Brain Teaser: ನೀವು ಗಣಿತದಲ್ಲಿ ಪಂಟರಾದ್ರೆ ಈ ಪಜಲ್ ಬಿಡಿಸೋಕೆ ಟ್ರೈ ಮಾಡಿ; ಇದು ನೋಡಿದಷ್ಟು ಸುಲಭವಲ್ಲ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ತಲೆ ಕೆಡಿಸೋದು ಪಕ್ಕಾ. ಇದು ಮೇಲ್ನೋಟಕ್ಕೆ ಸುಲಭ ಗಣಿತ ಅನ್ನಿಸಿದ್ರು ಮೆದುಳಿಗೆ ಹುಳ ಬಿಡುವಂತಿದೆ. ಬೋಡ್ಮಾಸ್ ನಿಯಮ ಗೊತ್ತಿದ್ರೆ ಈ ಗಣಿತದ ಪಜಲ್ ಅನ್ನು ನೀವು ಸುಲಭವಾಗಿ ಬಿಡಿಸಬಹುದು. ಸರಿ ಇನ್ನೇಕೆ ತಡ ಶುರು ಮಾಡಿ
ಸಾಮಾಜಿಕ ಜಾಲತಾಣಗಳಲ್ಲಿ ಈಗೀಗ ಸಾಕಷ್ಟು ಬ್ರೈನ್ ಟೀಸರ್‌ಗಳು ಹರಿದಾಡುತ್ತಿವೆ. ಈ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸವಾಲು ಹಾಕುವುದು ಸುಳ್ಳಲ್ಲ. ಮೇಲ್ನೋಟಕ್ಕೆ ಇದರಲ್ಲಿ ಏನಿದೆ, ಸುಲಭವಾಗಿ ಬಿಡಿಸಬಹುದು ಅನ್ನಿಸಿದರೂ ಕೂಡ, ಹಲವರು ಇದಕ್ಕೆ ತಪ್ಪು ಉತ್ತರವನ್ನೇ ನೀಡಿರುತ್ತಾರೆ. ಇಲ್ಲೊಂದು ಅಂತಥದ್ದೇ ಬ್ರೈನ್ ಟೀಸರ್ ಇದೆ. ಬೋಡ್ಮಾಸ್ ನಿಯಮ ನಿಮಗೆ ತಿಳಿದಿದ್ರೆ ನೀವು ಖಂಡಿತ ಇದನ್ನು ಸುಲಭವಾಗಿ ಬಿಡಿಸಬಹುದು. ನೀವು ನಿಜಕ್ಕೂ ಗಣಿತದಲ್ಲಿ ಸ್ಮಾರ್ಟ್ ಎನ್ನುವ ಫೀಲ್ ಇದ್ರೆ, ಈ ಪಜಲ್ ಬಿಡಿಸಲು ಟ್ರೈ ಮಾಡಿ.
@Art0fThinking ಎನ್ನುವ ಎಕ್ಸ್ ಖಾತೆ ಹೊಂದಿರುವವರು ಈ ಬ್ರೈನ್ ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ʼ7+7/7+7*7-7 ಇದಕ್ಕೆ ಉತ್ತರವೇನು?ʼ ಎಂದು ಅವರು ಕೇಳಿದ್ದಾರೆ. ಇದನ್ನು ಎಷ್ಟು ಬೇಗ ನಿಮ್ಮಿಂದ ಪರಿಹರಿಸಲು ಸಾಧ್ಯ ಪ್ರಯತ್ನಿಸಿ. ನಿಮ್ಮ ಸಮಯ ಈಗ ಶುರು.
ಜನವರಿ 26 ರಂದು ಈ ಬ್ರೈನ್ ಟೀಸರ್ ಅನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇಲ್ಲಿಯವರೆಗೆ ಸುಮಾರು 72,000ಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಹಲವರು ಇದಕ್ಕೆ ಲೈಕ್, ಕಾಮೆಂಟ್ ಮಾಡಿದ್ದಾರೆ. ಹಲವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.
ಈ ಬ್ರೈನ್ ಟೀಸರ್‌ಗೆ ಬಂದ ಕಾಮೆಂಟ್ಸ್‌ಗಳು ಹೀಗಿವೆ
ʼನೀವು ಬೋಡ್ಮಾಸ್ ನಿಯಮ ಪಾಲಿಸಿದ್ರೆ 7+1+ 49-7 =50 ಈ ಉತ್ತರ ಪಡೆಯಲಿದ್ದೀರಿʼ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಉತ್ತರ 50. ಇದರಲ್ಲಿ ತಪ್ಪಾಗುವ ಸಾಧ್ಯತೆ ಇಲ್ಲ. ಇದು 6th ಗ್ರೇಡ್‌ನ ಗಣಿತʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಝೀರೊʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಸರಿ ನಿಮಗೆ ಬೋಡ್ಮಾಸ್ ನಿಯಮದ ಬಗ್ಗೆ ಅರಿವಿದ್ರೆ ನೀವು ಈ ಬ್ರೈನ್ ಟೀಸರ್ ಅನ್ನು ಬಿಡಿಸಿ, ಅದಕ್ಕೆ ಏನು ಉತ್ತರ ತಿಳಿಸಿ.
ಸೋಷಿಯಲ್ ಮಿಡಿಯಾಗಳಲ್ಲಿ ಹರಿದಾಡುವ ಈ ಬ್ರೈನ್ ಟೀಸರ್‌ಗಳು ನಮ್ಮ ಮೆದುಳನ್ನು ಶಾರ್ಪ್ ಮಾಡುವ ಜೊತೆಗೆ ಆಸಕ್ತಿ ಮೂಡುವಂತೆ ಮಾಡುತ್ತದೆ. ಒಂದಿಷ್ಟು ಸಮಯಗಳ ಕಾಲ ಇದು ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಕೂಡ ಸಿಗುತ್ತದೆ.
ಇದನ್ನೂ ಓದಿ
Brain Teaser: ಚಿತ್ರದಲ್ಲಿರುವ Eಗಳ ನಡುವೆ ಎಷ್ಟು F ಹುಡುಕಲು ನಿಮಗೆ ಸಾಧ್ಯ? ಇಲ್ಲಿದೆ ನಿಮ್ಮ ಕಣ್ಣಿಗೊಂದು ಸವಾಲು
Social Media Puzzle: ಇಲ್ಲಿರುವ ಬ್ರೈನ್ ಟೀಸರ್ ತುಂಬಾನೇ ಮಜವಾಗಿದೆ. ಸಾಲು ಸಾಲು ಇಂಗ್ಲೀಷ್ Eಅಕ್ಷರಗಳ ನಡುವೆ Fಗಳು ಸೇರಿಕೊಂಡಿವೆ. ಇದರಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ, ಆ ಸಾಲುಗಳಲ್ಲಿ Fಗಳನ್ನು ಹುಡುಕಬೇಕು. ಇದಕ್ಕೆ ಉತ್ತರ ಕಂಡು ಹಿಡಿಯಲು ಸಿಕ್ಕಾಪಟ್ಟೆ ಸಮಯವಿಲ್ಲ, ನಿಮಗಿರುವುದು ಕೇವಲ 5 ಸೆಕೆಂಡ್.
ವಿಭಾಗ