Maharashtra Elections: ಮಹಾರಾಷ್ಟ್ರ, ಜಾರ್ಖಂಡ್‌ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ, ನವೆಂಬರ್‌ ನಲ್ಲಿ ಮತದಾನ, ರಾಜಕಾರಣ ಹೇಗಿದೆ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Maharashtra Elections: ಮಹಾರಾಷ್ಟ್ರ, ಜಾರ್ಖಂಡ್‌ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ, ನವೆಂಬರ್‌ ನಲ್ಲಿ ಮತದಾನ, ರಾಜಕಾರಣ ಹೇಗಿದೆ?

Maharashtra Elections: ಮಹಾರಾಷ್ಟ್ರ, ಜಾರ್ಖಂಡ್‌ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ, ನವೆಂಬರ್‌ ನಲ್ಲಿ ಮತದಾನ, ರಾಜಕಾರಣ ಹೇಗಿದೆ?

ಕೇಂದ್ರ ಚುನಾವಣೆ ಆಯೋಗವು ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕಗಳನ್ನು ಪ್ರಕಟಿಸಿದೆ. ಮತದಾನದ ದಿನಾಂಕ ಸೇರಿದಂತೆ ಚುನಾವಣೆ ಪ್ರಕ್ರಿಯೆ ಇಲ್ಲಿದೆ.

ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಲಾಗಿದೆ.
ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಲಾಗಿದೆ.

ದೆಹಲಿ: ಭಾರತದ ಆರ್ಥಿಕ ರಾಜಧಾನಿ ಎಂದೇ ಕರೆಯಲಾಗುವ ಮುಂಬೈ ನಗರವನ್ನು ಒಳಗೊಂಡಿರುವ, ಪ್ರಮುಖ ರಾಜ್ಯವಾದ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ, ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ .ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಕೊನೆಗೊಂಡರೆ, ಜಾರ್ಖಂಡ್ ಮುಂದಿನ ವರ್ಷ ಜನವರಿ 5 ರಂದು ಕೊನೆಗೊಳ್ಳುಲಿದ್ದು, ಇದಕ್ಕೂ ಮೊದಲು ಚುನಾವಣೆ ನಡೆಯಬೇಕಾಗಿದೆ. ಇದಕ್ಕಾಗಿ ದಿನಾಂಕಗಳನ್ನು ಕೇಂದ್ರ ಚುನಾವಣೆ ಆಯೋಗವು ಪ್ರಕಟಿಸಿದೆ. ಕೇಂದ್ರ ಚುನಾವಣೆ ಆಯೋಗದ ಮುಖ್ಯ ಚುನಾವಣಾಧಿಕಾರಿ ರಾಜೀವ್‌ ಕುಮಾರ್‌ ಚುನಾವಣೆ ದಿನಾಂಗಳನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಮಹಾರಾಷ್ಟ್ರದಲ್ಲಿ ನವೆಂಬರ್‌ 20ರಂದು ಒಂದೇ ಹಂತದಲ್ಲಿ ಮತದಾನ ನಡೆದರೆ, ಜಾರ್ಖಂಡ್‌ ರಾಜ್ಯದಲ್ಲಿ ನವೆಂಬರ್‌ 13 ಹಾಗೂ ನವೆಂಬರ್‌ 20ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ ರಾಜಕೀಯ

ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಕೊನೆಗೊಂಡರೆ, ಜಾರ್ಖಂಡ್ ಮುಂದಿನ ವರ್ಷ ಜನವರಿ 5 ರಂದು ಕೊನೆಗೊಳ್ಳುತ್ತದೆ.

2019 ರಲ್ಲಿ ನಡೆದ ಮಹಾರಾಷ್ಟ್ರದ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಆಗ ಯಾವುದೇ ಬಣವಿಲ್ಲದೆ) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿತು. ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಶಿವಸೇನೆ ಮೈತ್ರಿ ಮುರಿದುಕೊಂಡಿದೆ. ಅದು ನಂತರ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಯೊಂದಿಗೆ ಕೈಜೋಡಿಸಿತು ಮತ್ತು ನವೆಂಬರ್ 26, 2019 ರಂದು ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರು. ಮಹಾವಿಕಾಸ ಅಗಾಡಿ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿತ್ತು.

ಆನಂತರ ನಡೆದ ಬೆಳವಣಿಗೆಯಲ್ಲಿ ಶಿವಸೇನಾ ಬಣ ಒಡೆದು ಏಕ್‌ ನಾಥ್‌ ಶಿಂಧೆ ಪ್ರತ್ಯೇಕವಾಗಿ ಗುರುತಿಸಿಕೊಂಡು ಎರಡೂವರೆ ವರ್ಷದ ಹಿಂದೆ ಸಿಎಂ ಆದರು. ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಡಿಸಿಎಂ ಆದರು. ಈ ಬೆಳವಣಿಗೆಯಿಂದ ಠಾಕ್ರೆ ಅಧಿಕಾರ ಕಳೆದುಕೊಂಡಿತು. ಕೆಲವು ದಿನಗಳ ಹಿಂದೆ ಎನ್‌ಸಿಪಿ ಕೂಡ ಇಬ್ಬಾಗವಾಗಿ ಅಜಿತ್‌ ಪವಾರ್‌ ಎನ್‌ಡಿಎ ಜತೆ ಸೇರಿ ಡಿಸಿಎಂ ಆಗಿದ್ಧಾರೆ.

