ಒಂದರಲ್ಲ, ಎರಡಲ್ಲ, ಬರೋಬ್ಬರಿ 6 ಹುಲಿಗಳೊಂದಿಗೆ ಅಪರೂಪದ ಮಹಾನ್ ತಾಯಿಹುಲಿ; ಊಟಕ್ಕೆ ಒಂದಾದ ಹುಲಿ ಕೂಡು ಕುಟುಂಬ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಒಂದರಲ್ಲ, ಎರಡಲ್ಲ, ಬರೋಬ್ಬರಿ 6 ಹುಲಿಗಳೊಂದಿಗೆ ಅಪರೂಪದ ಮಹಾನ್ ತಾಯಿಹುಲಿ; ಊಟಕ್ಕೆ ಒಂದಾದ ಹುಲಿ ಕೂಡು ಕುಟುಂಬ

ಒಂದರಲ್ಲ, ಎರಡಲ್ಲ, ಬರೋಬ್ಬರಿ 6 ಹುಲಿಗಳೊಂದಿಗೆ ಅಪರೂಪದ ಮಹಾನ್ ತಾಯಿಹುಲಿ; ಊಟಕ್ಕೆ ಒಂದಾದ ಹುಲಿ ಕೂಡು ಕುಟುಂಬ

Madhya Pradesh Tigers ಮಧ್ಯಪ್ರದೇಶದ ಸಂಜಯ್‌ ದುಬ್ರಿ ಹುಲಿಧಾಮದಲ್ಲಿ(Sanjay Dubri Tiger Reserve) ಏಳು ಹುಲಿಗಳು ಬೇಟೆಯೊಂದಿಗೆ ಆಹಾರಕ್ಕೆ ಕುಳಿತ, ತಾಯಿ ಊಟದ ಮಹತ್ವ ಹೇಳಿಕೊಡುತ್ತಿರುವ ಹಳೆಯ ಚಿತ್ರ ವೈರಲ್‌( Viral Photo) ಆಗಿದೆ.

ಒಂದೇ ಕುಟುಂಬ ಏಳು ಹುಲಿಗಳು.,ಭರ್ಜರಿ ಬೇಟೆ ಕೂಡು ಊಟ
ಒಂದೇ ಕುಟುಂಬ ಏಳು ಹುಲಿಗಳು.,ಭರ್ಜರಿ ಬೇಟೆ ಕೂಡು ಊಟ

ಭೋಪಾಲ್‌: ಇದು ಹಳೆಯ ಚಿತ್ರ. ಸುಮಾರು ಎರಡು ವರ್ಷ ಹಿಂದಿನ ಚಿತ್ರ ಈಗ ವೈರಲ್‌ ಆಗಿದೆ. ಅಂದರೆ ಹುಲಿಗಳು ಅರಣ್ಯದಲ್ಲಿ ಕಾಣುವುದೇ ಅಪರೂಪ. ಕೆಲವೊಮ್ಮೆ ಎರಡು ಇಲ್ಲವೇ ಮೂರು ಹುಲಿ ಕಂಡರೆ ಅಬ್ಬಬ್ಬಾ ಎನ್ನುತ್ತೇವೆ. ಕರ್ನಾಟಕದಲ್ಲಿ ಒಮ್ಮೆ ಮಾತ್ರ ನಾಲ್ಕು ಮರಿ ಹಾಗೂ ತಾಯಿ ಹುಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಮರಿಗಳು, ತಾಯಿ ಹಾಗೂ ಕುಟುಂಬ ಸೇರಿ ಏಳು ಹುಲಿಗಳು ಒಂದೇ ಕಡೆ ಕಾಣಿಸಿಕೊಂಡಿರುವುದು ಮಧ್ಯ ಪ್ರದೇಶದ ಸಂಜಯ್ ದುಬ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ(sanjay Dubri tiger reserve). ಬೇಟೆಯಾಡಿ ಊಟಕ್ಕೆ ಕುಳಿತ ಕೂಡು ಕುಟುಂಬದ ನೋಟವಿದು.

ಹಳ್ಳಿಯಲ್ಲಿ ಪ್ರತಿಮನೆಯಲ್ಲೂ ನಾಟಿಕೋಳಿಗಳನ್ನು ಸಾಕುವುದು ಸಾಮಾನ್ಯ. ಈ ಕೋಳಿಗಳು ಮರಿ ಮಾಡುವಾಗ ಬಾತುಕೋಳಿ ಮೊಟ್ಟೆ ಅಥವಾ ಗಿರಿರಾಜ ಕೋಳಿ ಮೊಟ್ಟೆ ತಂದು ನಾಟಿಕೊಳಿಯ ಮೊಟ್ಟೆಗಳ ಜೊತೆಗೆ ಕಾವಿಗೆ ಕೂರಿಸಿ, ಮರಿ ಮಾಡಿಸಿ, ಮರಿಗಳನ್ನು ಬೆಳಸಲಾಗುತ್ತದೆ.

ಕೆಲವೊಮ್ಮೆ ಬೇರೆ ನಾಟಿಕೋಳಿಯ ಮರಿಗಳು ತಾಯಿಯನ್ನು ಕಳೆದುಕೊಂಡು ತಬ್ಬಲಾದಾಗ ಮತ್ತೊಂದು ಕೋಳಿಯೊಂದಿಗೆ ಆ ತಬ್ಬಲಿ ಮರಿಗಳನ್ನು ಕಾಣದಂತೆ ಬಿಟ್ಟು ನಂತರ ಅವು ಹೊಂದುಕೊಳ್ಳುವಂತೆ ಮಾಡುವುದು ಕೂಡ ಆಗಾಗ್ಗೆ ನಡೆಯುತ್ತದೆ.

ಕೆಲವೊಮ್ಮೆ ಹಸು, ಎಮ್ಮೆ, ಆಡು, ಕುರಿಗಳಲ್ಲಿಯೂ ಕೂಡ ಹೀಗೆ ಅನಾಥ ಮರಿಗಳ ಆರೈಕೆಗೆ ಸಾಕುತಾಯಿಯ ಮೊರೆ ಹೋಗುವುದು ಸಾಮಾನ್ಯ ಎಂದು ಪರಿಸರ ಪರಿವಾರ ಹೇಳಿದೆ.

ಇತಿಹಾಸ ಪುರಾಣಗಳನ್ನು ನೋಡಿದಾಗ, ಶ್ರೀ ಕೃಷ್ಣನ ಸಾಕುತಾಯಿ ಯಶೋದ, ಗೌತಮ‌ಬುದ್ದನ ಸಾಕು ತಾಯಿ ಗೌತಮಿ ಇಲ್ಲಿ ಉಲ್ಲೇಖಾರ್ಹ. ಇತ್ತೀಚೆಗೆ ವ್ಯವಹಾರಿಕ ಉದ್ದೇಶದ 'ಬಾಡಿಗೆ ತಾಯಿ'ಯೂ ಸಾಕು ತಾಯಿಯ ವ್ಯಾಪ್ತಿಗೇ ಬರುತ್ತದೆ. ಆದರೆ ಕಾಡಿನಲ್ಲಿ ಅದರಲ್ಲೂ ಹುಲಿಯಂತಹ ಪಕ್ಕಾ Territorial, Solitary ಪ್ರಾಣಿಯಲ್ಲಿ ಈ ರೀತಿಯ ಸಾಕು ತಾಯಿಯ ಬಗೆಗಿನ ಸುದ್ದಿ ಅಪರೂಪದಲ್ಲಿ ಅಪರೂಪವೇ ಸರಿ. ಆ ಅಪರೂಪದ ಪ್ರಕರಣದ ಬಗೆಗಿನ ಮಾಹಿತಿ ಹೀಗಿದೆ...

ಹುಲಿಯೊಂದು ತನ್ನ ನಾಲ್ಕು ಮರಿಗಳಿಗೆ ಹಾಲುಣಿಸಿ, ಆಹಾರ ತಿನ್ನಿಸಿ ಪೋಷಿಸುವುದರ ಜೊತೆಗೆ, ಕಾರಣಾಂತರಗಳಿಂದ ಸಾವನ್ನಪ್ಪಿರುವ ಮತ್ತೊಂದು ಹುಲಿಯ ಮೂರು ಅನಾಥ ಮರಿಗಳನ್ನು ಪೋಷಿಸುತ್ತಿರುವ, ಜೊತೆ ಜೊತೆಗೆ ಎಲ್ಲಾ ಮರಿಗಳಿಗೂ ಬೇಟೆಯ ಕೌಶಲ್ಯಗಳನ್ನು ಕಲಿಸುತ್ತಿರುವ ಅಪರೂಪದ ಹೃದಯಸ್ಪರ್ಶಿ ಪ್ರಕರಣವಿದು.

T28 ಹೆಸರಿನ ಈ ಮಹಾತಾಯಿ ಹುಲಿ, ಸ್ವಲ್ಪ ದಿನಗಳ ಹಿಂದೆ ಈ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಜೋನ್ ನಲ್ಲಿ ಹಾದುಹೋಗುವ ರೈಲು ಗಾಡಿಯಿಂದ ಅಪಘಾತಕ್ಕೀಡಾಗಿ ಸಾವನ್ನಪ್ಪಿದ T16 ಹೆಸರಿನ ಹುಲಿಯ ಅನಾಥ ಮರುಗಳನ್ನು ತನ್ನ ಮರಿಗಳಂತೆಯೇ ಸಾಕಿ ಸಲುಹುತ್ತಿರುವುದು ತುಂಬಾ ಅಪರೂಪದ ಪ್ರಕರಣವಾಗಿದೆ.

ಹಾಗೇಯೇ ಕಾಡಿನಲ್ಲೂ ಕೂಡ 'ತಾಯಿ ಕರುಳು' ತನ್ನ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಪರಿಸರ ಪರಿವಾರದ ಸಂಜಯ್‌ ಹೊಯ್ಸಳ ಎಂದು ಫೇಸ್‌ಬುಕ್‌ ಹಳೆಯ ಘಟನೆಯನ್ನು ಮೆಲಕು ಹಾಕಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.