ಕನ್ನಡ ಸುದ್ದಿ  /  ಕರ್ನಾಟಕ  /  ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಎನ್ನುತ್ತಿದೆ ವರದಿ, ಲುಫ್ತಾನ್ಸಾ ಟಿಕೆಟ್‌ ವೈರಲ್‌

ಹಾಸನ ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಎನ್ನುತ್ತಿದೆ ವರದಿ, ಲುಫ್ತಾನ್ಸಾ ಟಿಕೆಟ್‌ ವೈರಲ್‌

ಹಾಸನ ಲೈಂಗಿಕ ಹಗರಣ ಕೇಸ್‌ನ ಪ್ರಮುಖ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದಾರೆ ಎನ್ನುತ್ತಿದೆ ವರದಿ. ಈ ನಡುವೆ, ಅವರು ಮುಂಗಡ ಕಾಯ್ದಿರಿಸಿದ್ದು ಎನ್ನಲಾದ ಲುಫ್ತಾನ್ಸಾ ವಿಮಾನದ ಟಿಕೆಟ್ ಮತ್ತೊಮ್ಮೆ ಸುದ್ದಿಯಲ್ಲಿದೆ.

ಹಾಸನ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಎನ್ನುತ್ತಿದೆ ವರದಿ, ಲುಫ್ತಾನ್ಸಾ ಟಿಕೆಟ್‌ ವೈರಲ್‌ ಆಗಿದೆ.
ಹಾಸನ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಎನ್ನುತ್ತಿದೆ ವರದಿ, ಲುಫ್ತಾನ್ಸಾ ಟಿಕೆಟ್‌ ವೈರಲ್‌ ಆಗಿದೆ.

ಬೆಂಗಳೂರು: ಹಾಸನ ಲೈಂಗಿಕ ಹಗರಣ ಕೇಸ್‌ನ ಪ್ರಮುಖ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಈ ನಡುವೆ, ಅವರು ಮುಂಗಡ ಕಾಯ್ದಿರಿಸಿದ್ದು ಎನ್ನಲಾದ ಲುಫ್ತಾನ್ಸಾ ವಿಮಾನದ ಟಿಕೆಟ್ ಮತ್ತೊಮ್ಮೆ ಸುದ್ದಿಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಆಶ್ಲೀಲ ವಿಡಿಯೋ ಪೆನ್‌ ಡ್ರೈವ್ ಮತ್ತು ಅತ್ಯಾಚಾರ ಕೇಸ್‌ನ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು, ಇಂದು ತಡರಾತ್ರಿ 12.30ಕ್ಕೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಟಿವಿ ವರದಿಗಳ ಪ್ರಕಾರ, ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಚ್‌ನಿಂದ ಲುಫ್ತಾನ್ಸಾ ಏರ್‌ಲೈನ್ಸ್‌ ವಿಮಾನದಲ್ಲಿ ಬಿಜಿನೆಸ್ ಕ್ಲಾಸ್‌ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೇ 16ರ ನಸುಕಿನ 12.30ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಲಿರುವ ಲುಫ್ತಾನ್ಸಾ ವಿಮಾನದಲ್ಲಿ ಮ್ಯೂನಿಚ್-ಬೆಂಗಳೂರು ಟಿಕೆಟ್ ಅನ್ನು ಪ್ರಜ್ವಲ್ ರೇವಣ್ಣ ಬುಕ್ ಮಾಡಿದ್ದಾರೆ. ಈ ಟಿಕೆಟ್‌ನ ಪ್ರತಿ ಲಭ್ಯವಾಗಿದೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.

ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್‌ ಬರ್ತಾರಾ; ಎನ್‌ಡಿಟಿವಿ ವರದಿ ಹೇಳಿರುವುದೇನು?

