ಬಿಡುಗಡೆಯಾದಾಗಿನಿಂದ ನಿತ್ಯ 200 ಹೆೋಂಡಾ ಎಲಿವೇಟ್ ಎಸ್‌ಯುವಿಗಳ ಮಾರಾಟ; ಈ ದಿನಾಂಕಕ್ಕೆ ಕಾರಿನ ಬೆಲೆ ಏರಿಕೆ ಖಚಿತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಿಡುಗಡೆಯಾದಾಗಿನಿಂದ ನಿತ್ಯ 200 ಹೆೋಂಡಾ ಎಲಿವೇಟ್ ಎಸ್‌ಯುವಿಗಳ ಮಾರಾಟ; ಈ ದಿನಾಂಕಕ್ಕೆ ಕಾರಿನ ಬೆಲೆ ಏರಿಕೆ ಖಚಿತ

ಬಿಡುಗಡೆಯಾದಾಗಿನಿಂದ ನಿತ್ಯ 200 ಹೆೋಂಡಾ ಎಲಿವೇಟ್ ಎಸ್‌ಯುವಿಗಳ ಮಾರಾಟ; ಈ ದಿನಾಂಕಕ್ಕೆ ಕಾರಿನ ಬೆಲೆ ಏರಿಕೆ ಖಚಿತ

ನೀವೇನಾದರೂ ಹೋಂಡಾ ಎಲೆವೇಟ್ ಎಸ್‌ಯುವಿ ಕಾರು ಖರೀದಿಸಬೇಕೆಂದುಕೊಂಡಿದ್ದರೆ ಡಿಸೆಂಬರ್ 23ರೊಳಗೆ ಖರೀದಿಸುವುದು ಉತ್ತಮ. 2024 ರ ಜನವರಿಯಿಂದ ಈ ಕಾರಿನ ಬೆಲೆ ಹೆಚ್ಚಾಗಲಿದೆ.

ಮಧ್ಯಮ ಗಾತ್ರದ ಹೋಂಡಾ ಎಲೆವೇಟ್ ಎಸ್‌ಯುವಿ ಕಾರು
ಮಧ್ಯಮ ಗಾತ್ರದ ಹೋಂಡಾ ಎಲೆವೇಟ್ ಎಸ್‌ಯುವಿ ಕಾರು

ಬೆಂಗಳೂರು: ಜಪಾನ್ ಮೂಲದ ಕಾರು ತಯಾರಿಕಾ ಸಂಸ್ಥೆ ಹೋಂಡಾ (Honda) ಭಾರತದ ಮಾರುಗಟ್ಟೆಗೆ (Indian Market) ಮಧ್ಯಮ ಗಾತ್ರದ ಹೊಸ ಮಾದರಿಯ ಎಸ್‌ಯುವಿ ಕಾರುಗಳನ್ನು (SUV Cars) ಬಿಡುಗಡೆ ಮಾಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಹೋಂಡಾ ಎಲಿವೇಟ್ ಎಸ್‌ಯುವಿಯನ್ನು (Honda Elevate SUV) ಬಿಡುಗಡೆಯಾದ 3 ತಿಂಗಳಲ್ಲಿ ದೇಶಾದ್ಯಂತ ಬರೋಬ್ಬರಿ 20,000 ಯೂನಿಟ್‌ಗಳನ್ನು ಮಾರಾಟ ಮಾಡಿದೆ. ದಿನಕ್ಕೆ 200 ಎಸ್‌ಯುವಿಗಳನ್ನು ಮಾರಾಟ ಮಾಡಿರುವುದಾಗಿ ಹೋಂಡಾ ಮ್ಯಾನೇಜ್ಮೆಂಟ್ ಮಾಹಿತಿ ನೀಡಿದೆ.

ಹೊಸ ಮಾದರಿಯ ಹೋಂಡಾ ಎಲೆವೇಟ್ ಎಸ್‌ಯುವಿ ಕಾರಿನ ಎಕ್ಸ್‌ಶೋ ರೂಂ ಬೆಲೆ 11 ಲಕ್ಷ ರೂಪಾಯಿ ಇದೆ. ಎಸ್‌ವಿ, ವಿ, ವಿಎಕ್ಸ್ ಹಾಗೂ ಝಡ್‌ಎಕ್ಸ್ ಎಂಬ 4 ಮಾದರಿಗಳಲ್ಲಿ ಕಾರು ಲಭ್ಯವಿದ್ದು, 119 bhp, 145 nm, 1.5 na ಪೆಟ್ರೋಲ್ ಇಂಜಿನ್ ಹೊಂದಿದೆ. ಈ ಇಂಜಿನ್ 6 ಸ್ಪೀಡ್ ಮ್ಯಾನುವಲ್ ಮತ್ತು 7 ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್‌ಗಳನ್ನು ಹೊಂದಿದೆ.

