ಫ್ಯಾಕ್ಟ್‌ ಚೆಕ್‌: ಅಂತರಿಕ್ಷದಿಂದ ಸುನೀತಾ ವಿಲಿಯಮ್ಸ್‌ ಭೂಮಿಗೆ ಹಿಂತುರುಗಿರುವುದು ನಿಜವೇ? ವೈರಲ್‌ ವಿಡಿಯೋದ ಅಸಲಿಯತ್ತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಫ್ಯಾಕ್ಟ್‌ ಚೆಕ್‌: ಅಂತರಿಕ್ಷದಿಂದ ಸುನೀತಾ ವಿಲಿಯಮ್ಸ್‌ ಭೂಮಿಗೆ ಹಿಂತುರುಗಿರುವುದು ನಿಜವೇ? ವೈರಲ್‌ ವಿಡಿಯೋದ ಅಸಲಿಯತ್ತು

ಫ್ಯಾಕ್ಟ್‌ ಚೆಕ್‌: ಅಂತರಿಕ್ಷದಿಂದ ಸುನೀತಾ ವಿಲಿಯಮ್ಸ್‌ ಭೂಮಿಗೆ ಹಿಂತುರುಗಿರುವುದು ನಿಜವೇ? ವೈರಲ್‌ ವಿಡಿಯೋದ ಅಸಲಿಯತ್ತು

Where is sunita williams now?: ಗಗನಯಾನಿ ಸುನೀತಾ ವಿಲಿಯಮ್ಸ್‌ ಈಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾರೆ. ಅವರು ಭೂಮಿಗೆ ವಾಪಸ್‌ ಬಂದಿದ್ದಾರೆ ಎಂದು ವೈರಲ್‌ ಆಗಿರುವ ವಿಡಿಯೋ ನಕಲಿ ಎನ್ನುವುದು ಫ್ಯಾಕ್ಟ್‌ಚೆಕ್‌ನಿಂದ ಸಾಬೀತಾಗಿದೆ.

ಸುನೀತಾ ವಿಲಿಯಮ್ಸ್‌ (ಫೈಲ್‌ಚಿತ್ರ)
ಸುನೀತಾ ವಿಲಿಯಮ್ಸ್‌ (ಫೈಲ್‌ಚಿತ್ರ) (AFP PHOTO)

ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಭೂಮಿಗೆ ಹಿಂತುರುಗಿದ್ದಾರೆ ಎಂದು ವಿಡಿಯೋವೊಂದು ವೈರಲ್‌ ಆಗಿತ್ತು. ಆ ವಿಡಿಯೋದಲ್ಲಿ ಸುನಿತಾ ಭೂಮಿಗೆ ವಾಪಸ್‌ ಬಂದ ತುಣುಕುಗಳಿದ್ದವು. ಇದೀಗ ವಿವಿಧ ಸುದ್ದಿ ತಾಣಗಳು ಈ ಸುದ್ದಿಯ ಅಸಲಿಯತ್ತು ಕಂಡುಹಿಡಿದೆ. ಫ್ಯಾಕ್ಟ್‌ ಚೆಕ್‌ನಲ್ಲಿ ಈ ವೈರಲ್‌ ವಿಡಿಯೋ ನಕಲಿ ಎಂದು ತಿಳಿದುಬಂದಿದೆ.

ವೈರಲ್‌ ವಿಡಿಯೋ ಹೇಳಿದ್ದೇನು?

ಸುಮಾರು 127 ದಿನಗಳ ಬಾಹ್ಯಾಕಾಶ ನಡಿಗೆ ಮುಗಿಸಿ ಸುನೀತಾ ವಿಲಿಯಮ್ಸ್‌ ಭೂಮಿಗೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ ಎಂದು ವೈರಲ್‌ ವಿಡಿಯೋ ಹೇಳಿತ್ತು. ಆದರೆ, ಇದು ಅಸಲಿ ವಿಡಿಯೋ ಎಂದು ತಿಳಿದು ಸಾಕಷ್ಟು ಜನರು ಹಂಚಿಕೊಂಡಿದ್ದರು. ಭೂಮಿಗೆ ಸುನೀತಾ ವಾಪಸ್‌ ಬಂದ್ರು ಎಂದು ಎಲ್ಲರೂ ಖುಷಿಪಟ್ಟಿದ್ದರು.

ಅಸಲಿಯತ್ತೇನು?

ಆದರೆ, ಇದು 2012ರ ವಿಡಿಯೋ. ಸುನೀತಾ ವಿಲಿಯಮ್ಸ್‌ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತೋರಿಸುವಂತಹ ವಿಡಿಯೋ ಇದಾಗಿದೆ. ಆದರೆ, ಈಗ ಸುನಿತಾ ಅಂತರಿಕ್ಷ ನಿಲ್ದಾಣದಲ್ಲಿಯೇ ಇದ್ದಾರೆ. ಇವರು ಫೆಬ್ರವರಿ 2025ಕ್ಕೆ ಭೂಮಿಗೆ ವಾಪಸ್‌ ಬರುವ ನಿರೀಕ್ಷೆಯಿದೆ. ಬೋಯಿಂಗ್‌ ಸ್ಟಾರ್‌ಲೈನರ್‌ ಅಂತರಿಕ್ಷ ನೌಕೆ ವಿಳಂಬ ಇದಕ್ಕೆ ಕಾರಣ ಎನ್ನಲಾಗಿದೆ.

