Brain Teaser: ಗಾಡಿಯಲ್ಲಿ ಒಟ್ಟು ಎಷ್ಟು ಬಾಕ್ಸ್‌ಗಳನ್ನ ಲೋಡ್‌ ಮಾಡಲಾಗಿದೆ? ಥಟ್ಟಂತ ನೋಡಿ, ಪಟ್‌ ಅಂತ ಉತ್ತರ ಹೇಳಿ-viral news brain teaser can you count the total number of cubes loaded on this trailer social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಗಾಡಿಯಲ್ಲಿ ಒಟ್ಟು ಎಷ್ಟು ಬಾಕ್ಸ್‌ಗಳನ್ನ ಲೋಡ್‌ ಮಾಡಲಾಗಿದೆ? ಥಟ್ಟಂತ ನೋಡಿ, ಪಟ್‌ ಅಂತ ಉತ್ತರ ಹೇಳಿ

Brain Teaser: ಗಾಡಿಯಲ್ಲಿ ಒಟ್ಟು ಎಷ್ಟು ಬಾಕ್ಸ್‌ಗಳನ್ನ ಲೋಡ್‌ ಮಾಡಲಾಗಿದೆ? ಥಟ್ಟಂತ ನೋಡಿ, ಪಟ್‌ ಅಂತ ಉತ್ತರ ಹೇಳಿ

ಗಾಡಿಯೊಂದರಲ್ಲಿ ಒಂದಿಷ್ಟು ಬಾಕ್ಸ್‌ಗಳನ್ನು ಲೋಡ್‌ ಮಾಡಲಾಗಿದೆ. ಅದರಲ್ಲಿ ಎಷ್ಟು ಬಾಕ್ಸ್‌ಗಳಿವೆ ಎಂಬ ಹೇಳಬೇಕು. ದಿನವಿಡೀ ನೋಡುತ್ತಾ ಕೂರುವಂತಿಲ್ಲ, ಥಟ್ಟಂತ ನೋಡಿ, ಪಟ್‌ ಅಂತ ಉತ್ತರ ಹೇಳಬೇಕು. ಈ ಚಾಲೆಂಜ್‌ ಸ್ವೀಕರಿಸಲು ನೀವು ಸಿದ್ಧರಿದ್ದೀರಾ?

ಗಾಡಿಯಲ್ಲಿ ಒಟ್ಟು ಎಷ್ಟು ಬಾಕ್ಸ್‌ಗಳನ್ನ ಲೋಡ್‌ ಮಾಡಲಾಗಿದೆ? ಥಟ್ಟಂತ ನೋಡಿ, ಪಟ್‌ ಅಂತ ಉತ್ತರ ಹೇಳಿ
ಗಾಡಿಯಲ್ಲಿ ಒಟ್ಟು ಎಷ್ಟು ಬಾಕ್ಸ್‌ಗಳನ್ನ ಲೋಡ್‌ ಮಾಡಲಾಗಿದೆ? ಥಟ್ಟಂತ ನೋಡಿ, ಪಟ್‌ ಅಂತ ಉತ್ತರ ಹೇಳಿ

ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಪೋಸ್ಟ್‌ ಮಾಡಲಾದ ಬ್ರೈನ್‌ ಟೀಸರ್‌ವೊಂದು ತುಂಬಾನೇ ವೈರಲ್‌ ಆಗುತ್ತಿದೆ. ಕಳೆದೊಂದು ವಾರದಿಂದ ಈ ಬ್ರೈನ್‌ ಟೀಸರ್‌ ಜನರ ತಲೆಗೆ ಹುಳ ಬಿಡುತ್ತಿರುವುದು ಸುಳ್ಳಲ್ಲ. ಗಾಲಿಚಕ್ರದ ಗಾಡಿಯಲ್ಲಿ ಒಂದಿಷ್ಟು ಬಾಕ್ಸ್‌ಗಳನ್ನು ಲೋಡ್‌ ಮಾಡಲಾಗಿದ್ದು, ಗಾಡಿ ಮೇಲೆ ಎಷ್ಟು ಬಾಕ್ಸ್‌ ಇದೆ ಎನ್ನುವುದನ್ನು ಹೇಳುವುದು ನಿಮಗಿರುವ ಚಾಲೆಂಜ್‌. ಇದೇನ್‌ ಮಹಾ ಕಷ್ಟ ಅಂತೀರಾ, ಖಂಡಿತ ಇಲ್ಲೊಂದು ಟ್ವಿಸ್ಟ್‌ ಇದೆ. ಹಾಗಾಗಿ ಜನರ ಇದಕ್ಕಾಗಿ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ಬ್ರೈನ್‌ ಟೀಸರ್‌ ಸರಿಯಾದ ಉತ್ತರ ಏನಿರಬಹುದು ಎಂದು ಚರ್ಚೆ ಕೂಡ ಆರಂಭವಾಗಿದೆ. ಈ ಚಿತ್ರದಲ್ಲಿ ಎಷ್ಟು ಬಾಕ್ಸ್‌ಗಳಿವೆ ಎಂದು ನಿಮ್ಮಿಂದ ಹೇಳೋಕೇ ಸಾಧ್ಯಾನಾ? ಬದಿಯಿಂದ, ಹಿಂದಿನಿಂದ ಹಾಗೂ ಮೇಲಿಂದ ಬಾಕ್ಸ್‌ ಹೇಗೆ ಕಾಣುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ, ಇನ್ಯಾಕೆ ತಡ ಟ್ರೈ ಮಾಡಿ.

ʼಗಾಲಿಚಕ್ರದ ಗಾಡಿಯಲ್ಲಿ ಎಷ್ಟು ಬಾಕ್ಸ್‌ಗಳಿವೆ?ʼ ಎಂದು ಬರೆಯಲಾಗಿರುವ ಈ ಬ್ರೈನ್‌ ಟೀಸರ್‌ನಲ್ಲಿ ಮೊದಲೇ ಹೇಳಿದಂತೆ ಬದಿ, ಹಿಂಭಾಗ ಹಾಗೂ ಮೇಲಿಂದ ಹೇಗೆ ಕಾಣುತ್ತದೆ ಎಂಬುದನ್ನು ತೋರಿಸಲಾಗಿದೆ. ಈ ಕ್ಲೂ ಬಳಸಿಕೊಂಡು ಗಾಡಿಯ ಮೇಲೆ ಎಷ್ಟು ಬಾಕ್ಸ್‌ಗಳಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು.

ಕಳೆದ ವಾರ ಈ ಬ್ರೈನ್‌ ಟೀಸರ್‌ ಅನ್ನು ಥ್ರೆಡ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ 700ಕ್ಕೂ ಅಧಿಕ ಮಂದಿ ಲೈಕ್ಸ್‌ ಮಾಡಿದ್ದಾರೆ. ಕೆಲವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮಾಡುವ ಮೂಲಕ ಜಾಣತನ ತೋರಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ಇದರಲ್ಲಿ 47 ರಿಂದ 51 ಬಾಕ್ಸ್‌ಗಳಿವೆ. ನಾಲ್ಕು ಬ್ಲಾಕ್‌ ನೋಡಿ ಎಷ್ಟಿದೆ ಎಂದು ನಿಖರವಾಗಿ ಹೇಳಲು ಇನ್ನಷ್ಟು ಸಮಯಬೇಕುʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼಕಡಿಮೆ ಎಂದರೆ 35 ಹಾಗೂ ಹೆಚ್ಚೆಂದರೆ 51ʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼ51 ಅನ್ನಿಸುತ್ತದೆ, ಯಾಕೆಂದರೆ ಬದಿಯಿಂದ ನೋಡಿದರೆ ಆ ಕಡೆಯೂ ಅಷ್ಟೇ ಇದೆ ಅನ್ನಿಸುತ್ತದೆ, ಹಾಗಾಗಿ 51 ಸರಿ ಇರಬಹುದು ಅನ್ನಿಸುತ್ತದೆʼ ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್‌ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರ ತಿಳಿಸಿದ್ದಾರೆ.

ʼಕೆಳಗಿನ ಸಾಲಿನಲ್ಲಿ 7*3, ಮಧ್ಯದ ಸಾಲಿನಲ್ಲಿ 6*3, ಟಾಪ್‌ನಲ್ಲಿ 4*3 ಈ ಎಲ್ಲವನ್ನೂ ಲೆಕ್ಕಾಚಾರ ಹಾಕಿದರೆ 51 ಬಾಕ್ಸ್‌ ಆಗುತ್ತದೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಹಲವರು 51 ಉತ್ತರ ಎಂದು ಕಾಮೆಂಟ್‌ ಮಾಡಿದ್ದಾರೆ. ಹಾಗಾದ್ರೆ ಸರಿ, ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: 4ರಲ್ಲಿ 3 ಗುಣಿಸಿ, 3 ಭಾಗಿಸಿ, 4 ಗುಣಿಸಿದ್ರೆ ಎಷ್ಟಾಗುತ್ತೆ; ಥಟ್ಟಂತ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತ ಎಲ್ಲರಿಗೂ ಕಬ್ಬಿಣದ ಕಡಲೆಯಲ್ಲ. ಕೆಲವರು ಗಣಿತದ ಸೂತ್ರಗಳಿಗೆ ಥಟ್ಟಂತ ಉತ್ತರ ಹೇಳ್ತಾರೆ. ಅಂತಹವರಿಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಇಲ್ಲೊಂದು ಸರಳ ಗಣಿತ ಸೂತ್ರವಿದೆ, ಇದಕ್ಕೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿದ್ರೆ ನೀವು ನಿಜಕ್ಕೂ ಜಾಣರು.

Brain Teaser: ಏಳಲ್ಲ, 9 ಖಂಡಿತ ಅಲ್ಲ; ಚಿತ್ರದಲ್ಲಿ ಎಷ್ಟು ಬೆಂಕಿಕಡ್ಡಿ ಇದೆ ಅಂತ 5 ಸೆಕೆಂಡ್‌ನಲ್ಲಿ ಹೇಳೋಕೆ ಸಾಧ್ಯನಾ?

ಇಲ್ಲಿರುವ ಚಿತ್ರವನ್ನು ನೋಡಿ ಚಿತ್ರದಲ್ಲಿ ಎಷ್ಟು ಬೆಂಕಿಕಡ್ಡಿಗಳಿವೆ ಎಂಬುದನ್ನು ಅತ್ಯಂತ ಬೇಗ ಯಾರು ಹೇಳ್ತಾರೋ ಅವ್ರು ನಿಜಕ್ಕೂ ಜೀನಿಯಸ್‌. 6 ಅಲ್ಲ, 7 ಮೊದಲೇ ಅಲ್ಲ, ಹಾಗಾದ್ರೆ ಅಲ್ಲಿ ಎಷ್ಟು ಬೆಂಕಿಕಡ್ಡಿಗಳಿವೆ? ಥಟ್‌ ಅಂತ ಉತ್ರ ಹೇಳಿ.

mysore-dasara_Entry_Point