Varalakshmi Vrata: ವರಮಹಾಲಕ್ಷ್ಮಿ ಪೂಜೆಯ ವೇಳೆ ಪಠಿಸುವ ಮಂತ್ರಗಳಾವುವು? ಇಲ್ಲಿವೆ ಗಮನಿಸಿ
ಇಂದು ಶ್ರಾವಣ ಶುಕ್ಲ ಅಷ್ಟಮಿ. ಕರ್ನಾಟಕದ ಬಹುತೇಕ ಕಡೆ ವರಮಹಾಲಕ್ಷ್ಮಿ ಸಡಗರ (Varamahalakshmi pooje). ವರಮಹಾಲಕ್ಷ್ಮಿಯ ಒಲುಮೆ ಪಡೆಯಲು ಪೂಜೆ, ವ್ರತಾಚರಣೆಯ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಪೂಜೆಯ ವೇಳೆ ಪಠಿಸಬೇಕಾದ ವರಮಹಾಲಕ್ಷ್ಮಿಯ ಮಂತ್ರಗಳು ಯಾವುವು? ಇಲ್ಲಿದೆ ವಿವರ.
ವರ ಲಕ್ಷ್ಮಿ ಎಂದರೆ ಬೇಡಿದ ವರವನ್ನು ಕೊಡುವಂತಹ ಸಂಪತ್ತಿನ ದೇವತೆ. ಹಿಂದು ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆ ಎನ್ನುತ್ತಾರೆ. ಶ್ರೀ ಮಹಾಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ವರಮಹಾಲಕ್ಷ್ಮಿ ಪೂಜೆ, ವ್ರತಾಚರಣೆ ಉತ್ತಮ ಅವಕಾಶ, ಸೂಕ್ತ ಕಾಲ ಎಂದೂ ಹೇಳಬಹುದು. ಈ ಪೂಜೆಯನ್ನು (Varamahalakshmi pooje) ಆಚರಿಸುವುದರಿಂದ, ಆಚರಿಸುವಂತಹ ವ್ಯಕ್ತಿಯ ಕುಟುಂಬದಲ್ಲಿ ಸುಖ, ಸಂತೋಷ, ಸಮೃದ್ಧಿ ನೆಲೆಸುತ್ತದೆ.
ಇಂತಹ ಪರಮಶ್ರೇಷ್ಠ ವರಮಹಾಲಕ್ಷ್ಮಿಯನ್ನು ಪೂಜಿಸುವುದರಿಂದ ವ್ಯಕ್ತಿಗೆ ಆಗುವ ಪ್ರಯೋಜನಗಳು ಪ್ರಮುಖವಾಗಿ ಐದು. ಬಹುತೇಕರು ಪೂಜಿಸುವಾಗ ದೇವಿಯ ಮುಂದಿಡುವ ಬೇಡಿಕೆಗಳು ಐದು ಎಂದೂ ಹೇಳಬಹುದು.
1. ಸಂಪತ್ತು ಸಮೃದ್ಧಿ: ಮನೆಯಲ್ಲಿ ಅಥವಾ ಕುಟುಂಬದಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗುತ್ತದೆ.
2. ಆರ್ಥಿಕ ಅಭಿವೃದ್ಧಿ: ಆದಾಯದಲ್ಲಿ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಅಭಿವೃದ್ಧಿಯಾಗುತ್ತದೆ.
3. ಸಂತಾನ ಭಾಗ್ಯ: ಸಂತಾನ ಭಾಗ್ಯ ಅಪೇಕ್ಷಿತರು ವರಮಹಾಲಕ್ಷ್ಮಿ ಪೂಜೆ ಸಲ್ಲಿಸುವಾಗ ಇದೇ ವಿಷಯವನ್ನು
4. ಸೌಭಾಗ್ಯವತಿ: ಪತಿಯ ದೀರ್ಘಾಯುಷ್ಯಕ್ಕಾಗಿ ಪೂಜೆಯನ್ನು ಆಚರಿಸಲಾಗುತ್ತದೆ.
