SSLC ಓದಿರುವವರಿಗೆ ITBP ಉದ್ಯೋಗಾವಕಾಶ; ಬರೋಬ್ಬರಿ 819 ಹುದ್ದೆಗಳು, ಇನ್ನು ತಡಮಾಡದಿರಿ, ಅರ್ಜಿ ತಗೊಳ್ತಿದ್ದಾರೆ
ITBP Constable Recruitment 2024; ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)ನ ಕಾನ್‌ಸ್ಟೆಬಲ್ ನೇಮಕಾತಿ ಶುರುವಾಗಿದೆ. ಇದು SSLC ಓದಿರುವವರಿಗೆ ಉದ್ಯೋಗಾವಕಾಶವಾಗಿದ್ದು, ಬರೋಬ್ಬರಿ 819 ಹುದ್ದೆಗಳಿವೆ. ಅರ್ಜಿ ತಗೊಳ್ತಿದ್ದಾರೆ. ಇನ್ನು ತಡಮಾಡದಿರಿ.
ನವದೆಹಲಿ/ಬೆಂಗಳೂರು: ಸೇನೆ, ಅರೆಸೇನಾ ಪಡೆ ಸೇರಬೇಕು ಎಂದು ಬಯಸುವವರು ಬಹಳಜನ. ಪ್ರತಿ ವರ್ಷವೂ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳಿಗೆ ನೇಮಕಾತಿ ನಡೆಯುತ್ತಿರುತ್ತದೆ. ಈಗ ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)ನ ಕಾನ್‌ಸ್ಟೆಬಲ್ ನೇಮಕಾತಿ ಶುರುವಾಗಿದೆ. 10ನೇ ತರಗತಿ ಪಾಸಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಇಂಡೋ-ಟಿಬೆಟನ್ ಬಾರ್ಡರ್ ಪೋಲೀಸ್ ಫೋರ್ಸ್‌ನ 819 ಕಾನ್ಸ್‌ಟೇಬಲ್ (ಅಡುಗೆ ಸೇವೆ), ಗ್ರೂಪ್ ಸಿ ಹುದ್ದೆಗಳಿಗೆ ನೋಂದಣಿ ಕಮ್ ಅರ್ಜಿ ಪ್ರಕ್ರಿಯೆ ಸೋಮವಾರದಿಂದ (ಸೆಪ್ಟೆಂಬರ್ 2) ಶುರುವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು recruitment.itbpolice.nic.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ ಅಕ್ಟೋಬರ್ 1 ಅಂದರೆ ಅಂದು ರಾತ್ರಿ 11.59ರ ತನಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಐಟಿಬಿಪಿ ಕಾನ್‌ಸ್ಟೆಬಲ್ ನೇಮಕಾತಿ 2024 ಹುದ್ದೆಗಳು ಮತ್ತು ಅರ್ಹತಾ ಮಾನದಂಡಗಳಿವು
ಇಂಡೋ-ಟಿಬೆಟನ್ ಬಾರ್ಡರ್ ಪೋಲೀಸ್ ಫೋರ್ಸ್‌ನ ಅಡುಗೆ ಸೇವೆ ವಿಭಾಗದಲ್ಲಿ 819 ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗಾಗಿ ಈ ನೇಮಕಾತಿ ನಡೆಯುತ್ತಿದೆ.
ಹುದ್ದೆಯ ಹೆಸರು - ಕಾನ್‌ಸ್ಟೆಬಲ್ (ಅಡುಗೆ ಸೇವೆ)
ಒಟ್ಟು ಹುದ್ದೆ ಸಂಖ್ಯೆ - 819
ಪುರುಷರಿಗೆ ಮೀಸಲಿರುವ ಹುದ್ದೆ - 697
ಮಹಿಳೆಯರಿಗೆ ಮೀಸಲಿರುವ ಹುದ್ದೆ - 122
ಈ ಹುದ್ದೆಗೆ ಬೇಕಾದ ಕನಿಷ್ಠ ವಿದ್ಯಾರ್ಹತೆ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಲ್ಲಿ 10ನೇ ತರಗತಿ ಪಾಸಾಗಿರಬೇಕು. ಅಂದರೆ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಗಳು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆಹಾರ ಉತ್ಪಾದನೆ ಅಥವಾ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಗುರುತಿಸಲ್ಪಟ್ಟಿರುವ ಸಂಸ್ಥೆಯ ಎನ್‌ಎಸ್‌ಕ್ಯೂಎಫ್ ಮಟ್ಟದ 1 ಕೋರ್ಸ್ ಮಾಡಿರಬೇಕು. ಅರ್ಜಿದಾರರು ಕನಿಷ್ಠ 18 ಆಗಿರಬೇಕು ಮತ್ತು 25 ವರ್ಷಕ್ಕಿಂತ ಹೆಚ್ಚಿರಬಾರದು.
