Brain Teaser: 3 ಪೈನಾಪಲ್‌ ಸೇರಿ 12 ಆದ್ರೆ, 1 ಕಲ್ಲಂಗಡಿ, 1 ಕಿತ್ತಳೆ, 1 ಪೈನಾಪಲ್‌ ಸೇರಿದ್ರೆ ಎಷ್ಟಾಗುತ್ತೆ? 10 ಸೆಕೆಂಡ್‌ನಲ್ಲಿ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 3 ಪೈನಾಪಲ್‌ ಸೇರಿ 12 ಆದ್ರೆ, 1 ಕಲ್ಲಂಗಡಿ, 1 ಕಿತ್ತಳೆ, 1 ಪೈನಾಪಲ್‌ ಸೇರಿದ್ರೆ ಎಷ್ಟಾಗುತ್ತೆ? 10 ಸೆಕೆಂಡ್‌ನಲ್ಲಿ ಹೇಳಿ

Brain Teaser: 3 ಪೈನಾಪಲ್‌ ಸೇರಿ 12 ಆದ್ರೆ, 1 ಕಲ್ಲಂಗಡಿ, 1 ಕಿತ್ತಳೆ, 1 ಪೈನಾಪಲ್‌ ಸೇರಿದ್ರೆ ಎಷ್ಟಾಗುತ್ತೆ? 10 ಸೆಕೆಂಡ್‌ನಲ್ಲಿ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಗಣಿತದ ಪಜಲ್‌ಗಳು ತಲೆಗೆ ಹುಳ ಬಿಡುವುದು ಸುಳಲ್ಲ. ಇಲ್ಲೊಂದು ಹಣ್ಣುಗಳ ಚಿತ್ರ ಇರುವ ಬ್ರೈನ್‌ ಟೀಸರ್‌ ಇದೆ. ಇದರಲ್ಲಿ ಗಣಿತದ ಪಜಲ್‌ ಇದೆ. ಇದಕ್ಕೆ ಉತ್ತರ ಕಂಡುಹಿಡಿಯಬೇಕು. ನೀವು ಗಣಿತದಲ್ಲಿ ಶಾರ್ಪ್‌ ಇದ್ರೆ 1 ಕಲ್ಲಂಗಡಿ, 1 ಕಿತ್ತಳೆ, 1 ಪೈನಾಪಲ್‌ ಸೇರಿದಂತೆ ಎಷ್ಟಾಗುತ್ತೆ ಹೇಳಿ.

 3 ಪೈನಾಪಲ್‌ ಸೇರಿ 12 ಆದ್ರೆ, 1 ಕಲ್ಲಂಗಡಿ, 1 ಕಿತ್ತಳೆ, 1 ಪೈನಾಪಲ್‌ ಸೇರಿದ್ರೆ ಎಷ್ಟಾಗುತ್ತೆ?
3 ಪೈನಾಪಲ್‌ ಸೇರಿ 12 ಆದ್ರೆ, 1 ಕಲ್ಲಂಗಡಿ, 1 ಕಿತ್ತಳೆ, 1 ಪೈನಾಪಲ್‌ ಸೇರಿದ್ರೆ ಎಷ್ಟಾಗುತ್ತೆ? (PC: @pinetworkbulls)

ಗಣಿತದ ಪಜಲ್‌ಗಳು ನೋಡಲು ಸರಳ ಎನ್ನಿಸಿದ್ರೂ ಉತ್ತರ ಕಂಡುಹಿಡಿಯುವಾಗ ಮೆದುಳಿಗೆ ಹುಳ ಬಿಟ್ಟತಾಂಗುವುದು ಸುಳ್ಳಲ್ಲ. ಗಣಿತ ಪ್ರೇಮಿಗಳಿಗೆ ಪಜಲ್‌ ಬಿಡಿಸುವುದು ಮೋಜು ನೀಡುತ್ತದೆ. ಹಾಗಾಗಿ ಇನ್‌ಸ್ಟಾಗ್ರಾಂ, ಎಕ್ಸ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬ್ರೈನ್‌ ಟೀಸರ್‌ಗಳು ವೈರಲ್‌ ಆಗುತ್ತವೆ. ಇಲ್ಲಿರುವ ಗಣಿತ ಪಜಲ್‌ ಹಣ್ಣುಗಳ ಮೌಲ್ಯವನ್ನು ಕಂಡುಹಿಡಿಯುವುದಾಗಿದೆ. ಇದರಲ್ಲಿ ಕಲ್ಲಂಗಡಿ, ಕಿತ್ತಳೆ ಹಾಗೂ ಪೈನಾಪಲ್‌ ಹಣ್ಣುಗಳಿದ್ದು, ಪ್ರತಿಯೊಂದಕ್ಕೂ ಒಂದೊಂದು ಮೌಲ್ಯವಿದೆ. ಮೂರು ಪೈನಾಪಲ್‌ಗಳ ಮೊತ್ತ 12 ಆದ್ರೆ, 1 ಕಿತ್ತಳೆ, 1 ಕಲ್ಲಂಗಡಿ ಹಾಗೂ 1 ಪೈನಾಪಲ್‌ ಸೇರಿದ್ರೆ ಎಷ್ಟಾಗುತ್ತೆ. ನೀವು ಗಣಿತದಲ್ಲಿ ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ.

