Shubh Muhurat: ಆಗಸ್ಟ್ ತಿಂಗಳಲ್ಲಿ ಮನೆ ನಿವೇಶನ ಆಸ್ತಿ ಖರೀದಿಗೆ, ಭೂಮಿ ಪೂಜೆಗೆ ಶುಭ ಮುಹೂರ್ತ, ಪ್ರಾಪರ್ಟಿ ಖರೀದಿದಾರರಿಗೆ ವಾಸ್ತು ಸಲಹೆ
Auspicious Dates for Property Registration 2023: ಆಗಸ್ಟ್ ತಿಂಗಳಲ್ಲಿ ಹೊಸ ಮನೆ ಖರೀದಿಗೆ, ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ಕೈಗೊಳ್ಳಲು, ನಿವೇಶನ ಖರೀದಿಗೆ, ಆಸ್ತಿ ನೋಂದಣಿಗೆ ಶುಭ ಮುಹೂರ್ತಗಳ ವಿವರ ಇಲ್ಲಿದೆ.
ಆಗಸ್ಟ್ ತಿಂಗಳಲ್ಲಿ ಸಾಕಷ್ಟು ಜನರು ಹೊಸ ಮನೆ ಖರೀದಿಸಲು ಉದ್ದೇಶಿಸಿರಬಹುದು. ನಿವೇಶನ ಖರೀದಿಸಲು ಬಯಸಬಹುದು. ಖರೀದಿಸಿದ ನಿವೇಶನದಲ್ಲಿ ಅಥವಾ ತಮ್ಮಲ್ಲಿರುವ ಭೂಮಿಯಲ್ಲಿ ಹೊಸ ಮನೆ ನಿರ್ಮಿಸಲು ಭೂಮಿ ಪೂಜೆ ಕೈಗೊಳ್ಳಲು ಉದ್ದೇಶಿಸರಬಹುದು. ಈ ರೀತಿ ಹಲವು ಲಕ್ಷ ರೂಪಾಯಿಯ ಆಸ್ತಿ ಖರೀದಿ ಅಥವಾ ಭೂಮಿ ಪೂಜೆಯಂತಹ ಶುಭ ಕಾರ್ಯಕ್ಕೆ ಶುಭ ದಿನ ನೋಡಿಕೊಳ್ಳುವುದು ಅಗತ್ಯವಾಗಿದೆ. ಆಸ್ತಿ ಖರೀದಿ ಅಥವಾ ನೋಂದಣಿಯು ಪ್ರತಿಯೊಬ್ಬರ ಜೀವಮಾನದಲ್ಲಿ ಅಪರೂಪಕ್ಕೆ ಒಂದೋ ಎರಡೋ ಬಾರಿ ಬರುವಂತಹ ಮಹತ್ವದ ಸಂದರ್ಭಗಳು. ಈ ಸಮಯದಲ್ಲಿ ಸಾಕಷ್ಟು ಜನರು ವಾಸ್ತು ಪ್ರಕಾರ, ಪಂಚಾಂಗ ಪ್ರಕಾರ ಶುಭ ದಿನಗಳನ್ನು, ಶುಭ ಗಳಿಗೆಗಳನ್ನು ನೋಡಬಹುದು.
ಆಗಸ್ಟ್ 2023ರಲ್ಲಿ ಹೊಸ ಮನೆ ಖರೀದಿಸಲು ಬಯಸುವವರು, ನಿವೇಶನ ಖರೀದಿಸಲು ಬಯಸುವವರು, ಭೂಮಿ ಪೂಜೆ ಮಾಡಿಸಲು ಬಯಸುವವರು ಶಾಸ್ತ್ರ ಬಲ್ಲವರಿಂದ ಮಾಹಿತಿ ಪಡೆಯಬಹುದು. ವಾಸ್ತು ತಜ್ಞರು, ವಾಸ್ತು ಸಲಹೆಗಾರರು, ಪಂಚಾಂಗ ನೋಡಲು ತಿಳಿದಿರುವ ಆರ್ಚಕರು, ಶಾಸ್ತ್ರಬಲ್ಲವರಿಂದ ಮಾಹಿತಿ ಪಡೆದು ಮುನ್ನುಡಿ ಇಡಿ. ಆಗಸ್ಟ್ ತಿಂಗಳಲ್ಲಿ ಯಾವ ಶುಭ ದಿನಗಳಿವೆ ಎಂದು ತಿಳಿಯಲು ಬಯಸುವವರಿಗಾಗಿ ಮಾಹಿತಿಗಾಗಿ ಇಲ್ಲಿ ಶುಭ ದಿನ, ಗಳಿಗೆ, ಮಹೂರ್ತ ಮಾಹಿತಿ ನೀಡಲಾಗಿದೆ. ಅಂತಿಮವಾಗಿ ಶುಭ ದಿನ ಆಯ್ಕೆ ಮಾಡಲು ನೀವು ತಜ್ಞರಿಂದ ಮಾಹಿತಿ ಪಡೆಯಬೇಕು ಎನ್ನುವುದು ನಮ್ಮ ಡಿಸ್ಕಮೇರ್. ವಿವಿಧ ಆಸ್ಟ್ರೋ ವೆಬ್‌ಸೈಟ್‌ಗಳು, ಪ್ರಾಪರ್ಟಿ ವೆಬ್‌ಸೈಟ್‌ಗಳಲ್ಲಿ ವಾಸ್ತು ತಜ್ಞರು ನೀಡಿದ ಮಾಹಿತಿ ಆಧರಿಸಿ ಶುಭ ಮಹೂರ್ತ ಇಲ್ಲಿ ನೀಡಲಾಗಿದೆ.