5. ಸಾಮಾಜಿಕ ಗೌರವ: ಸಮಾಜದಲ್ಲಿ ಸ್ಥಾನ ಮಾನ ಹೆಚ್ಚಾಗುವುದು
ವರಮಹಾಲಕ್ಷ್ಮಿ ಪೂಜೆಯಲ್ಲಿ ಪಠಿಸಬಹುದಾದ ಲಕ್ಷ್ಮಿ ಮಂತ್ರಗಳು:
ಲಕ್ಷ್ಮಿ ಬೀಜ ಮಂತ್ರ
ಓಂ ಹ್ರೀಂ ಶ್ರೀಂ ಲಕ್ಷ್ಮೀಭ್ಯೋ ನಮಃ ||
ಮಹಾಲಕ್ಷ್ಮಿ ಮಂತ್ರ
ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಲಾಯೇ ಪ್ರಸೀದ ಪ್ರಸೀದ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮ್ಯೇ ನಮಃ ||
ಲಕ್ಷ್ಮೀ ಗಾಯತ್ರಿ ಮಂತ್ರ
ಓಂ ಶ್ರೀ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣುಪತ್ನ್ಯೇ ಚ ಧೀಮಹೀ ತನ್ನೋ ಲಕ್ಷ್ಮೀ ಪ್ರಚೋದಯಾತ್
ವರಮಹಾಲಕ್ಷ್ಮಿ ವ್ರತ ಮಂತ್ರ
ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋ ಪಾಂತ್ಯ ಭಾಗವೇ |
ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿ ಪ್ರದಾಯಕಂ (ಸರ್ವ ಮಾಂಗಲ್ಯ ಸಿದ್ಧಯೇ) ||
ವರಮಹಾಲಕ್ಷ್ಮಿಯನ್ನು ನಮಸ್ಕರಿಸುವ ಮಂತ್ರ
ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತು ತೇ ||
ವರಮಹಾಲಕ್ಷ್ಮಿ ಅಷ್ಟೋತ್ತರ ಮಂತ್ರ
ಓಂ ಪ್ರಕ್ರತ್ಯೈ ನಮಃ
ಓಂ ವಿಕೃತ್ಯೈ ನಮಃ
ಓಂ ವಿದ್ಯಾಯೈ ನಮಃ
ಓಂ ಸುರಭ್ಯೈ ನಮಃ
ಓಂ ಪರಮಾತ್ಮಿಕಾಯೈ ನಮಃ
ಓಂ ವಾಚೇ ನಮಃ
ಓಂ ಪದ್ಮಲಯಾಯೈ ನಮಃ
ಓಂ ಪದ್ಮಾಯೈ ನಮಃ
ಓಂ ಶುಚ್ಯೈ ನಮಃ
ಓಂ ಸ್ವಾಹಾಯೈ ನಮಃ
ಓಂ ಸ್ವಧಾಯೈ ನಮಃ
ಓಂ ಸುಧಾಯೈ ನಮಃ
ಓಂ ಧನ್ಯಾಯೈ ನಮಃ
ಓಂ ಹಿರಣ್ಮಯ್ಯೈ ನಮಃ
ಓಂ ಲಕ್ಷ್ಮ್ಯೈ ನಮಃ
ಓಂ ನಿತ್ಯ ಪುಷ್ಪಾಯೈ ನಮಃ
ಓಂ ವಿಭಾವರ್ಯೈ ನಮಃ
ಓಂ ಆದಿತ್ಯೈ ನಮಃ
ಓಂ ದಿತ್ಯೈ ನಮಃ
ಓಂ ದೀಪ್ತಾಯೈ ನಮಃ
ಓಂ ವಸುಧಾಯೈ ನಮಃ
ಓಂ ವಸುಧಾರಿಣ್ಯೈ ನಮಃ
ಓಂ ಕಮಲಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕ್ರೋಧ ಸಂಭವಾಯೈ ನಮಃ
ಓಂ ಅನುಗ್ರಹಪರಾಯೈ ನಮಃ
ಓಂ ಋದ್ಧಯೇ ನಮಃ
