Brain Malaria: ಹುಷಾರ್.. ಈ ಕಾಯಿಲೆಗೆ ಮಕ್ಕಳೇ ಟಾರ್ಗೆಟ್!; ಬ್ರೇನ್ ಮಲೇರಿಯಾ ರೋಗಲಕ್ಷಣಗಳೇನು? ಇಲ್ಲಿದೆ ಮಾಹಿತಿ..
ಮೆದುಳಿನ ಮಲೇರಿಯಾ ಎಂದರೇನು? ಈ ಮೆದುಳಿನ ಮಲೇರಿಯಾ ಲಕ್ಷಣಗಳು, ಈ ಕಾಯಿಲೆ ಬರದಂತೆ ತಡೆಗಟ್ಟುವ ಬಗೆ ಹೇಗೆ? ಸಾಮಾನ್ಯ ಮಲೇರಿಯಾಕ್ಕಿಂತ ಈ ಮೆದುಳಿನ ಮಲೇರಿಯಾ ಎಷ್ಟು ಭಿನ್ನ, ಮಕ್ಕಳ ಮೇಲೆ ಈ ಕಾಯಿಲೆ ಬೀರುವ ಪರಿಣಾಮಗಳೇನು? ಇಲ್ಲಿದೆ ನೋಡಿ ಮಾಹಿತಿ..
ಎಲ್ಲೆಡೆ ನಿರಂತರ ಮಳೆಯಿಂದ ಜನ ಜೀವನ ಹದಗೆಟ್ಟಿದೆ. ಆರೋಗ್ಯ ಸಂಬಂಧಿ ಕಾಯಿಲೆಗಳೂ ಹೆಚ್ಚಾಗುತ್ತಿವೆ. ಅದರಲ್ಲೂ ಇದೀಗ ಬ್ರೇನ್ ಮಲೇರಿಯಾ ಕಾಯಿಲೆಯ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಮಕ್ಕಳಲ್ಲಿ ಇದರ ಪ್ರಮಾಣ ಹೆಚ್ಚು ಎಂಬುದನ್ನು ಗಂಭೀರವಾಗಿ ಪರಿಗಣಿಸಲೇಬೇಕಾದ ಅಂಶ! ಹಾಗಾದರೆ ಈ ಮೆದುಳಿನ ಮಲೇರಿಯಾ ಎಂದರೇನು? ಈ ಮೆದುಳಿನ ಮಲೇರಿಯಾ ಲಕ್ಷಣಗಳು, ಈ ಕಾಯಿಲೆ ಬರದಂತೆ ತಡೆಗಟ್ಟುವ ಬಗೆ ಹೇಗೆ? ಸಾಮಾನ್ಯ ಮಲೇರಿಯಾಕ್ಕಿಂತ ಈ ಮೆದುಳಿನ ಮಲೇರಿಯಾ ಎಷ್ಟು ಭಿನ್ನ, ಮಕ್ಕಳ ಮೇಲೆ ಈ ಕಾಯಿಲೆ ಬೀರುವ ಪರಿಣಾಮಗಳೇನು? ಇಲ್ಲಿದೆ ನೋಡಿ ಮಾಹಿತಿ..
ಸಾಮಾನ್ಯ ಮಲೇರಿಯಾ, ಮೆದುಳಿನ ಮಲೇರಿಯಾ ವ್ಯತ್ಯಾಸವೇನು?
ಮಲೇರಿಯಾ ಸಾಮಾನ್ಯವಾಗಿ ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ಹರಡುತ್ತದೆ. ಜ್ವರ, ತಲೆನೋವು, ಚಳಿ ಕಾಣಿಸುತ್ತದೆ. ಇದು ಶಮನವಾಗದೆ, ಹೆಚ್ಚುತ್ತಲೇ ಹೋದಾಗ ಮೆದುಳಿನ ಮಲೇರಿಯಾ ಆಗಿ ಬದಲಾಗುತ್ತದೆ. ವಾಯಿವೆಕ್ಸ್ (vivax) ಎಂಬ ರೂಪ ಪಡೆಯುತ್ತದೆ. ಅದರ ನಂತರ ಅದು ಯಕೃತ್ತು ಮತ್ತು ದೇಹದ ಇತರ ಅನೇಕ ಅಂಗಗಳಿಗೆ ಹಾನಿ ಮಾಡುತ್ತದೆ. ದೇಹದಲ್ಲಿ ಔಷಧಿಗಳ ಲಭ್ಯತೆಯ ಕೊರತೆಯಿಂದಾಗಿ ಕೊನೆಗೆ ಅದು ಮೆದುಳಿಗೆ ತಲುಪುತ್ತದೆ. ಅದರ ನಂತರ ಚಳಿಯೊಂದಿಗೆ ತೀವ್ರ ಜ್ವರ ಬರುತ್ತದೆ. ರೋಗಿಯೂ ಪ್ರಜ್ಞಾಹೀನ ಸ್ಥಿತಿ ತಲುಪಿ, ಬಿಪಿ ಹೆಚ್ಚಾಗುತ್ತದೆ ಮತ್ತು ರೋಗಿ ಕೋಮಾಕ್ಕೆ ಬೀಳುತ್ತಾನೆ. ಐದರಿಂದ ಏಳು ದಿನಗಳಲ್ಲಿ ರೋಗಿಯು ಸಾವನ್ನಪ್ಪುತ್ತಾನೆ.