ಎಲ್‌ಇಡಿ ಲೈಟ್ ಸೆಟಪ್, ಪವರ್ ಫುಲ್ ಬಂಪರ್, ಆರಾಮದಾಯಕ ಸೀಟುಗಳು, ಪ್ರೀಮಿಯಂ ನೋಟದ ಕ್ಯಾಬಿನ್, 10.25 ಇಂಚಿನ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದೆ. ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ, 7 ಇಂಚಿನ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ವೆಲ್ ಸ್ಮಾರ್ಟ್‌ಫೋನ್ ಚಾರ್ಜರ್, ಲೇನ್ ವಾಚ್ ಕ್ಯಾಮೆರಾ ಹಾಗೂ ಸಿಂಗಲ್‌-ಪೇನ್ ಸನ್‌ರೂಫ್, ಕ್ರೂಸ್ ಕಂಟ್ರೋಲ್ ಹಾಗೂ ಪ್ರಮುಖವಾಗಿ ಏರ್‌ಬ್ಯಾಗ್‌ಗಳು ಈ ಕಾರಿನಲ್ಲಿವೆ.

ಹೋಂಡಾ ಎಲೆವೇಟ್ ಎಸ್‌ಯುವಿ ಉದ್ದು, ಅಗಲ, ಎತ್ತರ ಎಷ್ಟಿದೆ?

ಹೋಂಡಾ ಎಲೆವೇಟ್ ಎಸ್‌ಯುವಿ ಕಾರಿನ ವ್ಹೀಲ್‌ಬೇಸ್ 2650 ಎಂಎಂ ಇದ್ದರೆ, ಗ್ರೌಂಡ್ ಕ್ಲಿಯರೆನ್ಸ್ 220 ಎಂಎಂ ಇದೆ. ಕಾರಿನ ಉದ್ದ 4,312 ಎಂಎಂ, ಅಗಲ 1,790 ಎಂಎಂ ಹಾಗೂ ಎತ್ತರ 1,650 ಎಂಎಂ ಇದೆ.

ಎಲೆವೇಟ್ ಎಸ್‌ಯುವಿ ಬೆಲೆ ಏರಿಕೆಗೆ ಮುಂದಾದ ಹೋಂಡಾ

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿರುವ ಮಧ್ಯಮ ಗಾತ್ರದ ಹೊಸ ಹೋಂಡಾ ಎಲೆವೇಟ್‌ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಲು ಹೋಂಡಾ ಮುಂದಾಗಿದೆ. ಭಾರತದಲ್ಲಿ 2024ರ ಜನವರಿಗೆ ಈ ಕಾರಿನ ಬೆಲೆ ಹೆಚ್ಚಾಗಲಿದೆ. ಉಪಕರಣಗಳ ವೆಚ್ಚ ಹಾಗೂ ಒಟ್ಟಾರೆ ಹಣದುಬ್ಬರದಿಂದಾಗಿ ಕಾರಿನ ಬೆಲೆ ಏರಿಕೆಯಾಗಲಿದೆ. ಡಿಸೆಂಬರ್ 23ರ ವರೆಗೆ ಮಾತ್ರ ಪ್ರಸ್ತುತ ಇರುವ ಬೆಲೆಗೆ ಎಲೆವೇಟ್ ಎಸ್‌ಯುವಿ ಲಭ್ಯವಾಗಲಿದೆ. ಆ ನಂತರ ಖರೀದಿಸುವ ಕಾರುಗಳಿಗೆ ಹೊಸ ದರಗಳು ಅನ್ವಯವಾಗಲಿದೆ ಎಂದು ಹೋಂಡಾ ಮ್ಯಾನೇಜ್ಮೆಂಟ್ ಸ್ಪಷ್ಟಪಡಿಸಿದೆ. ಹೋಂಡಾ ಎಲೆವೇಟ್ ಮಾತ್ರವಲ್ಲದೆ, ಹೋಂಡಾ ಸಿಟಿ, ಸಿಟಿ ಹೈಬ್ರಿಡ್, ಅಮೇಜ್ ಕಂಪ್ಯಾಕ್ಟ್ ಸೇಡನ್ ಕಾರುಗಳ ಬೆಲೆ ಕೂಡ ಪರಿಷ್ಕರಣೆಯಾಗಲಿದೆ. ಆದರೆ ಶೇಕಡವಾರು ಎಷ್ಟು ಬೆಲೆ ಏರಿಕೆಯಾಗಲಿದೆ ಅನ್ನೋದು ಕಂಪನಿ ಸ್ಪಷ್ಪಪಡಿಸಿಲ್ಲ.

ಮಧ್ಯಮ ಗ್ರಾತದ ಎಸ್‌ಯುವಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟಿಗನ್, ಸ್ಕೋಡಾ ಕುಶಾಕ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಹಾಗೂ ಇತರೆ ಎಸ್‌ಯುವಿಗಳಿಗೆ ಹೋಂಟಾ ಎಲೆವೇಟ್ ಪೈಪೋಟಿಯನ್ನು ನೀಡುತ್ತಿದೆ. ನವೆಂಬರ್‌ನಲ್ಲಿ ಹೋಂಡಾ 8,734 ಕಾರುಗಳನ್ನು ಮಾರಾಟ ಮಾಡಿದೆ. 2022ರ ನವೆಂಬರ್‌ಗೆ ಹೋಲಿಸಿಕೊಂಡರೆ ಇದು ಶೇಕಡಾ 22 ರಷ್ಟು ಹೆಚ್ಚು ಮಾರಾಟ ಮಾಡಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 7,051 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ಬೆಳವಣಿಗೆಯಲ್ಲಿ ಹೋಂಡಾ ಎಲೆವೇಟ್ ಪ್ರಮುಖ ಪಾತ್ರವಹಿಸಿದೆ ಎಂದು ಆ ಸಂಸ್ಥೆ ಹೇಳಿಕೊಂಡಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.