ಕನ್ನಡ ಸುದ್ದಿ  /  Lifestyle  /  Yoga Which Helps To Improve Digestion

Yoga to Improve Digestion: ಜೀರ್ಣಕ್ರಿಯೆಗೆ ಸಹಾಯಕಾರಿಯಾದ ಯೋಗಾಸನಗಳಿವು..ತಪ್ಪದೆ ಅಭ್ಯಾಸ ಮಾಡಿ

ಸೇತು ಬಂಧಾಸನವು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಅಂಗಗಳು ಪರಿಣಾಮ ಬೀರುತ್ತವೆ. ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಚಯಾಪಚಯ ಕ್ರಿಯೆ, ಕರುಳಿನ ಕೆಲಸವನ್ನು ಕೂಡಾ ವೇಗಗೊಳಿಸುತ್ತದೆ.

ಜೀರ್ಣಕ್ರಿಯೆಗೆ ಸಹಾಯಕಾರಿಯಾಗುವ ಯೋಗಾಸನಗಳು
ಜೀರ್ಣಕ್ರಿಯೆಗೆ ಸಹಾಯಕಾರಿಯಾಗುವ ಯೋಗಾಸನಗಳು (PC: Freepik)

ರಾತ್ರಿ ಊಟ ಸೇವಿಸಿದ ಕೂಡಲೇ ನಿದ್ರೆಗೆ ಜಾರಿದರೆ ನಾನಾ ಆರೋಗ್ಯ ಸಮಸ್ಯೆಗಳು ಕಾಡುವುದು ಖಂಡಿತ. ಆದ್ದರಿಂದ ಮಲಗುವ ಒಂದೆರಡು ಗಂಟೆ ಮೊದಲೇ ಊಟ ಮಾಡಿ, ಡಿನ್ನರ್‌ ಆದ ನಂತರ 10-15 ನಿಮಿಷವಾದರೂ ವಾಕ್‌ ಮಾಡಿ ಎಂದು ನೀವು ಅನೇಕರಿಂದ ಕೇಳಿರುತ್ತೀರಿ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು, ನಿಮ್ಮ ಆಹಾರ ಮತ್ತು ಜೀವನಶೈಲಿಯನ್ನು ಸರಿಯಾಗಿ ಅನುಸರಿಸುವುದು ಬಹಳ ಮುಖ್ಯ.

ನಿಮ್ಮ ಆಹಾರ ಮತ್ತು ಜೀವನಶೈಲಿಯನ್ನು ಸರಿಪಡಿಸುವುದರ ಜೊತೆಗೆ, ಚಯಾಪಚ ಕ್ರಿಯೆಯನ್ನು ವೇಗಗೊಳಿಸುವ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಕೆಲವು ಯೋಗಾಸನಗಳನ್ನು ನೀವು ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ 5 ಯೋಗಾಸನಗಳು ಹೀಗಿವೆ.

ಭುಜಂಗಾಸನ

ಇದನ್ನು ನಾಗರ ಭಂಗಿ ಎಂದೂ ಕರೆಯುತ್ತಾರೆ. ಇದು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ನಿಮ್ಮ ಅನ್ನನಾಳ, ಹೊಟ್ಟೆ ಮತ್ತು ಕರುಳಿನ ನಡುವೆ ಆಹಾರವನ್ನು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಈ ಮೂಲಕ ನಿಮ್ಮ ಜೀರ್ಣಕಾರಿ ಆರೋಗ್ಯವನ್ನು ಬಲಪಡಿಸುತ್ತದೆ.

ಪರಿವೃತ್ತಾ ತ್ರಿಕೋನಾಸನ

ಪರಿವೃತ್ತಾ ತ್ರಿಕೋನಾಸನವು ನಿಮ್ಮ ಹೊಟ್ಟೆಯಲ್ಲಿ ಜೀರ್ಣಕಾರಿ ಕಿಣ್ವಗಳ ಉತ್ತಮ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಚಯಾಪಚಯ ಕ್ರಿಯೆ, ಜೀರ್ಣಕ್ರಿಯೆ ಹಾಗೂ ಕರುಳಿನ ಕಾರ್ಯವನ್ನು ವೇಗಗೊಳಿಸುತ್ತದೆ. ಅವುಗಳಲ್ಲಿ ಸಿಲುಕಿರುವ ವಿಷಕಾರಿ ವಸ್ತುಗಳನ್ನು ಸ್ವಚ್ಛಗೊಳಿಸುತ್ತದೆ. ಇದು ಕರುಳಿನ ಶುದ್ಧೀಕರಣಕ್ಕೆ ಕೂಡಾ ಸಹಾಯ ಮಾಡುತ್ತದೆ.

ಸೇತು ಬಂಧಾಸನ

ಸೇತು ಬಂಧಾಸನದಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಅಂಗಗಳು ಪರಿಣಾಮ ಬೀರುತ್ತವೆ. ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಚಯಾಪಚಯ ಕ್ರಿಯೆ, ಕರುಳಿನ ಕೆಲಸವನ್ನು ಕೂಡಾ ವೇಗಗೊಳಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನೂ ತಡೆಯುತ್ತದೆ. ಕಳಪೆ ಜೀರ್ಣಾಂಗ ವ್ಯವಸ್ಥೆಯನ್ನು ಗುಣಪಡಿಸಲು ಈ ಆಸನ ಬಹಳ ಸಹಾಯಕಾರಿ.

ಅಧೋಮುಖ ಸ್ವಾನಾಸನ

ಈ ಭಂಗಿಯು ಹೊಟ್ಟೆಯ ಸಮಸ್ಯೆಗೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.

ಶವಾಸನ

ಶವಾಸನದ ಪ್ರಯೋಜನವೆಂದರೆ ಅದು ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುತ್ತದೆ. ನಿಮ್ಮ ಮನಸ್ಸು ಮತ್ತು ಜೀರ್ಣಾಂಗ ವ್ಯವಸ್ಥೆಯು ಪರಸ್ಪರ ಸಂಬಂಧ ಹೊಂದಿದೆ. ಆದ್ದರಿಂದ ಹೆಚ್ಚು ಒತ್ತಡದಿಂದ ಬಳಲುವ ಜನರು ಮಲಬದ್ಧತೆಯ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಈ ಆಸನವು ಮೊದಲು ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡವು ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಕೂಡಾ ಸಹಾಯ ಮಾಡುತ್ತದೆ.

ಈ ಎಲ್ಲಾ ಯೋಗಾಸನಗಳನ್ನು ಮಾಡುವುದರಿಂದ ಹೊಟ್ಟೆ ಉಬ್ಬುವುದು, ಮಲಬದ್ಧತೆ, ಅಜೀರ್ಣ, ನಿಧಾನ ಚಯಾಪಚಯ ಕ್ರಿಯೆಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಬಹುದು. ಆದರೆ ಫಲಿತಾಂಶವು ಒಂದೇ ದಿನದಲ್ಲಿ ಬರುವುದಿಲ್ಲ. ಪ್ರತಿದಿನ ಇದನ್ನು ಮಾಡಿದರೆ ಇದರ ಪ್ರಯೋಜನ ಪಡೆಯಲಿದ್ದೀರಿ.

ವಿಭಾಗ