ಅದು ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸುತ್ತದೆ. ಆದರೆ ಯಾವುದಕ್ಕೂ ಅದನ್ನು ತಡೆಯಲು ಸಾಧ್ಯವಿಲ್ಲ."
16) "ಎಲ್ಲರೂ ನಿಮ್ಮನ್ನು ಪ್ರೀತಿಸಬೇಕು ಎಂದು ಎಂದಿಗೂ ಯೋಚಿಸಬೇಡಿ. ಕೆಲವು ದ್ವೇಷಿಗಳನ್ನೂ ಹೊಂದಿರಿ, ಅದು ನಿಮ್ಮ ಜೀವನವನ್ನು ಮೋಜುಮಯವಾಗಿಸುತ್ತದೆ."
17) "ದ್ವೇಷವನ್ನು ಇಂಧನವಾಗಿ ಬಳಸಿ. ಆಗ ನಿಮ್ಮ ಶಕ್ತಿಯು ಎಂದಿಗೂ ಖಾಲಿಯಾಗುವುದಿಲ್ಲ."
ವಿಭಾಗ