ಮೆದುಳಿನ ಮಲೇರಿಯಾ ಹೇಗೆ ಹರಡುತ್ತದೆ?
ಈ ರೋಗವು ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಡಿತದಿಂದ ಹರಡುತ್ತದೆ ಎಂಬುದು ತಿಳಿದಿರುವ ವಿಚಾರ. ಸೊಳ್ಳೆಯಿಂದ ಉಂಟಾಗುವ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿಯು ರಕ್ತದ ಮೂಲಕ ಮಾನವ ದೇಹವನ್ನು ಪ್ರವೇಶಿಸುತ್ತದೆ ಇದರಿಂದ ದಿನ ಕಳೆದಂತೆ ದೇಹದಲ್ಲಿ ಬದಲಾವಣೆಗಳಾಗಿ ಮೆದುಳಿನ ಮಲೇರಿಯಾಕ್ಕೆ ದಾರಿ ಮಾಡಿಕೊಡುತ್ತದೆ.
ಮೆದುಳಿನ ಮಲೇರಿಯಾದ ಲಕ್ಷಣಗಳೇನು?
ಮಳೆಯಿಂದಾಗಿ ಮನೆಯ ಸುತ್ತಮುತ್ತ ನೀರು, ಕೊಳಕು ಸಂಗ್ರಹವಾಗುತ್ತದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ, ಅದರಿಂದ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅತಿ ಜ್ವರದಿಂದ ದೇಹದಲ್ಲಿ ಸೆಳೆತ ಮತ್ತು ಚಳಿ ಹೆಚ್ಚಾಗುತ್ತದೆ. ಹಗಲಿನಲ್ಲಿ ಜ್ವರ ಕಡಿಮೆ ಆದರೆ, ರಾತ್ರಿಯಲ್ಲಿ ಜ್ವರದ ಜತೆಗೆ ಚಳಿ ಹೆಚ್ಚಾಗಲಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ಮಕ್ಕಳಲ್ಲಿ ಚಳಿಯ ಜತೆಗೆ ಪ್ರಜ್ಞೆ ತಪ್ಪುವ ಅಪಾಯವೂ ಹೆಚ್ಚು.
ಮೆದುಳಿನ ಮಲೇರಿಯಾ ಬಗ್ಗೆ ವೈದ್ಯರು ಹೇಳುವುದೇನು?
- ಮೆದುಳಿನ ಮಲೇರಿಯಾ ಕುರಿತು SKMCHನ ಮಕ್ಕಳ ವಿಭಾಗದ ಉಪ ಅಧೀಕ್ಷಕ ಡಾ. ಗೋಪಾಲ್ ಶಂಕರ್ ಸಾಹ್ನಿ Hindustan Timesಗೆ ಮಾಹಿತಿ ನೀಡಿದ್ದಾರೆ.
- ಮಳೆಯ ನಂತರ ಕೊಳಕು ಮತ್ತು ಕಲುಷಿತ ನೀರಿನಿಂದ ಮೆದುಳು ಮಲೇರಿಯಾ ಉಲ್ಬಣಗೊಳ್ಳುತ್ತಿದೆ.
- ಈ ನೀರಿನಲ್ಲಿನ ಮನೆ ಮಾಡಿದ ಸೊಳ್ಳೆಗಳಿಂದ ಬರುವ ಸೋಂಕನ್ನು ಬ್ರೈನ್ ಮಲೇರಿಯಾ ಅಥವಾ ಎಂಟಿ ಮಲೇರಿಯಾ ಎಂದು ಕರೆಯಲಾಗುತ್ತದೆ.
- ವೈದ್ಯರ ಪ್ರಕಾರ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ, ರೋಗಿಯೂ ಬದುಕುಳಿಯುತ್ತಾನೆ.
- ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಸಾವನ್ನಪ್ಪುವ ಸಂಭವ ಹೆಚ್ಚು ಎಂದು ವೈದ್ಯರು ತಿಳಿಸಿದ್ದಾರೆ.
- ಈ ಕಾಯಿಲೆ ಮಕ್ಕಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಮೆದುಳಿನ ಮಲೇರಿಯಾ ತಡೆಗಟ್ಟುವ ಕ್ರಮಗಳು
ಮೆದುಳಿನ ಮಲೇರಿಯಾವನ್ನು ತಡೆಗಟ್ಟಲು ಮೊದಲನೆಯದಾಗಿ ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ
-ಬಯಲಿನಲ್ಲಿ ಮಲಗಬೇಡಿ
- ಸೊಳ್ಳೆ ಪರದೆ ಬಳಸಿ
- ಮನೆಯ ಸುತ್ತ ನೀರು, ಕೊಳೆ ಸೇರದಂತೆ ನೋಡಿಕೊಳ್ಳಿ
- ಶುದ್ಧ ನೀರು ಕುಡಿಯಿರಿ
- ಸೊಳ್ಳೆಗಳು ಹೆಚ್ಚಿರುವ ಕಡೆ ಇರಬೇಡಿ
- ಯಾರಿಗಾದರೂ ಜ್ವರ ಬಂದರೆ ಆದಷ್ಟು ಬೇಗ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು.