Ayodhya Weather Today: ಹವಾಮಾನ ಇಂದು, ಅಯೋಧ್ಯೆಯಲ್ಲಿ ಮೈನಡುಕದ ಚಳಿ; ಬಾಲರಾಮ ಪ್ರಾಣ ಪ್ರತಿಷ್ಠೆಯ ಕಾವು ಹೆಚ್ಚಳ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Weather Today: ಹವಾಮಾನ ಇಂದು, ಅಯೋಧ್ಯೆಯಲ್ಲಿ ಮೈನಡುಕದ ಚಳಿ; ಬಾಲರಾಮ ಪ್ರಾಣ ಪ್ರತಿಷ್ಠೆಯ ಕಾವು ಹೆಚ್ಚಳ

Ayodhya Weather Today: ಹವಾಮಾನ ಇಂದು, ಅಯೋಧ್ಯೆಯಲ್ಲಿ ಮೈನಡುಕದ ಚಳಿ; ಬಾಲರಾಮ ಪ್ರಾಣ ಪ್ರತಿಷ್ಠೆಯ ಕಾವು ಹೆಚ್ಚಳ

Ayodhya Weather Today: ಅಯೋಧ್ಯೆಯಲ್ಲಿ ಮೈನಡುಕದ ಚಳಿಯ ನಡುವೆ ಇಂದು ಸಂಭ್ರಮದ ವಾತಾವರಣ. ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಕಾವು ಏರಿದ್ದು, ಭಕ್ತಿ ಪರಾಕಾಷ್ಠೆ ಮುಗಿಲು ಮುಟ್ಟಿದೆ. ಅಯೋಧ್ಯೆಯ ಹವಾಮಾನ ಇಂದು ಹೀಗಿದೆ.

ಅಯೋಧ್ಯೆ ಹವಾಮಾನ ಇಂದು 22.01.2024 (ಸಾಂಕೇತಿಕ ಚಿತ್ರ)
ಅಯೋಧ್ಯೆ ಹವಾಮಾನ ಇಂದು 22.01.2024 (ಸಾಂಕೇತಿಕ ಚಿತ್ರ)

ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಶುರುವಾಗಲು ಕೆಲವೇ ನಿಮಿಷಗಳು ಬಾಕಿ ಇವೆ. ಅಯೋಧ್ಯೆಯ ಈ ಸಂಭ್ರಮಾಚರಣೆಯ ಸಂಭ್ರಮ ಇಡೀ ದೇಶವನ್ನೇ ಆವರಿಸಿದೆ. ಮೈ ನಡುಕದ ಚಳಿಗಾಲದ ತಂಪಿನೊಂದಿಗೆ ಇಂದು (ಜ.22) ಮಧ್ಯಾಹ್ನ ಐತಿಹಾಸಿಕ ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ಭಾರತದಲ್ಲಿ ಚಳಿ ಮತ್ತು ಕೆಲವೆಡೆ ಮಳೆಯ ವಾತಾವಣ ಇದ್ದು, ಅಯೋಧ್ಯೆ ಹವಾಮಾನ ಸೋಮವಾರ (ಜ.22) ದಟ್ಟ ಮಂಜು ಮತ್ತು ಚಳಿ ವಾತಾವರಣವನ್ನು ಒಳಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಅಯೋಧ್ಯೆ ಸುತ್ತಮುತ್ತ ತಾಪಮಾನ 15 ಡಿಗ್ರಿ ಸೆಲ್ಶಿಯಸ್‌ನಿಂದ 17 ಡಿಗ್ರಿ ಸೆಲ್ಶಿಯಸ್ ನಡುವೆ ಇದೆ. ಬಾಲರಾಮ ಪ್ರಾಣ ಪ್ರತಿಷ್ಠಾ (ರಾಮಲಲಾ ಪ್ರಾಣ ಪ್ರತಿಷ್ಠೆ) ಕಾರ್ಯಕ್ರಮ ಮಧ್ಯಾಹ್ನ 12.20ಕ್ಕೆ ಶುರುವಾಗಲಿದೆ. ಈ ಸಂದರ್ಭದಲ್ಲಿ ತಾಪಮಾನ 6 ಡಿಗ್ರಿ ಸೆಲ್ಶಿಯಸ್ ನಿಂದ 8 ಡಿಗ್ರಿ ಸೆಲ್ಶಿಯಸ್ ನಡುವೆ ಇರಲಿದೆ. ಅಯೋಧ್ಯೆಯಲ್ಲಿ ಮಳೆ ಇಲ್ಲ.