ಲಭ್ಯ ಲುಫ್ತಾನ್ಸಾ ಏರ್‌ಟಿಕೆಟ್‌ ಮಾಹಿತಿ ಪ್ರಕಾರ, ಪ್ರಜ್ವಲ್ ರೇವಣ್ಣ ಅವರನ್ನು ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕ ಎಂದು ನಮೂದಿಸಲಾಗಿದೆ. 33 ವರ್ಷದ ಪ್ರಜ್ವಲ್ ರೇವಣ್ಣ ಜರ್ಮನಿಗೆ ಟಿಕೆಟ್ ಕಾಯ್ದಿರಿಸಿದ ಅದೇ ದಿನ ಈ ಟಿಕೆಟ್ ಅನ್ನು ಬುಕ್ ಮಾಡಿರುವುದಾಗಿ ನಂಬಲಾಗಿದೆ. ಈ ಟಿಕೆಟ್‌ ಅವರ ವಿರುದ್ಧ ಎಫ್‌ಐಆರ್ ದಾಖಲಾಗುವ ಒಂದು ದಿನ ಮೊದಲು ಬುಕ್ ಆಗಿದೆ.

ತನ್ನ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ಮೇ 1ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಜ್ವಲ್‌ ರೇವಣ್ಣ, ‘‘ಕೇಸ್‌ನ ವಿಚಾರಣೆಗೆ ಹಾಜರಾಗುವುದಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ. ಹೀಗಾಗಿ ನನ್ನ ವಕೀಲರ ಮೂಲಕ ಬೆಂಗಳೂರು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ, ಶೀಘ್ರದಲ್ಲೇ ಸತ್ಯಕ್ಕೆ ಜಯ ಸಿಗಲಿದೆ’’ ಎಂದು ಹೇಳಿದ್ದನ್ನು ವರದಿ ನೆನಪಿಸಿಕೊಂಡಿದೆ.

ಆದಾಗ್ಯೂ, ಇದಕ್ಕೂ ಮೊದಲು ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಸಾಕಷ್ಟು ಟಿಕೆಟ್‌ ಬುಕ್ ಆಗಿ ವೈರಲ್ ಆಗಿದ್ದನ್ನು ಅಲ್ಲಗಳೆಯುವಂತೆ ಇಲ್ಲ. ಇವೆಲ್ಲವೂ ಸುಳ್ಳು ಇದ್ದರೂ ಇರಬಹುದು. ಆದರೆ, ಯಾವುದೇ ಅವಕಾಶವನ್ನು ಮಿಸ್‌ ಮಾಡಿಕೊಳ್ಳಲು ಬಯಸದ ಕರ್ನಾಟಕ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ವಿಮಾನ ನಿಲ್ದಾಣದ ಮೇಲೆ ಕಣ್ಣಿಗೆ ಎಣ್ಣೆ ಬಿಟ್ಟವರಂತೆ ಕಾಯುತ್ತಿದ್ದಾರೆ.

ಜಾಮೀನು ಪಡೆದು ಹೊರಬಂದ ಹೆಚ್ ಡಿ ರೇವಣ್ಣ

ಸಂತ್ರಸ್ತೆಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಮುಖ್ಯ ಆರೋಪಿಯಾಗಿ ಬಂಧನಕ್ಕೊಳಗಾಗಿದ್ದ ಜೆಡಿಎಸ್ ಶಾಸಕ ಹೆಚ್‌ಡಿ ರೇವಣ್ಣ (HD Revanna) ಜಾಮೀನು ಪಡೆದು ಹೊರಬಂದಿದ್ದಾರೆ. ಇಂದು (ಮೇ 15) ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ನಡೆಸುವುದಕ್ಕೆ ಮೊದಲು ಬೆಂಗಳೂರಿನ ಎರಡು ದೇವಾಲಯಗಳಲ್ಲಿ ದೇವರ ದರ್ಶನ ಮಾಡಿದರು. ಶೃಂಗೇರಿ ಮತ್ತು ಮೈಸೂರು ಚಾಮುಂಡಿ ಬೆಟ್ಟಕ್ಕೂ ಹೋಗುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ನಾನೇನೂ ತಪ್ಪು ಮಾಡಿಲ್ಲ. ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ. ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ಕಾನೂನು ಪ್ರಕಾರ ಏನಾಗಬೇಕೋ ಅದನ್ನು ಮಾಡುತ್ತೇನೆ ಎಂದು ಎಚ್ ಡಿ ರೇವಣ್ಣ ಇದೇ ವೇಳೆ ಸ್ಪಷ್ಟಪಡಿಸಿದರು.

IPL_Entry_Point