ಈ ವರ್ಷದ ಚುನಾವಣೆ ಬಹುಶಃ 2024 ರ ಕೊನೆಯ ಪ್ರತಿಷ್ಠೆಯ ಕದನವಾಗಿದ್ದು, ಪ್ರತ್ಯೇಕಗೊಂಡಿರುವ ಶಿವಸೇನೆ ಮತ್ತು ಎನ್‌ಸಿಪಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯೊಂದಿಗೆ ಹೋರಾಡುತ್ತಿದೆ. ಇನ್ನು ಶಿವಸೇನಾ( ಠಾಕ್ರೆ ಬಣ) ಕಾಂಗ್ರೆಸ್‌, ಎನ್‌ಸಿಪಿ( ಶರದ್‌ ಪವಾರ್‌ ಬಣ) ಮಹಾವಿಕಾಸ ಅಗಾಡಿ ಅಡಿ ಚುನಾವಣೆ ಎದುರಿಸಲಿವೆ.

ರಾಜ್ಯದ 288 ಸ್ಥಾನಗಳಲ್ಲಿ 158 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ.ಏಕನಾಥ್ ಶಿಂಧೆ ಅವರ ಶಿವಸೇನೆಗೆ 70 ಮತ್ತು ಅಜಿತ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ 50 ಸೀಟುಗಳನ್ನು ಅದು ನೀಡಿದೆ. ಇನ್ನು ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಸೀಟು ಹಂಚಿಕೆ ಬಾಕಿಯಿದೆ.

ಹರಿಯಾಣದ ಸೋಲಿನಿಂದ ಆಘಾತಕ್ಕೊಳಗಾಗಿರುವ ಕಾಂಗ್ರೆಸ್ ಇಲ್ಲಿ ಎದುರಿಸಲಿದೆ. ಬಿಜೆಪಿಯನ್ನು ಎದುರಿಸಲಿದೆ.

ಈ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 48 ಲೋಕಸಭಾ ಸ್ಥಾನಗಳ ಪೈಕಿ 30ರಲ್ಲಿ ಮಹಾವಿಕಾಸ ಅಗಾಡಿಯೆ ಗೆಲುವು ಸಾಧಿಸಿದೆ. ಆಡಳಿತಾರೂಢ ಮೈತ್ರಿಕೂಟಕ್ಕೆ 17, ಒಂದು ಸ್ಥಾನ ಸ್ವತಂತ್ರ ಅಭ್ಯರ್ಥಿಗೆ ದಕ್ಕಿತ್ತು. ವಿಧಾನಸಭೆ ಚುನಾವಣೆಯಲ್ಲೂ ಅಗಾಡಿಯೇ ಮುನ್ನಡೆ ಸಾಧಿಸುವ ಮುನ್ಸೂಚನೆಯಿದೆ.

ಜಾರ್ಖಂಡ್‌ನಲ್ಲಿ ಹೇಗಿದೆ

ಜಾರ್ಖಂಡ್‌ನಲ್ಲಿ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಬಿಜೆಪಿಯೊಂದಿಗೆ ಠಕ್ಕರ್‌ ನಡೆಸಲು ಸಿದ್ಧವಾಗಿದೆ. 2019 ರ ಚುನಾವಣೆಯಲ್ಲಿ, 81 ಸ್ಥಾನಗಳಲ್ಲಿ ಜೆಎಂಎಂ 30 ಸ್ಥಾನಗಳನ್ನು ಗೆದ್ದಿತ್ತು ಮತ್ತು 16 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌ನೊಂದಿಗೆ ಸರ್ಕಾರವನ್ನು ರಚಿಸಿತು. ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಈ ಬಾರಿ ಇಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಅಣಿಯಾಗುತ್ತಿದೆ.

ಜನವರಿಯಲ್ಲಿ ಭೂ ಹಗರಣ ಪ್ರಕರಣದಲ್ಲಿ ಹೇಮಂತ್ ಸೊರೆನ್ ಅವರನ್ನು ಬಂಧಿಸಿದಾಗ ಚಂಪೈ ಸೊರೆನ್ ಮುಖ್ಯಮಂತ್ರಿ ಯಾದರು. ಜೈಲಿನಿಂದ ಬಿಡುಗಡೆಯಾದ ಹೇಮಂತ್‌ ಮತ್ತೆ ಸಿಎಂ ಆದರೆ ಚಂಪೈ ಸಿಡಿದೆದ್ದು ಬಿಜೆಪಿ ಸೇರಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟವು ಎಲ್ಲಾ 81 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಮಂತ್‌ ಸೋರೆನ್ ಹೇಳಿದ್ದು ಜಾರ್ಖಂಡ್‌ನಲ್ಲಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.