ಐಟಿಬಿಪಿ ಕಾನ್‌ಸ್ಟೆಬಲ್ ನೇಮಕಾತಿ 2024; ಅರ್ಜಿ ಸಲ್ಲಿಸುವುದು ಮತ್ತು ಆಯ್ಕೆ ಪ್ರಕ್ರಿಯೆಯ ವಿವರ
ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ದೈಹಿಕ ದಕ್ಷತೆ ಪರೀಕ್ಷೆ (PET), ದೈಹಿಕ ಗುಣಮಟ್ಟದ ಪರೀಕ್ಷೆ (PST), ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ವಿವರವಾದ ವೈದ್ಯಕೀಯ ಪರೀಕ್ಷೆ (DME)/ ರಿವ್ಯೂ ವೈದ್ಯಕೀಯ ಪರೀಕ್ಷೆ (RME)ಗಳನ್ನು ಐಟಿಬಿಪಿ ನಡೆಸುತ್ತದೆ.
ಐಟಿಬಿಪಿ ಕಾನ್ಸ್‌ಟೇಬಲ್ (ಅಡುಗೆ ಸೇವೆ) ಹುದ್ದೆಯ ಅರ್ಜಿ ಶುಲ್ಕ 100 ರೂಪಾಯಿ. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಮಹಿಳಾ ಮತ್ತು ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ
1) ಐಟಿಬಿಪಿಯ ನೇಮಕಾತಿ ವೆಬ್‌ಸೈಟ್ - ecruitment.itbpolice.nic.in ಓಪನ್ ಮಾಡಿ
2) ಹೋಮ್ ಪೇಜ್‌ನಲ್ಲಿರುವ ITBP Constable Recruitment 2024 (Kitchen Services) ಎಂಬ ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಿ
3) ರಿಜಿಸ್ಟ್ರೇಶನ್ ಪ್ರಕ್ರಿಯೆ ಪೂರ್ಣಗೊಳಿಸಿ ಲಾಗಿನ್ ಕ್ರೆಡೆನ್ಶಿಯಲ್ಸ್ ಪಡೆದುಕೊಳ್ಳಿ
4) ಐಟಿಬಿಪಿ ನೇಮಕಾತಿ ವೆಬ್‌ಸೈಟ್‌ನ ನಿಮ್ಮ ಖಾತೆಗೆ ಲಾಗಿನ್ ಆಗಿ
5) ಅದು ಕೇಳುವ ಅಗತ್ಯ ಮಾಹಿತಿಯನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡುತ್ತ ಹೋಗಿ.
6) ಆಧಾರ್ ಸೇರಿ ಅಗತ್ಯ ದಾಖಲೆಗಳನ್ನು ಅರ್ಜಿ ಜೊತೆಗೆ ಅಪ್ಲೋಡ್ ಮಾಡಿ, ಅರ್ಜಿ ಶುಲ್ಕವನ್ನೂ ಪಾವತಿಸಿ.
7) ನೀವು ಸಲ್ಲಿಸಲು ಸಿದ್ಧವಾಗಿಟ್ಟುಕೊಂಡ ಅರ್ಜಿಯನ್ನು ಪುನಃಪರಿಶೀಲಿಸಿ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
8)_ನಿಮ್ಮ ಭವಿಷ್ಯದ ಅಗತ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕ ದೃಢೀಕರಣ ಪ್ರತಿಯನ್ನು ಸೇವ್ ಮಾಡಿಟ್ಟುಕೊಳ್ಳಿ. ಅದರ ಮುದ್ರಿತ ಪ್ರತಿಯನ್ನೂ ತೆಗೆದು ಇಟ್ಟುಕೊಳ್ಳಿ.
ಹೆಚ್ಚಿನ ಮಾಹಿತಿಗೆ -
https://cbcindia.gov.in/cbc/public/uploads/client-request/English-19143-11-0018-2425-66bef6237d111-1723790883-creatives.pdf