ಹೊಸ ಮಾರುತಿ ಸುಜುಕಿ ಡಿಜೈರ್‌ ನವೆಂಬರ್‌ 11ರಂದು ಬಿಡುಗಡೆ, ನೋಡ ನೋಡ... ಎಷ್ಟು ಚಂದ ಅಲಾ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹೊಸ ಮಾರುತಿ ಸುಜುಕಿ ಡಿಜೈರ್‌ ನವೆಂಬರ್‌ 11ರಂದು ಬಿಡುಗಡೆ, ನೋಡ ನೋಡ... ಎಷ್ಟು ಚಂದ ಅಲಾ!

ಹೊಸ ಮಾರುತಿ ಸುಜುಕಿ ಡಿಜೈರ್‌ ನವೆಂಬರ್‌ 11ರಂದು ಬಿಡುಗಡೆ, ನೋಡ ನೋಡ... ಎಷ್ಟು ಚಂದ ಅಲಾ!

ಮಾರುತಿ ಸುಜುಕಿ ಕಂಪನಿಯು ಹೊಸ ಡಿಜೈರ್‌ ಕಾರನ್ನು ನವೆಂಬರ್‌ 11ರಂದು ಬಿಡುಗಡೆಯಾಗಲಿದೆ. 2008ರಲ್ಲಿ ಇದು ಮಾರುತಿ ಸ್ವಿಫ್ಟ್‌ ಡಿಜೈರ್‌ ಆಗಿತ್ತು. ಇದಾದ ಬಳಿಕ ಇದು ಸ್ವಿಫ್ಟ್‌ನಿಂದ ಕಳಚಿಕೊಡು ಕೇವಲ ಮಾರುತಿ ಸುಜುಕಿ ಡಿಜೈರ್‌ ಆಗಿತ್ತು.

ಹೊಸ ಮಾರುತಿ ಸುಜುಕಿ ಡಿಜೈರ್‌ ನವೆಂಬರ್‌ 11ರಂದು ಬಿಡುಗಡೆ (Image courtesy: YouTube/Anurag Choudhary)
ಹೊಸ ಮಾರುತಿ ಸುಜುಕಿ ಡಿಜೈರ್‌ ನವೆಂಬರ್‌ 11ರಂದು ಬಿಡುಗಡೆ (Image courtesy: YouTube/Anurag Choudhary)

ಮಾರುತಿ ಸುಜುಕಿ ಇಂಡಿಯಾವು ಅಂತಿಮವಾಗಿ ಹೊಸ ತಲೆಮಾರಿನ ಡಿಜೈರ್‌ ಕಾರನ್ನು ನವೆಂಬರ್‌ 1ರಂದು ಬಿಡುಗಡೆ ಮಾಡಲಿದೆ. ಈ ಹಿಂದಿನ ಡಿಜೈರ್‌ ಕಾರುಗಳೆಲ್ಲ ಸ್ವಿಫ್ಟ್‌ನಿಂದ ಸ್ಪೂರ್ತಿ ಪಡೆದಿತ್ತು. ಆದರೆ, ಈ ಬಾರಿ ಹೊಚ್ಚ ಹೊಸ ಲುಕ್‌ನ ಡಿಜೈರ್‌ ಕಾರನ್ನು ಪರಿಚಯಿಸಲಿದೆ. ಇದನ್ನು ನೋಡಿದರೆ ಖಂಡಿತಾ "ನೋಡ ನೋಡ ಎಷ್ಟು ಚಂದ ಅಲಾ" ಎಂದು ಹೇಳೋದು ಗ್ಯಾರಂಟಿ. ಸ್ವಿಫ್ಟ್‌ಗೆ ಹೋಲಿಸಿದರೆ ನೂತನ ಡಿಜೈರ್‌ನಲ್ಲಿ ಹೆಚ್ಚು ಫೀಚರ್‌ಗಳು ಇರುವ ಸೂಚನೆಯಿದೆ.

