Travel Tips: ಹೊಸ ವರ್ಷಕ್ಕೆ ಟ್ರಿಪ್‌ ಪ್ಲಾನ್‌ ಇದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಪ್ಯಾಕಿಂಗ್‌ ಟಿಪ್ಸ್‌, ಹೀಗಿರಲಿ ನಿಮ್ಮ ಬ್ಯಾಗ್‌
ಕನ್ನಡ ಸುದ್ದಿ  /  ಜೀವನಶೈಲಿ  /  Travel Tips: ಹೊಸ ವರ್ಷಕ್ಕೆ ಟ್ರಿಪ್‌ ಪ್ಲಾನ್‌ ಇದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಪ್ಯಾಕಿಂಗ್‌ ಟಿಪ್ಸ್‌, ಹೀಗಿರಲಿ ನಿಮ್ಮ ಬ್ಯಾಗ್‌

Travel Tips: ಹೊಸ ವರ್ಷಕ್ಕೆ ಟ್ರಿಪ್‌ ಪ್ಲಾನ್‌ ಇದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಪ್ಯಾಕಿಂಗ್‌ ಟಿಪ್ಸ್‌, ಹೀಗಿರಲಿ ನಿಮ್ಮ ಬ್ಯಾಗ್‌

ಟ್ರಿಪ್‌ ಹೋಗೋರಿಗೆ ಹೆಚ್ಚು ಕಾಡೋದು ಬ್ಯಾಗ್‌ ಚಿಂತೆ. ಬ್ಯಾಗ್‌ ಚಿಕ್ಕದಾದ್ರೆ ಏನೋ ಹಿಡಿಸೊಲ್ಲ ಅಂತಾದ್ರೆ, ದೊಡ್ಡ ಬ್ಯಾಗ್‌ನಲ್ಲಿ ಜಾಸ್ತಿ ವಸ್ತು ತುಂಬಿದ್ರೆ ಅದನ್ನು ಎತ್ತಿಕೊಂಡು ಹೋಗೋದೇ ಇಷ್ಟ ಅನ್ನೂ ಚಿಂತೆ. ಹಾಗಾದ್ರೆ ಟ್ರಿಪ್‌ಗೆ ಹೋಗೋಕೆ ಪ್ಯಾಕಿಂಗ್‌ ಹೇಗಿರಬೇಕು. ಇಲ್ಲಿದೆ ನಿಮಗಾಗಿ ಒಂದಿಷ್ಟು ಟಿಪ್ಸ್‌.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಟ್ರಿಪ್‌ಗೆ ಹೋಗೋದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಬದುಕಿನ ಒತ್ತಡದ ಜಂಜಾಟದಿಂದ ತಪ್ಪಿಸಿಕೊಂಡು ಹೋದರೆ ಸಾಕಪ್ಪಾ ಅನ್ನಿಸುತ್ತಿರುತ್ತದೆ. ಆದರೆ ಟ್ರಿಪ್‌ ಹೋಗೋದು ಅಂದ್ರೆ ಸೀದಾ ಎದ್ದು ನಡಿಯೋದಲ್ಲ. ಅದಕ್ಕೆ ಒಂದಿಷ್ಟು ತಯಾರಿಯೂ ಬೇಕು. ಟ್ರಿಪ್‌ ಎಂದಾಕ್ಷಣ ಮೊದಲು ಅವಶ್ಯವಾಗೋದು ಬ್ಯಾಗ್‌. ನಮಗೆ ಅಗತ್ಯ ವಸ್ತುಗಳು ಟ್ರಿಪ್‌ನಲ್ಲ ಇರಲೇಬೇಕು. ಅದಕ್ಕಾಗಿ ಮುಂಚಿತವಾಗಿ ಬ್ಯಾಗ್‌ನಲ್ಲಿ ಎಲ್ಲವನ್ನೂ ಇರಿಸಿಕೊಳ್ಳಬೇಕು. ಹಾಗಂತ ಟ್ರಾವೆಲ್‌ನಲ್ಲಿ ಬ್ಯಾಗ್‌ಗೆ ದೊಡ್ಡದಾದ್ರು ಕಷ್ಟ. ಆ ಕಾರಣಕ್ಕೆ ಟ್ರಿಪ್‌ ಹೋಗುವ ಮುಂಚೆ ನಿಮ್ಮ ಬ್ಯಾಗ್‌ ಹೇಗಿರಬೇಕು ಎಂಬ ಬಗ್ಗೆ ನಿರಂತರವಾಗಿ ಟ್ರಾವೆಲ್‌ ಮಾಡುವವರು ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.

ಬಟ್ಟೆಗಳನ್ನು ಸುತ್ತುವುದು: ಬ್ಯಾಗ್‌ನಲ್ಲಿ ಹೆಚ್ಚು ವಸ್ತುಗಳು ಹಿಡಿಯಬೇಕು ಅಂದ್ರೆ ಬಟ್ಟೆಯನ್ನು ರೋಲ್‌ ಮಾಡಬೇಕು. ರೋಲ್‌ ಮಾಡಿದ ಬಟ್ಟೆಗಳನ್ನು ನೀಟಾಗಿ ಜೋಡಿಸಿದರೆ ಸಾಕಷ್ಟು ಸ್ಥಳಾವಕಾಶ ದೊರೆಯುತ್ತದೆ.