ಓಂ ಅನುಘಾಯೈ ನಮಃ
ಓಂ ಹರಿವಲ್ಲಭಾಯೈ ನಮಃ
ಓಂ ಅಶೋಕಾಯೈ ನಮಃ
ಓಂ ಅಮೃತಾಯೈ ನಮಃ
ಓಂ ದೀಪ್ತಾಯೈ ನಮಃ
ಓಂ ಲೋಕಶೋಕ ವಿನಾಶಿನ್ಯೈ ನಮಃ
ಓಂ ಧರ್ಮನಿಲಯಾಯೈ ನಮಃ
ಓಂ ಕರುಣಾಯೈ ನಮಃ
ಓಂ ಲೋಕಮಾತೇ ನಮಃ
ಓಂ ಪದ್ಮಪ್ರಿಯಾಯೈ ನಮಃ
ಓಂ ಪದ್ಮಹಸ್ತಾಯೈ ನಮಃ
ಓಂ ಪದ್ಮಾಕ್ಷ್ಯೈ ನಮಃ
ಓಂ ಪದ್ಮಸುಂದರ್ಯೈ ನಮಃ
ಓಂ ಪದ್ಮೋದ್ಭವಾಯೈ ನಮಃ
ಓಂ ಪದ್ಮಮುಖ್ಯೈ ನಮಃ
ಓಂ ಪದ್ಮನಾಭಪ್ರಿಯಾಯೈ ನಮಃ
ಓಂ ರಮಾಯೈ ನಮಃ
ಓಂ ಪದ್ಮಮಾಲಾಧರಾಯೈ ನಮಃ
ಓಂ ದೇವ್ಯೈ ನಮಃ
ಓಂ ಪದ್ಮಿನ್ಯೈ ನಮಃ
ಓಂ ಪದ್ಮಗಂಥಿನ್ಯೈ ನಮಃ
ಓಂ ಪುಣ್ಯಗಂಧಾಯೈ ನಮಃ
ಓಂ ಸುಪ್ರಸನ್ನಾಯೈ ನಮಃ
ಓಂ ಪ್ರಸಾದಾಭಿಮುಖ್ಯೈ ನಮಃ
ಓಂ ಪ್ರಭಾಯೈ ನಮಃ
ಓಂ ಚಂದ್ರ ವದನಾಯೈ ನಮಃ
ಓಂ ಚಂದ್ರಾಯೈ ನಮಃ
ಓಂ ಚಂದ್ರಸಹೋದರ್ಯೈ ನಮಃ
ಓಂ ಚತುರ್ಭುಜಾಯೈ ನಮಃ
ಓಂ ಚಂದ್ರರೂಪಾಯೈ ನಮಃ
ಓಂ ಇಂದಿರಾಯೈ ನಮಃ
ಓಂ ಇಂದುಶೀತುಲಾಯೈ ನಮಃ
ಓಂ ಆಹ್ಲಾದಜನನ್ಯೈ ನಮಃ
ಓಂ ಪುಷ್ಟ್ಯೈ ನಮಃ
ಓಂ ಶಿವಾಯೈ ನಮಃ
ಓಂ ಶಿವಕರ್ಯೈ ನಮಃ
ಓಂ ಸತ್ಯೈ ನಮಃ
ಓಂ ವಿಮಲಾಯೈ ನಮಃ
ಓಂ ವಿಶ್ವಜನನ್ಯೈ ನಮಃ
ಓಂ ತುಷ್ಟ್ಯೈ ನಮಃ
ಓಂ ದಾರಿದ್ರ್ಯ ನಾಶಿನ್ಯೈ ನಮಃ
ಓಂ ಪ್ರೀತಪುಷ್ಕರಿಣ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಶುಕ್ಲಮಾಲ್ಯಾಂಬರಾಯೈ ನಮಃ
ಓಂ ಶ್ರಿಯೈ ನಮಃ
ಓಂ ಭಾಸ್ಕರ್ಯೈ ನಮಃ
ಓಂ ಬಿಲ್ವನಿಲಯಾಯೈ ನಮಃ
ಓಂ ವರಾರೋಹಾಯೈ ನಮಃ
ಓಂ ಯಶಸ್ವಿನ್ಯೈ ನಮಃ
ಓಂ ವಸುಂಧರಾಯೈ ನಮಃ
ಓಂ ಉದಾರಾಂಗಾಯೈ ನಮಃ
ಓಂ ಹರಿಣ್ಯೈ ನಮಃ
ಓಂ ಹೇಮಮಾಲಿನ್ಯೈ ನಮಃ
ಓಂ ಧನಧಾನ್ಯ ಕರ್ಯೈ ನಮಃ
ಓಂ ಸಿದ್ಧಯೇ ನಮಃ
ಓಂ ಸ್ತ್ರೈಣ ಸೌಮ್ಯಾಯೈ ನಮಃ
ಓಂ ಶುಭಪ್ರದಾಯೈ ನಮಃ
ಓಂ ನೃಪವೇಶ್ಮ ಗತಾನಂದಾಯೈ ನಮಃ
ಓಂ ವರಲಕ್ಷ್ಮೈ ನಮಃ
ಓಂ ವಸುಪ್ರದಾಯೈ ನಮಃ
ಓಂ ಶುಭಾಯೈ ನಮಃ ಓಂ ಹಿರಣ್ಯಪ್ರಾಕಾರಾಯೈ ನಮಃ
ಓಂ ಸಮುದ್ರ ತನಯಾಯೈ ನಮಃ
ಓಂ ಜಯಾಯೈ ನಮಃ
ಓಂ ಮಂಗಳಾಯೈ ನಮಃ
ಓಂ ದೇವ್ಯೈ ನಮಃ
ಓಂ ವಿಷ್ಣು ವಕ್ಷಃ ಸ್ಥಲ ಸ್ಥಿತಾಯೈ ನಮಃ
ಓಂ ವಿಷ್ಣುಪತ್ನ್ಯೈ ನಮಃ
ಓಂ ಪ್ರಸನ್ನಾಕ್ಷ್ಯೈ ನಮಃ
ಓಂ ನಾರಾಯಣ ಸಮಾಶ್ರಿತಾಯೈ ನಮಃ
ಓಂ ದಾರಿದ್ರ್ಯ ಧ್ವಂಸಿನ್ಯೈ ನಮಃ
ಓಂ ಸರ್ವೋಪದ್ರವ ವಾರಿಣ್ಯೈ ನಮಃ
ಓಂ ನವದುರ್ಗಾಯೈ ನಮಃ
ಓಂ ಮಹಾಕಾಳ್ಯೈ ನಮಃ
ಓಂ ಬ್ರಹ್ಮ ವಿಷ್ಣು ಶಿವಾತ್ಮಿಕಾಯೈ ನಮಃ
ಓಂ ತ್ರಿಕಾಲ ಜ್ಞಾನ ಸಂಪನ್ನಾಯೈ ನಮಃ
ಓಂ ಭುವನೇಶ್ವರ್ಯೈ ನಮಃ
ಅಷ್ಟ ಲಕ್ಷ್ಮೀ ಸ್ತೋತ್ರ
ಆದಿ ಲಕ್ಷ್ಮೀ -
ಸುಮನಸ ವಂದಿತ ಸುಂದರಿ ಮಾಧವಿ, ಚಂದ್ರ ಸಹೋದರಿ ಹೇಮಮಯೇ
ಮುನಿಗಣಮಂಡಿತ ಮೋಕ್ಷಪ್ರದಾಯಿನಿ, ಮಂಜುಳಾ ಭಾಷಿಣಿ ವೇದನುತೇ |
ಪಂಕಜವಾಸಿನಿ ದೇವಸುಪೂಜಿತ, ಸದ್ಗುಣ ವರ್ಷಿಣಿ ಶಾಂತಿಯುತೆ
ಜಯ ಜಯ ಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಸದಾ ಪಾಲಯ ಮಾಮ್||
ಧನ ಲಕ್ಷ್ಮೀ -
ಧಿಮಿಧಿಮಿ ಧಿಂಧಿಮಿ ಧಿಂಧಿಮಿ-ದಿಂಧಿಮಿ, ದುಂಧುಭಿ ನಾದ ಸುಪೂರ್ಣಮಯೇ
ಘುಮಘುಮ ಘುಂಘುಮ ಘುಂಘುಮ ಘುಂಘುಮ, ಶಂಖ ನಿನಾದ ಸುವಾದ್ಯನುತೇ
ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ ||
ಧೈರ್ಯ ಲಕ್ಷ್ಮಿ -
ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮಂತ್ರ ಸ್ವರೂಪಿಣಿ ಮಂತ್ರಮಯೇ
ಸುರಗಣ ಪೂಜಿತ ಶೀಘ್ರ ಫಲಪ್ರದ, ಜ್ಞಾನ ವಿಕಾಸಿನಿ ಶಾಸ್ತ್ರನುತೇ
ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ
ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ ||
ಗಜಲಕ್ಷ್ಮಿ -
ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ ರ
ಧಗಜ ತುರಗಪದಾತಿ ಸಮಾವೃತ, ಪರಿಜನ ಮಂಡಿತ ಲೋಕನುತೇ
ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ ||
ವಿಜಯಲಕ್ಷ್ಮಿ -
ಜಯ ಕಮಲಾಸಿನಿ ಸದ್ಗತಿ ದಾಯಿನಿ, ಜ್ಞಾನವಿಕಾಸಿನಿ ಗಾನಮಯೇ