ಪ್ರಾಪರ್ಟಿ ನೋಂದಣಿಗೆ ಆಗಸ್ಟ್ 2023ರಲ್ಲಿ ಶುಭ ಮುಹೂರ್ತಗಳು
- ಆಗಸ್ಟ್ 17: ಗುರುವಾರ ಬೆಳಗ್ಗೆ 6.16ರಿಂದ ಆಗಸ್ಟ್ 18ರ ಬೆಳಗ್ಗೆ 6.16 ಗಂಟೆಯವರೆಗೆ ಶುಭ ಮಹೂರ್ತವಿದೆ. ನಕ್ಷತ್ರ: ಮಾಘ, ಪೂರ್ವ ಪಾಲ್ಗುಣಿ
- ಆಗಸ್ಟ್ 18: ಶುಕ್ರವಾರ ಬೆಳಗ್ಗೆ 6.16ಗಂಟೆಯಿಂದ ರಾತ್ರಿ 10.57 ಗಂಟೆಯವರೆಗೆ ಪೂರ್ವ ಪಾಲ್ಗುಣಿ ನಕ್ಷತ್ರವಿದ್ದು, ಆಸ್ತಿ ನೋಂದಣಿ ಮಾಡಬಹುದು.
- ಆಗಸ್ಟ್ 24: ಗುರುವಾರ ಬೆಳಗ್ಗೆ 6.18 ಗಂಟೆಯಿಂದ ಆಗಸ್ಟ್ 25ರ ಬೆಳಗ್ಗೆ 6.19 ಗಂಟೆಯವರೆಗೆ ವಿಶಾಖ, ಅನುರಾಧ ನಕ್ಷತ್ರವಿದ್ದು, ಪ್ರಾಪರ್ಟಿ ರಿಜಿಸ್ಟ್ರೇಷನ್ ಮಾಡಬಹುದು.
- ಆಗಸ್ಟ್ 25: ಗುರುವಾರ ಸಂಜೆ 5.45 ಗಂಟೆಯಿಂದ ಸೆಪ್ಟೆಂಬರ್ 1ರ ಬೆಳಗ್ಗೆ 3.18 ಗಂಟೆಯವರೆಗೆ ಪೂರ್ವ ಬಾದ್ರಪದ ನಕ್ಷತ್ರವಿದ್ದು, ಪ್ರಾಪರ್ಟಿ ನೋಂದಣಿ ಮಾಡಬಹುದು.
ಭೂಮಿ ಪೂಜೆಗೆ ಅತ್ಯುತ್ತಮ ನಕ್ಷತ್ರಗಳು
2023ರಲ್ಲಿ ಭೂಮಿ ಪೂಜೆ ಮಾಡಲು ಮಾರ್ಗಶಿರ, ಅನುರಾಧಾ, ಉತ್ತರಾ ಫಲ್ಗುಣಿ, ಧನಿಷ್ಠಾ, ಪುಷ್ಯ, ಉತ್ತರ ಭಾದ್ರಪದ, ಹಸ್ತ, ಉತ್ತರ ಆಷಾಧ, ರೇವತಿ, ಶತಭಿಷಾ, ಸ್ವಾತಿ, ಚಿತ್ರ, ರೋಹಿಣಿ ಮುಂತಾದ ನಕ್ಷತ್ರಗಳು ಸೂಕ್ತವಾಗಿವೆ. ಮನೆಯ ಅಡಿಪಾಯ ಮತ್ತು ಸುಗಮ ನಿರ್ಮಾಣ ಕಾರ್ಯಕ್ಕೆ ಈ ನಕ್ಷತ್ರಗಳು ಮಂಗಳಕರ ಎಂದು ಹೇಳಲಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಭೂಮಿ ಪೂಜೆಗೆ ಶುಭ ದಿನಗಳು
ಕೆಲವೊಂದು ಆಸ್ಟ್ರೋ ಪರಿಣತರ ಪ್ರಕಾರ ಆಗಸ್ಟ್ ತಿಂಗಳಲ್ಲಿ ಭೂಮಿ ಪೂಜೆಗೆ ಶುಭ ದಿನಗಳು ಇಲ್ಲ. ಆದರೆ, ವ್ಯಕ್ತಿಯ ನಕ್ಷತ್ರ ಇತ್ಯಾದಿಗಳನ್ನು ಪರಿಗಣಿಸಿ ಶುಭ ದಿನಗಳನ್ನು ಶಾಸ್ತ್ರ ಬಲ್ಲವರು ನೀಡಬಹುದು. ಹೌಸಿಂಗ್ ವೆಬ್ ತಾಣದ ಪ್ರಕಾರ ಆಗಸ್ಟ್ 14 ಭೂಮಿ ಪೂಜೆಗೆ ಶುಭ ದಿನವಾಗಿದೆ. ಈ ದಿನ ಪೂರ್ವ ಅಥವಾ ಪಶ್ಚಿಮ ದಿಕ್ಕಿನ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲು ಸೂಕ್ತವಾದ ದಿನವಾಗಿದೆ.
(ಡಿಸ್ಕಮೇರ್: ಇದು ಮಾಹಿತಿಗಾಗಿ ನೀಡಲಾದ ಶುಭ ಮಹೂರ್ತ. ಶಾಸ್ತ್ರ ಬಲ್ಲವರಿಂದ ಮನೆ ನಿರ್ಮಾಣ, ಭೂಮಿ ಪೂಜೆ, ನಿವೇಶನ ಖರೀದಿಗೆ ಸೂಕ್ತ ದಿನಗಳ ಮಾಹಿತಿ ಪಡೆಯಿರಿ)