ಪ್ರವಾಸ ಯೋಗ್ಯ ಬಟ್ಟೆಗಳು: ಪ್ರವಾಸಕ್ಕೆ ಹೋಗುವ ನೀವು ಯಾವ ಸ್ಥಳಕ್ಕೆ ಹೋಗುತ್ತಿರಿ ಎಂಬುದರ ಆಧಾರದ ಮೇಲೆ ಬಟ್ಟೆಗಳನ್ನು ಇರಿಸಿಕೊಳ್ಳಬೇಕು. ಸಾಧ್ಯವಾದಷ್ಟು ಸ್ಟ್ರೆಚೇಬಲ್‌ ಬಟ್ಟೆಗಳನ್ನು ತೆಗೆದುಕೊಂಡಿರಬೇಕು. ಸುಕ್ಕಾಗುವ ಬಟ್ಟೆಗಳ ಖಂಡಿತ ಬೇಡ.

ನಿಮಗೆ ಹೆಚ್ಚು ಅವಶ್ಯ ಎನ್ನಿಸುವ ಬಟ್ಟೆಗಳು ಮೇಲಿರಲಿ: ನೀವು ವಿಮಾನ ಅಥವಾ ಬಸ್‌ ಇಳಿದ ತಕ್ಷಣ ಧರಿಸಲು ಬೇಕಾಗುವ ಬಟ್ಟೆಗಳನ್ನು ಮೇಲೆ ಜೋಡಿಸಿ. ಇದರಿಂದ ಗಡಿಬಿಡಿಯಲ್ಲಿ ಹುಡುಕುವುದು ಬ್ಯಾಗ್‌ ಚೆಲ್ಲಾಪಿಲ್ಲಿಯಾಗುವುದನ್ನು ತಪ್ಪಿಸಬಹುದು.

ಭಾರದ ವಸ್ತುಗಳನ್ನು ಕೊನೆಯಲ್ಲಿ ಇರಿಸಿ: ಶೂಗಳು, ಪುಸ್ತಕದಂತಹ ವಸ್ತುಗಳನ್ನು ಬ್ಯಾಗ್‌ನ ತಳಭಾಗದಲ್ಲಿ ಇರಿಸಿ. ಇದು ನಿಮಗೆ ಬ್ಯಾಗ್‌ ಚೆಲ್ಲಾಪಿಲ್ಲಿಯಾಗದಂತೆ ತಡೆಯುತ್ತದೆ.

ಬಟ್ಟೆಗಳ ನಡುವೆ ಪ್ಲಾಸ್ಟಿಕ್‌ ಡ್ರೈಕ್ಲೀನಿಂಗ್‌ ಬ್ಯಾಗ್‌ಗಳನ್ನು ಲೇಯರ್‌ ಮಾಡಿ: ಬಟ್ಟೆಗಳ ನಡುವೆ ಡ್ರೈ ಕ್ಲೀನಿಂಗ್‌ ಬ್ಯಾಗ್‌ ಇರಿಸುವುದು ಮುಖ್ಯವಾಗುತ್ತದೆ. ಇದರಿಂದ ಎಲ್ಲವನ್ನೂ ನೀಟಾಗಿ ಜೋಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಕೊಳೆ ಬಟ್ಟೆ ಒಳ್ಳೆಯ ಬಟ್ಟೆಯನ್ನು ವಿಂಗಡಿಸಲು ಸಾಧ್ಯವಾಗುತ್ತದೆ.

ಚಿಕ್ಕ ಐರನ್‌ ಬಾಕ್ಸ್‌ ಇರಲಿ: ಸಾಧ್ಯವಾದಷ್ಟು ಐರನ್‌ ಮಾಡಲು ಅವಶ್ಯವಿಲ್ಲದ ಬಟ್ಟೆಗಳನ್ನೇ ತೆಗೆದುಕೊಂಡು ಹೋಗಿ. ಎಮರ್ಜೆನ್ಸಿಗೆಂದು ಒಂದು ಮಿನಿ ಐರನ್‌ ಬಾಕ್ಸ್‌ ನಿಮ್ಮ ಜೊತೆ ಇದ್ದರೆ ಉತ್ತಮ.

ಔಷಧಿಗಳು ತಪ್ಪದೇ ಬ್ಯಾಗ್‌ನಲ್ಲಿರಲಿ: ನೀವು ಯಾವ ಸ್ಥಳಕ್ಕೆ ಹೋದರೂ ಒಂದಿಷ್ಯ ಅವಶ್ಯ ಔಷಧಿಗಳನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಬಹಳ ಮುಖ್ಯವಾಗುತ್ತದೆ. ಇದು ಅವಶ್ಯ ಕೂಡ.

ಮರುಬಳಕೆಯ ನೀರಿನ ಬಾಟಲಿ: ಬಳಸಿ ಎಸೆಯುವ ನೀರಿನ ಬಾಟಲಿಗಿಂತ ಮರುಬಳಕೆ ನೀರಿನ ಬಾಟಲಿಯನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗುವುದು ಉತ್ತಮ. ಇದು ನಿಮಗೆ ಹಲವು ಸಂದರ್ಭಗಳಲ್ಲಿ ಸಹಾಯಕ್ಕೆ ಬರುತ್ತದೆ.

Whats_app_banner