ಸೀಮಂತದಲ್ಲಿ ಗರ್ಭಿಣಿಯರಿಗೆ ಬಳೆ ತೊಡಿಸುವುದೇಕೆ? ಆಭರಣ ಮಾತ್ರವಲ್ಲ ಇದರಲ್ಲಿದೆ ಆರೋಗ್ಯದ ಗುಟ್ಟು-why do pregnant women wear bangles at the baby shower it is not only jewelry but also the secret of health smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸೀಮಂತದಲ್ಲಿ ಗರ್ಭಿಣಿಯರಿಗೆ ಬಳೆ ತೊಡಿಸುವುದೇಕೆ? ಆಭರಣ ಮಾತ್ರವಲ್ಲ ಇದರಲ್ಲಿದೆ ಆರೋಗ್ಯದ ಗುಟ್ಟು

ಸೀಮಂತದಲ್ಲಿ ಗರ್ಭಿಣಿಯರಿಗೆ ಬಳೆ ತೊಡಿಸುವುದೇಕೆ? ಆಭರಣ ಮಾತ್ರವಲ್ಲ ಇದರಲ್ಲಿದೆ ಆರೋಗ್ಯದ ಗುಟ್ಟು

ಬಳೆಗಳ ಪ್ರಯೋಜನ: ಬಳೆಗಳಿಂದ ತುಂಬಿದ ಕೈಗಳ ಅಂದ ಎಷ್ಟಿರುತ್ತದೆಯೋ ಅಷ್ಟೇ ಆರೋಗ್ಯ ಪ್ರಯೋಜನಗಳೂ ಇವೆ. ಗರ್ಭಿಣಿಯರಿಗೆ ಸೀಮಂತದಲ್ಲಿ ಯಾಕೆ ಬಳೆ ತೊಡಿಸುತ್ತಾರೆ? ಮತ್ತು ಅದರ ಪ್ರಾಮುಖ್ಯತೆ ಏನು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಬಳೆಗಳನ್ನು ಧರಿಸುವುದರಿಂದ ಗರ್ಭಿಣಿಯರಿಗೆ ಏನು ಪ್ರಯೋಜನ
ಬಳೆಗಳನ್ನು ಧರಿಸುವುದರಿಂದ ಗರ್ಭಿಣಿಯರಿಗೆ ಏನು ಪ್ರಯೋಜನ

ಮಹಿಳೆಯರು ಬಳೆಯನ್ನು ಧರಿಸುವ ಸಂಪ್ರದಾಯವು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಮಹಿಳೆಯರ ಜೀವನದಲ್ಲಿ ಪ್ರತಿಯೊಂದು ಪ್ರಮುಖ ಸಂದರ್ಭದಲ್ಲೂ ಬಳೆ ಪ್ರಾಮುಖ್ಯತೆಯನ್ನು ಹೊಂದಿದೆ. ಮದುವೆ, ನಿಶ್ಚಿತಾರ್ಥ, ಪೂಜೆ, ಸೀಮಂತ. ಹಬ್ಬ-ಹರಿದಿನಗಳಲ್ಲಿ ಹೆಂಗಸರು ಬಳೆಗಳನ್ನು ಹೆಚ್ಚಾಗಿ ಧರಿಸುತ್ತಾರೆ. ಇವುಗಳನ್ನು ಅಲಂಕಾರವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ಆಭರಣ ಮಾತ್ರವಲ್ಲ ಅದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ವಿಶೇಷವಾಗಿ ಸೀಮಂತದ ಸಮಯದಲ್ಲಿ ಹೆಣ್ಣಿಗೆ ಬಳೆ ತೊಡಿಸುವ ಶಾಸ್ತ್ರ ಮಾಡುತ್ತಾರೆ.

ಸೀಮಂತದ ದಿನ ಗಾಜಿನ ಬಳೆ ಏಕೆ ಹಾಕುತ್ತಾರೆ?

ಸೀಮಂತ ಸಮಾರಂಭವನ್ನು ಸಾಮಾನ್ಯವಾಗಿ ಗರ್ಭಿಣಿಯ ಕೊನೆಯ ಮೂರು ತಿಂಗಳಲ್ಲಿ ನಡೆಸಲಾಗುತ್ತದೆ. ಸಾಮಾನ್ಯವಾಗಿ 7ನೇ ತಿಂಗಳಿನಲ್ಲಿ ಮಾಡುತ್ತಾರೆ. ಈ ದಿನ ಗರ್ಭಿಣಿಯರ ಕೈಗೆ ಹಸಿರು ಬಳೆ ಅಥವಾ ಒಂಬತ್ತು ಬಣ್ಣದ ಬಳೆಗಳನ್ನು ಹಾಕುವ ಸಂಪ್ರದಾಯ ಅನೇಕ ಕಡೆ ಇದೆ. ಈಗ ಬೇಬಿ ಶವರ್ ಹೆಸರಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸುತ್ತಿದ್ದಾರೆ. ಆದರೆ ಹಲವು ವರ್ಷಗಳಿಂದ ಬರುತ್ತಿರುವ ಸಂಪ್ರದಾಯದಲ್ಲಿ ಇನ್ನೂ ಹೆಚ್ಚಿನ ಅರ್ಥ ಮತ್ತು ಆರೋಗ್ಯದ ಗುಟ್ಟು ಅಡಗಿದೆ.

ಸೀಮಂತದಲ್ಲಿ ತೊಟ್ಟಿರುವ ಬಳೆಗಳನ್ನು ಹೆರಿಗೆಯ ದಿನದವರೆಗೆ ತೆಗೆಯಬಾರದು ಎಂದು ಹೇಳಲಾಗುತ್ತದೆ. ಸಾಂಪ್ರದಾಯಿಕ ಅನ್ನಿಸಿದರೂ ಇದರ ಹಿಂದೆ ಆರೋಗ್ಯದ ಗುಟ್ಟು ಅಡಗಿದೆ.

1. ಗರ್ಭಾಶಯದ ನರಗಳು ಮಣಿಕಟ್ಟಿನ ಬಳಿ ನೆಲೆಗೊಂಡಿವೆ. ಈ ನರಗಳ ಮೇಲೆ ಕೈ ತುಂಬ ಇರುವ ಬಳೆಗಳ ಒತ್ತಡವು ಸುಗಮ ಹೆರಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

2. ಬಳೆಗಳಿಂದ ತುಂಬಿದ ಕೈಗಳು ಹೆಚ್ಚು ಶಬ್ದ ಮಾಡುತ್ತವೆ. ಇದು ತುಂಬಾ ಆಹ್ಲಾದಕರವಾಗಿರುತ್ತದೆ. ಬಳೆಗಳ ಶಬ್ದವು ಮಗುವಿನ ಮೆದುಳಿನ ಅಂಗಾಂಶವನ್ನು ಗರ್ಭದಲ್ಲಿ ಬೆಳೆಯಲು ಸಹಾಯಮಾಡುತ್ತದೆ ಎಂದು ಹೇಳಲಾಗುತ್ತದೆ. ಶ್ರವಣದ ಮೇಲೆ ಪರಿಣಾಮ ಬೀರುತ್ತದೆ. ಗರ್ಭದಲ್ಲಿರುವ ಮಗು ಈ ಶಬ್ದಗಳನ್ನು ಇಷ್ಟಪಡುತ್ತದೆ.

3.ಬಳೆಗಳ ಶಬ್ದವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಗರ್ಭಿಣಿಯರ ಮನಸ್ಸನ್ನು ಶಾಂತಗೊಳಿಸುತ್ತದೆ. ಬಳೆಗಳನ್ನು ನೋಡಿದಾಗ ನನಗೆ ಸಂತೋಷ ಮತ್ತು ಉತ್ಸಾಹವುಂಟಾಗುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರು ಒತ್ತಡದಲ್ಲಿದ್ದರೆ ಕಡಿಮೆ ತೂಕದಲ್ಲಿ ಮಗು ಜನಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಸ್ತ್ರೀರೋಗ ತಜ್ಞರು. ಬಳೆಗಳಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಮಹಿಳೆಯರಿಗೆ ಬಳೆಯ ಪ್ರಯೋಜನಗಳು:

ಮಹಿಳೆಯರು ಸಾಮಾನ್ಯವಾಗಿ ಬಳೆಗಳನ್ನು ಧರಿಸುವುದರಿಂದ ಪ್ರಯೋಜನ ಪಡೆಯುತ್ತಾರೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಚಿನ್ನದ ಬಳೆಗಳು ಅಥವಾ ಮಣ್ಣಿನ ಬಳೆಗಳನ್ನು ಧರಿಸುತ್ತಿದ್ದರು. ಇವುಗಳೊಂದಿಗೆ, ಮಹಿಳೆಯರಲ್ಲಿ ಶಕ್ತಿ ಹೆಚ್ಚುತ್ತಿತ್ತು. ಅಲ್ಲದೆ ನಕಾರಾತ್ಮಕ ಶಕ್ತಿಗಳು ಅವರನ್ನು ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ. ಇವುಗಳನ್ನು ಧರಿಸಿದವರಿಗೆ ಸೌಮ್ಯ ಮನಸ್ಸು ಇರುತ್ತದೆ. ಬಳೆ ಧರಿಸುವುದರಿಂದ ಸುತ್ತಮುತ್ತಲಿನ ವಾತಾವರಣವು ಸಕಾರಾತ್ಮಕ ರೀತಿಯಲ್ಲಿ ಬದಲಾಗುತ್ತದೆ.

ಮಹಿಳೆಯರು ಬಳೆ ಧರಿಸುವುದರಿಂದ ಮಣಿಕಟ್ಟಿನ ಬಳಿಯಿರುವ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ. ಅಲ್ಲಿ ಉಂಟಾಗುವ ಘರ್ಷಣೆ ಮತ್ತು ಒತ್ತಡದಿಂದಾಗಿ ರಕ್ತ ಪರಿಚಲನೆ ಸುಗಮವಾಗಿರುತ್ತದೆ. ಆದ್ದರಿಂದ ಬಿಪಿ ಮತ್ತು ಹೃದ್ರೋಗದಂತಹ ಸಮಸ್ಯೆಗಳು ದೂರವಾಗುತ್ತವೆ. ಗರ್ಭಿಣಿಯರು ಮಾತ್ರವಲ್ಲದೆ ಎಲ್ಲರೂ ಇದನ್ನು ಧರಿಸಬೇಕು.

mysore-dasara_Entry_Point