Corn Recipe: ಮೆಕ್ಕೆಜೋಳ ನಿಮಗೂ ಇಷ್ಟವೇ; ಮಳೆಯ ಚಳಿಗೆ ತಂದೂರಿ ಕಾರ್ನ್, ಸ್ವೀಟ್ ಕಾರ್ನ್ ಸೂಪ್ ಮಾಡಿ ಸವಿಯಿರಿ
Corn Recipes: ಮಳೆಗಾಲದಲ್ಲಿ ಬಿಸಿಬಿಸಿಯಾಗಿ ರುಚಿಕರವಾಗಿ ಏನಾದರೂ ಸವಿಯಬೇಕು ಎಂದು ಮನಸು ಹೇಳುತ್ತದೆ. ಈ ಸಮಯದಲ್ಲಿ ಮೆಕ್ಕೆಜೋಳ ಯಥೇಚ್ಛವಾಗಿ ಸಿಗುತ್ತದೆ. ಹೀಗಾಗಿ ಇದರಲ್ಲಿ ವಿಭಿನ್ನವಾಗಿ ಏನಾದರೂ ಟ್ರೈ ಮಾಡಬೇಕು. ಬಿಸಿಬಿಸಿ ತಂದೂರಿ ಕಾರ್ನ್‌ನಿಂದ ಹಿಡಿದು ಸೂಪ್‌ವರೆಗೆ ಏನೆಲ್ಲಾ ಮಾಡಿ ಸವಿಯಬಹುದು ನೋಡಿ.
ಮಳೆಗಾಲದಲ್ಲಿ ಮೆಕ್ಕೆಜೋಳ ಯಥೇಚ್ಛವಾಗಿ ಸಿಗುತ್ತವೆ. ಹೊರಗಡೆ ಮಳೆ ಸುರಿಯುವಾಗ ಈ ಮೆಕ್ಕೆಜೋಳದಿಂದ ಬಿಸಿಬಿಸಿ ರೆಸಿಪಿಗಳನ್ನು ಮಾಡಿ ಸವಿದರೆ ಸ್ವರ್ಗಸುಖ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾರುಕಟ್ಟೆಗಳಲ್ಲೂ ರಾಶಿ ರಾಶಿ ಮೆಕ್ಕೆಜೋಳಗಳನ್ನು ಮಾರಾಟ ಮಾಡಲಾಗುತ್ತದೆ. ಬೆಲೆ ಕೂಡಾ ಕಡಿಮೆ ಇರುತ್ತದೆ. ಮನೆಮನೆಗಳಿಗೂ ಬಂದು ಮೆಕ್ಕೆಜೋಳವನ್ನು ಕೆಂಡದಲ್ಲಿ ಸುಟ್ಟು ಮಸಾಲೆ ಹಾಕಿ ಕೊಡುವ ವ್ಯಾಪಾರಿಗಳು ಕಾಣಸಿಗುತ್ತಾರೆ. ಹೀಗಾಗಿಯೇ ಮಳೆಗಾಲದಲ್ಲಿ ಈ ಸಿಹಿ ಜೋಳ ಪರಿಪೂರ್ಣ ಆಹಾರ. ಪ್ರತಿದಿನ ನೀವು ಮೆಕ್ಕೆಜೋಳದಿಂದ ಒಂದೇ ಬಗೆಯ ತಿಂಡಿ ತಿನಿಸು ಮಾಡಿ ಸವಿಯುತ್ತಿದ್ದರೆ, ಇಂದಿನಿಂದ ಭಿನ್ನ ಡಿಶ್ ಟ್ರೈ ಮಾಡಿ. ನಾವಿಲ್ಲಿ ಮೆಕ್ಕೆಜೋಳದಿಂದ ಮಾಡಬಹುದಾದ 3 ಭಿನ್ನ ರೆಸಿಪಿಗಳನ್ನು ಹೇಳಿಕೊಡ್ತೀವಿ.
ತಂದೂರಿ ಕಾರ್ನ್
(ಶೆಫ್ ಸಂಜೀವ್ ಕಪೂರ್ ರೆಸಿಪಿ)
ಬೇಕಾಗುವ ಪದಾರ್ಥಗಳು:
- 4 ಪೂರ್ತಿ ಮೆಕ್ಕೆಜೋಳ
- ½ ಕಪ್ ಮೊಸರು
- 1 tbsp ಶುಂಠಿ-ಬೆಳ್ಳುಳ್ಳಿ ಪೇಸ್ಟ್
- 4 ಟೀಸ್ಪೂನ್ ಅಚ್ಚಮೆಣಸಿನ ಪುಡಿ
- ½ ಟೀಸ್ಪೂನ್ ಗರಂ ಮಸಾಲಾ ಪುಡಿ
- ½ ಟೀಸ್ಪೂನ್ ಕಪ್ಪು ಉಪ್ಪು
- ರುಚಿಗೆ ತಕ್ಕಷ್ಟು ಉಪ್ಪು
- ¼ ಟೀಸ್ಪೂನ್ ಕಸೂರಿ ಮೇಥಿ ಪುಡಿ
- ½ ನಿಂಬೆ
- 1½ ಚಮಚ ಸಾಸಿವೆ ಎಣ್ಣೆ
- 2 ಟೀಸ್ಪೂನ್ ಎಣ್ಣೆ
- 2 ಟೀಸ್ಪೂನ್ ಬೆಣ್ಣೆ
- ಕರಗಿದ ಬೆಣ್ಣೆ
- ಅಲಂಕರಿಸಲು ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೆಕ್ಕೆಜೋಳ ಸಿಪ್ಪೆ ತೆಗೆದು ಇಡಿಯಾಗಿ ಬಾಣಲೆಗೆ ಹಾಕಿ ನೀರಿನೊಂದಿಗೆ ಬೇಯಿಸಿ. ಬೆಂದ ನಂತರ ನೀರು ಬಸಿದು ಮೆಕ್ಕೆಜೋಳ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
ಈಗ ಮ್ಯಾರಿನೇಷನ್ ಸಮಯ. ಒಂದು ಬೌಲ್‌ನಲ್ಲಿ ಮೊಸರು ತೆಗೆದುಕೊಂಡು ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅಚ್ಚ ಖಾರದಪುಡಿ, ಗರಂ ಮಸಾಲಾ ಪುಡಿ, ಕಪ್ಪು ಉಪ್ಪು, ರುಚಿಗೆ ಬೇಕಾದದಷ್ಟು ಉಪ್ಪು, ಕಸೂರಿ ಮೇಥಿ, ನಿಂಬೆ ರಸವನ್ನು ಹಿಂಡಿ ಮತ್ತು ಸಾಸಿವೆ ಎಣ್ಣೆಯನ್ನು ಕೂಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಬೇಯಿಸಿದ ಕಾರ್ನ್‌ಗಳ ಮೇಲೆ ಮ್ಯಾರಿನೇಡ್ ಮಾಡಿದ ಮಿಶ್ರಣವನ್ನು ಬ್ರಷ್ ಸಹಾಯದಿಂದ ಹಚ್ಚಿ. ಸಣ್ಣ ಸ್ಟೇನ್‌ಲೆಸ್ ಸ್ಟೀಲ್ ಬೌಲ್‌ನಲ್ಲಿ ಕೆಂಡದ ತುಂಡು ತೆಗೆದುಕೊಂಡು, ಅದನ್ನು ಜೋಳ ಹಾಕಿಟ್ಟ ಪಾತ್ರೆ ಮೇಲೆ ಇಡಿ.
ಕೆಂಡದ ಮೇಲೆ ಎಣ್ಣೆ ಹನಿಗಳನ್ನು ಚಿಮುಕಿಸಿ, ತಕ್ಷಣವೇ ಮುಚ್ಚಿ 1ರಿಂದ 2 ನಿಮಿಷಗಳ ಕಾಲ ಬಿಡಿ. ಆ ಬಳಿಕ ಬೌಲ್ ತೆಗೆದು ಮತ್ತು ಕಾರ್ನ್‌ಗಳನ್ನು ಮತ್ತೆ 30ರಿಂದ 40 ನಿಮಿಷಗಳ ಕಾಲ ಮ್ಯಾರಿನೇಷನ್ ಮಾಡಿ.
ನಾನ್ ಸ್ಟಿಕ್ ಗ್ರಿಲ್ ಪ್ಯಾನ್‌ನಲ್ಲಿ ಬೆಣ್ಣೆ ಮತ್ತು ಎಣ್ಣೆ ಬೆರೆಸಿ ಬಿಸಿ ಮಾಡಿ. ಅದರ ಮೇಲೆ ಕಾರ್ನ್‌ಗಳನ್ನು ಇರಿಸಿ ಮತ್ತು ಪ್ರತಿ ಬದಿಯೂ ಒಂದೆರಡು ನಿಮಿಷಗಳ ಕಾಲ ಅಥವಾ ಗ್ರಿಲ್ ಆಗುವವರೆಗೆ ಗ್ರಿಲ್ ಮಾಡಿ.
ಕೊನೆಯದಾಗಿ ನೇರವಾಗಿ ಒಲೆ ಮೇಲೆ ಟಿಕ್ಕಾ ಮಾಡುವ ತಂತಿಯ ಸ್ಟಿಕ್ ಇಟ್ಟು, ಅದರ ಮೇಲೆ ಕಾರ್ನ್‌ಗಳನ್ನು ಇಡಿ. ಎಲ್ಲಾ ಬದಿಗಳು ಕೆಲವು ಸೆಕೆಂಡುಗಳ ಕಾಲ ರೋಸ್ಟ್ ಆಗಲಿ. ಕೊನೆಯದಾಗಿ ಸುಟ್ಟ ಕಾರ್ನ್‌ಗಳ ಮೇಲೆ ಸ್ವಲ್ಪ ಬೆಣ್ಣೆಯನ್ನು ಬ್ರಷ್‌ನಲ್ಲಿ ಹಚ್ಚಿ. ಕೊನೆಯದಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಬಿಸಿಯಾಗಿ ಸರ್ವ್ ಮಾಡಿ.
ಸ್ವೀಟ್ ಕಾರ್ನ್ ಸೂಪ್
(ಶೆಫ್ ಸಂಜ್ಯೋತ್ ಕೀರ್ ರೆಸಿಪಿ)
ಬೇಕಾಗುವ ಪದಾರ್ಥಗಳು
- ಕಾರ್ನ್
- ಕರ್ನ್ ಫ್ಲೋರ್ - ಎರಡು ಮೂರು ಚಮಚ
- ಬಿಸಿ ನೀರು 1 ಲೀಟರ್
- ಹಸಿರು ಮೆಣಸಿನಕಾಯಿ ಪೇಸ್ಟ್ ½ ಟೀಸ್ಪೂನ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀಸ್ಪೂನ್
- ಕತ್ತರಿಸಿದ ಕ್ಯಾರೆಟ್ ½ ಕಪ್
- ಕತ್ತರಿಸಿದ ಫ್ರೆಂಚ್ ಬೀನ್ಸ್ ½ ಕಪ್
- ರುಚಿಗೆ ಬಿಳಿ ಮೆಣಸು ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- ರುಚಿಗೆ ಸ್ವಲ್ಪ ಸಕ್ಕರೆ
- ವಿನೆಗರ್ 1 ಟೀಸ್ಪೂನ್
- ಸ್ಪ್ರಿಂಗ್ ಈರುಳ್ಳಿ ಗ್ರೀನ್ಸ್ 2 ಟೀಸ್ಪೂನ್
ಮಾಡುವ ವಿಧಾನ
1. ಪಾತ್ರೆಯಲ್ಲಿ ಬಿಸಿನೀರನ್ನು ಹಾಕಿ, ಅದಕ್ಕೆ ಹಸಿರು ಮೆಣಸಿನಕಾಯಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಕ್ಯಾರೆಟ್ ಮತ್ತು ಬೀನ್ಸ್ ಸೇರಿಸಿ ಬೆರೆಸಿ. ಹೆಚ್ಚಿನ ಉರಿಯಲ್ಲಿ 3-4 ನಿಮಿಷ ಕಾಲ ಬೇಯಿಸಿ.
2. ಸ್ವೀಟ್ ಕಾರ್ನ್ ಅನ್ನು ಬಿಡಿಸಿ ಅದನ್ನು ನೀರಿಗೆ ಹಾಕಿ ಬಿಳಿ ಮೆಣಸು ಪುಡಿಯನ್ನು ಸೇರಿಸಿ. ಈಗ ಎಲ್ಲವನ್ನೂ ಚೆನ್ನಾಗಿ ಬೆರೆಸಿ, ಕುದಿಸಿ.
ಇದಕ್ಕೆ ಸ್ವಲ್ಪ ಕಾರ್ನ್ ಫ್ಲೋರ್ ಸ್ಲರಿ ಸೇರಿಸಿ. ಸ್ಲರಿ ಸೇರಿಸುವಾಗ ಬೆರೆಸುವುದನ್ನು ಮರೆಯಬೇಡಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸೂಪ್ ದಪ್ಪವಾಗುವವರೆಗೆ ಬೇಯಿಸಿ. ಮಸಾಲೆಯನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ಉಪ್ಪು ಮತ್ತು ಸಕ್ಕರೆಯನ್ನು ಹಾಕಿ.
ಸ್ವಲ್ಪ ವಿನೆಗರ್ ಮತ್ತು ಸ್ಪ್ರಿಂಗ್ ಈರುಳ್ಳಿ ಗ್ರೀನ್ಸ್ ಸೇರಿಸಿ. ಒಂದು ನಿಮಿಷ ಹೆಚ್ಚಿನ ಉರಿಯಲ್ಲಿ ಬೇಯಿಸಿದರೆ, ರುಚಿಯಾದ ಸ್ವೀಟ್ ಕಾರ್ನ್ ಸೂಪ್ ಸಿದ್ಧವಾಗುತ್ತದೆ. ಇದನ್ನು ಬಿಸಿಬಿಸಿಯಾಗಿ ಕುಡಿಯಿರಿ.
ವಿಭಾಗ