ಭಾರತೀಯ ಹವಾಮಾನ ಇಲಾಖೆ ಕಳೆದ ವಾರ ಅಯೋಧ್ಯೆಗೆಂದೇ ಪ್ರತ್ಯೇಕ ವೆಬ್‌ಪುಟ ರಚಿಸಿದ್ದು, ಅದರಲ್ಲಿರುವ ಮಾಹಿತಿ ಪ್ರಕಾರ, ಸೋಮವಾರ (ಜ.22) ಬೆಳಿಗ್ಗೆ ಮಂಜು ಮುಸುಕಿದ ಕಾರಣ ಗೋಚರತೆ 100 ಮೀಟರ್‌ಗಳಷ್ಟು ಕಡಿಮೆಯಾಗಬಹುದು. ಪ್ರಾಣ ಪ್ರತಿಷ್ಠಾ ಸಮಾರಂಭದ ಸಮಯದಲ್ಲಿ, ಮಧ್ಯಾಹ್ನ 12 ಗಂಟೆಯ ಸುಮಾರಿಗೆ, 1000 ಮತ್ತು 1500 ಮೀಟರ್‌ಗಳ ತೆಳುವಾಗಿ ಮಂಜು ಮುಸುಕಿದ ವಾತಾವರಣ ಇರಲಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆ ಅವಧಿಯಲ್ಲಿ ಇದು ಇನ್ನಷ್ಟು ತೆಳುವಾಗಿ ಸುತ್ತಮುತ್ತಲಿನ ಪ್ರದೇಶ ಸ್ಪಷ್ಟವಾಗಿ ಗೋಚರಿಸಲಿದೆ.

ಮಂಗಳ ಧ್ವನಿಯೊಂದಿಗೆ ಶುರುವಾಗಲಿದೆ ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ

ಶ್ರೀ ರಾಮ ಜನ್ಮಭೂಮಿ ರಾಮ ಮಂದಿರದ ಬಾಲರಾಮ ವಿಗ್ರಹದಲ್ಲಿ ದೇವರ ದೈವಿಕ ಉಪಸ್ಥಿತಿಯನ್ನು ಕೋರುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಲಿದೆ. ಇದಕ್ಕೂ ಎರಡು ಗಂಟೆ ಮೊದಲು ಅಂದರೆ ಬೆಳಗ್ಗೆ 10 ಗಂಟೆಗೆ ಮಂಗಳ ಧ್ವನಿ ಮೊಳಗಲಿದೆ. ಕರ್ನಾಟಕದ ವೀಣೆ ಸೇರಿ ವಿವಿಧ ರಾಜ್ಯಗಳ 50 ವಾದ್ಯಗಳ ವಾದನವೇ ಮಂಗಳ ಧ್ವನಿ. ರಾಮ ಮಂದಿರದ ಆವರಣದಲ್ಲಿ ದೈವೀ ರಾಗದ ಅಲೆಗಳನ್ನು ಸೃಷ್ಟಿಸುವ ಮಂಗಳ ಧ್ವನಿ ಅಲ್ಲಿನ ವಾತಾವರಣದಲ್ಲಿ ಭಕ್ತಿ ಭಾವ ಸ್ಫುರಿಸುವಂತೆ ಮಾಡಲಿದೆ.

----------------------------

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಲೈವ್ ಅಪ್ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ…

Ayodhya Ramamandir Opening Live : ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ನೇರಪ್ರಸಾರ – Prana Pratishtapane Live

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.