ಅನುದಿನ ಮರ್ಚಿತ ಕುಂಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ
ಕನಕಧರಾಸ್ತುತಿ ವೈಭವ ವಂದಿತ, ಶಂಕರದೇಶಿಕ ಮಾನ್ಯಪದೇ
ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಪರಿಪಾಲಯ ಮಾಮ್ ||
ಧಾನ್ಯ ಲಕ್ಷ್ಮಿ -
ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ
ಕ್ಷೀರ ಸಮುದ್ಭವ ಮಂಗಳ ರೂಪಿಣಿ, ಮಂತ್ರನಿವಾಸಿನಿ ಮಂತ್ರನುತೇ
ಮಂಗಳದಾಯಿನಿ ಅಂಬುಜವಾಸಿನಿ, ದೇವಗಣಾಶ್ರಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಪರಿಪಾಲಯ ಮಾಮ್ ||
ಸಂತಾನ ಲಕ್ಷ್ಮಿ -
ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಜ್ಞಾನಮಯೇ
ಗುಣಗಣವಾರಧಿ ಲೋಕಹಿತೈಷಿಣಿ, ಸಪ್ತಸ್ವರ ಭೂಷಿತ ಗಾನನುತೇ
ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವಂದಿತ ಪಾದಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ಸಂತಾನಲಕ್ಷ್ಮೀ ಪರಿಪಾಲಯ ಮಾಮ್ ||
ವಿದ್ಯಾ ಲಕ್ಷ್ಮಿ -
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ
ಮಣಿಮಯ ಭೂಷಿತ ಕರ್ಣವಿಭೂಷಣ, ಶಾಂತಿ ಸಮಾವೃತ ಹಾಸ್ಯಮುಖೇ
ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ
ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ ||
ಈ ಮಂತ್ರಗಳನ್ನು ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಪಠಿಸುವುದರಿಂದ ಚಂಚಲ ಸ್ವಭಾವದ ಲಕ್ಷ್ಮಿಯನ್ನು ನೀವು ಒಲಿಸಿಕೊಳ್ಳಬಹುದು. ಲಕ್ಷ್ಮೀ ದೇವಿಗೆ ಸಂಬಂಧಿಸಿದ ಇನ್ನೂ ಅನೇಕ ಮಂತ್ರಗಳಿದ್ದು, ಅವುಗಳನ್ನು ನಿಮ್ಮ ಕೋರಿಕೆಗೆ ಅನುಗುಣವಾಗಿ ಪಠಿಸಬಹುದು. ಲಕ್ಷ್ಮಿಗೆ ಸಂಬಂಧಿಸಿದ ಭಜನೆ, ಹಾಡುಗಳನ್ನು ಕೂಡ ಹಾಡಬಹುದ.