@pinetworkbulls ಎಂಬ ಎಕ್ಸ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಚಾಲೆಂಜ್‌ ಸ್ವೀಕರಿಸಬೇಕು ಅನ್ನಿಸ್ತಾ ಇದ್ಯಾ, ಇದಕ್ಕೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವೇ? ಎಂದು ಪ್ರಶ್ನೆ ಕೇಳಲಾಗಿದೆ.

ಮೇ 6 ರಂದು ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ಬ್ರೈನ್‌ ಟೀಸರ್‌ ಅನ್ನು 1000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕೆಲವರು ಗಣಿತ ಪ್ರಿಯರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ. ಹಲವರು ಈ ಬ್ರೈನ್‌ ಟೀಸರ್‌ಗೆ ಉತ್ತರ 21 ಎಂದು ಕಾಮೆಂಟ್‌ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಇಂತಹ ಪಜಲ್‌ಗಳು ನಮ್ಮ ಮೆದುಳನ್ನು ಚುರುಕು ಮಾಡುತ್ತವೆ. ಶಾಲಾ ದಿನಗಳಲ್ಲಿ ಕಲಿತು ಮರೆತ ಗಣಿತವನ್ನು ಮತ್ತೆ ನೆನಪಿಸುವ ಇಂತಹ ಪಜಲ್‌ಗಳನ್ನು ಬಿಡಿಸುವಾಗ ಮನಸ್ಸಿಗೆ ಮಜಾ ಸಿಗುತ್ತದೆ. ಇದನ್ನು ನೀವು ಬಿಡಿಸುವುದು ಮಾತ್ರವಲ್ಲ, ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೂ ಶೇರ್‌ ಮಾಡಿ ಅವರ ಗಣಿತ ಜ್ಞಾನವನ್ನೂ ಪರೀಕ್ಷೆ ಮಾಡಬಹುದು.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: 7=42, 5=20 ಆದ್ರೆ 3= ಎಷ್ಟು? ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಿ, ನೀವೆಷ್ಟು ಜಾಣರು ನೋಡೋಣ

ಗಣಿತದ ಪಜಲ್‌ ಇರುವ ಬ್ರೈನ್‌ ಟೀಸರ್‌ವೊಂದು ಇಲ್ಲಿದೆ. ಇದು ಸುಲಭ ಗಣಿತವೇ ಆದ್ರೂ ಕೂಡ ಉತ್ತರ ಕಂಡುಕೊಳ್ಳುವುದು ನಿಮಗೆ ಸವಾಲು ಎನ್ನಿಸಬಹುದು. ಈ ಬ್ರೈನ್‌ ಟೀಸರ್‌ಗೆ ಉತ್ತರವೇನು ಹೇಳಿ? ನಿಮಗಿದು ಹೊಸ ಚಾಲೆಂಜ್‌.

Brain Teaser: ಎ+ಎ=4, -2ಬಿ +3ಎ = ಎಷ್ಟು? ಗಣಿತದಲ್ಲಿ ಶಾರ್ಪ್‌ ಇದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಇನ್‌ಸ್ಟಾಗ್ರಾಂ ಹಾಗೂ ಎಕ್ಸ್‌ನಲ್ಲಿ ಮ್ಯಾಥ್ಸ್‌ ಪಜಲ್‌ಗಳನ್ನು ಪೋಸ್ಟ್‌ ಮಾಡುವ ಕೆಲವು ಪುಟಗಳಿವೆ. ಅಲ್ಲಿ ದಿನಕ್ಕೊಂದು ಗಣಿತ ಪಜಲ್‌ಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಇಲ್ಲೊಂದು ಹೊಸ ಗಣಿತದ ಪಜಲ್‌ ಇದೆ. ಗಣಿತದಲ್ಲಿ ನೀವು ಶಾರ್ಪ್‌ ಇರೋದು ನಿಜ ಆದ್ರೆ 20 ಸೆಕೆಂಡ್‌ನಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಬೇಕು.

 

Whats_app_banner