ಫ್ಯಾಕ್ಟ್‌ ಚೆಕ್‌ಮಾಡಿರುವ ವೆಬ್‌ಸೈಟ್‌ಗಳು: ದಿ ಕ್ವಿಂಟ್‌, ಫಾಕ್ಟ್‌ಲೀ, ಟೈಮ್ಸ್‌ ಆಫ್‌ ಇಂಡಿಯಾ.

ಸುನೀತಾ ವಿಲಿಯಮ್ಸ್ ಬಗ್ಗೆ

ಅಮೆರಿಕದ ಗಗನಯಾತ್ರಿಯ ಹೆತ್ತವರು ಭಾರತೀಯ ಮೂಲದವರು. ಸುನೀತಾ ವಿಲಿಯಮ್ಸ್‌ ಜನಿಸಿದ್ದು, ಓದಿದ್ದು, ಉದ್ಯೋಗ ಮಾಡಿದ್ದು ಎಲ್ಲವೂ ಅಮೆರಿಕದಲ್ಲೇ. ಇವರು ಅಮೆರಿಕದ ಗಗಗನಯಾತ್ರಿ, ಅಮೆರಿಕದ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದಾರೆ. ಏಳು ಬಾರಿ ಬಾಹ್ಯಾಕಾಶ ಮಾಡಿದವರು. ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಇವರು ಭೂಮಿಗೆ ಮರಳುವುದು ನಿಗದಿಪಡಿಸಿದ ಸಮಯಕ್ಕಿಂತ ವಿಳಂಬವಾಗುತ್ತಿದೆ. ಇವರು ಫೆಬ್ರವರಿ 2025ರಲ್ಲಿ ಭೂಮಿಗೆ ವಾಪಸ್‌ ಬರಲಿದ್ದಾರೆ.

ಐಎಸ್‌ಎಸ್‌ ಕುರಿತು ವಿವರ

ಐಎಸ್‌ಎಸ್‌ ಅಥವಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎನ್ನುವುದು ಆಕಾಶದಲ್ಲಿರುವ ಅಂತರಿಕ್ಷ ನಿಲ್ದಾಣ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾದ ಸಂಶೋಧನಾ ಸೌಲಭ್ಯವಾಗಿದೆ. ಇದನ್ನು ಪೃಥ್ವಿಯ ನಿಕಟ ಕಕ್ಷೆಯಲ್ಲಿ 15 ದೇಶಗಳ ಐದು ವಿವಿಧ ಬಾಹ್ಯಾಕಾಶ ಸಂಸ್ಥೆಗಳು ಒಟ್ಟಿಗೆ ಸೇರಿ ನಿರ್ಮಿಸಿವೆ. 100 ಶತಕೋಟಿ ಡಾಲರ್‌ ವೆಚ್ಚದ ಐಎಸ್‌ಎಸ್‌ ಅನ್ನು ಬಿಡಿಬಿಡಿಯಾಗಿ ತಂದು ಬಾಹ್ಯಾಕಾಶದಲ್ಲಿ ಜೋಡಿಸಲಾಗಿದೆ. ಐಎಸ್‌ಎಸ್‌ 1998ರಿಂದ ಕಾರಾರ‍ಯರಂಭ ಮಾಡಿದ್ದು, 2000 ಇಸವಿಯ ನವೆಂಬರ್‌ 2ರಿಂದ ನಿರಂತರವಾಗಿ ಕಾರ‍್ಯನಿರತವಾಗಿದೆ. ಅಮೆರಿಕ ಬಾಹ್ಯಾಕಾಶ ಸಂಸ್ಥೆಯಾದ ನಾಸಾ, ರಷ್ಯಾದ ರಾಸ್‌ಕಾಸ್ಮೋಸ್‌ ಸ್ಟೇಟ್‌ ಕಾರ್ಪೊರೇಷನ್‌ ಫಾರ್‌ ಸ್ಪೇಸ್‌ ಆ್ಯಕ್ಟಿವಿಟಿಸ್‌ , ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ, ಕೆನಡಿಯನ್‌ ಬಾಹ್ಯಾಕಾಶ ಸಂಸ್ಥೆ, ಜಪಾನ್‌ ಏರೋಸ್ಪೇಸ್‌ ಎಕ್ಸ್‌ಪ್ಲೊರೇಷನ್‌ ಏಜೆನ್ಸಿ ಒಟ್ಟಾಗಿ ಐಎಸ್‌ಎಸ್‌ ನಿರ್ಮಿಸಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.