ಹೊಸ ಮಾರುತಿ ಸುಜುಕಿ ಡಿಜೈರ್‌ ಹೊರನೋಟ

ಇತ್ತೀಚಿನ ಸ್ಪೈ ಚಿತ್ರಗಳ ಆಧಾರದಲ್ಲಿ ಹೇಳುವುದಾದರೆ ಇದರ ಬಾಹ್ಯ ಸೌಂದರ್ಯ ಸಾಕಷ್ಟು ಬದಲಾಗಿದೆ. ದೊಡ್ಡ ಗ್ರಿಲ್‌ಗಳೊಂದಿಗೆ ಚಂದ ಕಾಣಿಸುತ್ತಿದೆ. ಡಿಆರ್‌ಎಲ್‌ ಜತೆ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಇದ್ದವು. ಫಾಗ್‌ ಲ್ಯಾಂಪ್‌ಗಳೂ ಕಾಣಿಸಿವೆ. ಹೊಸ ಅಲಾಯ್‌ ವೀಲ್‌ಗಳು, ಎಲಿಡಿ ಟೇಲ್‌ಲೈಟ್‌ಗಳು, ಹೊಸ ವಿನ್ಯಾಸದ ಶಾರ್ಕ್‌ ಫಿನ್‌ ಅಂಟೆನಾ ಇತ್ಯಾದಿಗಳು ಕಾಣಿಸಿದ್ದವು. ಡ್ಯೂಯೆಲ್‌ ಟೋನ್‌ ಥೀಮ್‌, ಪರಿಷ್ಕೃತ ಡ್ಯಾಶ್‌ಬೋರ್ಡ್‌ ಇತ್ಯಾದಿಗಳನ್ನು ಸ್ಪೈ ಇಮೇಜ್‌ಗಳಲ್ಲಿ ನೋಡಬಹುದಾಗಿತ್ತು.

ಮಾರುತಿ ಸುಜುಕಿ ಸ್ವಿಫ್ಟ್‌ ಗುಣ ಅವಗುಣ- ವಿಡಿಯೋ ನೋಡಿ

ಎಂಜಿನ್‌ ಮತ್ತು ಪವರ್‌

ಇತ್ತೀಚಿಗೆ ಬಿಡುಗಡೆಯಾದ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ನ ಎಂಜಿನ್‌ ಇದರಲ್ಲಿ ಮುಂದುವರೆಯುವ ಸೂಚನೆ ಇದೆ. ಇದು 1.2 ಲೀಟರ್‌ನ, 3 ಸಿಲಿಂಡರ್‌ನ ಝಡ್‌ ಸರಣಿಯ ಪೆಟ್ರೋಲ್‌ ಎಂಜಿನ್‌ ಹೊಂದಿರಲಿದೆ. ಈ ಎಂಜಿನ್‌ 80 ಬಿಎಚ್‌ಪಿ ಮತ್ತು 112 ಎನ್‌ಎಂ ಪೀಕ್‌ ಟಾರ್ಕ್‌ ನೀಡುವ ಸೂಚನೆಯಿದ. ಇದು ಐದು ಸ್ಪೀಡ್‌ನ ಮ್ಯಾನುಯಲ್‌ ಗಿಯರ್‌ ಮತ್ತು ಆಟೋಮ್ಯಾಟಿಕ್‌ ಎಎಂಟಿ ಗಿಯರ್‌ ಬಾಕ್ಸ್‌ ಹೊಂದಿರುವ ಸೂಚನೆ ಇದೆ. ಸಿಎನ್‌ಜಿ ಆವೃತ್ತಿಯಲ್ಲೂ ದೊರಕುವ ಸೂಚನೆ ಇದೆ.

ಕಾರಿನೊಳಗೆ ಏನಿರಲಿದೆ?

ಸದ್ಯ ಇಂಟೀರಿಯರ್‌ ವಿಷಯಕ್ಕೆ ಸಂಬಂಧಪಟ್ಟಂತೆ ಹೆಚ್ಚು ಮಾಹಿತಿ ದೊರಕಿಲ್ಲ. 360 ಡಿಗ್ರಿ ಕ್ಯಾಮೆರಾ, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಕ್ರೂಸ್‌ ಕಂಟ್ರೋಲ್‌, ಫ್ಲೋಟಿಂಗ್‌ ಟಚ್‌ಸ್ಕ್ರೀನ್‌ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌, ಆಪಲ್‌ ಕಾರ್‌ಪ್ಲೇ, ಆಂಡ್ರಾಯ್ಡ್‌ ಆಟೋ, ಫ್ಲಾಟ್‌ ಬಾಟಮ್‌ ಸ್ಟಿಯರಿಂಗ್‌ ವೀಲ್‌ ಸೇರಿದಂತೆ ಹಲವು ಫೀಚರ್‌ಗಳನ್ನು ನಿರೀಕ್ಷಿಸಬಹುದು. ಪಡ್ಲ್‌ ಲ್ಯಾಂಪ್‌, ಹೆಡ್‌ ಅಪ್‌ ಡಿಸ್‌ಪ್ಲೇ, ಡ್ಯೂಯೆಲ್‌ ಟೋನ್‌ ಬಿಯೇಜ್‌ ಮತ್ತು ಬ್ಲ್ಯಾಕ್‌ ಇಂಟೀಯರಿಯರ್‌ ಥೀಮ್‌ ಮುಂತಾದವುಗಳನ್ನು ನಿರೀಕ್ಷಿಸಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.